LifestylePolitics

Episode-1; ರಾಜಕಾರಣಿಗಳ ಗುಣವನ್ನು ಜನ ಸಾಮಾನ್ಯರು ಅಳವಡಿಸಿಕೊಂಡರೆ ಏನಾಗುತ್ತೆ..?

ಬೆಂಗಳೂರು; ರಾಜಕಾರಣ ಹಾಗೂ ರಾಜಕಾರಣಿ ಅಂದರೆ ಜನ ಸಾಮಾನ್ಯರಲ್ಲಿ ಅದೇನೋ ನಿರ್ಲಕ್ಷ್ಯ ಭಾವನೆ ಇದೆ.. ಎಲ್ಲರೂ ಅವರೇ.. ಜನಕ್ಕೇನೂ ಮಾಡೋದಿಲ್ಲ ಎಂದು ಜನ ರಾಜಕಾರಣಿಗಳನ್ನು ಬೈಯ್ಯುತ್ತಿರುತ್ತಾರೆ.. ಜೊತೆಗೆ ದಿನಕ್ಕೊಂದು ಬಣ್ಣ ಬದಲಿಸುವ, ನಿಮಿಷಕ್ಕೊಂದು ಹೇಳಿಕೆ ನೀಡುವ, ಬೇಕೆಂದಾಗಲೆಲ್ಲಾ ಪಕ್ಷ ಬದಲಿಸುವ ರಾಜಕಾರಣಿಗಳ ಬಗ್ಗೆ ಜನರು ತೀರಾ ಅಸಹ್ಯ ಭಾವನೆ ಹೊಂದಿದ್ದಾರೆ.. ಆದ್ರೆ, ರಾಜಕಾರಣಿಗಳ ಒಂದೊಂದು ಗುಣವನ್ನು ಜನ ಸಾಮಾನ್ಯರಾದ ನಾವು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಲಾಭವಾಗುತ್ತಾ..?, ನಷ್ಟವಾಗುತ್ತಾ ನೋಡೋಣ..

ಇದನ್ನೂ ಓದಿ; ಕೆಂಪು ಮೊಟ್ಟೆ ಒಳ್ಳೆಯದಾ..?, ಬಿಳಿ ಮೊಟ್ಟೆ ಒಳ್ಳೆಯದಾ..?; ತಜ್ಞರು ಏನು ಹೇಳುತ್ತಾರೆ..?

ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನ್ಯೂಸ್‌ ಎಕ್ಸ್‌ ಕನ್ನಡ ಇಂತಹದ್ದೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.. ದಿನವೂ ರಾಜಕಾರಣಿಯ ಒಂದೊಂದು ಗುಣವನ್ನು ತೆಗೆದುಕೊಂಡು ಅದನ್ನು ಸಾಮಾನ್ಯ ಜನರು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಏನಾಗುತ್ತದೆ ಎಂಬುದನ್ನು ಚರ್ಚೆ ಮಾಡಲು ಹೊರಟಿದ್ದೇವೆ..

ಇದನ್ನೂ ಓದಿ; ಚನ್ನಪಟ್ಟಣದಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ

 

ಅಗತ್ಯವೆನಿಸಿದಾಗ ಕಡುವಿರೋಧಿಗಳ ಜೊತೆಯೂ ಸ್ನೇಹ;

ರಾಜ್ಯದಲ್ಲಿನ ಸದ್ಯದ ರಾಜಕೀಯ ಚಿತ್ರಣ ನೋಡಿದರೆ, ಜೀವನವಿಡೀ ಜೆಡಿಎಸ್‌ ನಾಯಕರು ಬಿಜೆಪಿ ಪಕ್ಷವನ್ನು ವಿರೋಧಿಸಿಕೊಂಡು ಬಂದಿದ್ದರು.. ಆದ್ರೆ ಈ ಬಾರಿ ಸಿದ್ಧಾಂತವನ್ನೆಲ್ಲಾ ಮರೆತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.. ಇದರ ಜೊತೆಗೆ ಮಂಡ್ಯ ಸಂಸದೆ ಸುಮಲತಾ ಹಾಗೂ ಕುಮಾರಸ್ವಾಮಿಯವರು ದೊಡ್ಡ ದೊಡ್ಡ ವಾಕ್ಸಮರಗಳನ್ನೇ ಮಾಡಿದ್ದರು.. ಆದ್ರೆ ಈಗ ಕುಮಾರಸ್ವಾಮಿಯವರು ಸುಮಲತಾ ಅವರ ಮನೆಗೆ ಹೋಗಿ ಬೆಂಬಲ ಕೋರಿದ್ದಾರೆ.. ಇದೊಂದು ಉದಾಹರಣೆಯಷ್ಟೇ.. ಎಲ್ಲಾ ಪಕ್ಷದ ಎಲ್ಲಾ ರಾಜಕಾರಣಿಗಳಲ್ಲೂ ಈ ಗುಣ ಇದೆ.. ಆದ್ರೆ ಸಾಮಾನ್ಯ ಜನರಾದ ನಾವು ಈ ರೀತಿಯಾಗಿ ನಮ್ಮ ಸಹೋದರರ ಜೊತೆ ಜಗಳ ಮಾಡಿಕೊಂಡರೂ ಜೀವನಪೂರ್ತಿ ಬುದ್ಧ ವೈರಿಗಳಾಗಿಬಿಡುತ್ತೇವೆ.. ಆದ್ರೆ, ರಾಜಕಾರಣಿಗಳ ಈ ಗುಣವನ್ನು ನಾವು ಅಳವಡಿಸಿಕೊಂಡರೆ ಏನಾಗುತ್ತದೆ..? ನೋಡೋಣ..

ಇದನ್ನೂ ಓದಿ; ಸೀರೆ ಕ್ಯಾನ್ಸರ್‌; ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್‌!

ಕೆಲಸದ ಸ್ಥಳದಲ್ಲಿ ಜಗಳವಾದಾಗ..!

ನಾವು ಕೆಲಸ ಮಾಡುವ ಸ್ಥಳದಲ್ಲಿ ಯಾವುದೋ ಒಂದು ಕಾರಣಕ್ಕೆ ಸಹೋದ್ಯೋಗಿಯೋ ಅಥವಾ ಹಿರಿಯ ಅಧಿಕಾರಿಯ ಜೊತೆಗೋ ಜಗಳವಾಗುತ್ತದೆ.. ಒಮ್ಮೆ ಜಗಳವಾದರೆ ಅದು ಹಾಗೆಯೇ ವರ್ಷಗಟ್ಟೆಲೆ ಮುಂದುವರೆಯುತ್ತದೆ.. ಇದರಿಂದ ಇಬ್ಬರಿಗೂ ನೆಮ್ಮದಿ ಹಾಳಾಗುತ್ತದೆ.. ಇದರಿಂದಾಗಿ ಕೆಲವರು ಕೆಲಸವನ್ನೇ ಬಟ್ಟು ಹೋಗುತ್ತಾರೆ… ಇನ್ನು ಕೆಲವರು ಅಲ್ಲಿಯೇ ಇದ್ದು, ವಿರೋಧಿ ವಿರುದ್ಧ ದ್ವೇಷ ಸಾಧಿಸುತ್ತಾರೆ.. ಆತನನ್ನು ತುಳಿಯಲು ಪ್ರಯತ್ನಿಸುತ್ತಾರೆ… ಆದ್ರೆ ಇದರಿಂದಾಗಿ ಇಬ್ಬರಿಗೂ ತೊಂದರೆಯೇ.. ಜೊತೆಗೆ ಕೆಲಸವೂ ಹಾಳಾಗುತ್ತದೆ.. ಅದರ ಬದಲಾಗಿ, ಎಷ್ಟೇ ಜಗಳವಾಡಿಕೊಂಡಿದ್ದರೂ ಕೂಡಾ ಅಗತ್ಯ ಬಂದಾಗ, ವಿರೋಧಿಯನ್ನು ಹೊಗಳುವುದು, ಆತನನ್ನು ಪುಸಲಾಯಿಸಿ ಸಹಾಯ ಕೇಳುವುದು ಮಾಡಿದರೆ ಅದರ ರಾಜಕಾರಣಿ ಬುದ್ಧಿಯಾಗುತ್ತದೆ.. ಹಾಗೆ ಮಾಡುವುದರಿಂದ ಮನಸ್ತಾಪಗಳು ಕಡಿಮೆಯಾಗುತ್ತವೆ.. ಕೆಲಸದ ಸ್ಥಳದಲ್ಲಿ ಹೀಗೆ  ಹೊಂದಿಕೊಂಡು ಹೋಗುವ ಎಷ್ಟೇ ಜಗಳಗಳಾಗಿದ್ದರೂ ಅದನ್ನು ಮರೆತು ಅಗತ್ಯಬಿದ್ದಾಗ ಒಂದಾಗಿ ನಡೆಯುವ ರಾಜಕಾರಣಿಯ ಬುದ್ಧಿ ಬೇಕೇಬೇಕಾಗುತ್ತದೆ…

ಇದನ್ನೂ ಓದಿ; ಸಹೋದ್ಯೋಗಿ ಹೆರಿಗೆ ರಜೆಗೆ ಹೋಗುವುದನ್ನು ತಡೆಯಲು ನೀರಲ್ಲಿ ವಿಷ ಬೆರೆಸಿದ ಉದ್ಯೋಗಿ!

ಸಹೋದರರ ನಡುವೆ ಆಸ್ತಿ ವಿವಾದವಾದಾಗ;

ಸಹೋದರರ ನಡುವೆ ಆಸ್ತಿ ಹಂಚಿಕೆ ವಿಚಾರಕ್ಕೆ ಜಗಳಗಳಾಗುತ್ತವೆ.. ಆ ಜಗಳ ಯಾವ ಮಟ್ಟಕ್ಕೆ ಬೆಳೆಯುತ್ತವೆ ಅಂದ್ರೆ, ಜೀವನವಿಡೀ ಒಬ್ಬರ ಮುಖ ಒಬ್ಬರು ನೋಡದಷ್ಟು.. ಆದ್ರೆ ಇಂತಹ ಸಹೋದರರು ರಾಜಕಾರಣಿಯ ಮೇಲಿನ ಗುಣವನ್ನು ಬೆಳೆಸಿಕೊಂಡರೆ, ಜಗಳವೇ ಇಲ್ಲದಂತಾಗುತ್ತದೆ.. ಕೋಪಗೊಂಡಿರುವ ಸಹೋದರನ್ನು ಪ್ರೀತಿಯಿಂದ ಮಾತನಾಡಿಸಿದರೆ ಸಾಕು ಕರಗಿಹೋಗುತ್ತಾನೆ.. ಮನೆಯಲ್ಲಿ ವಿಶೇಷ ಅಡುಗೆ ಮಾಡಿದಾಗ ಕರೆದು ಊಟ ಹಾಕಿ ಖುಷಿಯಿಂದ ಹರಟೆ ಹೊಡೆದರೆ ಆತನ ಮನಸ್ಸು ಪರಿವರ್ತನೆ ಮಾಡಿಕೊಳ್ಳುತ್ತಾನೆ.. ನಾವಿಬ್ಬರೂ ರಕ್ತಸಂಬಂಧಿಗಳು ನಮ್ಮ ನಡುವೆ ಯಾಕೆ ಜಗಳ ಎಂದು ಕೂತು ಸಾವಧಾನದಿಂದ ಚರ್ಚೆ ಮಾಡಿದರೆ ಜಗಳವೇ ನಿಂತುಹೋಗುತ್ತದೆ…

ಇದನ್ನೂ ಓದಿ; ಶ್ರೀನಿವಾಸ ಪ್ರಸಾದ್‌ ಸಂಬಂಧಿಕರೆಲ್ಲಾ ಕಾಂಗ್ರೆಸ್‌ ಸೇರ್ಪಡೆ

ಪ್ರೇಮಿಗಳ ನಡುವೆ ಜಗಳವಾದಾಗ..!;

ಪ್ರೇಮಿಗಳು ಅಂದ ಮೇಲೆ ಜಗಳಗಳು ಕಾಮನ್‌.. ಇದರ ಜೊತೆಗೆ ಸಾರಿ ಕೇಳುವುದು ಕೂಡಾ ಪ್ರೇಮಿಗಳ ನಡುವೆ ಕಾಮನ್‌… ನಿಜ ಹೇಳಬೇಕು ಅಂದ್ರೆ ಪ್ರೇಮಿಗಳ ಬ್ಲಡ್‌ನಲ್ಲಿ ಮೊದಲೇ ರಾಜಕಾರಣಿಗಳು ಗುಣ ಬಂದುಬಿಟ್ಟಿರುತ್ತದೆ.. ಹೀಗೆ ರಾಜಕಾರಣಿಗಳ ಪುಸಲಾಯಿಸುವ ಗುಣ ಬೆಳೆಸಿಕೊಂಡ ಪ್ರೇಮಿಗಳು ಮಾತ್ರ ಹೆಚ್ಚು ಕಾಲ ಒಟ್ಟಿಗೆ ಇರುತ್ತಾರೆ.. ರಾಜಕಾರಣಿಯ ಗುಣ ಇಲ್ಲದೇ ಇದ್ದರೆ ಅಂತಹ ಪ್ರೇಮಿಗಳ ಸಂಬಂಧ ಹೆಚ್ಚು ದಿನ ಉಳಿಯೋದೇ ಇಲ್ಲ.. ಬಹುಬೇಗ ಬ್ರೇಕ್‌ ಅಪ್‌ ಆಗುತ್ತದೆ… ಹಾಗೆ ಬ್ರೇಕ್‌ ಅಪ್‌ ಆದ ಮೇಲೂ ಗಡ್ಡ, ಮೀಸೆ ಬಿಟ್ಟು ಹುಚ್ಚನಂತಾಗದೇ ಮತ್ತೊಂದು ಸಂಗಾತಿಯನ್ನು ಹುಡುಕಿಕೊಳ್ಳುವುದು ಕೂಡಾ ರಾಜಕಾರಣಿಯ ಗುಣವೇ ಆಗಿರುತ್ತದೆ.. ಹೀಗಾಗಿ ಏನೇ ಸಮಸ್ಯೆ ಬಂದರೂ ಮನುಷ್ಯ ರಾಜಕಾರಣಿಯ ಗುಣವನ್ನು ತನ್ನ ಮೈಯಲ್ಲಿ ಜಾಗೃತಗೊಳಿಸಿಕೊಳ್ಳಬೇಕು..

ಇದನ್ನೂ ಓದಿ; ಅಪ್ಪನಂತೆ ಕುದುರೆ ಸವಾರಿಗಿಳಿದ ನಟ ದರ್ಶನ್‌ ಮಗ ವಿನೀಶ್‌; ವಿಡಿಯೋ ವೈರಲ್‌

ಮಾರುಕಟ್ಟೆ ಪ್ರದೇಶದಲ್ಲಿ..;

ಶಾಪಿಂಗ್‌ ಮಾಲ್‌ ಸೇರಿದಂತೆ ಹಲವು ವಾಣಿಜ್ಯ ಕೇಂದ್ರಗಳಲ್ಲಿ ಅಲ್ಲಿರುವ ಸೇಲ್ಸ್‌ ಮ್ಯಾನ್‌ಗಳ ಜೊತೆ ಗ್ರಾಹಕರು ಜಗಳ ಕಾಯುತ್ತಿರುತ್ತಾರೆ.. ಸಣ್ಣ ಸಣ್ಣ ವಿಷಯಕ್ಕೆ ಇಬ್ಬರಿಗೂ ಜೋರು ಜಗಳವಾಗುತ್ತದೆ.. ಆಗ ಅಂಗಡಿ ಮಾಲೀಕನೂ ಬಂದು ಗ್ರಾಹಕರ ಜೊತೆ ಜಗಳ ಕಾಯ್ದರೆ ಮತ್ತೆ ಆ ಗ್ರಾಹಕ ಆ ಅಂಗಡಿಗೆ ಬರೋದಿಲ್ಲ.. ಹೀಗಾಗಿ ಬಹುತೇಕ ಮಾಲೀಕರು ಜಗಳದ ಸಮಯದಲ್ಲಿ ತಮ್ಮ ಸಿಬ್ಬಂದಿಯನ್ನೇ ಬೈಯ್ದು ಗ್ರಾಹಕರನ್ನು ಸಮಾಧಾನ ಮಾಡಿ ಕಳುಹಿಸುತ್ತಾರೆ.. ಗ್ರಾಹಕರದ್ದೇ ತಪ್ಪಿದ್ದರೂ ಕೂಡಾ ಮಾಲೀಕರು ಇದೇ ರೀತಿ ವರ್ತಿಸುತ್ತಾರೆ.. ಗ್ರಾಹಕರು ಹೋದ ಮೇಲೆ ಸಿಬ್ಬಂದಿಯನ್ನು ಸಮಾಧಾನ ಮಾಡುತ್ತಾರೆ.. ಇದೂ ಕೂಡಾ ರಾಜಕಾರಣಿಯ ಗುಣವೇ… ರಾಜಕಾರಣಿಗಳು ಸಾಮಾನ್ಯ ಜನರನ್ನು ನೋಡಿ ಕಲಿತರೋ ಅಥವಾ ಸಾಮಾನ್ಯ ಜನರು ರಾಜಕಾರಣಿಯನ್ನು ನೋಡಿ ಈ ಗುಣ ಕಲಿತರೋ ಗೊತ್ತಿಲ್ಲ.. ಆದ್ರೆ, ರಾಜಕಾರಣಿಯ ಈ ಗುಣ ಜಗಳವನ್ನು ಬಿಡಿಸಬಹುದು..

ಇದನ್ನೂ ಓದಿ; ಬಿಸಿಲಲ್ಲಿ ನೀವು ಮಾಡುವ ಮಿಸ್ಟೇಕ್‌ ಕ್ಯಾನ್ಸರ್‌ಗೆ ಕಾರಣವಾಗುತ್ತೆ ಹುಷಾರ್‌!

ಗಂಡ-ಹೆಂಡತಿ ನಡುವೆ ಜಗಳವಾದಾಗ;

ಮನೆಯಲ್ಲಿ ಗಂಡ-ಹೆಂಡತಿ ನಡುವೆ ಸಣ್ಣ-ಪುಟ್ಟ ಜಗಳಗಳಾಗೋದು ಸಾಮಾನ್ಯ… ಈ ವೇಳೆಯಲ್ಲಿ ಯಾರಾದರೊಬ್ಬರು ಸುಮ್ಮನಾಗಿ ಮತ್ತೊಬ್ಬರ ಬಳಿ ಕ್ಷಮೆ ಕೇಳೋದು, ನನ್ನದೇ ತಪ್ಪು ಬಿಡು ಎಂದುಬಿಟ್ಟರೆ ಜಗಳ ಮಾಯವಾಗಿರುತ್ತದೆ.. ರಾಜಕಾರಣಿಗಳು ಕೂಡಾ ಅದನ್ನೇ ಮಾಡೋದು.. ಆ ಪರಿಸ್ಥಿತಿ ಬಂದಾಗ ಚೆನ್ನಾಗಿ ಜಗಳವಾಡುತ್ತಾರೆ.. ಅಗತ್ಯ ಅಂತ ಬಂದಾಗ ಎಲ್ಲವನ್ನೂ ಮರೆತು ಒಂದಾಗಿಬಿಡುತ್ತಾರೆ…

ಹೀಗೆ ರಾಜಕಾರಣಿಯ ಹೊಂದಾಣಿಕೆಯ ಗುಣ ಬೆಳೆಸಿಕೊಂಡು ಜೀವನದಲ್ಲಿ ಉದ್ಧಾರವಾಗಬಹುದು.. ಯಾವಾಗ ನಾವು ಈ ಗುಣ ಬೆಳೆಸಿಕೊಳ್ಳದೇ ಪ್ರತಿಷ್ಠೆ ತೋರಿಸಲು ಹೋದರೆ ಎಲ್ಲಾ ವಿಚಾರದಲ್ಲೂ ಸೋಲು ಗ್ಯಾರೆಂಟಿ.. ರಾಜಕಾರಣಿ ಚುನಾವಣೆ ಗೆಲ್ಲೋದಕ್ಕಾಗಿ ಪ್ರತಿಷ್ಠೆ ಮರೆಯುತ್ತಾನೆ.. ಜನ ಸಾಮಾನ್ಯ ಬದುಕೋದಕ್ಕಾಗಿ ಪ್ರತಿಷ್ಠೆಯನ್ನು ಮರೆಯಬೇಕಿದೆ..

ರಾಜಕಾರಣಿಯಿಂದ ಜನ ಸಾಮಾನ್ಯರಾದ ನಾವು ಕಲಿಯೋದು ತುಂಬಾ ಇದೆ.. ನಾಳೆ ಮತ್ತೊಂದು ವಿಷಯದ ಬರೆಯುತ್ತೇನೆ ಕಾಯುತ್ತಿರಿ…

ಇದನ್ನೂ ಓದಿ; ಬೆಳ್ಳುಳ್ಳಿ ರಸಂ ತಿನ್ನಿ; ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

Share Post