HealthLifestyle

ಬಿಸಿಲಲ್ಲಿ ನೀವು ಮಾಡುವ ಮಿಸ್ಟೇಕ್‌ ಕ್ಯಾನ್ಸರ್‌ಗೆ ಕಾರಣವಾಗುತ್ತೆ ಹುಷಾರ್‌!

ಬೆಂಗಳೂರು; ಬಿಸಿಲ ಧಗೆ ವಿಪರೀತವಾಗಿದೆ.. ಮನೆಯಿಂದ ಹೊರಗೆ ಕಾಲಿಡೋದಕ್ಕೆ ಆಗುತ್ತಿಲ್ಲ.. ಇಂತಹ ಬಿರುಬೇಸಿಗೆಯಲ್ಲೂ ಕೆಲಸ ಮಾಡದೇ ಹೋದರೆ ಹೋದರೆ ಹೊಟ್ಟೆ ತುಂಬೋದೇ ಇಲ್ಲ.. ಅದ್ರಲ್ಲೂ ಕೂಲಿ ಕಾರ್ಮಿಕರು, ಬಿಸಿಲಿನ ಧಗೆಯ ನಡುವೆ ಕೆಲಸ ಮಾಡಬೇಕಾಗುತ್ತದೆ.. ಹೀಗೆ ಬಿಸಿಲಲ್ಲಿ ಕೆಲಸ ಮಾಡುವವರು ಪದೇ ಪದೇ ನೀರು ಕುಡಿಯಬೇಕು.. ಇಲ್ಲದಿದ್ದರೆ, ದೇಹದಲ್ಲಿ ನೀರಿನಂಶ ಕಡಿಮೆಯಾಗಿ ತಲೆಸುತ್ತು ಬರುವ ಸಾಧ್ಯತೆ ಇರುತ್ತದೆ.. ಹೀಗಾಗಿ ಎಲ್ಲರೂ ಬಾಟೆಲ್‌ನಲ್ಲಿ ನೀರು ತುಂಬಿಸಿಕೊಂಡಿರುತ್ತಾರೆ.. ಆದ್ರೆ ಹಾಗೆ ಪ್ಲಾಸ್ಟಿಕ್‌ ಬಾಟಲ್‌ ನಲ್ಲಿ ನೀರು ತುಂಬಿಸಿಕೊಂಡು ಕುಡಿಯುವುದರಿಂದ ಆರೋಗ್ಯ ತುಂಬಾ ಡೇಂಜರ್‌ ಎಂದು ವೈದ್ಯರು ಹೇಳುತ್ತಿದ್ದಾರೆ.. ಅದ್ರಲ್ಲೂ ಕೂಡಾ ಬಳಸಿ ಬಿಸಾಕುವ ಪ್ಲಾಸ್ಟಿಕ್‌ ನೀರಿನ ಬಾಟೆಲ್‌ಗಳನ್ನು ಮರುಬಳಕೆ ಮಾಡಿದರೆ ದೇಹಕ್ಕೆ ಮತ್ತಷ್ಟು ಅಪಾಯ ಎಂದು ವೈದ್ಯರು ಹೇಳುತ್ತಿದ್ದಾರೆ..

ಇದನ್ನೂ ಓದಿ; ವಿದ್ಯುತ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌; ಇಂದಿನಿಂದ ದರ ಕಡಿತ!

ಕ್ಯಾನ್ಸರ್‌ನಂತಕ ಮಾರಕ ಕಾಯಿಲೆ ಬರುವ ಎಚ್ಚರಿಕೆ;

ಬಿಸಿಲಿನ ಹಿನ್ನೆಲೆಯಲ್ಲಿ ವಿಪರೀತ ಸೆಕೆ ಇದೆ.. ಈ ಸಮಯದಲ್ಲಿ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಬಾಟೆಲ್‌ಗಳಿಗೆ ನೀರು ತುಂಬಿಸಿಕೊಂಡು ಬಳಸೋದು ತಪ್ಪು.. ಯಾಕಂದ್ರೆ ಆ ಬಾಟಲ್‌ ಹೊಡೆಗಡೆ ಇಟ್ಟಾಗ ಬಿಸಿಲಿನ ಧಗೆಗೆ ಅದು ಸುಟ್ಟಂತಾಗುತ್ತದೆ.. ಇದರಿಂದಾಗಿ ಪಾಸ್ಟಿಕ್‌ ಬಾಟಲ್‌ ಕೊಂಚ ಕರಗುತ್ತದೆ.. ಅದರ ಒಳಗೆ ರಾಸಾಯನಿಕ ಬದಲಾವಣೆಯಾಗುತ್ತದೆ.. ಪ್ಲಾಸ್ಟಿಕ್‌ನ ಸಣ್ಣ ಸಣ್ಣ ಕಣಗಳು ನೀರಿನೊಳಗೆ ಸೇರುತ್ತವೆ.. ಇದರಿಂದಾಗುವ ರಾಸಾಯನಿಕ ಬದಲಾವಣೆಯೇ ನಮ್ಮ ದೇಹಕ್ಕೆ ವಿಲನ್‌.. ಹೀಗೆ ಪ್ಲಾಸ್ಟಿಕ್‌ ಬಾಟಲ್‌ಗಳನ್ನು ಬಳಸುವುದರಿಂದ ದೇಹದ ಆರೋಗ್ಯಕ್ಕೆ ತೊಂದರೆಯಾಗಲಿದೆ.. ಕ್ಯಾನ್ಸರ್‌ ನಂತರ ಮಾರಕ ರೋಗಳು ಬರುವ ಅಪಾಯವಿದೆ.. ಈ ಹಿನ್ನೆಲೆಯಲ್ಲಿ ಆದಷ್ಟು ಪ್ಲಾಸ್ಟಿಕ್‌ ಬಾಟಲ್‌ ನಲ್ಲಿ ಬೇಸಿಗೆ ವೇಳೆ ನೀರಿನ ಸಂಗ್ರಹ ಮಾಡುವುದು ಕಡಿಮೆ ಮಾಡುವುದು ಒಳ್ಳೆಯದು.. ಅದರಲ್ಲೂ ಕೂಡಾ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಬಾಟಲ್‌ಗಳನ್ನು ಬಳಸದಿರುವುದೇ ಒಳ್ಳೆಯದು..

ಇದನ್ನೂ ಓದಿ; PF ಹೊಸ ರೂಲ್ಸ್; ಉದ್ಯೋಗಿಗಳಿಗೆ ಇದು ಗುಡ್ ನ್ಯೂಸ್

ಅಂಗಡಿಯಲ್ಲಿರುವ ಪ್ಲಾಸ್ಟಿಕ್‌ ಬಾಟಲ್‌ ಕೂಡಾ ಡೇಂಜರ್‌;

ಅಂಗಡಿಯಲ್ಲಿ ಫ್ರೆಶ್‌ ಆಗಿ ಮಾರುವ ಮಿನರಲ್‌ ವಾಟರ್‌ ಬಾಟಲ್‌ ಕೂಡಾ ಬೇಸಿಗೆ ಸಮಯದಲ್ಲಿ ಬಳಕೆ ಡೇಂಜರ್‌ ಎಂದು ಕೆಲವು ತಜ್ಷರು ಹೇಳುತ್ತಾರೆ.. ಯಾಕಂದ್ರೆ, ಅಂಗಡಿಗಳಿಗೆ ನೀರಿನ ಬಾಟಲ್‌ಗಳನ್ನು ಸಪ್ಲೈ ಮಾಡುವವರು ತೆರೆದ ವಾಹನಗಳನ್ನು ಅದನ್ನು ತೆಗೆದುಕೊಂಡು ಹೋಗುತ್ತಾರೆ.. ಆಗ ಆ ಬಾಟಲ್‌ಗಳ ಮೇಲೆ ಬಿಸಿಲು ಬಿದ್ದಿರುತ್ತದೆ.. ಅನಂತರ ಅಂಗಡಿಗಳವರು ಕೂಡಾ ಹೊರಗಡೆಯೇ ಬಾಟಲ್‌ಗಳನ್ನು ಜೋಡಿಸಿರುತ್ತಾರೆ.. ಅನಂತರ ಒಂದೊಂದೇ ಫ್ರಿಡ್ಜ್‌ನಲ್ಲಿ ಜೋಡಿಸುತ್ತಾರೆ.. ಹಾಗೆ ಒಮ್ಮೆ ಬಿಸಿಲಿನಲ್ಲಿಟ್ಟು, ಮತ್ತೊಮ್ಮೆ ಫ್ರಿಡ್ಜ್‌ನಲ್ಲಿಟ್ಟಾಗ ಆ ನೀರಿನಲ್ಲಿ ರಾಸಾಯನಿಕ ಬದಲಾವಣೆಯಾಗುತ್ತದೆ.. ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.. ಮಾರಕ ಕಾರಿಲೆಗಳಿಗೆ ದಾರಿ  ಮಾಡಿಕೊಡುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ..

ಇದನ್ನೂ ಓದಿ; ಬೆಳ್ಳುಳ್ಳಿ ರಸಂ ತಿನ್ನಿ; ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಕೆಮಿಕಲ್‌ ರಿಯಾಕ್ಷನ್‌ನಿಂದ ಆರೋಗ್ಯಕ್ಕೆ ಹಾನಿ;

ಪಾಲಿಥಿಲೀನ್ ಟೆರೆಫ್ತಾಲೇಟ್ (ಪಿಇಟಿ) ವರ್ಗದ ಪ್ಲಾಸ್ಟಿಕ್ ಬಳಸಿ ನೀರಿನ ಬಾಟಲ್‌ಗಳನ್ನು ತಯಾರು ಮಾಡಲಾಗಿರುತ್ತದೆ.. ಇನ್ನು ನೀರಿನ ಬಾಟಲ್‌ ತಯಾರಕರು ಲಾಭದ ಉದ್ದೇಶವನ್ನಿಟ್ಟುಕೊಂಡು ಕಡಿಮೆ ಗುಣಮಟ್ಟದ ರಾಸಾಯನಿಕಗಳನ್ನು ಪಿಇಟಿಗೆ ಸೇರಿಸಿರುತ್ತಾರೆ.. ಈ ಪ್ಲಾಸ್ಟಿಕ್‌ ಬಳಕೆಗೆ ಯೋಗ್ಯವೇ ಆಗಿದ್ದರೂ ಕೂಡಾ ಅದನ್ನು ಬಿಸಿ ಮಾಡಿದರೆ ಆರೋಗ್ಯ ತೊಂದರೆಗಳು ಉಂಟಾಗುವ ಸಾಧ್ಯತೆಗಳೇ ಹೆಚ್ಚು.. ಹೀಗಾಗಿ ಬೇಸಿಗೆಯಲ್ಲಿ ಬಾಟೆಲ್‌ ಗಳನ್ನು ಬಿಸಿಯಾಗುವುದರಿಂದ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.. ಹೀಗಾಗಿ ಇಂತಹ ಬಾಟಲಿಗಳನ್ನು ಬಿಸಿನಲ್ಲಿಟ್ಟಾಗ ಪ್ಲಾಸ್ಟಿಕ್‌ ಕರಗಿ ಅದು ನೀರಿನಲ್ಲಿ ಸೇರುತ್ತದೆ.. ಮೇಲ್ನೋಟಕ್ಕೆ ನಮಗೆ ಇದು ಗೊತ್ತಾಗದೇ ಇದ್ದರೂ, ಸಣ್ಣ ಸಣ್ಣ ಪ್ಲಾಸ್ಟಿಕ್‌ ಕಣಗಳು ನೀರಿನ ಮೂಲಕ ನಮ್ಮ ದೇಹ ಸೇರುತ್ತವೆ.. ಈ ಪ್ಲಾಸ್ಟಿಕ್‌ ಕಣಗಳಿಂದ ನಮ್ಮ ದೇಹದಲ್ಲಿ ಕ್ಯಾನ್ಸರ್‌ ಕಣಗಳು ಹುಟ್ಟಿಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇವೆ..

ಇದನ್ನೂ ಓದಿ; 12 ಕ್ಷೇತ್ರಗಳಲ್ಲಿ ರಾಜವಂಶಸ್ಥರನ್ನು ಕಣಕ್ಕಿಳಿಸಿದ ಬಿಜೆಪಿ; ಯಾರು ಅವರು..?

ಡಯಾಕ್ಸಿನ್‌ ಎಂಬ ಕೆಮಿಕಲ್‌ ಬಿಡುಗಡೆ;

ಈ ಪ್ಲಾಸ್ಟಿಕ್‌ ನೀರಿನ ಬಾಟೆಲ್‌ ಗಳನ್ನು ಸೂರ್ಯನ ಶಾಖಕ್ಕೆ ಒಡ್ಡಿದರೆ ಅದ್ರಿಂದ ಡೈಯಾಕ್ಸಿನ್  ಎಂಬ ಕೆಮಿಕಲ್‌ ಬಿಡುಗಡೆಯಾಗುತ್ತದೆ.. ಇದು ಅತ್ಯಂತ ಹಾನಿಕಾರಕ ವಿಷವಾಗಿದೆ.. ಇದರಿಂದ ಮಹಿಳೆಯರಿಗೆ ಸ್ತನ ಕ್ಯಾನ್ಸರ್‌ ಬರುವ ಸಾಧ್ಯತೆ ಇರುತ್ತದೆ.. ಇದರ ಜೊತೆಗೆ ಇಂತಹ ಬಾಟೆಲ್‌ ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.. ಇದೂ ಕೂಡಾ ರೋಗಗಳಿಗೆ ಆಹ್ವಾನ ನೀಡುತ್ತದೆ.. ಹೀಗಾಗಿ ಪ್ಲಾಸ್ಟಿಕ್‌ ಬಾಟಲ್‌ಗಳಿಗೆ ಬದಲಾಗಿ ಮೆಟಲ್‌ ಬಾಟಲ್‌ಗಳನ್ನು ಬಳಸುವುದು ಒಳ್ಳೆಯದು.. ಆದಷ್ಟು ನೀರನ್ನು ಬಿಸಿಲಿಗೆ ಒಡ್ಡದೇ ಇದ್ದರೆ ಇನ್ನೂ ಒಳ್ಳೆಯದು.. ಹಿತ್ತಾಳೆ, ತಾಮ್ರ ಅಥವಾ ಮಣ್ಣಿನ ಬಾಟೆಲ್‌ಗಳನ್ನು ಬಳಸಿದರೆ ಅಂತೂ ಆರೋಗ್ಯವನ್ನು ನಾವು ಇನ್ನೂ ಉತ್ತಮವಾಗಿ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ; ಮೀನು ಅಡುಗೆ ಮಾಡುವಾಗ ವಾಸನೆ ಬರ್ತಿದೆಯಾ..?; ಹಾಗಾದ್ರೆ ಹೀಗೆ ಮಾಡಿ..

 

Share Post