Economy

Loan; ಪರ್ಸನಲ್‌ ಲೋನ್‌ OR ಓವರ್‌ಡ್ರಾಪ್ಟ್‌; ಯಾವುದು ಉತ್ತಮ..?

Loan; ನಿಮಗೆ ಅರ್ಜೆಂಟ್‌ ಹಣ ಬೇಕಾಗಿದೆ.. ಆಗ ಬ್ಯಾಂಕಿನಿಂದ ಲೋನ್‌ ತೆಗೆದುಕೊಳ್ಳಬೇಕು.. ಆಗ ಎಲ್ಲರೂ ಏನು ಮಾಡುತ್ತಾರೆ, ಪರ್ಸನಲ್‌ ಲೋನ್‌ ತೆಗೆದುಕೊಳ್ಳುತ್ತಾರೆ… ಸಾಮಾನ್ಯವಾಗಿ, ನಮಗೆ ಎಷ್ಟು ಹಣ ಅವಶ್ಯಕತೆ ಇದೆ ಎಂಬುದು ಆ ಪರಿಸ್ಥಿತಿಯಲ್ಲಿ ಲೆಕ್ಕ ಹಾಕೋದಕ್ಕೆ ಆಗೋದಿಲ್ಲ. ಹೀಗಾಗಿ ಮ್ಯಾಗ್ಸಿಮಮ್‌ ಎಷ್ಟು ಲೋನ್‌ ಸಿಗುತ್ತದೋ ಅಷ್ಟನ್ನೂ ತೆಗೆದುಕೊಳ್ಳುತ್ತೇವೆ. ಆಗ ಅನಾವಶ್ಯಕವಾಗಿ ಹೆಚ್ಚು ಬಡ್ಡಿ ಕಟ್ಟುತ್ತೇವೆ. ಹೀಗಾಗಿ, ಇಂತಹವರಿಗೆ ಇನ್ನೊಂದು ಆಪ್ಷನ್‌ ಕೂಡಾ ಇದೆ.. ಅದೇ ಓವರ್‌ ಡ್ರಾಫ್ಟ್‌ ಫೆಸಿಲಿಟಿ.. ಹಾಗಾದ್ರೆ ಬನ್ನಿ ಇವರೆಡರಲ್ಲಿ ಯಾವುದು ಬೆಸ್ಟ್..?‌  ಯಾವುದರಿಂದ ನಮಗೆ ಅನುಕೂಲವಾಗಲಿದೆ..?ಉತ್ತರ ಕಂಡುಕೊಳ್ಳೋಣ…

ಇದನ್ನೂ ಓದಿ; Paytm FASTag;ಪೇಟಿಎಂ ಫಾಸ್ಟ್‌ಟ್ಯಾಗ್‌ ಯೂಸ್‌ ಆಗಲ್ವಾ..?; ಡಿ ಆಕ್ಟಿವೇಟ್‌ ಮಾಡೋದು ಹೇಗೆ..?

ಪರ್ಸನಲ್‌ ಲೋನ್‌ ಅಂದ್ರೆ ಏನು..?;

ಪರ್ಸನಲ್‌ ಲೋನ್‌ ಅಂದ್ರೆ ಏನು..?; ವೈಯಕ್ತಿಕ ಸಾಲ ಅನ್ನೋದು ಅಸುರಕ್ಷಿತ ಸಾಲದ ವ್ಯಾಪ್ತಿಗೆ ಬರುತ್ತದೆ. ಬ್ಯಾಂಕ್‌ಗಳು ನಮ್ಮ ಆದಾಯದ ಮೂಲ ಹಾಗೂ ಸಿಬಿಲ್‌ ಸ್ಕೋರ್‌ ಅಷ್ಟನ್ನೇ ನೋಡಿ ನಮಗೆ ವೈಯಕ್ತಿಕ ಸಾಲ ಒದಗಿಸುತ್ತದೆ.. ಅಂದರೆ, ಇಲ್ಲಿ ಯಾವುದೇ ಶ್ಯೂರಿಟಿ ಅಥವಾ ಮೇಲಾಧಾರ ನೀಡಬೇಕಾದ ಅವಶ್ಯಕತೆ ಇರುವುದಿಲ್ಲ, ಇದಕ್ಕೆ ನಿಗದಿತ ಬಡ್ಡಿ ದರ ಇರುತ್ತದೆ. ಪ್ರತಿ ತಿಂಗಳು ನಿಮ್ಮ ಬ್ಯಾಂಕ್‌ ಖಾತೆಯಿಂದ ಇಎಂಐ ಕಡಿತವಾಗುತ್ತದೆ.

ನೀವು ಏನಾದರೂ ಬೇಗ ಲೋನ್‌ ಕ್ಲೋಸ್‌ ಮಾಡಬೇಕು ಅಂದ್ರೆ ಅದಕ್ಕೆ ಅವಕಾಶವಿರುತ್ತದೆ. ಆದ್ರೆ ಅದಕ್ಕೆ ಬ್ಯಾಂಕ್‌ಗಳು ಪ್ರೀ ಕ್ಲೋಸಿಂಗ್‌ ಚಾರ್ಜಸ್‌ ಹಾಕುತ್ತವೆ. ಇವು ಒಂದೊಂದು ಬ್ಯಾಂಕ್‌ನಲ್ಲಿ ಒಂದೊಂದು ರೀತಿ ಇರುತ್ತದೆ. ಅಂದರೆ ಇಲ್ಲಿ ಎಷ್ಟು ಹಣ ಬಳಸಿದ್ದರೆ ಅಷ್ಟಕ್ಕೆ ಬಡ್ಡಿ ಕಟ್ಟೋದಿಲ್ಲ. ಬದಲಾಗಿ, ಸಾಲ ತೆಗೆದುಕೊಂಡ ಅಷ್ಟೂ ಹಣಕ್ಕೆ ಬಡ್ಡಿ ಪಾವತಿ ಮಾಡುತ್ತೀರಿ.

ಇದನ್ನೂ ಓದಿ; Garlic; ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದರೆ ಏನಾಗುತ್ತೆ ಗೊತ್ತಾ..?

ಓವರ್‌ಡ್ರಾಫ್ಟ್ ಅಂದ್ರೆ ಏನು..?;

ಓವರ್‌ಡ್ರಾಫ್ಟ್ ಅಂದ್ರೆ ಏನು..?; ಇಲ್ಲಿ ಬ್ಯಾಂಕ್‌ಗಳು ಪರ್ಸನಲ್‌ ಲೋನ್‌ಗೆ ಬದಲಾಗಿ ಓವರ್‌ ಡ್ರಾಪ್ಟ್‌ ಫೆಸಿಲಿಟಿ ನೀಡುತ್ತವೆ. ಅಂದರೆ, ನಿಮಗೆ ಒಂದು ಬ್ಯಾಂಕ್‌ನಿಂದ 5 ಲಕ್ಷ ರೂಪಾಯಿ ಓವರ್‌  ಡ್ರಾಪ್ಟ್‌ ಪೆಸಿಲಿಟಿ ಸಿಗುತ್ತದೆ ಎಂದಿಟ್ಟುಕೊಳ್ಳಿ. ಅದರಲ್ಲಿ ನೀವು ಎರಡು ಲಕ್ಷ ರೂಪಾಯಿ ಮಾತ್ರ ಬಳಸಿಕೊಳ್ಳುತ್ತೀರಿ. ಆಗ ನಿಮಗೆ ಆ ಎರಡು ಲಕ್ಷ ರೂಪಾಯಿಗೆ ಮಾತ್ರ ಬಡ್ಡಿ ಬೀಳುತ್ತದೆ. ಅಂದ್ರೆ ನಿಮಗೆ ಸ್ಯಾಂಕ್ಷನ್‌ ಆಗಿರುವ ಓವರ್‌ ಡ್ರಾಫ್ಟ್‌ನಲ್ಲಿ ನೀವು ಎಷ್ಟು ಹಣವನ್ನು ಬಳಸಿಕೊಳ್ಳುತ್ತೀರೋ ಅಷ್ಟು ಹಣಕ್ಕೆ ಮಾತ್ರ ನೀವು ಬಡ್ಡಿ ಕಟ್ಟಬೇಕಿರುತ್ತದೆ. ಪೂರ್ತಿ ಹಣಕ್ಕೆ ಬಡ್ಡಿ ಕಟ್ಟುವ ಅವಶ್ಯಕತೆ ಇರುವುದಿಲ್ಲ.

ಅಂದರೆ ನಿಮಗೆ ಅಗತ್ಯಕ್ಕೆ ಅನುಗುಣವಾಗಿ ನೀವು ಬ್ಯಾಂಕ್‌ನಿಂದ ಹಣ ಪಡೆಯಬಹುದು… ಅಂದ್ರೆ ಈ ತಿಂಗಳು ನಿಮಗೆ ಒಂದು ಲಕ್ಷ ಬೇಕಿರುತ್ತದೆ.. ಮುಂದಿನ ತಿಂಗಳು ಎರಡು ಲಕ್ಷ ಬೇಕಿರುತ್ತದೆ.. ಹಾಗೆಯೇ ತೆಗೆದುಕೊಳ್ಳಬಹುದು.. ನೀವಾಗ ಹಣ ಪಡೆಯುತ್ತೀರೋ ಅಂದಿನಿಂದ ಮಾತ್ರ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಜೊತೆಗೆ ನೀವು ಬೇಗ ಪ್ರೀ ಕ್ಲೋಸ್‌ ಮಾಡಿದರೂ ಇದರಲ್ಲಿ ಯಾವುದೇ ದಂಡ ವಿಧಿಸುವುದಿಲ್ಲ.

ಇದನ್ನೂ ಓದಿ; Jayalalitha; ಆರು ಟ್ರಂಕ್‌ನಲ್ಲಿ ತಮಿಳುನಾಡಿಗೆ ಜಯಲಲಿತಾ ವಜ್ರ-ವೈಢೂರ್ಯಗಳು!

ಪರ್ಸನಲ್‌ ಲೋನ್‌ ಹಾಗೂ ಓವರ್‌ ಡ್ರಾಫ್ಟ್‌.. ಇದರಲ್ಲಿ ಯಾವುದು ಬೆಟರ್‌..?;

ಪರ್ಸನಲ್‌ ಲೋನ್‌ ಹಾಗೂ ಓವರ್‌ ಡ್ರಾಫ್ಟ್‌.. ಇದರಲ್ಲಿ ಯಾವುದು ಬೆಟರ್‌..?; ನಿಮ್ಮ ಅವಶ್ಯಕತೆ ಏನಿದೆ..? ಅದು ಮೊದಲು ಮುಖ್ಯವಾಗುತ್ತದೆ.. ಈಗ ಒಂದು ವಸ್ತು ಕೊಳ್ಳಬೇಕಿದೆ.. ಅದಕ್ಕೆ ಸರಿಯಾಗಿ ಇಂತಿಷ್ಟೇ ಹಣ ಖರ್ಚಾಗುತ್ತದೆ ಎಂದು ನಿಮಗೆ ಗೊತ್ತಿರುತ್ತದೆ.. ಆಗ ನೀವು ಅದಕ್ಕೆ ಬೇಕಾದ ಪರ್ಸನಲ್‌ ಲೋನ್‌ ಪಡೆದು, ಇಎಂಐ ರೂಪದಲ್ಲಿ ಪಾವತಿ ಮಾಡಬಹುದು.. ಅದೇ, ನಿಮಗೆ ಆರೋಗ್ಯ ಸಮಸ್ಯೆ ಇದೆ.. ಪದೇ ಪದೇ ಚೆಕಪ್‌ಗೆ ಹೋಗಬೇಕು.. ಯಾವಾಗ ಎಷ್ಟು ಹಣ ಬೇಕಾಗುತ್ತದೋ ಗೊತ್ತಿಲ್ಲ.. ಅಂತಹ ಸಮಯದಲ್ಲಿ ಓವರ್‌ ಡ್ರಾಫ್ಟ್‌ ತೆಗೆದುಕೊಳ್ಳುವುದು.  ಇನ್ನು ವ್ಯಾಪಾರಿಗಳೂ ಅಷ್ಟೇ… ತಮ್ಮ ವ್ಯಾಪಾರಕ್ಕೆ ಈ ತಿಂಗಳು ಒಂದು ಲಕ್ಷ ಬೇಕಾಗಬಹುದು..ಮುಂದಿನ ತಿಂಗಳೂ ಇನ್ನೂ ಸ್ವಲ್ಪ ಹೆಚ್ಚು ಬೇಕಾಗಬಹುದು.. ಎಲ್ಲದಕ್ಕೂ ಒಂದೇ ಬಾರಿ ಪರ್ಸನಲ್‌ ಲೋನ್‌ ತೆಗೆದುಕೊಂಡು ಸ್ವಲ್ಪ ಸ್ವಲ್ಪ ಖರ್ಚು ಮಾಡುತ್ತಾ ಬಂದರೂ ನಿಮಗೆ ಒಟ್ಟು ಸಾಲಕ್ಕೆ ಬಡ್ಡಿ ಬೀಳುತ್ತದೆ. ಅದರ ಬದಲು ಓವರ್‌ ಡ್ರಾಫ್ಟ್‌ ಆದರೆ ನೀವು ಖರ್ಚು ಮಾಡುವ ಹಣಕ್ಕೆ ಮಾತ್ರ ಬಡ್ಡಿ ಬರುತ್ತದೆ.

 

Share Post