CrimeNational

ಕೆಲಸದ ಒತ್ತಡ; ಸಾಫ್ಟ್ವೇರ್ ಇಂಜಿನಿಯರ್ ಆತ್ಮಹತ್ಯೆ!

ಹೈದರಾಬಾದ್; ಕೆಲಸದ ಒತ್ತಡ ತಾಳಲಾರದೇ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಹೈದ್ರಾಬಾದ್ ನ ಕೋಕಾಪೇಟದಲ್ಲಿ ಈ ಘಟನೆ ನಡೆದಿದೆ.. 7 ಅಂತಸ್ತಿನ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ..

  ಆಂಧ್ರ ಪ್ರದೇಶ ಮೂಲದ ನಾಗ ಪ್ರಭಾಕರ್ ಆತ್ಮಹತ್ಯೆ ಮಾಡಿಕೊಂಡ ಸಾಫ್ಟ್ವೇರ್ ಇಂಜಿನಿಯರ್.. ಇವರು ಗಚಿಬೌಲಿಯ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.. ಇವರು ಕೋಕಾಪೇಟದ ಪಿಜಿ ನಲ್ಲಿ ವಾಸವಿದ್ದರು.. ಕೆಲಸ ಮುಗಿಸಿ ಹಾಸ್ಟೆಲ್ ಕೊಠಡಿಗೆ ಬಂದ ನಾಗ ಪ್ರಭಾಕರ್, ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..

  ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

 

Share Post