ಪೀನಟ್ ಬಟರ್ ಆರೋಗ್ಯಕ್ಕೆ ಒಳ್ಳೆಯದಾ..? ಅದರಲ್ಲಿ ಏನೆಲ್ಲಾ ಪೋಷಕಾಂಶಗಳಿವೆ..?
ಪೀನಟ್ ಬಟರ್… ಇತ್ತೀಚಿನ ದಿನಗಳಲ್ಲಿ ತುಂಬಾ ಜನಕ್ಕೆ ಪೀನಟ್ ಬಟರ್ ಅಂದ್ರೆ ಇಷ್ಟ.. ಪ್ರೊಟೀನ್ ಹೆಚ್ಚು ಸಿಗುತ್ತೆ ಅನ್ನೋ ಕಾರಣಕ್ಕೆ ಹಲವಾರು ಜನ ಇದನ್ನು ಸೇವನೆ ಮಾಡುತ್ತಾರೆ… ಆದ್ರೆ ಈ ಪೀನಟ್ ಬಟರ್ ಅನ್ನು ದಿನವೂ ಸೇವನೆ ಮಾಡೋದು ಆರೋಗ್ಯಕ್ಕೆ ಒಳ್ಳೆಯದೇ..? ಆಹಾರ ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ..? ಅಷ್ಟಕ್ಕೂ ಪೀನಟ್ ಬಟರ್ ನಲ್ಲಿ ಏನೆಲ್ಲಾ ಪದಾರ್ಥಗಳನ್ನು ಬಳಸಲಾಗುತ್ತಿದೆ..? ನಿಜಕ್ಕೂ ಈ ಪೀನಟ್ ಬಟರ್ ತಿಂದರೆ ಹೃದಯದ ತೊಂದರೆಗಳು ಬರೋದಿಲ್ಲವೇ..? ಈ ಬಗ್ಗೆ ನೋಡೋಣ ಬನ್ನಿ…
ಇದನ್ನೂ ಓದಿ; Plov; ಇದು ಲೈಂಗಿಕ ಶಕ್ತಿ ಹೆಚ್ಚಿಸಲೆಂದೇ ಇರುವ ವಿಶೇಷ ಅಡುಗೆ!
ಪೀನಟ್ ಬಟರ್ ಅಂದ್ರೆ ಏನು..? ಅದನ್ನು ಹೇಗೆ ತಯಾರಿಸ್ತಾರೆ..?;
ಪೀನಟ್ ಬಟರ್ ಅಂದ್ರೆ ಏನು..? ಅದನ್ನು ಹೇಗೆ ತಯಾರಿಸ್ತಾರೆ..?; ಕಡಲೆಬೀಜಗಳಿಂದ ತಯಾರು ಮಾಡುವ ಒಂದು ಪದಾರ್ಥವೇ ಪೀನಟ್ ಬಟರ್.. ಮಾರುಕಟ್ಟೆಯಲ್ಲಿ ಸಿಗುವ ಪೀಟನ್ ಬಟರ್ ಅನ್ನು ತಯಾರು ಮಾಡುವುದು ಹೇಗೆ ಅನ್ನೋದನ್ನು ನೋಡೋಣ. ಮೊದಲಿಗೆ ಅವರು ಕಡಲೆ ಬೀಜಗಳನ್ನು ಕೊಂಚ ಬಿಸಿ ಮಾಡುತ್ತಾರೆ, ಇಲ್ಲವೇ ನೀರಿನಲ್ಲಿ ಹಾಕಿ ಕುದಿಸುತ್ತಾರೆ. ಅನಂತರ ಅವುಗಳ ಮೇಲಿರುವ ಹೊಟ್ಟು ತೆಗೆದುಬಿಡುತ್ತಾರೆ. ಹಾಗೆ ಹೊಟ್ಟು ತೆಗೆದ ಕಡಲೆ ಬೀಜಜಗಳಿಂದ ಪೇಸ್ಟ್ ತಯಾರು ಮಾಡುತ್ತಾರೆ. ಆ ಪೇಸ್ಟ್ ರುಚಿಯಾಗಿರುವುದಕ್ಕಾಗಿ ಬಟರ್, ಉಪ್ಪು, ಸಕ್ಕರೆ ಸೇರಿ ಹಲವು ಪದಾರ್ಥಗಳನ್ನು ಮಿಕ್ಸ್ ಮಾಡುತ್ತಾರೆ.
ಇದನ್ನೂ ಓದಿ; ಇದು ನಮ್ಮ ಮೆಟ್ರೋ ಅಲ್ಲವೇ..?; ಗಲೀಜು ಬಟ್ಟೆ ಧರಿಸಿದ ರೈತನಿಗೆ ಮೆಟ್ರೋ ಪ್ರವೇಶವಿಲ್ಲವಂತೆ!
ಕಡಲೆ ಬೀಜದ ಪೇಸ್ಟ್ಗೆ ಮೇಲಿನ ಪದಾರ್ಥಗಳನ್ನು ಎಷ್ಟು ಪ್ರಮಾಣದಲ್ಲಿ ಬರೆಸುತ್ತೇವೆ ಎಂಬುದರ ಮೇಲೆ ಅದರ ರುಚಿ ನಿರ್ಧಾರವಾಗುತ್ತದೆ. ಪೀನಟ್ ಬಟರ್ ಅನ್ನು ಸ್ಮೂತ್ ಆಗಿ, ಕ್ರಂಚಿಯಾಗಿ ಹೀಗೆ ಹಲವಾರು ರೀತಿಯಲ್ಲಿ ತಯಾರು ಮಾಡಿ ಮಾರುಕಟ್ಟೆಗೆ ಬಿಡಲಾಗಿದೆ. ನಮಗೆ ಯಾವ ತರದ ಪೀನಟ್ ಬಟರ್ ಬೇಕೋ ಅದನ್ನು ಖರೀದಿ ಮಾಡಬಹುದು.
ಒಂದು ಟೇಬಲ್ ಸ್ಪೂನ್ ಪೀನಟ್ ಬಟರ್ನಲ್ಲಿ ಏನೇನಿರುತ್ತೆ..?;
97 ಕಿಲೋ ಕ್ಯಾಲರಿ ಶಕ್ತಿ
3.6 ಗ್ರಾಂ ಪ್ರಟೀನ್
8.3 ಗ್ರಾಂ ಕೊಬ್ಬಿನ ಅಂಶ
2 ಗ್ರಾಂ ಒಳ್ಳೆಯ ಕೊಬ್ಬು
1.1 ಗ್ರಾಂ ಸಕ್ಕರೆ
1.1 ಗ್ರಾಂ ನಾರಿನ ಅಂಶ
ಕೆಲವು ಬ್ರ್ಯಾಂಡ್ಗಳು ಪೀನಟ್ ಬಟರ್ ತಯಾರಿಸುವಾಗ ಎಣ್ಣೆ, ಸಕ್ಕರೆ ಅಥವಾ ಕ್ಸಿಲಿಟಾಲ್ ಮತ್ತು ಉಪ್ಪಿನಂತಹ ಪದಾರ್ಥಗಳನ್ನು ಸೇರಿಸುತ್ತವೆ. ಈ ಪದಾರ್ಥಗಳನ್ನು ಅವಲಂಬಿಸಿ, ಪೀನಟ್ ಬಟರ್ನಲ್ಲಿರುವ ಪೌಷ್ಟಿಕಾಂಶಗಳು ಸ್ವಲ್ಪಮಟ್ಟಿಗೆ ಬದಲಾಗುತ್ತವೆ.
ಇದನ್ನೂ ಓದಿ;Honey; ಸಕ್ಕರೆ ಬದಲು ಜೇನು ಬಳಸಬಹುದೇ?; ಯಾರು ಬೇಕಾದರೂ ಜೇನು ಸೇವಿಸಬಹುದೇ..?
ಪೀನಟ್ ಬಟರ್ನಿಂದ ಏನೆಲ್ಲಾ ಪ್ರಯೋಜನಗಳಿವೆ..?;
ಪೀನಟ್ ಬಟರ್ನಿಂದ ಏನೆಲ್ಲಾ ಪ್ರಯೋಜನಗಳಿವೆ..?; ಪೋಷಕಾಂಶಗಳು ಸಮೃದ್ಧ; ಕಡಲೆಕಾಯಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಇದು ಮೆಗ್ನೀಸಿಯಮ್, ಸತು, ಕಬ್ಬಿಣ ಮತ್ತು ತಾಮ್ರದಂತಹ ಖನಿಜಗಳನ್ನು ಸಹ ಒಳಗೊಂಡಿದೆ. ಇ ಮತ್ತು ಬಿ ಗುಂಪಿನ ಜೀವಸತ್ವಗಳನ್ನು ಹೊಂದಿರುತ್ತದೆ.
ಸಮತೋಲಿತ ಶಕ್ತಿಯ ಮೂಲ; ಕಡಲೆಕಾಯಿ ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಮತ್ತು ಕೊಬ್ಬನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ ಹೆಚ್ಚಿನ ಕ್ಯಾಲೋರಿಕ್ ಶಕ್ತಿಯನ್ನು ಪಡೆಯಲಾಗುತ್ತದೆ.
ಆರೋಗ್ಯಕರ ಕೊಬ್ಬುಗಳು; ಒಲೀಕ್ ಆಮ್ಲದಂತಹ ಮೊನೊಸಾಚುರೇಟೆಡ್ ಕೊಬ್ಬು ಸೇರಿದಂತೆ ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತದೆ. ಆಲಿವ್ ಎಣ್ಣೆಯಲ್ಲಿಯೂ ಒಲೀಕ್ ಆಮ್ಲವಿದೆ. ಒಲೀಕ್ ಆಮ್ಲವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ವೈದ್ಯರು ಹೇಳುತ್ತಾರೆ. ಒಂದು ಚಮಚ ಪೀನಟ್ ಬಟರ್ ಅನ್ನು ವಯಸ್ಕರು ನಿತ್ಯ ಸೇವನೆ ಮಾಡಿದರೆ 10 ಪ್ರತಿಶತದಷ್ಟು ಕೊಬ್ಬನ್ನು ಒದಗಿಸುತ್ತದೆ.
ಫೈಬರ್ ಕೂಡಾ ಸಮೃದ್ಧ; ಇದರಲ್ಲಿ ಫೈಬರ್ ಸಮೃದ್ಧವಾಗಿದೆ. ಪೀನಟ್ ಬಟರ್ ತಯಾರಿಸುವಾಗ ಸಿಪ್ಪೆ ತೆಗೆಯದೆ ಬಳಸಿದರೆ ನಾರಿನ ಅಂಶ ಇನ್ನೂ ಹೆಚ್ಚಾಗಿರುತ್ತದೆ. ಒಂದು ಚಮಚ ಶೆಲ್ ಮಾಡದ ಪೀನಟ್ ಬಟರ್ 1.3 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಅದೇ ಸಿಪ್ಪೆಯ ಕಡಲೆ ಬೀಜವನ್ನು ಬಳಸಿದರೆ, ಅಂತಹ ಪೀನಟ್ ಬಟರ್ ಒಂದು ಚಮಚವು 0.98 ಗ್ರಾಂನಿಂದ 1.1 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ.
ಇದನ್ನೂ ಓದಿ; ಸ್ಪರ್ಮ್ ಕೌಂಟ್ ಹೆಚ್ಚಾಗಬೇಕು ಅಂದ್ರೆ ಏನು ಮಾಡಬೇಕು ಗೊತ್ತಾ..?
ಯಾರು ಬೇಕಾದರೂ ಈ ಪೀನಟ್ ಬಟರ್ ತಿನ್ನಬಹುದೇ..?;
ಯಾರು ಬೇಕಾದರೂ ಈ ಪೀನಟ್ ಬಟರ್ ತಿನ್ನಬಹುದೇ..?; ಕಡಲೆಕಾಯಿಗೆ ಅಲರ್ಜಿ ಇರುವವರು ಇದನ್ನು ತಿನ್ನಬಾರದು. ಬೇರೆ ಯಾರು ಬೇಕಾದರೂ ತಿನ್ನಬಹುದು. ಸಕ್ಕರೆ ಕಾಯಿಲೆ ಇರುವವರು ಮಾರುಕಟ್ಟೆಯಲ್ಲಿ ಸಿಗುವ ಪೀನಟ್ ಬಟರ್ ನಲ್ಲಿರುವ ಸಕ್ಕರೆಯ ಪ್ರಮಾಣವನ್ನು ಪರೀಕ್ಷಿಸುವುದು ಒಳ್ಳೆಯದು. ದಿನಕ್ಕೆ ಒಂದು ಅಥವಾ ಎರಡು ಚಮಚ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ ತಜ್ಞರು.
ಇದನ್ನೂ ಓದಿ; Paytm FASTag;ಪೇಟಿಎಂ ಫಾಸ್ಟ್ಟ್ಯಾಗ್ ಯೂಸ್ ಆಗಲ್ವಾ..?; ಡಿ ಆಕ್ಟಿವೇಟ್ ಮಾಡೋದು ಹೇಗೆ..?