DistrictsEconomy

9 ದಿನದಲ್ಲಿ ಹಾಸನಾಂಬೆಗೆ 5 ಕೋಟಿ ರೂಪಾಯಿ ಕಾಣಿಕೆ!

ಹಾಸನ; ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಗೆ ಕೋಟಿ ಕೋಟಿ ರೂಪಾಯಿ ಕಾಣಿಕೆ ಹರಿದುಬಂದಿದೆ. ಕಳೆದ ಒಂಬತ್ತು ದಿನಗಳಿಂದ ಸಾರ್ವಜನಿಕರಿಗೆ ಹಾಸನಾಂಬೆ ದರ್ಶನ ನೀಡುತ್ತಿದ್ದಾಳೆ. ಈ ಒಂಬತ್ತು ದಿನದಲ್ಲಿ 4 ಕೋಟಿ ರೂಪಾಯಿ 56 ಲಕ್ಷದ 22 ಸಾವಿರದ 580 ರೂಪಾಯಿ ಆದಾಯ ಬಂದಿದೆ. 

ನವೆಂಬರ್‌ 2ರಂದು ಹಾಸನಾಂಬೆ ದೇಗುಲವನ್ನು ತೆರೆಯಲಾಗಿದ್ದು, ನವೆಂಬರ್‌ 3 ರಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ ಬಾರಿ ಲಕ್ಷ ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಅದರಲ್ಲಿ ರಾಜಕಾರಣಿಗಳು, ಸಿನಿಮಾ ತಾರೆಯರು ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ಕೂಡಾ ಸೇರಿದ್ದಾರೆ. ಈ ಬಾರಿ ಎಂದೆಂದೂ ಇಲ್ಲದ ದಾಖಲೆ ಆದಾಯ ದೇಗುಲಕ್ಕೆ ಹರಿದುಬಂದಿದೆ.

– 9 ದಿನದಲ್ಲಿ ಬಂದ ಒಟ್ಟು ಆದಾಯ; 4,56,22,580 ರೂಪಾಯಿ

-ಸಾವಿರ ರೂ. ಟಿಕೆಟ್‌ ಮಾರಾಟದಿಂದ ಬಂದ ಆದಾಯ; 2,30,91,300 ರೂಪಾಯಿ

-300 ರೂ. ಟಿಕೆಟ್‌ ಮಾರಾಟದಿಂದ ಬಂದ ಆದಾಯ; 1,79,65,500 ರೂಪಾಯಿ

-ಲಡ್ಡು ಪ್ರಸಾದ ಮಾರಾಟದಿಂದ ಬಂದ ಆದಾಯ; 45,66,080 ರೂಪಾಯಿ

ದೇಗುಲ ಕ್ಲೋಸ್‌ ಮಾಡಲು ಇನ್ನೂ ಮೂರು ದಿನ ಬಾಕಿ ಇದ್ದು, ಮತ್ತಷ್ಟು ಕೋಟಿ ಆದಾಯ ಹರಿದುಬರುವ ಸಾಧ್ಯತೆ ಇದೆ.

 

Share Post