Economy

Senior Citizens; ಹಿರಿಯ ನಾಗರಿಕರಿಗೆ ಉತ್ತಮ ರಿಟರ್ನ್ಸ್‌ ತಂದುಕೊಡುವ ಸ್ಕೀಂಗಳು!

Best Investment Tips; 60 ವರ್ಷ ದಾಟಿದ ಮೇಲೆ ನಾನಾ ಸಮಸ್ಯೆಗಳು ಎದುರಾಗುತ್ತವೆ.. ರಿಟೈರ್ಡ್‌ ಆಗುವುದರಿಂದ ಆದಾಯವೂ ಇರುವುದಿಲ್ಲ.. ಒಂದು ಕಡೆ ಆರ್ಥಿಕ ಖರ್ಚುಗಳು ಜಾಸ್ತಿಯಾಗುತ್ತದೆ.. ಆರೋಗ್ಯ ತೊಂದರೆಗಳು ಕೂಡಾ ಶುರುವಾಗುತ್ತವೆ… ಅದಕ್ಕೆಲ್ಲಾ ಹಣ ಬೇಕಾಗುತ್ತದೆ… ಆದ್ರೆ, ನಿವೃತ್ತಿ ಸಮಯದಲ್ಲಿ ಬಂದಿರುವ ಹಣವನ್ನು ಸೂಕ್ತ ಕಡೆ ಹೂಡಿಕೆ ಮಾಡದೇ ಹೋದರೆ, ಅಗತ್ಯ ಹಾಗೂ ಅನಿವಾರ್ಯ ಖರ್ಚುಗಳಿಗಾಗಿ ಅಸಲು ಹಣಕ್ಕೆ ಕೈ ಹಾಕಬೇಕಾಗುತ್ತದೆ.. ಹಾಗೇನಾದರೂ ಆದರೆ, ಕೆಲವೇ ದಿನಗಳಲ್ಲಿ ಇರುವುದೆಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ… ಹೀಗಾಗಿ ಹಿರಿಯ ನಾಗರಿಕರು ತಮ್ಮ ಬಳಿ ಇರುವ ಹಣವನ್ನು ಸೂಕ್ತ ಸ್ಕೀಂಗಳಲ್ಲಿ ಹೂಡಿಕೆ ಮಾಡಿ, ಅದರಿಂದ ಬರುವ ಬಡ್ಡಿಯಿಂದ ಸುಖವಾಗಿ ಜೀವನ ಸಾಗಿಸಬಹುದು.. ಹಾಗಾದ್ರೆ ಇಲ್ಲಿ ನಾವು ಹಿರಿಯ ನಾಗರಿಕೆ ಹೆಚ್ಚು ಬಡ್ಡಿ ತಂದುಕೊಡುವ ಕೆಲವು ಸ್ಕೀಂಗಳನ್ನು ತಿಳಿಸುತ್ತಿದ್ದೇವೆ.

ಇದನ್ನೂ ಓದಿ; Loan; ಪರ್ಸನಲ್‌ ಲೋನ್‌ OR ಓವರ್‌ಡ್ರಾಪ್ಟ್‌; ಯಾವುದು ಉತ್ತಮ..?

ಹಿರಿಯ ನಾಗರಿಕರು ಹೂಡಿಕೆ ಮಾಡುವುದು ಹೇಗೆ..?;

ಹಿರಿಯ ನಾಗರಿಕರು ಹೂಡಿಕೆ ಮಾಡುವುದು ಹೇಗೆ..?;  ಹಿರಿಯ ನಾಗರಿಕರಿಗೆ ಹಣವನ್ನು ಹೂಡಿಕೆ ಮಾಡುವುದು ಹೇಗೆ ಎಂದು ತಿಳಿಯೋಣ. ಹೂಡಿಕೆ ಮಾಡಲು ಹಿರಿಯ ನಾಗರಿಕರಿಗೆ ಅನೇಕ ಆಯ್ಕೆಗಳು ಸಿಗುತ್ತವೆ. ದೊಡ್ಡ ನಿಧಿ ಸಂಗ್ರಹಿಸುವ ಯೋಜನೆಗಳು ಉತ್ತಮ. ಸರ್ಕಾರದ ಬೆಂಬಲಿತ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚು ಆದಾಯ ತಂದುಕೊಡುವುದಲ್ಲದೆ, ನಮ್ಮ ಹಣವೂ ಸೇಫಾಗಿರುತ್ತದೆ. ಇಲ್ಲಿ ಖಾತರಿಪಡಿಸಿದ ಆದಾಯವನ್ನು ನಿರೀಕ್ಷಿಸಬಹುದು. ಹೆಚ್ಚಿನ ಹಿರಿಯ ನಾಗರಿಕರು ತಮ್ಮ ಹೂಡಿಕೆ ಮತ್ತು ಆದಾಯದ ಮೇಲೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ 1.50 ಲಕ್ಷ ರೂಪಾಯಿಗಳವರೆಗೆ ತೆರಿಗೆ ಪ್ರಯೋಜನವನ್ನು ಪಡೆಯಬಹುದು. ಹಾಗಾದರೆ ಯಾವೆಲ್ಲಾ ಯೋಜನೆಗಳು ಹಿರಿಯ ನಾಗರಿಕರಿಗೆ ಉಪಯೋಗವಾಗಲಿವೆ ನೋಡೋಣ..

ಇದನ್ನೂ ಓದಿ; Garlic; ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದರೆ ಏನಾಗುತ್ತೆ ಗೊತ್ತಾ..?

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS);

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS); ಈ ಯೋಜನೆ 60 ವರ್ಷ ಮತ್ತು ಮೇಲ್ಪಟ್ಟವರಿಗೆ ಲಭ್ಯವಿದೆ. ಇದು ಪೋಸ್ಟ್ ಆಫೀಸ್ ಯೋಜನೆಗಳಲ್ಲಿ 8.20 ಪ್ರತಿಶತದಷ್ಟು ಹೆಚ್ಚಿನ ಬಡ್ಡಿದರವನ್ನು ಹೊಂದಿದೆ. ಇದು ಕೇಂದ್ರೀಯ ಯೋಜನೆಯಾಗಿರುವುದರಿಂದ, ಖಾತರಿಯ ಆದಾಯವಿದೆ. ಇದರ ಅವಧಿ ಐದು ವರ್ಷಗಳು. ಈ ಯೋಜನೆಯಲ್ಲಿ ಗರಿಷ್ಠ ರೂ. 30 ಲಕ್ಷ ರೂಪಾಯಿಯವರೆಗೆ ಹೂಡಿಕೆ ಮಾಡಬಹುದು. ಕನಿಷ್ಠ 1000 ರೂಪಾಯಿಯಿಂದಲೂ ಹೂಡಿಕೆಗೆ ಅವಕಾಶ ಇದೆ. ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ಸಿಗುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು.

ಗರಿಷ್ಠ 30 ಲಕ್ಷ ರೂಪಾಯಿ ಈ ಸ್ಕೀಂನಲ್ಲಿ ಹೂಡಿಕೆ ಮಾಡಬಹುದು. ನೀವು  ಐದು ವರ್ಷಗಳ ಕಾಲ 30 ಲಕ್ಷ ರೂಪಾಯಿ ಈ ಸ್ಕೀಂನಲ್ಲಿ ಹೂಡಿಕೆ ಮಾಡಿದರೆ, ಅದಕ್ಕೆ ಬರೋಬ್ಬರಿ 12 ಲಕ್ಷದ 30 ಸಾವಿರ ರೂಪಾಯಿ ಬಡ್ಡಿ ಬರುತ್ತದೆ. ಅಂದರೆ 5 ವರ್ಷದ ನಂತರ ನಮ್ಮ ಕೈಗೆ 42 ಲಕ್ಷದ 30 ಸಾವಿರ ರೂಪಾಯಿ ಸಿಗುತ್ತದೆ. ಅದೇ ನಿಮ್ಮ ಬಳಿ 10 ಲಕ್ಷ ರೂಪಾಯಿ ಇದೆ ಎಂದಿಟ್ಟುಕೊಳ್ಳಿ. ಅದಕ್ಕೆ 5 ವರ್ಷಗಳ ನಂತರ 4 ಲಕ್ಷದ 10 ಸಾವಿರ ಬಡ್ಡಿ  ಸೇರಿ 14 ಲಕ್ಷದ 10 ಸಾವಿರ ರೂಪಾಯಿ ನಮ್ಮ ಕೈಗೆ ಸಿಗುತ್ತದೆ.

ಇಲ್ಲಿ ಉದಾಹರಣೆಗೆ ರೂ. 30 ಲಕ್ಷ ಹೂಡಿಕೆ ಮಾಡಿದರೆ ಐದು ವರ್ಷಗಳ ನಂತರ 42,30,000 ಸಿಗುತ್ತದೆ. ಅದೇ ರೂ. 10 ಲಕ್ಷ ಹೂಡಿಕೆ ರೂ. 14,10,000 ಸಿಗಲಿದೆ. ತಿಂಗಳ ಆದಾಯ ಲೆಕ್ಕ ಹಾಕುವುದಾದರೆ, ನೀವು 30 ಲಕ್ಷ ರೂಪಾಯಿ 5 ವರ್ಷ ಠೇವಣಿ ಇಟ್ಟರೆ, ನಿಮ್ಮಗೆ 5 ವರ್ಷಕ್ಕೆ 12 ಲಕ್ಷ 30 ಸಾವಿರ ಬಡ್ಡಿ ಸಿಗುತ್ತದೆ. ಅದಕ್ಕೆ ತಿಂಗಳ ಲೆಕ್ಕಕ್ಕೆ ಡಿವೈಡ್‌ ಮಾಡಿದರೆ, ತಿಂಗಳಿಗೆ 20,500 ರೂಪಾಯಿ ಸಿಕ್ಕಂತಾಗುತ್ತದೆ.

ಇದನ್ನೂ ಓದಿ; Jayalalitha; ಆರು ಟ್ರಂಕ್‌ನಲ್ಲಿ ತಮಿಳುನಾಡಿಗೆ ಜಯಲಲಿತಾ ವಜ್ರ-ವೈಢೂರ್ಯಗಳು!

ಹಿರಿಯ ನಾಗರಿಕರ ಸ್ಥಿರ ಠೇವಣಿ;

ಹಿರಿಯ ನಾಗರಿಕರ ಸ್ಥಿರ ಠೇವಣಿ; ಸ್ಥಿರ ಠೇವಣಿಗಳಿಂದ ಸ್ಥಿರವಾದ ಆದಾಯವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಅದರಲ್ಲೂ ಸಾಮಾನ್ಯ ನಾಗರಿಕರಿಗೆ ಹೋಲಿಸಿದರೆ ಹಿರಿಯ ನಾಗರಿಕರಿಗೆ 50 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿ ಸಿಗುತ್ತದೆ. ಜೊತೆಗೆ ಇದರಲ್ಲಿ ಸ್ಥಿರತೆ ಇರುತ್ತದೆ. ಬಹುತೇಕ ಎಲ್ಲಾ ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳು ಎಫ್‌ಡಿ ಯೋಜನೆಗಳನ್ನು ಹೊಂದಿವೆ. ಇದರಲ್ಲಿ ಹೂಡಿಕೆ ಮಾಡಿ ನಿಶ್ಚಿಂತೆಯಿಂದ ಇರಬಹುದು.

ಮ್ಯೂಚುಯಲ್ ಫಂಡ್‌ಗಳು;

ಮ್ಯೂಚುಯಲ್ ಫಂಡ್‌ಗಳು; ಹಿರಿಯ ನಾಗರಿಕರು ಹೆಚ್ಚಿನ ಆದಾಯ ಗಳಿಸಬೇಕೆಂದುಕೊಂಡರೆ ಹೆಚ್ಚು ಅಪಾಯ ಇಲ್ಲದ  ಮ್ಯೂಚುವಲ್ ಫಂಡ್‌ಗಳನ್ನು ಸಹ ನೋಡಬಹುದು. ಹೈಬ್ರಿಡ್ ಮ್ಯೂಚುವಲ್ ಫಂಡ್‌ಗಳು ಸಹ ಉತ್ತಮ ಆದಾಯವನ್ನು ನೀಡುತ್ತವೆ. ಸ್ಥಿರ ಆದಾಯದ ಸಾಧನಗಳಲ್ಲಿ ಹೂಡಿಕೆ ಮಾಡಬಹುದು. ಅವು ಸ್ಥಿರ ಆದಾಯವನ್ನು ನೀಡುತ್ತದೆ, ಅಪಾಯ ಚಿಕ್ಕದಾದರೂ, ತಜ್ಞರ ಸಲಹೆ ಪಡೆದು ಕಡಿಮೆ ಅಪಾಯ ಇರುವ  ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಹೆಚ್ಚು ಆದಾಯ ಬರುತ್ತದೆಂದು ಉಳಿತಾಯದ  ಎಲ್ಲಾ ಹಣವನ್ನೂ ಇಲ್ಲಿ ಹೂಡಿಕೆ ಮಾಡುವುದು ಅಪಾಯ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ;

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ; ನಿವೃತ್ತಿಯಾದವರಿಗೆ, ಹಿರಿಯ ನಾಗರಿಕರಿಗೆ ಮಾಸಿಕ ಆದಾಯ ಇರುವುದಿಲ್ಲ.. ಹೀಗಾಗಿ ತಮ್ಮಲ್ಲಿ ಉಳಿತಾಯ ಮಾಡಿರುವ ಹಣವನ್ನು ಐದು ವರ್ಷಕ್ಕೋ ಹತ್ತು ವರ್ಷಕ್ಕೋ ಫಿಕ್ಡ್ಸ್‌ ಡೆಪಾಸಿಟ್‌ ಇಟ್ಟರೆ ಅಲ್ಲಿಯತನಕ ಕಾಯುತ್ತಾ ಕೂರಬೇಕಾಗುತ್ತದೆ. ಹೀಗಾಗಿ ಡೆಪಾಸಿಟ್‌ ಇಟ್ಟ ಹಣಕ್ಕೆ ಪ್ರತಿ ತಿಂಗಳು ಆದಾಯ ಬರುವಂತೆ ಮಾಡುವ ಯೋಜನೆಗಳೂ ನಮ್ಮಲ್ಲಿ ಸಾಕಷ್ಟಿವೆ. ಇದರಲ್ಲಿ ಪೋಸ್ಟ್‌ ಆಫೀಸ್‌ ಮಾಸಿಕ ಆದಾಯ ಯೋಜನೆ ಕೂಡಾ ಒಂದು. ಇದರಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ನಮ್ಮ ಉಳಿತಾಯ ಖಾತೆಗೆ ಬಡ್ಡಿ ಜಮೆಯಾಗುತ್ತದೆ. ಅದರಿಂದ ತಿಂಗಳ ಖರ್ಚುಗಳನ್ನು ಸರಿದೂಗಿಸಿಕೊಳ್ಳಬಹುದು. ಇದರ ಬಡ್ಡಿ ದರಗಳು ಕೂಡಾ ಆಕ್ಷಕವಾಗಿವೆ. ಜೊತೆಗೆ ಕೇಂದ್ರ ಸರ್ಕಾರ ಈ ಯೋಜನೆಯ ಬಡ್ಡಿ ದರಗಳನ್ನು 3 ತಿಂಗಳಿಗೊಮ್ಮೆ ಪರಿಷ್ಕರಿಸುತ್ತಿರುತ್ತದೆ.

 

Share Post