BengaluruCinema

ಅಪ್ಪನಂತೆ ಕುದುರೆ ಸವಾರಿಗಿಳಿದ ನಟ ದರ್ಶನ್‌ ಮಗ ವಿನೀಶ್‌; ವಿಡಿಯೋ ವೈರಲ್‌

ಬೆಂಗಳೂರು; ಚಾಲೆಂಜಿಂಗ್‌ ಸ್ಟಾರ್‌ ದರ್ಶನ್.. ವಿಭಿನ್ನ ವ್ಯಕ್ತಿತ್ವದ ನಟ.. ಆದಷ್ಟು ತುಂಬಾ ಸಿಂಪಲ್‌ ಜೀವನ ನಡೆಸುವ ಸ್ಟಾರ್‌ ಇವರು.. ಅದ್ರಲ್ಲೂ ಮೈಸೂರು ಬಳಿ ಇರುವ ಫಾರ್ಮ್‌ ಹೌಸ್‌ಗೆ ಹೋದರೆ ಥೇಟ್‌ ರೈತನ ರೀತಿ ಇದ್ದು ಬಿಡುತ್ತಾರೆ.. ಪ್ರಾಣಿಗಳು, ಹಸುಗಳು ಅಂದರೆ ಇವರಿಗೆ ಪ್ರೀತಿ.. ಹಸುಗಳು, ಕುದುರೆಗಳು, ಪಕ್ಷಿಗಳು ಎಲ್ಲವನ್ನೂ ಅವರು ಸಾಕಿಕೊಂಡಿದ್ದಾರೆ.. ದರ್ಶನ್‌ ಕುದುರೆ ಸವಾರಿ ಕೂಡಾ ಮಾಡುತ್ತಾರೆ.. ಇದೀಗ ದರ್ಶನ್‌ ಅವರ ನೋಡಿ ಮಗ ಕೂಡಾ ಅದೇ ದಾರಿಯಲ್ಲಿ ಹೊರಟಿದ್ದಾರೆ.. ದರ್ಶನ್‌ ಮಗ ವಿನೀಶ್‌ ಕೂಡಾ ಕುದುರೆ ಸವಾರಿ ಮಾಡಿದ್ದು, ಆ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ಬಿಸಿಲಲ್ಲಿ ನೀವು ಮಾಡುವ ಮಿಸ್ಟೇಕ್‌ ಕ್ಯಾನ್ಸರ್‌ಗೆ ಕಾರಣವಾಗುತ್ತೆ ಹುಷಾರ್‌!

ಕುದುರೆ ಸವಾರಿಯಲ್ಲಿ ವಿನೀಶ್‌ ತಂದೆಯಷ್ಟೇ ಎಕ್ಸ್‌ಪರ್ಟ್‌;

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಪುತ್ರ ವಿನೀಶ್‌ಗೆ ಈಗ 15 ವರ್ಷ.. 9ನೇ ತರಗತಿ ಓದುತ್ತಿದ್ದಾರೆ.. ಈಗಲೇ ಅವರು ಕುದುರೆ ಸವಾರಿಯಲ್ಲಿ ಎಕ್ಸ್‌ ಪರ್ಟ್‌ ಆಗಿದ್ದಾರೆ.. ಇತ್ತೀಚೆಗೆ ವಿನೀಶ್‌ ಅವರು ದುಬೈ ಪ್ರವಾಸ ಕೈಗೊಂಡಿದ್ದರು.. ಈ ವೇಳೆ ಅಲ್ಲಿ ಅವರು ಕುದುರೆ ಸವಾರಿ ಮಾಡಿದ್ದಾರೆ.. ನುರಿತ ಸವಾರನಂತೆ ಕುದುರೆ ಓಡಿಸಿದ್ದಾರೆ.. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಕೂಡಾ ಅಪ್‌ಲೋಡ್‌ ಮಾಡಲಾಗಿದೆ.. ಇದು ಈಗ ಸಖತ್‌ ವೈರಲ್‌ ಆಗಿದ್ದು, ಅಪ್ಪನಂತೆ ಮಗ ಎಂದು ಎಲ್ಲರೂ ಕಮೆಂಟ್‌ ಮಾಡುತ್ತಿದ್ದಾರೆ..

ಕುದುರೆ ಇರೋವಾಗ ಫ್ಯಾನ್ಸಿ ಕಾರುಗಳು ಯಾಕೆ..?;

ವಿನೀಶ್‌ ಕುದುರೆ ಓಡಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು, ಅದಕ್ಕೆ ಕುದುರೆ ಇರೋವಾಗ ಫ್ಯಾನ್ಸಿ ಕಾರುಗಳು ಯಾಕೆ..? ಎಂದು ಕ್ಯಾಪ್ಷನ್‌ ಕೊಡಲಾಗಿದೆ.. ಇದನ್ನು ಫ್ಯಾನ್ಸ್‌ ಸಾಕಷ್ಟು ಇಷ್ಟಪಟ್ಟಿದ್ದಾರೆ.. ವಿನೀಶ್‌ ಕೂಡಾ ಚಿತ್ರರಂಗಕ್ಕೆ ಬರಬಹುದು ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ವಿದ್ಯುತ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌; ಇಂದಿನಿಂದ ದರ ಕಡಿತ!

ಈ ಹಿಂದೆ ದರ್ಶನ್‌ ಜೊತೆ ಕುದುರೆ ಓಡಿಸಿದ್ದ ವಿನೀಶ್‌;

ವಿನೀಶ್‌ ಅವರು ಈ ಹಿಂದೆ ತಂದೆ ದರ್ಶನ್‌ ಜೊತೆ ಕುಳಿತು ಕುದುರೆ ಸವಾರಿ ಮಾಡಿದ್ದರು.. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು.. ಇದಕ್ಕೆ ಭರ್ಜರಿ ರೆಸ್ಪಾನ್ಸ್‌ ಹಾಗೂ ಲೈಕ್‌ಗಳು ಸಿಕ್ಕಿದ್ದವು.. ಈಗ ವಿನೀಶ್‌ ಅವರು ದುಬೈನಲ್ಲಿ ಗೆಳೆಯರು ಜೊತೆ ಸೇರಿ ಕುದುರೆ ಸವಾರಿ ಮಾಡಿದ್ದಾರೆ.. ಹೀಗಾಗಿ ಅಭಿಮಾನಿಗಳು ವಿನೀಶ್‌ ಅವರು ದರ್ಶನ್‌ ಅವರಷ್ಟೇ ಕುದುರೆ ಸವಾರಿ ಮಾಡುವುದರಲ್ಲಿ ಎಕ್ಸ್‌ಪರ್ಟ್‌ ಎಂದು ಹೇಳುತ್ತಿದ್ದಾರೆ..  ದರ್ಶನ್ ಅವರ ಅಭಿನಯದ ‘ಕಾಟೇರ’ ಸಿನಿಮಾ ದೊಡ್ಡ ಗೆಲುವು ಕಂಡಿದೆ.. ಈಗ ಅವರು ‘ಡೆವಿಲ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಇದನ್ನೂ ಓದಿ; ಬೆಳ್ಳುಳ್ಳಿ ರಸಂ ತಿನ್ನಿ; ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

 

Share Post