CrimeInternational

ಸಹೋದ್ಯೋಗಿ ಹೆರಿಗೆ ರಜೆಗೆ ಹೋಗುವುದನ್ನು ತಡೆಯಲು ನೀರಲ್ಲಿ ವಿಷ ಬೆರೆಸಿದ ಉದ್ಯೋಗಿ!

ಇದು ಬ್ಯುಸಿ ಲೈಫ್‌… ನಗರ ಪ್ರದೇಶದಲ್ಲಿ ಜೀವನ ಮಾಡುವವರು ಬಹುತೇಕ ಸಮಯವನ್ನು ಕೆಲಸ ಮಾಡುವ ಕಚೇರಿಯಲ್ಲೇ ಕಳೆಯುತ್ತಾರೆ.. ಒಂದು ರೀತಿಯಲ್ಲಿ ನಗರ ಜೀವನ ಅನ್ನೋದು ಯಾಂತ್ರಿಕ ಜೀವನ… ಯಾವಾಗಲೂ ಒತ್ತಡದ ಕೆಲಸ, ಒತ್ತಡದ ಜೀವನ.. ಈ ಸಮಯದಲ್ಲಿ  ನಾವು ಏನು ಮಾಡುತ್ತಿದ್ದೇವೆ ಅನ್ನೋದು ಕೂಡಾ ನಮಗೇ ಗೊತ್ತಿರುವುದಿಲ್ಲ.. ಹೀಗಾಗಿಯೇ ಒತ್ತಡದ ಕೆಲಸದಿಂದಾಗಿ, ಕೆಲಸದ ಸ್ಥಳದಲ್ಲಿ ಮನಸ್ತಾಪಗಳಾಗುತ್ತವೆ, ಜಗಳಗಳಾಗುತ್ತವೆ.. ಕೆಲವರು ಕೆಲಸದ ಒತ್ತಡ ಸಹಿಲಾರದೆ ಕೆಲಸ ಬಿಡುತ್ತಾರೆ.. ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ನಮ್ಮ ಮುಂದೆ ಸಾಕಷ್ಟು ಸಿಗುತ್ತವೆ.. ಆದ್ರೆ ನಾವು ಹೇಳ್ತಾ ಇರೋದು ಬೇರೆಯದೇ ವಿಚಿತ್ರ ಕೇಸ್..‌ ಇಲ್ಲಿ ಕೆಲಸದ ಒತ್ತಡದಲ್ಲಿದ್ದ ಉದ್ಯೋಗಿ ಸಹೋದ್ಯೋಗಿಯನ್ನು ಕೊಲ್ಲುವ ಹಂತಕ್ಕೆ  ಹೋಗಿದ್ದಾರೆ..

ಇದನ್ನೂ ಓದಿ; ಕೋತಿಗಳಂತೆ ನಡೆಯುತ್ತಾರೆ ಈ ಜನ; ಪ್ರಪಂಚದಲ್ಲೇ ವಿಚಿತ್ರ ಕುಟುಂಬವಿದು!

ಗರ್ಭಿಣಿಗೆ ನೀರಲ್ಲಿ ವಿಷ ಬೆರೆಸಿದ ಸಹೋದ್ಯೋಗಿ;

ಚೀನಾದ ಮಧ್ಯ ಹುಬೈ ಪ್ರಾಂತ್ಯದ ಕಂಪನಿಯೊಂದರಲ್ಲಿ ಮಹಿಳಾ ಉದ್ಯೋಗಿಯೊಬ್ಬರು ಅದೇ ಕಂಪನಿಯಲ್ಲಿ ಕೆಲಸ ಮಾಡುವ ಸಹೋದ್ಯೋಗಿ ಗರ್ಭಿಣಿ ಮಹಿಳೆಯ ನೀರಿನ ಬಾಟೆಲ್‌ಗೆ ವಿಷ ಬೆರೆಸಿದ್ದಾಳೆ.. ತುಂಬು ಗರ್ಭಿಣಿ ತನ್ನ ಡೆಸ್ಕ್‌ ಬಳಿ ನೀರಿನ ಬಾಟೆಲ್‌ ಇರಿಸಿಕೊಂಡಿದ್ದಳು.. ಆಕೆ ಅಲ್ಲಿಂದ ಹೊರಹೋದ ಸಂದರ್ಭದಲ್ಲಿ ಸಹೋದ್ಯೋಗಿ ಮಹಿಳೆಯೊಬ್ಬರು, ಆ ಬಾಟೆಲ್‌ಗೆ ಪುಡಿಯೊಂದನ್ನು ಬೆರೆಸಿದ್ದಾರೆ.. ಅದು ವಿಷದ ಪುಡಿಯಾಗಿದ್ದು, ಆಕೆ ಪುಡಿ ಬೆರೆಸಿದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.. ಈಗ ಆಕೆ ಸಿಕ್ಕಿಬಿದ್ದಿದ್ದು, ಆಕೆ ಕೊಟ್ಟ ಕಾರಣ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.. ಕಂಪನಿಗಳಲ್ಲಿ ಉದ್ಯೋಗಿಗಳು ನೀರು ಕುಡಿಯೋದಕ್ಕೇ ಭಯ ಪಡುವಂತಹ ಪರಿಸ್ಥಿತಿ ಬಂದಿದೆ..

ಇದನ್ನೂ ಓದಿ; ಬಿಸಿಲಲ್ಲಿ ನೀವು ಮಾಡುವ ಮಿಸ್ಟೇಕ್‌ ಕ್ಯಾನ್ಸರ್‌ಗೆ ಕಾರಣವಾಗುತ್ತೆ ಹುಷಾರ್‌!

ನೀರು ಟೇಸ್ಟ್‌ ನೋಡಿ ಗರ್ಭಿಣಿಗೆ ಅನುಮಾನ;

ಗರ್ಭಿಣಿ ಡೆಸ್ಕ್‌ ಬಳಿ ಇಲ್ಲದಿದ್ದಾಗ ಸಹೋದ್ಯೋಗಿ ಮಹಿಳೆಯೊಬ್ಬರು ಈ ಪುಡಿ ನೀರಿನ ಬಾಟೆಲ್‌ಗೆ ಹಾಕಿದ್ದಳು.. ನಂತರ ಬಂದ ಗರ್ಭಿಣಿ ಆ ನೀರನ್ನು ಕುಡಿಯಲು ಹೋಗಿದ್ದಾಳೆ.. ಈ ವೇಳೆ ಆ ನೀರು ವಿಚಿತ್ರ ಟೇಸ್ಟ್‌ ಇರೋದನ್ನು ಗಮನಿಸಿದ್ದಾಳೆ.. ಇದರಿಂದಾಗಿ ಆಕೆ ನೀರನ್ನು ಕಾಯಿಸಿ ಕುಡಿಯಲು ಹೋಗಿದ್ದಾಳೆ.. ಆಗಲೂ ಅದರ ಟೇಸ್ಟ್‌ ವಿಚಿತ್ರವಾಗಿತ್ತು.. ಇದರಿಂದ ಯಾರೋ ಏನೋ ಮಾಡುತ್ತಿದ್ದಾರೆ ಎಂದು ಆ ಗರ್ಭಿಣಿಗೆ ಅನುಮಾನ ಬಂದಿದೆ.. ಇದನ್ನು ಕಂಡುಹಿಡಿಯಬೇಕೆಂದು ಮಹಿಳೆ ಕ್ಯಾಮರಾ ಫಿಕ್ಸ್‌ ಮಾಡಿದ್ದಾಳೆ. ಇದನ್ನು ಅರಿಯದ ಸಹೋದ್ಯೋಗಿ ಮಾರನೆಯ ದಿನವೂ ಅದಕ್ಕೆ ಪೌಡರ್‌ ಸುರಿದಿದ್ದಾಳೆ.. ಕೂಡಲೇ ಗರ್ಭಿಣಿ ಮಹಿಳೆ  ಸಹೋದ್ಯೋಗಿಯನ್ನ ರೆಡ್‌ ಹ್ಯಾಂಡಾಗಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಾಳೆ.

ಇದನ್ನೂ ಓದಿ; ಬೆಳ್ಳುಳ್ಳಿ ರಸಂ ತಿನ್ನಿ; ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಹೆರಿಗೆ ರಜೆಗೆ ಕೆಲಸದ ಒತ್ತಡ ಒತ್ತಡ ಜಾಸ್ತಿಯಾಗುತ್ತೆ ಎಂಬ ನೆಪ;

ಪೌಡರ್‌ ಹಾಕಿದ ಮಹಿಳೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.. ಈ ವೇಳೆ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.. ಪೊಲೀಸರು ಆರೋಪಿ ಮಹಿಳೆ ಹೇಳಿದ ಮಾತು ಕೇಳಿ ಬೆಚ್ಚಿಬಿದ್ದಿದ್ದಾರೆ. ಏಕೆಂದರೆ ಗರ್ಭಿಣಿಯಾಗಿರುವ ತನ್ನ ಸಹೋದ್ಯೋಗಿ ಹೆರಿಗೆ ರಜೆಯ ಮೇಲೆ ಹೋಗುವವಳಿದ್ದಳು.. ಹೆರಿಗೆ ರಜೆಗೆ ಹೋದರೆ ಆಕೆ ತಿಂಗಳುಗಟ್ಟಲೆ ಕೆಲಸಕ್ಕೆ ಬರುವುದಿಲ್ಲ.. ಇದರಿಂದಾಗಿ ಆಕೆಯ ಕೆಲಸದ ಹೊರೆ ಆರೋಪಿ ಸಹೋದ್ಯೋಗಿ ಮೇಲೆ ಬೀಳುತ್ತಿತ್ತು.. ಕೆಲಸದ ಹೊರೆ ಸಂಪೂರ್ಣ ತನ್ನ ಮೇಲೆ ಬೀಳುತ್ತದೆ. ಹಾಗಾಗಿ ತನ್ನ ಸಹೋದ್ಯೋಗಿ ಹೆರಿಗೆ ರಜೆ ತೆಗೆದುಕೊಳ್ಳುವುದನ್ನು ತಡೆಯಲು ಹೀಗೆ ಮಾಡಿದೆ. ನೀರಿನ ವಿಷ ಹಾಕಿದರೆ ಅಬಾರ್ಷನ್‌ ಆಗುತ್ತದೆ.. ಆಗ ಮಹಿಳೆ ಹೆರಿಗೆ ರಜೆಗೆ ಹೋಗುವುದಿಲ್ಲ ಎಂದು ಈ ರೀತಿ ಮಾಡಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.. ಇದನ್ನು ಕೇಳಿ ಪೊಲೀಸರು ಬೆಚ್ಚಿಬಿದ್ದಾರೆ…

ಇದನ್ನೂ ಓದಿ; ಈ ತರಕಾರಿ ನೀರು ಕುಡಿದರೆ ಸ್ಲಿಮ್ ಆಗಬಹುದು!

 

Share Post