ಸೀರೆ ಕ್ಯಾನ್ಸರ್; ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್!
ಸೀರೆ.. ಭಾರತೀಯ ಮಹಿಳೆಯಗೆ ಗುರುತಿದು.. ಭಾರತೀಯ ಮಹಿಳೆಯ ಸಂಪ್ರದಾಯಿಕ ಉಡುಗೆ ಇದು.. ಐದೂವರೆ ರಿಂದ ಆರು ಮೀಟರ್ ಉದ್ದದ ಈ ಉಡುಪನ್ನು ಇಡೀ ಪ್ರಪಂಚ ಇಷ್ಟಪಟ್ಟಿದೆ… ವಿದೇಶಿ ಮಹಿಳೆಯರು ಭಾರತಕ್ಕೆ ಬಂದರೆ ಸೀರೆ ಉಟ್ಟು ಸಂಭ್ರಮಿಸುತ್ತಾರೆ.. ಫೋಟೋ ಶೂಟ್ ಮಾಡಿಸಿಕೊಂಡು ಖುಷಿ ಪಡುತ್ತಾರೆ.. ಆದರೆ ದೀರ್ಘ ಕಾಲ ಸೀರೆ ಉಡುವುದರಿಂದ ಸೀರೆ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.. ಇದರ ಜೊತೆಗೆ ಯಾವುದೇ ಬಟ್ಟೆಯನ್ನು ಸೂಕ್ತ ರೀತಿಯಲ್ಲಿ ಧರಿಸದೇ ಹೋದರೆ ಕ್ಯಾನ್ಸರ್‌ಗೆ ದಾರಿ ಮಾಡಿಕೊಡಬಹುದು ಅಂತ ತಜ್ಞರು ಎಚ್ಚರಿಕೆ ಕೊಡುತ್ತಿದ್ದಾರೆ.. ಸೀರೆ ಕ್ಯಾನ್ಸರ್ ಭಾರತದಲ್ಲಿ ಮಾತ್ರ ಕಂಡುಬರುತ್ತದೆ.. ಯಾಕಂದ್ರೆ, ಭಾರತದಲ್ಲಿ ಮಾತ್ರ ಮಹಿಳೆಯರು ಸೀರೆಯನ್ನು ಹೆಚ್ಚಾಗಿ ಉಡುತ್ತಾರೆ…
ಇದನ್ನೂ ಓದಿ; ಸಹೋದ್ಯೋಗಿ ಹೆರಿಗೆ ರಜೆಗೆ ಹೋಗುವುದನ್ನು ತಡೆಯಲು ನೀರಲ್ಲಿ ವಿಷ ಬೆರೆಸಿದ ಉದ್ಯೋಗಿ!
ವರ್ಷವಿಡೀ ಸೀರೆ ಧರಿಸುವ ಮಹಿಳೆಯರು;
ಭಾರತದಲ್ಲಿ ಬಹುತೇಕ ಎಲ್ಲಾ ಕಡೆ ಮದುವೆಯಾದ ಮಹಿಳೆಯದು ವರ್ಷವಿಡೀ ಸೀರೆ ಧರಿಸುತ್ತಾರೆ.. ಅದರಲ್ಲೂ ದಕ್ಷಿಣ ಭಾರತದಲ್ಲಿ ಸೀರೆ ಉಡುವ ಮಹಿಳೆಯರ ಸಂಖ್ಯೆ ಹೆಚ್ಚು.. ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಬಿಟ್ಟರೆ ದೇಶದ ಬಹುತೇಕ ಎಲ್ಲಾ ಕಡೆಯೂ ಮಹಿಳೆಯರು ವರ್ಷವಿಡೀ ಸೀರೆಯನ್ನೇ ಧರಿಸುತ್ತಾರೆ.. ಅಂದರೆ ವಾರದ ಏಳು ದಿನಗಳಲ್ಲಿ ಸೀರೆಯನ್ನೇ ಧರಿಸಿರುತ್ತಾರೆ.. ಸೀರೆ ಕಟ್ಟಲು ಕಾಟನ್ ಪೆಟಿಕೋಟ್ ಅನ್ನು ಸೊಂಟದ ಸುತ್ತ ಹತ್ತಿ ದಾರದಿಂದ ಬಿಗಿಯಾಗಿ ಕಟ್ಟಲಾಗುತ್ತದೆ.. ಹೀಗೆ ಧೀರ್ಘಕಾಲ ಕಟ್ಟುವುದು ಅಪಾಯಕಾರಿ ಎಂದು ವೈದ್ಯರು ಹೇಳುತ್ತಿದ್ದಾರೆ.. ದೆಹಲಿಯ ಪಿಎಸ್ ಆರ್ ಐ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ವಿವೇಕ್ ಗುಪ್ತಾ ಅವರ ಪ್ರಕಾರ, ಒಂದೇ ರೀತಿಯ ಉಡುಪನ್ನು ದೀರ್ಘಕಾಲದವರೆಗೆ ಧರಿಸಬಾರದು.. ಈಗ ಸೀರೆ ಉಡುವವರು, ಲಂಗವನ್ನು ಸೊಂಟದ ಸುತ್ತ ದಾರದಿಂದ ಕಟ್ಟಿರುತ್ತಾರೆ.. ಅದು ಸೊಂಟದ ಮೇಲೆ ಉಜ್ಜಲು ಪ್ರಾರಂಭಿಸುತ್ತದೆ. ಇದರಿಂದಾಗಿ ಆ ಪ್ರದೇಶದಲ್ಲಿ ಚರ್ಮಕ್ಕೆ ಹಾನಿಯಾಗುತ್ತದೆ.. ಬಿಗಿಯಾಗಿ ಯಾವಾಗಲೂ ಒಂದೇ ಸ್ಥಳದಲ್ಲಿ ಕಟ್ಟುವುದರಿಂದ ಆ ಭಾಗದಲ್ಲಿ ಚರ್ಮ ಕಪ್ಪಾಗುತ್ತದೆ.. ಹೀಗೆ ಮುಂದುವರೆಯುವುದರಿಂದ ಅಲ್ಲಿ ಕ್ಯಾನ್ಸರ್ ಕೋಶಗಳು ಹುಟ್ಟಲು ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ..
ಇದನ್ನೂ ಓದಿ; ಕೋತಿಗಳಂತೆ ನಡೆಯುತ್ತಾರೆ ಈ ಜನ; ಪ್ರಪಂಚದಲ್ಲೇ ವಿಚಿತ್ರ ಕುಟುಂಬವಿದು!
ಶೇಕಡಾ 1ರಷ್ಟು ಕಂಡುಬರುವ ಸೀರೆ ಕ್ಯಾನ್ಸರ್;
ಸೀರೆ ಕ್ಯಾನ್ಸರ್ ಗೆ ಉಡುಗೆಗಿಂತ ಸ್ವಚ್ಛತೆ ಕೊರತೆಯೂ ಇದಕ್ಕೆ ಕಾರಣವಂತೆ.. ಹೆಚ್ಚಿನ ಶಾಖ ಮತ್ತು ಆರ್ದ್ರತೆ ಇರುವ ಪ್ರದೇಶಗಳಲ್ಲಿ ಈ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಇದರ ಪ್ರಕರಣಗಳು ವರದಿಯಾಗುತ್ತಿವೆ.. ಭಾರತದಲ್ಲಿ ಮಹಿಳೆಯರಲ್ಲಿ ಕಂಡುಬರುವ ಎಲ್ಲಾ ಕ್ಯಾನ್ಸರ್‌ಗಳಲ್ಲಿ ಸೀರೆ ಕ್ಯಾನ್ಸರ್ ಶೇಕಡಾ 1 ರಷ್ಟಿದೆ.. ವೈದ್ಯಕೀಯ ಭಾಷೆಯಲ್ಲಿ, ಇದನ್ನು ಸ್ಕ್ವಾಮಸ್ ಸೆಲ್ ಕಾರ್ಸಿನೋಮ (SCC) ಎಂದು ಕರೆಯಲಾಗುತ್ತದೆ.. ಸೊಂಟಕ್ಕೆ ಬಿಗಿಯಾಗಿ ದಾರ ಕಟ್ಟುವಾಗ ಆ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕೂಡಾ ಅಗತ್ಯವಾಗುತ್ತದೆ.. ಜೊತೆಗೆ ಆಗಾಗ ಸೀರೆಯ ಬದಲಾಗಿ ಇತರೆ ಉಡುಪುಗಳನ್ನು ಧರಿಸಿದರೆ ಒಳ್ಳೆಯದು ಅಂತಾರೆ ತಜ್ಞರು..
ಇದನ್ನೂ ಓದಿ; ಬಿಸಿಲಲ್ಲಿ ನೀವು ಮಾಡುವ ಮಿಸ್ಟೇಕ್ ಕ್ಯಾನ್ಸರ್‌ಗೆ ಕಾರಣವಾಗುತ್ತೆ ಹುಷಾರ್!
ಮುಂಬೈ ಮಹಿಳೆಗೆ ಸೀರೆ ಕ್ಯಾನ್ಸರ್;
ಮುಂಬೈನ ಆರ್ ಎನ್ ಕೂಪರ್ ಆಸ್ಪತ್ರೆಯಲ್ಲೂ ಈ ಬಗ್ಗೆ ಸಂಶೋಧನೆ ನಡೆದಿದೆ.. ಈ ಸಂಶೋಧನೆಯಲ್ಲಿ ಧೋತಿ ಧರಿಸುವವರೆ ಬಗ್ಗೆಯೂ ಅಧ್ಯಯನ ಮಾಡಲಾಗಿತ್ತು.. 68 ವರ್ಷದ ಮಹಿಳೆಯೊಬ್ಬರಿಗೆ ಸೀರೆ ಕ್ಯಾನ್ಸರ್ ಇರುವುದು ಪತ್ತೆಯಾದ ಬಾಂಬೆ ಆಸ್ಪತ್ರೆಯ ವೈದ್ಯರು, ಇದಕ್ಕೆ ಸೀರೆ ಕ್ಯಾನ್ಸರ್ ಎಂಬ ಹೆಸರನ್ನು ನೀಡಿದ್ದಾರೆ. ಈ ಮಹಿಳೆ 13 ವರ್ಷ ವಯಸ್ಸಿನಿಂದಲೂ ಸೀರೆ ಉಡುತ್ತಿದ್ದಳು ಎಂದು ತಿಳಿದುಬಂದಿದೆ.
ಇದನ್ನೂ ಓದಿ; ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್; ಇಂದಿನಿಂದ ದರ ಕಡಿತ!
ಬಿಗಿಯಾದ ಬಟ್ಟೆಗಳನ್ನು ನಿರಂತರವಾಗಿ ಧರಿಸಬೇಡಿ;
ಯಾರಾದರೂ ಬಿಗಿಯಾದ ಬಟ್ಟೆಗಳನ್ನು ನಿರಂತರವಾಗಿ ಧರಿಸುತ್ತಿದ್ದರೆ, ಸ್ವಲ್ಪ ಎಚ್ಚರಿಕೆ ವಹಿಸುವುದು ಒಳ್ಳೆಯದು.. ಬ್ರಾ ಮತ್ತು ಇತರೆ ಒಳಉಡುಪುಗಳು ತುಂಬಾ ಬಿಗಿಯಾಗಿದ್ದರೆ ಖಂಡಿತವಾಗಿಯೂ ಎಚ್ಚರಿಕೆ ವಹಿಸಬೇಕು. ಆದಷ್ಟು ಬಿಗಿಯಾದ ಉಡುಪುಗಳನ್ನು ಧರಿಸುವುದನ್ನು ಕಡಿಮೆ ಮಾಡಬೇಕು.. ಫ್ಯಾಶನ್ ಹೆಸರಲ್ಲಿ ಮಾತ್ರ ತಿಂಗಳಿಗೊಮ್ಮೆ ಇಂತಹ ರಿಸ್ಕ್ ತೆಗೆದುಕೊಂಡರೆ ಓಕೆ. ಜಿಮ್‌ಗಾಗಿ ಧರಿಸುವ ಬಿಗಿಯಾದ ಬಟ್ಟೆಗಳು ಸಹ ಸಮಸ್ಯೆಳಿಗೆ ಕಾರಣವಾಗಬಹುದು.. ಆದರೆ ಆ ಬಟ್ಟೆಗಳನ್ನು ಸೀಮಿತ ಸಮಯದವರೆಗೆ ಧರಿಸುವುದರಿಂದ ಅವು ಕಡಿಮೆ ಸಮಸ್ಯೆಗಳನ್ನು ಉಂಟುಮಾಡುತ್ತವೆ.