ಬೆಟ್ಟಿಂಗ್ ಆಡಿ ಲಾಸ್ ಆಗಿದ್ದೀರಾ..?; ಬದುಕು ಗೆಲ್ಲೋದಕ್ಕೆ ಇದ್ದೇಇದೆ ದಾರಿ…
ಬೆಂಗಳೂರು; ಇತ್ತೀಚೆಗೆ ಬೆಟ್ಟಿಂಗ್ ದಂಧೆ ಹೆಚ್ಚಾಗುತ್ತಿದೆ.. ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳ ಮೂಲಕ ಹಳ್ಳಿ ಪ್ರದೇಶದ ಯುವಕರು ಜೂಜಾಡುತ್ತಿದ್ದಾರೆ.. ಸುಲಭವಾಗಿ ಹಣ ಗಳಿಸಬಹುದೆಂಬ ಆಸೆಗೆ ಬಿದ್ದು, ಬೆಟ್ಟಿಂಗ್ ಅಪ್ಲಿಕೇಷನ್‌ಗಳಲ್ಲಿ ಹಣ ತೊಡಗಿಸಿ ಎಲ್ಲವನ್ನೂ ಕಳೆದುಕೊಂಡು ಚಿಂತೆಗೀಡಾಗುತ್ತಿದ್ದಾರೆ.. ಸಾಲದೆಂಬಂತೆ ಕಳ್ಕೊಂಡಿದ್ದಾದರೂ ಗಳಿಸಿಕೊಳ್ಳೋಣ ಅಂತ ಸಾಲ ಮಾಡಿ ಮತ್ತೆ ಜೂಜು ಆಡಲು ಹೋಗಿ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ.. ಅಂತಹವರಿಗಾಗಿಯೇ ಈ ವರದಿ..
ಇದನ್ನೂ ಓದಿ; ಚಿನ್ನದ ಅಸಲೀತನ ಪರೀಕ್ಷೆ ಮಾಡೋದು ಹೇಗೆ..?; ಯಾವುದು ಅಸಲಿ, ಯಾವುದು ನಕಲಿ?
ನೀವು ಬೆಟ್ಟಿಂಗ್ ಹಣ ಕಳೆದುಕೊಂಡಿದ್ದೀರಾ..? ಮನೆಯವರಿಗೆ ಗೊತ್ತಾಗಿ ಛೀ ತೂ ಎನ್ನುತ್ತಿದ್ದಾರಾ..? ಆದರೂ ತಲೆ ಕೆಡಿಸಿಕೊಳ್ಳಬೇಡಿ.. ನಾವು ಇಲ್ಲಿ ಹೇಳಿದ್ದನ್ನು ಮಾಡಿ ಸಾಕು.. ನೀವು ಏನು ಅಲ್ಲದ ಸಂದರ್ಭದಲ್ಲಿ ಬೆಟ್ಟಿಂಗ್ ಆಡಿದ್ದೀರಿ.. ನಿಮ್ಮ ಯೋಗ್ಯತೆಗೆ ತಕ್ಕಂತೆ ಹಣ ಕಳೆದುಕೊಂಡಿದ್ದೀರಿ.. ಕೆಲವರು ಯೋಗ್ಯತೆ ಮೀರಿಯೂ ಹಣ ಪೋಲು ಮಾಡಿರುತ್ತಾರೆ ಬಿಡಿ.. ಅಂದಹಾಗೆ, ಇದರಿಂದ ಚಿಂತೆ ಮಾಡೋದೋ, ಜೀವ ಕಳೆದುಕೊಳ್ಳುವುದೋ ಮಾಡುವ ಅವಶ್ಯಕತೆ ಇಲ್ಲ.. ಜೀವನದಲ್ಲಿ ಬಂದ ಸವಾಲಿದು..
ನಿಮಗೆ ಹಣ ಸಂಪಾದನೆ ಮಾಡಬೇಕು, ಅದರಿಂದ ಮನೆ ಕಟ್ಟಬೇಕು, ಚೆನ್ನಾಗಿ ಸಂಸಾರ ನಡೆಸಬೇಕು.. ಹೀಗೆ ಅನೇಕ ಆಸೆಗಳಿರುತ್ತವೆ.. ಆ ಆಸೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಹಣ ಸಂಪಾದನೆ ಮಾಡಲು ಹೋಗುತ್ತೀರಿ.. ಕೆಲವರು ಸಂಪಾದನೆಗಾಗಿ ಇಂತಹ ಬೆಟ್ಟಿಂಗ್ ವ್ಯಹಾರಕ್ಕಿಳಿಯುತ್ತಾರೆ.. ಏನೋ ಲಕ್ಷ ಲಕ್ಷ ಬಂದುಬಿಡುತ್ತೇನೋ ಎಂಬ ಆಸೆಯಿಂದ ಬೆಟ್ಟಿಂಗ್‌ನಲ್ಲಿ ಹಣ ತೊಡಗಿಸುತ್ತೀರಿ.. ಆದ್ರೆ ಇದ್ದಿದ್ದೆಲ್ಲವೂ ಕಳೆಯುತ್ತೀರಿ.. ಸಾಲ ಕೂಡಾ ಮಾಡುತ್ತೀರಿ.. ಇದರಿಂದ ನೀವು ಒಂದು ಪಾಠ ಕಲಿಯುತ್ತೀರಿ.. ಏನಂದ್ರೆ ಬೆಟ್ಟಿಂಗ್‌ನಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತೇನೆ.. ಅದರಿಂದ ನಮಗೇನೂ ಬರೋದಿಲ್ಲ ಅನ್ನೋದು ಅರ್ಥವಾಗುತ್ತದೆ.. ಇದೊಂದು ಬದುಕಿನ ಪಾಠ.. ನೀವು ಈಗಲೇ ಅಲ್ಪ ಸ್ವಲ್ಪ ಹಣ ಕಳೆದುಕೊಂಡು ಪಾಠ ಕಲಿಯದೇ ಹೋಗಿದ್ದರೆ, ಮುಂದೆ ನೀವು ತುಂಬಾನೇ ಕಳೆದುಕೊಳ್ಳುತ್ತಿದ್ದಿರಿ ನೆನಪಿಡಿ..
ಇದನ್ನೂ ಓದಿ; ಮುಡಾ ವಿಚಾರದಲ್ಲಿ ರಾಹುಲ್ ಗಾಂಧಿ ಮೌನವಾಗಿರುವುದೇಕೆ..?
ಉದಾಹರಣೆಗೆ ಬೆಟ್ಟಿಂಗ್ ನಲ್ಲಿ ಹಣ ಮಾಡಬಹುದು ಅನ್ನೋ ಆಸೆ ನಿಮಗಿದೆ ಎಂದಿಟ್ಟುಕೊಳ್ಳಿ.. ಆದ್ರೆ ನೀವು ಬೆಟ್ಟಿಂಗ್ ಆಡಿರೋದಿಲ್ಲ.. ಬದಲಾಗಿ, ಒಳೆಯದಾಗಿ ದುಡಿಮೆ ಮಾಡಿ ಕೋಟಿ ಕೋಟಿ ಗಳಿಸಿರುತ್ತೀರಿ.. ಆಗ ನಿಮಗೆ ಬೆಟ್ಟಿಂಗ್ ಬಗ್ಗೆ ಆಸಕ್ತಿ ಬರುತ್ತದೆ ಎಂದಿಟ್ಟುಕೊಳ್ಳೋಣ.. ಹಣ ಸಾಕಷ್ಟಿದೆ.. ಒಮ್ಮೆ ಬೆಟ್ಟಿಂಗ್ ಸ್ವಲ್ಪ ಹಣ ತೊಡಗಿಸಿ ನೋಡೋಣ ಎಂದು ಹೋಗುತ್ತೀರಿ.. ಅದನ್ನು ಕಳೆಯುತ್ತೀರಿ.. ಹೋದ ಹಣವಾದರೂ ವಾಪಸ್ ಬರಲಿ ಅಂತ ಮತ್ತೆ ಮತ್ತೆ ಆಡುತ್ತೀರಿ.. ಗಳಿಸಿದ್ದ ಕೋಟಿ ಕೋಟಿ ಹಣವನ್ನೆಲ್ಲಾ ಕಳೆಯುತ್ತೀರಿ.. ಆಗ ನಿಮಗೆ ಹೆಚ್ಚು ಲಾಸ್ ಆಗುತ್ತದೆ.. ಬೀದಿಗೆ ಬೀಳುತ್ತೀರಿ.. ವಯಸ್ಸು ಕೂಡಾ ಮೀರಿರುತ್ತದೆ.. ಮತ್ತೆ ಒಳ್ಳೆ ರೀತಿಯಿಂದ ದುಡಿಯೋದಕ್ಕೆ ಸಮಯ ಇರೋದಿಲ್ಲ.. ಆದ್ರೆ ನೀವು ಮೊದಲೇ ಹಣ ಕಳೆದುಕೊಂಡು ಪಾಠ ಕಲಿತಿದ್ದೀರಿ.. ಇನ್ನ ಮುಂದೆ ಅದರ ಗೋಜಿಗೆ ಹೋಗಬೇಡಿ..
ಇದನ್ನೂ ಓದಿ; ಅಸಭ್ಯವಾಗಿ ವರ್ತಿಸಿದ ವೈದ್ಯನಿಗೆ ಹಿಗ್ಗಾಮುಗ್ಗಾ ಗೂಸಾ!
ಇನ್ನು ಬೆಟ್ಟಿಂಗ್ ಅಥವಾ ಜೂಜು ಮೂಲಕ ನೀವು ಹಣ ಕಳೆದುಕೊಂಡು ಸಣ್ಣಪುಟ್ಟ ಸಾಲ ಮಾಡಿಕೊಂಡಿದ್ದರೆ, ಮತ್ತೆ ಆಡೋದಕ್ಕೆ ಹೋಗಬೇಡಿ.. ನಿಮಗೆ ಅದ್ರಿಂದ ಹಣ ಬರೋದಿಲ್ಲ ಅನ್ನೋದು ಈಗಾಗಲೇ ಗೊತ್ತಾಗಿರುತ್ತೆ.. ಆದ್ರೆ ಮಾಡಿರೋ ಸಾಲನಾದ್ರೂ ತೀರಿಸೋಷ್ಟು ಬಂದ್ರೆ ಸಾಕು ಮತ್ತೆ ಆಡಲು ಹೋಗಿ ಮತ್ತೆ ಕಳೆದುಕೊಳ್ಳುತ್ತೀರಿ.. ಅದ್ರ ಬದಲು ಮನೆಯವರು ಆಗಿರುವ ಲಾಸ್ ಬಗ್ಗೆ ಹೇಳಿಬಿಡಿ.. ಇನ್ಮೇಲೆ ಆಡೋದಿಲ್ಲ.. ನನ್ನ ಸಮಸ್ಯೆ ತೀರಿಸಿ ಎಂದು ಹೇಳಿ.. ಇಲ್ಲವೇ ನಿಮಗೆ ತೀರಾ ಬೇಕಾದವರ ಮುಂದೆ ಎಲ್ಲವನ್ನೂ ಹೇಳಿಕೊಳ್ಳಿ.. ಅವರು ನಿಮಗೆ ಪರಿಹಾರ ದೊರಕಿಸಿಕೊಡುತ್ತಾರೆ.. ದುಡಿಕಿ ಯಾವ ನಿರ್ಧಾರವನ್ನೂ ಕೈಗೊಳ್ಳಬೇಡಿ.. ತಾಳಿದವನು ಬಾಳಿಯಾನು ಎಂಬ ಗಾದೆ ಮಾತಿದೆ.. ಅದನ್ನು ಮರೆಯಬೇಡಿ..