Economy

Money Tips; ಕೂಲಿ ಮಾಡಿ ಕೋಟಿ ದುಡಿ; ಈಗ ಕೋಟ್ಯಧೀಶರಾಗೋದು ದೊಡ್ಡ ಮಾತಲ್ಲ!

ಬೆಂಗಳೂರು; ಶ್ರೀಮಂತರು ಇನ್ನೂ ಶ್ರೀಮಂತರಾಗ್ತಾನೇ ಇರ್ತಾರೆ, ಬಡವರು ಬಡವರಾಗೇ ಇರ್ತಾರೆ.. ಈ ಮಾತು ನಾವು ಎಲ್ಲಾ ಕಡೆ ಕೇಳುತ್ತಲೇ ಇರುತ್ತೇವೆ… ನೂರುಗಳ ಲೆಕ್ಕದಲ್ಲಿ ದುಡಿಯುವ ಜನರು ಸಾವಿರಗಳ ಕನಸು ಕಾಣಬಹುದೇ ಹೊರತು ಯಾವತ್ತೂ ಲಕ್ಷದ ಕನಸೂ ಕಾಣೋದಿಲ್ಲ… ಆದ್ರೆ, ನೂರುಗಳ ಲೆಕ್ಕದಲ್ಲಿ ದುಡಿಯುವ ವರ್ಗವದವರು ಕೂಡಾ ಪ್ಲ್ಯಾನ್‌ ಮಾಡಿದರೆ, ಕೋಟ್ಯಧೀಶರಾಗಬಹುದು… ಕೋಟಿಗಳು ಕನಸು ಕಾಣೋದಲ್ಲ… ಕೋಟಿ ದುಡಿಯಬಹುದು… ನಿಮ್ಮ ಮಕ್ಕಳಿಗೆ ಸಿರಿತನ ಪ್ರಸಾದಿಸಬಹುದು…

ಇದನ್ನೂ ಓದಿ; ಯೂಟ್ಯೂಬ್‌ ನೋಡಿ ಶೂ ಲಾಂಡ್ರಿ ಇಟ್ಟಳು; ಲಕ್ಷ ಲಕ್ಷ ಸಂಪಾದಿಸುತ್ತಿರುವ ಯುವತಿ!

ಕೂಲಿ ಮಾಡಿ ಕೋಟಿ ದುಡಿಯಬಹುದಾ..?;

ಕೂಲಿ ಮಾಡಿ ಕೋಟಿ ದುಡಿಯಬಹುದಾ..?; ನೀವು ಕೇಳಿರುತ್ತೀರಿ ಹಳ್ಳಿಗಳಲ್ಲಿ ಹೊಲದಲ್ಲಿ ದುಡಿಯೋದಕ್ಕೆ ಆಳುಗಳೇ ಸಿಗೋದಿಲ್ಲ ಅಂತ.. ಅಂದರೆ ಹೊಲದಲ್ಲಿ ದುಡಿಯುವ ಆಳುಗಳಿಗೆ ಅಷ್ಟೊಂದು ಡಿಮ್ಯಾಂಡ್‌ ಇದೆ.. ಅಂದ್ರೆ ದುಡಿಯುತ್ತೇವೆ ಅಂದರೆ ದಿನವೂ ಕೂಲಿ ಸಿಗುತ್ತದೆ.. ಹಳ್ಳಿಗಳಲ್ಲಿ ಗಂಡು ಆಳಿಗೆ 700 ರೂಪಾಯಿಯಿಂದ 800 ರೂಪಾಯಿ ಹಾಗೂ ಹೆಣ್ಣಾಳಿಗೆ ಸಿಗುತ್ತದೆ. ಅಂದರೆ ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ಕೂಲಿ ಕೆಲಸಕ್ಕೆ ಹೋದರೆ ದಿನಕ್ಕೆ 1500 ರೂಪಾಯಿ ದುಡಿಯಬಹುದು.. ತಿಂಗಳಲ್ಲಿ 20 ದಿನ ಮಾತ್ರ ಕೂಲಿಗೆ ಹೋಗುತ್ತಾರೆ ಎಂದಾದರೂ ಇಬ್ಬರ ದುಡಿಮೆ ತಿಂಗಳಿಗೆ 30 ಸಾವಿರ ರೂಪಾಯಿ ಆಗುತ್ತದೆ. ಈ ಲೆಕ್ಕ ಬೇಡ, ದಿನಕ್ಕೆ ಇಬ್ಬರೂ ಸೇರಿ ಬರೀ 1000 ರೂಪಾಯಿ ದುಡಿಯುತ್ತಾರೆ. ತಿಂಗಳಿಗೆ 20 ದಿನ ಮಾತ್ರ ಕೂಲಿ ಮಾಡುತ್ತಾರೆ ಎಂದಿಟ್ಟುಕೊಂಡರೂ ತಿಂಗಳಿಗೆ 20 ಸಾವಿರ ರೂಪಾಯಿ ದುಡಿಯುತ್ತಾರೆ.

ಇದನ್ನೂ ಓದಿ; Senior Citizens; ಹಿರಿಯ ನಾಗರಿಕರಿಗೆ ಉತ್ತಮ ರಿಟರ್ನ್ಸ್‌ ತಂದುಕೊಡುವ ಸ್ಕೀಂಗಳು!

ಹಳ್ಳಿಯಲ್ಲಿ ಜೀವನ ಮಾಡೋಕೆ 20 ಸಾವಿರ ರೂಪಾಯಿ ಬೇಕಾ..?;

ಹಳ್ಳಿಯಲ್ಲಿ ಜೀವನ ಮಾಡೋಕೆ 20 ಸಾವಿರ ರೂಪಾಯಿ ಬೇಕಾ..?; ಹಳ್ಳಿಯಲ್ಲಿ ಗುಡಿಸಲೋ, ಆರ್‌ಸಿಸಿ ಮನೆಯೋ ಯಾವುದೋ ಒಂದು ಸ್ವಂತ ಮನೆ ಅಂತೂ ಎಲ್ಲರಿಗೂ ಇದ್ದೇ ಇರುತ್ತೆ.. ಒಂದು ಬಾಡಿಗೆ ಮನೆಯಲ್ಲಿದ್ದರೂ ಅದರ ಬಾಡಿಗೆ ಸಾವಿರ ರೂಪಾಯಿ ದಾಟೋದಿಲ್ಲ.. ಈಗ ಮನೆಗೆ ಕರೆಂಟ್‌ ಬಿಲ್‌ ಫ್ರೀ ಇದೆ, ಉಚಿತ ಅಕ್ಕಿ ಕೊಡ್ತಾರೆ, ಮನೆಯೊಡತಿಗೆ ತಿಂಗಳಿಗೆ 2 ಸಾವಿರ ರೂಪಾಯಿ ಸರ್ಕಾರ ಕೊಡುತ್ತಿದೆ.. ಕೂಲಿಗೆ ಹೋದರೆ ಜಮೀನು ಮಾಲೀಕರೇ ಮಧ್ಯಾಹ್ನದ ಊಟ ಕೊಡ್ತಾರೆ, ಇನ್ನು ತರಕಾರಿ ಮತ್ತಿತರ ಸಾಮಗ್ರಿಗಳು ಕೂಡಾ ಅಲ್ಲಿಂದಲೇ ತರಬಹುದು.. ಇನ್ನು ಬಹುತೇಕ ಕೂಲಿ ಮಾಡುವವರು ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸಿರುತ್ತಾರೆ.. ಇದನ್ನೆಲ್ಲಾ ಲೆಕ್ಕ ಹಾಕಿ ನೋಡಿದರೆ ಹಳ್ಳಿಯಲ್ಲಿ ಒಂದು ಕುಟುಂಬ ಸುಖವಾಗಿ, ಬಯಸಿದ ಅಡುಗೆ ಮಾಡಿಕೊಂಡು ಜೀವನ ಸಾಗಿಸಿದರೂ ತಿಂಗಳಿಗೆ 5 ರಿಂದ 6 ಸಾವಿರ ರೂಪಾಯಿ ಇದ್ದರೆ ಸಾಕಾಗುತ್ತದೆ.. ಆದ್ರೆ, ಕೂಲಿ ಮಾಡುವ ದಂಪತಿ ತಿಂಗಳಿಗೆ 20 ಸಾವಿರ ರೂಪಾಯಿಗೂ ಹೆಚ್ಚು ದುಡಿಯುತ್ತಿದ್ದಾರೆ. ಆದರೂ ಅವರು ಬಡವರಾಗಿಯೇ ಮುಂದುವರೆಯುತ್ತಿದ್ದಾರೆ. ಇದಕ್ಕೆ ಕಾರಣ ಹಲವಾರು.

ಇದನ್ನೂ ಓದಿ; Loan; ಪರ್ಸನಲ್‌ ಲೋನ್‌ OR ಓವರ್‌ಡ್ರಾಪ್ಟ್‌; ಯಾವುದು ಉತ್ತಮ..?

ಆರ್ಥಿಕ ಶಿಕ್ಷಣದ ಕೊರತೆ, ಕುಡಿತಕ್ಕೆ ಹೆಚ್ಚು ವ್ಯಯ;

ಆರ್ಥಿಕ ಶಿಕ್ಷಣದ ಕೊರತೆ, ಕುಡಿತಕ್ಕೆ ಹೆಚ್ಚು ವ್ಯಯ; ಕೂಲಿ ಮಾಡುವವರು ಸಾಕಷ್ಟು ದುಡಿಯುತ್ತಾರೆ.. ಆದ್ರೆ ದುಡಿದ ಹಣವನ್ನು ಎಲ್ಲಿಡಬೇಕು ಎಂಬುದು ಗೊತ್ತಿರೋದಿಲ್ಲ.. ಅವರಿಗೆ ತಿಳಿವಳಿಕೆ ಕಡಿಮೆ ಇರುತ್ತದೆ.. ಬಹುತೇಕ ಕೂಲಿ ಮಾಡುವವರ ಕುಟುಂಬದಲ್ಲಿ ಯಾರಾದರೂ ಒಬ್ಬರಾದರೂ ಕುಡಿತಕ್ಕೆ ದಾಸರಾಗರುತ್ತಾರೆ… ದುಡಿದ ಬಹುತೇಕ ಹಣವನ್ನು ಕುಡಿಯೋದಕ್ಕೇ ಖರ್ಚು ಮಾಡುತ್ತಿರುತ್ತಾರೆ… ಇದರ ನಡುವೆಯೂ ಒಂದಷ್ಟು ಹಣ ಭವಿಷ್ಯಕ್ಕೆ ಹಣ ಕೂಡಿಡುತ್ತಿರುತ್ತಾರೆ… ಆದ್ರೆ ಅವರು ಮಾಡೋ ತಪ್ಪೇನು ಅಂದ್ರೆ, ಹಣವನ್ನು ನಗದು ರೂಪದಲ್ಲಿ ಮನೆಯಲ್ಲೇ ಬಚ್ಚಿಟ್ಟಿರುತ್ತಾರೆ… ಮನೆಯ ಮೂಲೆಯಲ್ಲಿರುವ ಕಬ್ಬಿಣದ ಪೆಟ್ಟಿಗೆಯೋ, ಇನ್ಯಾವುದೋ ಸ್ಥಳದಲ್ಲೋ ಹಣವನ್ನು ಎತ್ತಿಡುತ್ತಾ  ಬರುತ್ತಾರೆ.. ಹೀಗೆ ಹಣವನ್ನು ಮನೆಯಲ್ಲಿ ಬಚ್ಚಿಟ್ಟರೆ, ಅದು ಅಷ್ಟೇ ಇರುತ್ತದೆ.. ಇನ್ನೂ ಒಮ್ಮೊಮ್ಮೆ ಅದು ನಾಶವೂ ಆಗಬಹುದು… ನೀವು ಆಗಾಗ ಸುದ್ದಿಗಳನ್ನು ನೋಡಿರಬಹುದು.. ಮಗಳ ಮದುವೆಗೆಂದು ಪೆಟ್ಟಿಗೆಯಲ್ಲಿ ಕೂಡಿಟ್ಟದ್ದ ಲಕ್ಷಾಂತರ ರೂಪಾಯಿ ಹಣ ಗೆದ್ದಲು ತಿಂದುಬಿಟ್ಟಿದೆ ಎಂಬ ಸುದ್ದಿಗಳು ಆಗಾಗ ಬರುತ್ತಿರುತ್ತವೆ.. ಅದೇ ರೀತಿ ನಮ್ಮ ಟೈಮ್‌ ಸರಿಯಿಲ್ಲದೆ ಬೆಂಕಿ ಬಿದ್ದರೆ ಕೂಡಿಟ್ಟ ಹಣವೂ ಮನೆಯ ಜೊತೆ ಭಸ್ಮವಾಗಿರುತ್ತದೆ..

ಅದೇ ನಾವು ಉಳಿಸುವ ಹಣವನ್ನು ಕನಿಷ್ಠ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟರೂ ಒಂದಷ್ಟು ಬಡ್ಡಿ ಬರುತ್ತದೆ.. ನಮ್ಮ ಹಣ ಸೇಫಾಗಿರುತ್ತದೆ. ಆದ್ರೆ ಕೂಲಿ ಮಾಡುವವರಿಗೆ ಇದರ ತಿಳುವಳಿಕೆ ಇರೋದಿಲ್ಲ.. ಜೊತೆಗೆ ನಮ್ಮ ಹತ್ತಿರ ಹಣ ಇದೆ ಎಂದು ಗೊತ್ತಾದರೂ ಯಾರಾದರೂ ಇಸ್ಕೊಂಡು ಮತ್ತೆ ವಾಪಸ್‌ ಕೊಡುತ್ತಾರೋ ಇಲ್ಲವೋ ಎಂಬ ಭಯ ಕಾಡುತ್ತಿರುತ್ತದೆ.. ಹೀಗಾಗಿ ಯಾರಿಗೂ ಗೊತ್ತಿಲ್ಲದಂತೆ ಮನೆಯಲ್ಲೇ ಹಣ ಬಚ್ಚಿಟ್ಟಿರುತ್ತಾರೆ.. ಅದರ ಬದಲಾಗಿ ಹಣವನ್ನು ಬ್ಯಾಂಕ್‌ನಲ್ಲಿಟ್ಟರೆ ನಮ್ಮ ಜೊತೆ ನಾವು ಕೂಡಿಟ್ಟ ಹಣವೂ ನಮಗಾಗಿ ದುಡಿಯುತ್ತಾ ಹೋಗುತ್ತದೆ.. ಉಳ್ಳವರು ತಾವು ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ತಾವು ಈಗಾಗಲೇ ದುಡಿದಿಟ್ಟಿರುವ ಹಣವನ್ನು ದುಡಿಮೆಗೆ ಬಿಟ್ಟು ಅದು ಸಂಪಾದಿಸಿಕೊಡುವ ಹಣದಲ್ಲಿ ಎಂಜಾಯ್‌ ಮಾಡುತ್ತಿರುತ್ತಾರೆ..

ಇದನ್ನೂ ಓದಿ; Investment Plan; ಸಂಪ್ರದಾಯಿಕ ಉಳಿತಾಯ ನಿಲ್ಲಿಸಿ, ಸರಿಯಾದ ಕಡೆ ಹೂಡಿಕೆ ಮಾಡಿ, ಕೋಟಿ ಗಳಿಸಿ!

ಡಿಗ್ರಿ ಮಾಡಿದವರೂ ಇದಕ್ಕಿಂತ ಹೆಚ್ಚು ದುಡಿಯುವುದಿಲ್ಲ;

ಡಿಗ್ರಿ ಮಾಡಿದವರೂ ಇದಕ್ಕಿಂತ ಹೆಚ್ಚು ದುಡಿಯುವುದಿಲ್ಲ; ಒಂದು ಸರ್ವೇ ಪ್ರಕಾರ ದೇಶದ ಶೇಕಡಾ 90 ರಷ್ಟು ಮಂದಿ ತಿಂಗಳಿಗೆ 25 ಸಾವಿರ ರೂಪಾಯಿಗಿಂತ ಹೆಚ್ಚು ದುಡಿಯುತ್ತಿಲ್ಲ.. ನಿಮಗಿದು ಗೊತ್ತಿರಲಿ, ಡಿಗ್ರಿಯೋ, ಡಬಲ್‌ ಡಿಗ್ರಿಯೋ ಮಾಡಿಕೊಂಡು ಮಹಾನಗರಗಳಲ್ಲಿ ಕೆಲಸ ಮಾಡುವವರಲ್ಲಿ ಬಹುತೇಕರು 30 ಸಾವಿರ ರೂಪಾಯಿಗಿಂತ ಹೆಚ್ಚು ದುಡಿಯುತ್ತಿರುವುದಿಲ್ಲ. ಆದ್ರೆ ಅವರಿಗೆ ಖರ್ಚುಗಳು ಹೆಚ್ಚು. ಬೆಂಗಳೂರಂತಹ ಮಹಾನಗರಗಳಲ್ಲಿ ಸಣ್ಣ ಮನೆ ಮಾಡಿದರೂ ಕನಿಷ್ಠ 8 ಸಾವಿರ ರೂಪಾಯಿ ತಿಂಗಳ ಬಾಡಿಗೆ ಇರುತ್ತದೆ. ಆಫೀಸಿಗೆ ಮನೆಗೆ ಓಡಾಡೋದಕ್ಕೆ ತಿಂಗಳಿಗೆ ಎರಡು ಮೂರು ಸಾವಿರ ಖರ್ಚಾಗುತ್ತೆ. ನೀರಿನ ಬಿಲ್‌, ಕರೆಂಟ್‌ ಬಿಲ್‌ ಅಂತ ಎರಡು ಮೂರು ಸಾವಿರ ರೂಪಾಯಿ ಬೇಕು.. ಮಕ್ಕಳಿದ್ದಾರೆ, ಶಾಲೆಗೆ ಸೇರಿಸಬೇಕು ಅಂದ್ರೆ, ಒಂದು ಮಗುವಿಗೆ ವರ್ಷಕ್ಕೆ ಕಡಿಮೆ ಅಂದರೂ 50 ಸಾವಿರ ರೂಪಾಯಿ ಬೇಕು.. ಇನ್ನು ಸಿಟಿಗಳಲ್ಲಿ ಕರಿಬೇವಿನಿಂದ ಹಿಡಿದು ಎಲ್ಲವನ್ನೂ ಕೊಳ್ಳಬೇಕು.. ಹೀಗಾಗಿ ಮನೆಯ ಖರ್ಚೂ ಹೆಚ್ಚಿರುತ್ತದೆ.. ಹೀಗಾಗಿ, ಸಿಟಿಯಲ್ಲಿ 50 ಸಾವಿರ ರೂಪಾಯಿ ದುಡಿದರೂ, ಕೊನೆಗೆ ಏನೂ ಉಳಿಯೋದಿಲ್ಲ. ಸಿಟಿಯಲ್ಲಿ 50 ಸಾವಿರ ದುಡಿಯೋದೂ ಒಂದೇ ಹಳ್ಳಿಯಲ್ಲಿ 20 ಸಾವಿರ ದುಡಿಯೋದೂ ಒಂದೇ.. ಹೀಗಾಗಿ ಕೂಲಿ ಮಾಡುವವರು ಹೆಚ್ಚು ಉಳಿಸಬಹುದು.. ಆದ್ರೆ ಅವರಿಗೆ ಆರ್ಥಿಕ ಶಿಕ್ಷಣ ಬೇಕು ಅಷ್ಟೇ..

ಇದನ್ನೂ ಓದಿ; 6 Habits of Successful People; ಯಶಸ್ವಿ ವ್ಯಕ್ತಿಗಳ ಆರು ಅಭ್ಯಾಸಗಳು; ಇವೇ ಯಶಸ್ಸಿನ ಸೂತ್ರಗಳು!

ತಿಂಗಳಿಗೆ 3 ಸಾವಿರ ಉಳಿಸಿ, ಕೋಟಿ ಗಳಿಸಿ;

ತಿಂಗಳಿಗೆ 3 ಸಾವಿರ ಉಳಿಸಿ, ಕೋಟಿ ಗಳಿಸಿ; ಕೂಲಿ ಮಾಡುವ ಬಹುತೇಕ ಹೇಳೋದು ನಾವಾದರೂ ಉದ್ಧಾರ ಆಗಲಿಲ್ಲ.. ನಮ್ಮ ಮಕ್ಕಳಾದರೂ ದೊಡ್ಡವರಾಗಲೀ ಎಂದು ಬಯಸುತ್ತಿರುತ್ತಾರೆ.. ಅಂತಹವರಿಗೆ ಇಲ್ಲೊಂದು ಕೋಟಿ ರೂಪಾಯಿ ದುಡಿಯುವ ಸಲಹೆಯನ್ನು ನೀಡುತ್ತಿದ್ದೇವೆ. ನಿಮಗೆ ಈಗ 25 ವರ್ಷ ಆಗಿದೆ ಎಂದಿಟ್ಟುಕೊಳ್ಳೋಣ.. ಈಗಿನಿಂದ ನಿಮ್ಮ ದುಡಿಮೆಯಲ್ಲಿ ತಿಂಗಳಿಗೆ 3 ಸಾವಿರ ರೂಪಾಯಿ ಉಳಿತಾಯ ಮಾಡಿ. ಅದನ್ನು ಮ್ಯೂಚ್ಯುಯಲ್‌ ಫಂಡ್‌ನಲ್ಲಿ ಎಸ್‌ಐಪಿ ಮಾಡುತ್ತಾ ಹೋದರೆ, ನಿಮಗೆ ವರ್ಷಕ್ಕೆ ಕನಿಷ್ಠ 12 ಪರ್ಸೆಂಟ್‌ ರಿಟರ್ನ್ಸ್‌ ಬಂದರೂ 30 ವರ್ಷದಲ್ಲಿ ನಿಮಗೆ 1 ಕೋಟಿ 80 ಸಾವಿರ ರೂಪಾಯಿ ಬರುತ್ತದೆ.. ಅಂದರೆ ನಿಮ್ಮ ಮಕ್ಕಳು ದೊಡ್ಡವರಾಗುವ ವೇಳೆಗೆ ನೀವು ಕೋಟ್ಯಧಿಪತಿಗಳಾಗಿರುತ್ತೀರಿ.

30 ವರ್ಷದಲ್ಲಿ ನೀವು ಬರೀ 10 ಲಕ್ಷದ 80 ಸಾವಿರ ರೂಪಾಯಿ ಕಟ್ಟಿರುತ್ತೀರಿ.. ನಿಮಗೆ ಅದಕ್ಕೆ ಬಡ್ಡಿಯ ರೂಪದಲ್ಲಿ 95 ಲಕ್ಷ ರೂಪಾಯಿ ಬಂದಿರುತ್ತದೆ.. ಹೀಗಾಗಿ ನೀವು ಕೋಟ್ಯಧೀಶರಾಗ್ತೀರಿ.. ಅದೇ ನೀವು ಮನೆಯ ಪೆಟ್ಟಿಗೆ ಹಣ ಕೂಡಿಟ್ಟಿದ್ದರೆ, ಅದು 10 ಲಕ್ಷ ರೂಪಯಿಯೇ ಆಗಿರುತ್ತಿತ್ತು.. ಅದೂ ಕೂಡಾ ಗೆದ್ದಲು ತಿನ್ನದೇ ಇದ್ದರೆ.. ಹೀಗಾಗಿ, ನಾವು ಉಳಿಸುವ ಹಣವನ್ನು ದುಡಿಯಲು ಬಿಡಬೇಕು.. ಆಗಲೇ ನಾವು ಶ್ರೀಮಂತರಾಗೋದು…

ಇದನ್ನೂ ಓದಿ; ಪೀನಟ್‌ ಬಟರ್‌ ಆರೋಗ್ಯಕ್ಕೆ ಒಳ್ಳೆಯದಾ..? ಅದರಲ್ಲಿ ಏನೆಲ್ಲಾ ಪೋಷಕಾಂಶಗಳಿವೆ..?

Share Post