ಅತಿಯಾದ ಆತ್ಮವಿಶ್ವಾಸ ಬಿಜೆಪಿಗೆ ಮುಳುವಾಗುತ್ತಾ..?; ಪ್ರಶಾಂತ್ ಕಿಶೋರ್ ಬಿಜೆಪಿಗೆ 370 ಸೀಟು ಬರಲ್ಲ ಎಂದಿದ್ದೇಕೆ..?
ಬೆಂಗಳೂರು; ಬಿಜೆಪಿ ಪಕ್ಷಕ್ಕೆ 400 ಸೀಟು ಗೆಲ್ಲಿಸಿಕೊಡಿ ಎಂದು ಹೋದಲ್ಲಿ, ಬಂದಲ್ಲೆಲ್ಲಾ ಬಿಜೆಪಿ ನಾಯಕರು ಹೇಳುತ್ತಿದ್ದಾರೆ.. ಈ ಬಾರಿ ಕಾಂಗ್ರೆಸ್ ಧೂಳೀಪಟ ಮಾಡಬೇಕು.. ಬಿಜೆಪಿ ಪಕ್ಷಕ್ಕೆ 400 ಸೀಟು ಗೆಲ್ಲಿಸಿಕೊಡಬೇಕೆಂದು ಮೋದಿ, ಅಮಿತ್ ಶಾ ಸೇರಿ ಎಲ್ಲಾ ಬಿಜೆಪಿ ನಾಯಕರು ಮನವಿ ಮಾಡುತ್ತಿದ್ದಾರೆ.. ಆದ್ರೆ ರಾಜಕೀಯ ತಂತ್ರಗಾರಿಕೆಯಲ್ಲಿ ನಿಪುಣರಾಗಿರುವ ಪ್ರಶಾಂತ್ ಕಿಶೋರ್ ಮಾತ್ರ ಈ ಬಾರಿ ಬಿಜೆಪಿ 370 ಸೀಟು ಬರೋದು ಕೂಡಾ ಡೌಟು ಎಂದು ಹೇಳುತ್ತಿದ್ದಾರೆ.. ಹಾಗಾದ್ರೆ, ಇದಕ್ಕೆ ಕಾರಣ ಏನು..? ಬಿಜೆಪಿ ನಾಯಕರ ಅತಿಯಾದ ಆತ್ಮವಿಶ್ವಾಸವೇ ಇದಕ್ಕೆ ಕಾರಣವಾ..? ಬಿಜೆಪಿ ನಾಯಕರ ಓವರ್ ಕಾನ್ಫಿಡೆನ್ಸ್ ಬಿಜೆಪಿಗೆ ಮುಳುವಾಗುತ್ತಾ..?
ಇದನ್ನೂ ಓದಿ; Episode-1; ರಾಜಕಾರಣಿಗಳ ಗುಣವನ್ನು ಜನ ಸಾಮಾನ್ಯರು ಅಳವಡಿಸಿಕೊಂಡರೆ ಏನಾಗುತ್ತೆ..?
370 ಸೀಟು ಗೆಲ್ಲೋದು ಸಾಧ್ಯವೇ ಇಲ್ಲ ಎಂದು ಪ್ರಶಾಂತ್ ಕಿಶೋರ್;
ರಾಜಕೀಯ ತಂತ್ರಗಾರಿಕೆಯಲ್ಲಿ ನಿಪುಣರಾಗಿರುವ ಪ್ರಶಾಂತ್ ಕಿಶೋರ್ ಅವರು ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ್ದಾರೆ.. ಬಿಜೆಪಿ ನಾಯಕರು 400 ಸೀಟು ಬರುತ್ತದೆ ಎಂದು ಆತ್ಮವಿಶ್ವಾಸದಿಂದ ಓಡಾಡುತ್ತಿದ್ದಾರೆ.. ಆದ್ರೆ ಪ್ರಶಾಂತ್ ಕಿಶೋರ್ ಮಾತ್ರ ಬಿಜೆಪಿ ಏಕಾಂಗಿಯಾಗಿ 370 ಸೀಟು ಗೆಲ್ಲೋದು ಕೂಡಾ ಸಾಧ್ಯವಿಲ್ಲ.. ತುಂಬಾನೇ ಕಷ್ಟವಿದೆ ಎಂದು ಹೇಳಿದ್ದಾರೆ.. ಇಂದಿನ ದೇಶದ ರಾಜಕೀಯ ಸ್ಥಿತಿಗತಿಗಳನ್ನು ನೋಡಿದರೆ ಬಿಜೆಪಿ ಅಷ್ಟು ಸೀಟು ಗೆಲ್ಲೋದು ಕಷ್ಟ ಕಷ್ಟ ಎಂದೇ ಪ್ರಶಾಂತ್ ಕಿಶೋರ್ ಹೇಳಿಬಿಟ್ಟಿದ್ದಾರೆ..
ಇದನ್ನೂ ಓದಿ; ಕೆಂಪು ಮೊಟ್ಟೆ ಒಳ್ಳೆಯದಾ..?, ಬಿಳಿ ಮೊಟ್ಟೆ ಒಳ್ಳೆಯದಾ..?; ತಜ್ಞರು ಏನು ಹೇಳುತ್ತಾರೆ..?
ಬಿಜೆಪಿ 70 ಹೆಚ್ಚುವರಿ ಸ್ಥಾನ ಗೆಲ್ಲುವುದು ತುಂಬಾನೇ ಕಷ್ಟ;
ಅಂದಹಾಗೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಏಕಾಂಗಿಯಾಗಿ 303 ಸ್ಥಾನಗಳನ್ನು ಗೆದ್ದುಕೊಂಡಿತ್ತು.. ಸಾಕಷ್ಟು ಶ್ರಮ ಪಟ್ಟರೆ ಇದಕ್ಕೆ 10 ರಿಂದ 20 ಸ್ಥಾನಗಳನ್ನು ಹೆಚ್ಚಿಸಿಕೊಳ್ಳಬಹುದು.. ಆದ್ರೆ 370 ಸ್ಥಾನಗಳನ್ನು ಗಳಿಸುತ್ತೇವೆ ಅನ್ನೋದು ಅಸಂಭವದ ಮಾತು ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.. ಅಂದರೆ, ಬಿಜೆಪಿ ಬಯಸಿದಂತೆ ಈ ಬಾರಿ ಫಲಿತಾಂಶ ಬರೋದಿಲ್ಲ.. ಆದ್ರೆ ಬಿಜೆಪಿಯೇ ಅಧಿಕಾರ ಹಿಡಿಯುತ್ತದೆ ಎಂಬುದನ್ನು ಪ್ರಶಾಂತ್ ಕಿಶೋರ್ ಹೇಳುತ್ತಿದ್ದಾರೆ..
ಇದನ್ನೂ ಓದಿ; ಮೊಸರನ್ನು ಹೀಗೆ ಸೇವಿಸಿದರೆ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು!
ಬಿಹಾರದಲ್ಲಿ ಬಿಜೆಪಿಗೆ ನಷ್ಟವೇ ಹೆಚ್ಚು ಎಂದು ಪ್ರಶಾಂತ್ ಕಿಶೋರ್;
ಕೆಲ ತಿಂಗಳ ಹಿಂದೆ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷವನ್ನು ಮತ್ತೆ ಎನ್‌ಡಿಎ ಜೊತೆ ಸೇರಿಸಿಕೊಳ್ಳಲಾಯಿತು.. ಇದರಿಂದಾಗಿ ಬಿಹಾರದಲ್ಲಿ ಬಿಜೆಪಿ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.. ಬಿಹಾರದಲ್ಲಿ ಹೆಚ್ಚು ಸೀಟುಗಳನ್ನು ಗೆಲ್ಲಬೇಕೆಂಬ ಇಚ್ಛೆಯಿಂದ ಬಿಜೆಪಿ ನಾಯಕರು ನಿತೀಶ್ ಕುಮಾರ್ ಅವರನ್ನು ಒಕ್ಕೂಟಕ್ಕೆ ಸೇರಿಸಿಕೊಂಡಂತೆ ಕಾಣುತ್ತಿಲ್ಲ. ಅದೂ ಕೂಡಾ ಈ ಮೈತ್ರಿಯಿಂದ ಬಿಹಾರ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಲಾಭವಾಗುವುದಿಲ್ಲ ಎಂದೇ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ನಿತೀಶ್ ಕುಮಾರ್ ಅವರನ್ನು ಮತ್ತೆ ಎನ್‌ಡಿಎಗೆ ಸೇರಿಸಿಕೊಂಡಿದ್ದರಿಂದ ಬಿಜೆಪಿ ಸಂಖ್ಯೆ ಕುಸಿಯಲಿದೆ ಎಂದು ಪ್ರಶಾಂತ್ ಕಿಶೋರ್ ಇದೇ ವೇಳೆ ಹೇಳಿದ್ದಾರೆ..
ಇದನ್ನೂ ಓದಿ; ದೆಹಲಿ ಮದ್ಯನೀತಿ ಹಗರಣ; ಎಎಪಿ ಸಂಸದ ಸಂಜಯ್ ಸಿಂಗ್‌ಗೆ ಜಾಮೀನು
ಬಿಜೆಪಿಯ ಓವರ್ ಕಾನ್ಫಿಡೆನ್ಸ್ ಮುಳುವಾಗುತ್ತಾ..?;
ಈ ಬಾರಿ ಚುನಾವಣಾ ಪೂರ್ವ ಎಲ್ಲಾ ಸಮೀಕ್ಷೆಗಳೂ ಬಿಜೆಪಿ ಗೆಲ್ಲುತ್ತೆ ಎಂದು ಹೇಳುತ್ತಿವೆ.. ಇದರ ಜೊತೆಗೆ ಈ ಬಾರಿ ಕೂಡಾ ದೇಶದಲ್ಲಿ ಬಿಜೆಪಿ ಅದರಲ್ಲೂ ಮೋದಿಗೆ ಉತ್ತಮ ವಾತಾವರಣವಿದೆ… ಈ ಕಾರಣಕ್ಕಾಗಿ ಬಿಜೆಪಿ ನಾಯಕರು ಓವರ್ ಕಾನ್ಫಿಡೆನ್ಸ್ ನಲ್ಲಿದ್ದಾರೆ.. ಇದರಿಂದಾಗಿ ಅಭ್ಯರ್ಥಿ ಆಯ್ಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಹಲವು ಎಡವಟ್ಟುಗಳಾಗಿದೆ.. ಕರ್ನಾಟಕ ರಾಜ್ಯವನ್ನೇ ತೆಗೆದುಕೊಂಡರೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಸುಮಲತಾ ಅವರನ್ನೂ ಸೇರಿಸಿದರೆ 26 ಸ್ಥಾನಗಳಲ್ಲಿ ಗೆದ್ದಿತ್ತು.. ಆದ್ರೆ, ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಎಡವಟ್ಟುಗಳಾಗಿ ಹಲವೆಡೆ ಬಂಡಾಯ ಏರ್ಪಟ್ಟಿದೆ.. ಇದರ ನಡುವೆಯೂ ನಾಯಕರು 28ಕ್ಕೆ 28 ಕ್ಷೇತ್ರವನ್ನೂ ಗೆಲ್ಲುತ್ತೇನೆ ಎಂದು ಹೇಳುತ್ತಿದ್ದಾರೆ.. ಆದ್ರೆ ಈ ಓವರ್ ಕಾನ್ಫಿಡೆನ್ಸ್ ಬಿಜೆಪಿಯ ದೊಡ್ಡ ಗೆಲುವಿನಗೆ ಹೊಡೆತ ಬೀಳುವ ಸಾಧ್ಯತೆ ಇದೆ..
ಇದನ್ನೂ ಓದಿ; ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಲ್ಲ; ಸಿಎಂ ಸಿದ್ದರಾಮಯ್ಯ