Politics

NewsX Exitpoll; ತೆಲಂಗಾಣದಲ್ಲಿ ಬಿಜೆಪಿಗೆ ಈ ಬಾರಿ ಭರ್ಜರಿ ಸೀಟು; ಅಧಿಕಾರದಲ್ಲಿದ್ದರೂ ಕಾಂಗ್ರೆಸ್‌ಗೆ ಹಿನ್ನಡೆ..?

ನವದೆಹಲಿ; NewsX – D-Dynamics Exit Poll ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್‌ಡಿಎ ಒಕ್ಕೂಟ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಹೇಳಿದೆ.. ಇನ್ನು ತೆಲಂಗಾಂಣದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ.. ಹೀಗಿದ್ದರೂ ಕೂಡಾ ಇಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸರಿಸಮನಾಗಿ ಬಿಜೆಪಿ ಕೂಡಾ ಸ್ಥಾನಗಳನ್ನು ಗಳಿಸಲಿದೆ ಎಂದು ನ್ಯೂಸ್‌ ಎಕ್ಸ್‌ ಸಮೀಕ್ಷೆ ಹೇಳುತ್ತಿದೆ.. ಕಳೆದ ಬಾರಿ ಬಿಜೆಪಿ ಇಲ್ಲಿ 4 ಸ್ಥಾನಗಳಲ್ಲಿ ಗೆದ್ದಿತ್ತು. ಆದ್ರೆ ಈ ಬಾರಿ 7 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು NewsX – D-Dynamics Exit Poll ಹೇಳಿದೆ..

ತೆಲಂಗಾಣ NewsX – D-Dynamics Exit Poll  ಸಮೀಕ್ಷೆ;
ಬಿಜೆಪಿ – 07
ಕಾಂಗ್ರೆಸ್‌ – 07
ಬಿಆರ್‌ಎಸ್‌ – 02
ಎಐಎಂಐಎಂ – 01

Share Post