HealthLifestyle

ಕೆಂಪು ಮೊಟ್ಟೆ ಒಳ್ಳೆಯದಾ..?, ಬಿಳಿ ಮೊಟ್ಟೆ ಒಳ್ಳೆಯದಾ..?; ತಜ್ಞರು ಏನು ಹೇಳುತ್ತಾರೆ..?

ಕೋಳಿ ಮೊಟ್ಟೆಯಲ್ಲಿ ಹತ್ತಾರು ಪೋಷಕಾಂಶಗಳಿರುತ್ತವೆ.. ಹೀಗಾಗಿ ಇದರ ಸೇವನೆ ಆರೋಗ್ಯಕ್ಕೆ ಒಳ್ಳೆಯದು.. ಆದ್ರೆ ಯಾವ ಮೊಟ್ಟೆಯನ್ನು ಸೇವಿಸುವುದು..? ಬಿಳಿ ಬಣ್ಣದ ಮೊಟ್ಟೆಯನ್ನು ತಿನ್ನಬೇಕೇ..? ಕೆಂಪು ಬಣ್ಣದ ಮೊಟ್ಟೆಯನ್ನು ತಿನ್ನಬೇಕೇ..? ಈ ಎರಡರಲ್ಲಿ ಯಾವುದು ಶ್ರೇಷ್ಠ..? ಇಂತಹದ್ದೊಂದು ಪ್ರಶ್ನೆ ಎಲ್ಲರಲ್ಲೂ ಇರುತ್ತದೆ.. ಕೆಲವರು ಕೆಂಪು ಮೊಟ್ಟೆ ಶ್ರೇಷ್ಠವೆಂದೂ ಹೇಳುತ್ತಿರುತ್ತಾರೆ.. ಯಾಕಂದ್ರೆ, ಮಾರುಕಟ್ಟೆಯಲ್ಲಿ ಅದರ ಬೆಲೆ ಹೆಚ್ಚು.. ಆದ್ರೆ ನಿಜವಾಗಲೂ ಯಾವ ಮೊಟ್ಟೆ ಉತ್ತಮ..? ಬಿಳಿ ಹಾಗೂ ಕೆಂಪು ಮೊಟ್ಟೆಗಳ ನಡುವಿನ ವ್ಯತ್ಯಾಸವೇನು ನೋಡೋಣ ಬನ್ನಿ…

ಇದನ್ನೂ ಓದಿ; ಚನ್ನಪಟ್ಟಣದಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ

ಯಾವ ಬಣ್ಣದ ಮೊಟ್ಟೆಯಲ್ಲಿ ಪೋಷಕಾಂಶಗಳು ಹೆಚ್ಚು..?

ಮಾರುಕಟ್ಟೆಗೆ ಹೋದರೆ ಹಲವಾರು ರೀತಿಯ ಮೊಟ್ಟೆಗಳಿರುತ್ತವೆ.. ಅದ್ರಲ್ಲೂ ಬಿಳಿ ಬಣ್ಣದ ಮೊಟ್ಟೆಗಳು ಹಾಗೂ ಕೆಂಪು ಬಣ್ಣದ ಮೊಟ್ಟೆಗಳಿರುತ್ತವೆ.. ಆದ್ರೆ ಜನಕ್ಕೆ ಹೆಚ್ಚಾಗಿ ಸಿಗೋದು ಬಿಳಿ ಬಣ್ಣದ ಮೊಟ್ಟೆಗಳು ಮಾತ್ರ.. ಕೆಂಪು ಬಣ್ಣದ ಮೊಟ್ಟೆಗಳು ಮಾಲ್‌ಗಳಲ್ಲಿ, ಕೆಲವು ಆಯ್ದ ಅಂಗಡಿಗಳಲ್ಲಿ ಸಿಗುತ್ತವೆ.. ಇನ್ನು ಈ ಕೆಂಪು ಬಣ್ಣದ ಮೊಟ್ಟೆಗಳ ಬೆಲೆ ಕೂಡಾ ದುಪ್ಪಟ್ಟಿರುತ್ತದೆ.. ಹೀಗಾಗಿಯೇ ಹೆಚ್ಚು ಜನ ಕೆಂಪು ಮೊಟ್ಟೆಯಲ್ಲಿ ಪೋಷಕಾಂಶಗಳು ಹೆಚ್ಚಿರುತ್ತವೆ ಎಂದುಕೊಳ್ಳುತ್ತಾರೆ.. ಆದ್ರೆ, ಆ ಭಾವನೆ ತಪ್ಪು ಅಂತಾನೇ ಹೇಳಬೇಕು.. ಅಂದಹಾಗೆ ಎರಡು ಮೊಟ್ಟೆಗಳಲ್ಲಿ ಯಾವುದು ಶ್ರೇಷ್ಠ ಎಂದು ತಿಳಿಯುವ ಮೊದಲು ಕೋಳಿ ಮೊಟ್ಟೆಗಳು ಹೀಗೆ ಎರಡು ಬಣ್ಣಗಳಲ್ಲಿ ಸಿಗಲು ಕಾರಣಗಳೇನು ಅನ್ನೋದನ್ನು ನೋಡೋಣ..

ಇದನ್ನೂ ಓದಿ; ಶ್ರೀನಿವಾಸ ಪ್ರಸಾದ್‌ ಸಂಬಂಧಿಕರೆಲ್ಲಾ ಕಾಂಗ್ರೆಸ್‌ ಸೇರ್ಪಡೆ

ಕೋಳಿ ಮೊಟ್ಟೆ ಯಾಕೆ ಎರಡು ಬಣ್ಣದಲ್ಲಿರುತ್ತೆ..?

ಕೋಳಿಯ ತಳಿ ಹಾಗೂ ಅದರ ಅನುವಂಶೀಯತೆ ಆಧಾರದ ಮೇಲೆ ಮೊಟ್ಟೆಯ ಬಣ್ಣ ನಿರ್ಧಾರವಾಗುತ್ತದೆ.. ಸಾಮಾನ್ಯವಾಗಿ ಬಿಳಿ ಪುಕ್ಕ ಹೊಂದಿರುವ ಕೋಳಿಗಳು ಬಿಳಿ ಬಣ್ಣದ ಮೊಟ್ಟೆಗಳನ್ನು ಇಡುತ್ತವೆ.. ಗಾಢ ಬಣ್ಣ ಹೊಂದಿರುವ ಕೋಳಿಗಳು ಕೆಂಪು ಬಣ್ಣದ ಮೊಟ್ಟೆಗಳನ್ನು ಇಡುತ್ತವೆ.. ವೈಟ್ ಲೆಘೋರ್ನ್ ಕೋಳಿಗಳು ವಿವಿಧ ಬಣ್ಣಗಳಲ್ಲಿ ಬರುತ್ತವೆಯಾದರೂ, ಅವು ಹೆಚ್ಚಾಗಿ ಬಿಳಿ ಮೊಟ್ಟೆಗಳನ್ನೇ ಇಡುತ್ತವೆ. ಪ್ಲೈಮೌತ್ ರಾಕ್, ರೋಡ್ ಐಲ್ಯಾಂಡ್ ಕೋಳಿಗಳು ಕೆಂಪು ಮೊಟ್ಟೆಗಳನ್ನು ಇಡುತ್ತವೆ. ಕೆಲವು ತಳಿಯ ಕೋಳಿಗಳು ಬಿಳಿ ಬಣ್ಣದಲ್ಲಿದ್ದರೂ ಅವು ಕೆಂಪು ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಯ ಚಿಪ್ಪಿನ ಗಾಢ ಬಣ್ಣವು ಕೋಳಿಯ ಗರ್ಭಾಶಯದಲ್ಲಿನ ಶೆಲ್ ಗ್ರಂಥಿಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ; ಮೊಸರನ್ನು ಹೀಗೆ ಸೇವಿಸಿದರೆ ಕೊಲೆಸ್ಟ್ರಾಲ್‌ ನಿಯಂತ್ರಿಸಬಹುದು!

ಕೋಳಿಯಲ್ಲಿ ಮೊಟ್ಟೆ ಹೇಗೆ ತಯಾರಾಗುತ್ತೆ..?

ತಜ್ಞರ ಪ್ರಕಾರ ಕೋಳಿಯ ದೇಹದೊಳಗೆ ಮೊಟ್ಟೆಯೊಂದು ರೂಪುಗೊಂಡು ಹೊರಬರಲು ಸುಮಾರು 26 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ.. ಕೋಳಿಯ ಗರ್ಭದಲ್ಲಿ ಮೊಟ್ಟೆಯ ಹಳದಿ ಲೋಳೆಯು ರೂಪ ಪಡೆಯುತ್ತದೆ.. ನಂತರ ಅದರ ಸುತ್ತ ಬಿಳಿ ಲೋಳೆ ಅಥವಾ ಅಲ್ಬುಮಿನ್‌ ರೂಪುಗೊಳ್ಳಲು ಬರೋಬ್ಬರಿ 3 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ.. ನಂತರ ಶೆಲ್‌ನ ಕೆಳಗಿರುವ ತೆಳುವಾದ ಪದರ ತಯಾರಾಗಲಿದ್ದು, ಅದಕ್ಕೆ ಒಂದು ಗಂಟೆ ಸಮಯ ಹಿಡಿಯುತ್ತದೆ.. ಇಷ್ಟಾದ ಮೇಲೆ ಆ ಮೊಟ್ಟೆ ಕೋಳಿಯ ಬಾಲದ ಬಳಿಯ ಶೆಲ್‌ ಗ್ರಂಥಿಗೆ ಪ್ರವೇಶ ಮಾಡುತ್ತದೆ.. ಈ ಸ್ಥಳದಲ್ಲೇ ಮೊಟ್ಟೆಯ ಮೇಲೆ ಶೆಲ್‌ ತಯಾರಾಗುತ್ತದೆ.. ಈ ಶೆಲ್‌ ರೆಡಿಯಾಗಲು ಸುಮಾರು 20 ಗಂಟೆ ಹಿಡಿಯುತ್ತದೆ..

ಇದನ್ನೂ ಓದಿ; ದೆಹಲಿ ಮದ್ಯನೀತಿ ಹಗರಣ; ಎಎಪಿ ಸಂಸದ ಸಂಜಯ್‌ ಸಿಂಗ್‌ಗೆ ಜಾಮೀನು

ಕೊನೆಯ ನಿಮಿಷದಲ್ಲಿ ಬಣ್ಣ ಬದಲಾವಣೆ;

ಹೀಗೆ ಶೆಲ್‌ ತಯಾರಿವರೆಗೂ ಅಂದರೆ ಮೊಟ್ಟೆ ಹೊರಬರುವವರೆಗೂ ಎಲ್ಲಾ ಮೊಟ್ಟೆಗಳೂ ಬಿಳಿಯಾಗಿಯೇ ಇರುತ್ತವೆ.. ಆದ್ರೆ ಮೊಟ್ಟೆ ಹೊರಬರುವ ಕೊನೆಯ ನಿಮಿಷದಲ್ಲಿ ಮೊಟ್ಟೆಯ ಬಣ್ಣ ಬದಲಾಗುತ್ತದೆ.. ಹೌದು, ಎಲ್ಲಾ ಮೊಟ್ಟೆಯ ಚಿಪ್ಪುಗಳೂ ಮೊದಲಿಗೆ ಬಿಳಿ ಬಣ್ಣದ್ದಾಗಿರುತ್ತವೆ. ಮೊಟ್ಟೆ ತಯಾರಿಕೆಯ ಕೊನೆಯ ನಿಮಿಷದಲ್ಲಿ ಬಣ್ಣ ಬದಲಾಗುತ್ತದೆ. ಈ ಬಣ್ಣವು ಕೋಳಿಯ ದೇಹದಲ್ಲಿರುವ ವರ್ಣದ್ರವ್ಯದಿಂದ ಬರುತ್ತದೆ.

ಇದನ್ನೂ ಓದಿ; ಬಿಸಿಲಲ್ಲಿ ನೀವು ಮಾಡುವ ಮಿಸ್ಟೇಕ್‌ ಕ್ಯಾನ್ಸರ್‌ಗೆ ಕಾರಣವಾಗುತ್ತೆ ಹುಷಾರ್‌!

ಕೆಂಪು ಕೋಳಿ ಮೊಟ್ಟೆಗಳು ಯಾಕೆ ದುಬಾರಿ..?;

ಕೋಳಿ ಮೊಟ್ಟೆಗಳ ಬಗ್ಗೆ ಅಮೆರಿಕದ ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯ ತಂಡ ಅಧ್ಯಯನ ಮಾಡಿದೆ.. ಇದರ ಜೊತೆಗೆ ಇನ್ನೂ ಹಲವಾರು ತಂಡಗಳು ಈ ಬಗ್ಗೆ ಸಂಶೋಧನೆಗಳನ್ನು ಮಾಡಿದ್ದಾರೆ.. ಅಧ್ಯಯನಗಳ ಪ್ರಕಾರ, ಕೋಳಿಗಳಿಗೆ ವಯಸ್ಸಾದಂತೆ ಅಥವಾ ಒತ್ತಡಕ್ಕೆ ಒಳಗಾದಂತೆ ಮೊಟ್ಟೆಗಳ ಬಣ್ಣ ಬದಲಾಗುತ್ತದೆ. ಕೋಳಿಗಳನ್ನು ಮೊಟ್ಟೆಗಳಿಗಾಗಿ ಹಾಗೂ ಮಾಂಸಕ್ಕಾಗಿ ಬೆಳೆಸಲಾಗುತ್ತದೆ.. ಇದೆರಡಕ್ಕೂ ಬೆಳೆದ ಕೋಳಿಗಳೂ ಕೆಂಪು ಮೊಟ್ಟೆಗಳನ್ನಿಡುತ್ತವೆ.. ಆದ್ರೆ, ಈ ಕೋಳಿಗಳು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ, ಅವುಗಳಿಗೆ ಹೆಚ್ಚು ಆಹಾರವನ್ನು ನೀಡಬೇಕಾಗುತ್ತದೆ. ಇದರಿಂದಾಗಿ ಕೋಳಿ ಮೊಟ್ಟೆ ಉತ್ಪಾದನಾ ವೆಚ್ಚ ಅಧಿಕವಾಗಿದೆ.. ಕೆಂಪು ಮೊಟ್ಟೆ ಇಡುವ ಕೋಳಿಗಳಿಗೆ ಹೋಲಿಸಿದರೆ,  ಬಿಳಿ ಪುಕ್ಕ ಹೊಂದಿರುವ ಕೋಳಿಗಳನ್ನು ಬೆಳೆಸುವ ವೆಚ್ಚ  ಕಡಿಮೆ. ಅವು ಗಾಢ ಬಣ್ಣದ ಕೋಳಿಗಳಿಗಿಂತ ಕಡಿಮೆ ಆಹಾರವನ್ನು ಸೇವಿಸುತ್ತವೆ. ಅದಕ್ಕಾಗಿಯೇ ಬಿಳಿ ಮೊಟ್ಟೆಯ ಬೆಲೆ ಕೆಂಪು ಮೊಟ್ಟೆಗಿಂತ ಸ್ವಲ್ಪ ಕಡಿಮೆ ಇರುತ್ತದೆ…

ಇದನ್ನೂ ಓದಿ; ಸೀರೆ ಕ್ಯಾನ್ಸರ್‌; ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್‌!

ಮೊಟ್ಟೆ ಬಣ್ಣದಿಂದ ಪೋಷಕಾಂಶಗಳಲ್ಲಿ ವ್ಯತ್ಯಾಸವಾಗುತ್ತಾ..?;

ಮೊಟ್ಟೆಗಳು ಬಿಳಿ ಹಾಗೂ ಕೆಂಪು ಬಣ್ಣದಲ್ಲಿರುತ್ತವೆ.. ಹೀಗೆ ಬಣ್ಣಕ್ಕೆ ತಕ್ಕಂತೆ ಪೋಷಕಾಂಶಗಳಲ್ಲಿ ವ್ಯತ್ಯಾಸಗಳಾಗುತ್ತವೆಯೇ..? ಈ ಪ್ರಶ್ನೆ ಎಲ್ಲರಲ್ಲೂ ಇದೆ.. ಆದ್ರೆ ಈ ಬಗ್ಗೆ ಪೌಷ್ಠಿಕ ತಜ್ಞರು ಏನು ಹೇಳುತ್ತಾರೆ ನೋಡೋಣ.. ತಜ್ಞರ ಪ್ರಕಾರ ಮೊಟ್ಟೆಯ ಬಣ್ಣವು ಪೌಷ್ಟಿಕಾಂಶದ ಮೌಲ್ಯದಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲವಂತೆ.

ಎರಡೂ ಮೊಟ್ಟೆಗಳ ಗುಣಮಟ್ಟ ಒಂದೇ..!;

ನ್ಯೂಯಾರ್ಕ್ ಮೂಲದ ಸಂಶೋಧಕರ ತಂಡದ ಪ್ರಕಾರ, ಕೆಂಪು ಮೊಟ್ಟೆಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸ್ವಲ್ಪ ಹೆಚ್ಚು. ಆದ್ರೆ ವ್ಯತ್ಯಾಸವು ತುಂಬಾ ಚಿಕ್ಕದಾಗಿದೆ. ಆದ್ದರಿಂದ ಪೋಷಕಾಂಶಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಅದರ ಆಧಾರದ ಮೇಲೆ, ಎರಡೂ ಬಣ್ಣದ ಮೊಟ್ಟೆಗಳ ಪೋಷಕಾಂಶಗಳು ಮತ್ತು ಗುಣಮಟ್ಟವು ಬಹುತೇಕ ಸಮಾನವಾಗಿರುತ್ತದೆ. ಆದ್ದರಿಂದ ಯಾವುದೇ ಬಣ್ಣದ ಮೊಟ್ಟೆಗಳನ್ನು ತಿನ್ನಬಹುದು.. ಎರಡೂ ಬಣ್ಣದ ಮೊಟ್ಟೆಗಳಲ್ಲಿ ಪೌಷ್ಠಿಕಾಂಶ ಬಹುತೇಕ ಒಂದೇ ಆಗಿರುತ್ತದೆ..

ಇದನ್ನೂ ಓದಿ; ಕೋತಿಗಳಂತೆ ನಡೆಯುತ್ತಾರೆ ಈ ಜನ; ಪ್ರಪಂಚದಲ್ಲೇ ವಿಚಿತ್ರ ಕುಟುಂಬವಿದು!

 

ಮೊಟ್ಟೆಯಲ್ಲಿ ಏನೆಲ್ಲಾ ಪೋಷಕಾಂಶಗಳು ಸಿಗುತ್ತವೆ..?;

US ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ ಪ್ರಕಾರ, 50 ಗ್ರಾಂ ಮೊಟ್ಟೆಯಲ್ಲಿ 72 ಕ್ಯಾಲೋರಿಗಳು ಮತ್ತು 4.75 ಗ್ರಾಂ ಕೊಬ್ಬಿನಂಶ ಇರುತ್ತದೆ. ಬಿಳಿ ಮತ್ತು ಕೆಂಪು ಮೊಟ್ಟೆಗಳಲ್ಲಿ ಅವು ಬಹುತೇಕ ಸಮಾನಾಗಿರುತ್ತವೆ. ಆದರೂ ಕೂಡಾ, ಒಮೆಗಾ-3 ಸಮೃದ್ಧವಾಗಿರುವ ಮೊಟ್ಟೆಗಳು, ಸಾವಯವ ಮೊಟ್ಟೆಗಳು, ಸಾವಯವ GMO ಅಲ್ಲದ ಮೊಟ್ಟೆಗಳು ಇತ್ಯಾದಿ ಮೊಟ್ಟೆಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ.

ಕೋಳಿ ತಿನ್ನುವ ಆಹಾರ ಬಹಳ ಮುಖ್ಯವಾಗುತ್ತದೆ;

ಮೊಟ್ಟೆಯ ಬಣ್ಣದಲ್ಲಿನ ವ್ಯತ್ಯಾಸದಿಂದ ಪೋಷಕಾಂಶಗಳು ವ್ಯತ್ಯಾಸವಾಗೋದಿಲ್ಲ.. ಆದ್ರೆ ಕೋಳಿಗಳು ಯಾವ ಪರಿಸರದಲ್ಲಿ ಬೆಳೆದಿವೆ.. ಅವು ತಿನ್ನುವ ಆಹಾರ ಏನು..? ಎಂಬುದು ಮುಖ್ಯವಾಗುತ್ತದೆ..

ಇದನ್ನೂ ಓದಿ; ಇದು ಬಡವರ ಸಂಜೀವಿನಿ; ತಪ್ಪದೇ ತಂದು ಕುಡಿಯಿರಿ..!

Share Post