ಶ್ರೀನಿವಾಸ ಪ್ರಸಾದ್ ಸಂಬಂಧಿಕರೆಲ್ಲಾ ಕಾಂಗ್ರೆಸ್ ಸೇರ್ಪಡೆ
ಮೈಸೂರು; ಸಿಎಂ ಸಿದ್ದರಾಮಯ್ಯ ಅವರು ಚಾಮರಾಜನಗರ ಹಾಗೂ ಮೈಸೂರು-ಕೊಡಗು ಕ್ಷೇತ್ರಗಳನ್ನು ಗೆಲ್ಲಿ ಭಾರಿ ಕಸರತ್ತು ನಡೆಸುತ್ತಿದ್ದಾರೆ.. ಕಳೆದ ಒಂದು ವಾರದಿಂದ ಸಿದ್ದರಾಮಯ್ಯ ಅವರು ಈ ಎರಡು ಕ್ಷೇತ್ರಗಳ ಮೇಲೇಯೇ ಗಮನ ಇಟ್ಟಿದ್ದಾರೆ.. ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಸೆಳೆಯುತ್ತಿದ್ದಾರೆ.. ಇಂದು ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್ ಅವರ ಸಂಬಂಧಿಕರನ್ನೆಲ್ಲಾ ಕಾಂಗ್ರೆಸ್ಗೆ ಸೇರಿಸಿಕೊಂಡಿದ್ದಾರೆ..
ಶ್ರೀನಿವಾಸ ಪ್ರಸಾದ್ ಸಂಬಂಧಿಕರು ಕಾಂಗ್ರೆಸ್ ಸೇರ್ಪಡೆ;
ಇತ್ತೀಚೆಗೆ ಸಚಿವರಾದ ಎಚ್.ಸಿ.ಮಹದೇವಪ್ಪ, ವೆಂಕಟೇಶ್ ಸೇರಿ ಹಲವು ನಾಯಕರು ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿಯಾಗಿದ್ದರು.. ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದರು.. ಇದಾದ ಕೆಲ ದಿನಗಳಲ್ಲೇ ಶ್ರೀನಿವಾಸ ಪ್ರಸಾದ್ ಅವರ ಹಲವು ಸಂಬಂಧಿಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.. ಇಂದು ಶ್ರೀನಿವಾಸ್ ಪ್ರಸಾದ್ ಅವರ ಸಹೋದರ ವಿ.ರಾಮಸ್ವಾಮಿ ಸಹ ಕಾಂಗ್ರೆಸ್ ಸೇರ್ಪಡೆಯಾದರು, ಅವರ ಅಳಿಯ ಕೂಡಾ ಕಾಂಗ್ರೆಸ್ ಸೇರಿದ್ದಾರೆ.. ವಿ.ರಾಮಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ನಾವೆಲ್ಲಾ ಸಿದ್ದರಾಮಯ್ಯ ಕೈ ಬಲಪಡಿಸುತ್ತೇವೆ;
ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಹಲವು 30ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.. ಇದೇ ವೇಳೆ ಮಾತನಾಡಿದ ರಾಮಸ್ವಾಮಿಯವರು, ನಾವೆಲ್ಲ ಪ್ರಾಮಾಣಿಕವಾಗಿ ಸಿದ್ದರಾಮಯ್ಯನವರ ಕೈಬಲಪಡಿಸಬೇಕು. ಸಿದ್ದರಾಮಯ್ಯ ಅವರಿಗೆ ಬಲ ಹೆಚ್ಚಾದಷ್ಟು ನಮ್ಮ ಕೈಗೆ ಬಲ ಬರುತ್ತದೆ ಎಂದು ಹೇಳಿದ್ದಾರೆ. ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅಳಿಯ ಧೀರಜ್ ಪ್ರಸಾದ್ ಮತ್ತು ಸಹೋದರ ಕಾಂಗ್ರೆಸ್ ಸೇರಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಚಾಮರಾಜನಗರ, ಮೈಸೂರಿನಲ್ಲಿ ಆಪರೇಷನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಕೀಯ ನಿವೃತ್ತಿ ಘೋಷಿಸಿರುವ ಶ್ರೀನಿವಾಸ ಪ್ರಸಾದ್
ಶ್ರೀನಿವಾಸ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.. ಇನ್ನು ಅವರ ಸಂಬಂಧಿಕರೆಲ್ಲಾ ಈಗ ಕಾಂಗ್ರೆಸ್ ಸೇರಿದ್ದಾರೆ.. ಹೀಗಾಗಿ ಈ ಬಾರಿ ಶ್ರೀನಿವಾಸ ಪ್ರಸಾದ್ ಅವರ ಬೆಂಬಲ ಕಾಂಗ್ರೆಸ್ಗೆ ಸಿಗಲಿದೆ.. ಶ್ರೀನಿವಾಸ ಪ್ರಸಾದ್ ಅವರ ಹಲವು ಬೆಂಬಲಿಗರಿಗೂ ಕಾಂಗ್ರೆಸ್ ಗಾಳ ಹಾಕುತ್ತಿದೆ.. ಅದೂ ಕೂಡಾ ಯಶಸ್ವಿಯಾದರೆ ಕಾಂಗ್ರೆಸ್ಗೆ ಮತ್ತಷ್ಟು ಬಲ ಬರಲಿದೆ..