EconomyNational

Loan Processing Fee; ಲೋನ್‌ ಪ್ರೊಸೆಸಿಂಗ್‌ ಶುಲ್ಕದ ಮಹತ್ವದ ನಿರ್ಧಾರ; ಇನ್ಮೇಲೆ ನಿಮಗೆ ಸ್ಪಷ್ಟತೆ ಸಿಗುತ್ತೆ!

ನವದೆಹಲಿ; ನಾವು ಬ್ಯಾಂಕ್‌ಗಳಿಂದ ಸಾಲ ಪಡೆಯುವಾಗ ಪ್ರೋಸಸಿಂಗ್ ಶುಲ್ಕ (Loan Processing Fee), ಡಾಕ್ಯುಮೆಂಟೇಶನ್ ಶುಲ್ಕ (Documentation Fee) ಹೀಗೆ ಏನೇನೋ ಶುಲ್ಕಗಳನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವಿಧಿಸುತ್ತವೆ. ಈ ಶುಲ್ಕಗಳು ಒಂದೊಂದು ಬ್ಯಾಂಕ್‌ನಲ್ಲಿ ಒಂದೊಂದು ರೀತಿ ಇರುತ್ತವೆ. ಗ್ರಾಹಕರಿಗೆ ಇದರ ಬಗ್ಗೆ ಸ್ಪಷ್ಟತೆಯೇ ಇರೋದಿಲ್ಲ. ಸಾಲ ತೆಗೆದುಕೊಳ್ಳುವಾಗ ಬಡ್ಡಿ ಎಷ್ಟು ಎಂದು ನೋಡುತ್ತೇವೆ. ಆದ್ರೆ ಈ ಶುಲ್ಕಗಳು ಎಷ್ಟು ಕಟ್ಟುತ್ತಿದ್ದೇವೆ ಅನ್ನೋದು ಗೊತ್ತಾಗೋದಿಲ್ಲ. ಇದರಿಂದಾಗಿ ನಾವು ಬ್ಯಾಂಕ್‌ಗಳಿಗೆ ತೆಗೆದುಕೊಂಡ ಸಾಲಕ್ಕೆ ಹೆಚ್ಚುವರಿಯಾಗಿ ಎಷ್ಟು ಕಟ್ಟಿದ್ದೇವೆ ಎಂಬುದು ಗ್ರಾಹಕರಿಗೆ ಗೊತ್ತಾಗೋದಿಲ್ಲ. ಈ ಹಿನ್ನೆಲೆಯಲ್ಲಿ ರಿಸರ್ವ್‌ ಬ್ಯಾಂಕ್‌ (Reserve Bank) ಈ ಬಗ್ಗೆ ಸ್ಪಷ್ಟತೆ ಬೇಕು ಎಂದು ಬ್ಯಾಂಕ್‌ಗಳಿಗೆ ಸೂಚನೆ ಕೊಟ್ಟಿದೆ.

ಇದನ್ನೂ ಓದಿ;Parashurama Themepark; ಕಾರ್ಕಳ ಪರಶುರಾಮ ಥೀಮ್‌ ಪಾರ್ಕ್‌ ವಿವಾದ; ಸಿಐಡಿ ತನಿಖೆಗೆ ವಹಿಸಿದ ಸರ್ಕಾರ

ಬಡ್ಡಿ ದರದಲ್ಲೇ ಈ ಶುಲ್ಕಗಳನ್ನೂ ಸೇರಿಸಿ..!

ಬಡ್ಡಿ ದರದಲ್ಲೇ ಈ ಶುಲ್ಕಗಳನ್ನೂ ಸೇರಿಸಿ..!; ಪ್ರೋಸಸಿಂಗ್ ಶುಲ್ಕ (Loan Processing Fee), ಡಾಕ್ಯುಮೆಂಟೇಶನ್ ಶುಲ್ಕ (Documentation Fee) ಮುಂತಾದ ಶುಲ್ಕಗಳನ್ನು ಪ್ರತ್ಯೇಕವಾಗಿ ವಿಧಿಸುವುದರಿಂದ ಗ್ರಾಹಕರಿಗೆ ಇದರ ಸ್ಪಷ್ಟತೆ ಗೊತ್ತಾಗೋದಿಲ್ಲ. ಎಷ್ಟು ಹಣವನ್ನು ಬ್ಯಾಂಕ್‌ಗೆ ಕಟ್ಟುತ್ತಿದ್ದೇವೆ ಅನ್ನೋ ಸರಿಯಾದ ಲೆಕ್ಕ ಗ್ರಾಹಕರಿಗೆ ಸಿಗೋದಿಲ್ಲ. ಹೀಗಾಗಿ ಇದರ ಬಗ್ಗೆ ಸ್ಪಷ್ಟನೆ ಬೇಕು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಎಂಪಿಸಿ ಸಭೆ ಬಳಿಕ ತಿಳಿಸಿದ್ದಾರೆ. ಬ್ಯಾಂಕ್‌ಗಳು ಗ್ರಾಹಕರೊಂದಿಗೆ ಪಾರದರ್ಶಕವಾಗಿರಬೇಕು. ಹೀಗಾಗಿ, ಈ ಶುಲ್ಕಗಳ ಬಗ್ಗೆ ಪಾರದರ್ಶಕತೆ ಪ್ರದರ್ಶಿಸಬೇಕು ಎಂದು ಮಹತ್ವದ ಆದೇಶ ಹೊರಡಿಸಿದ್ದಾರೆ.
ಪ್ರೋಸಸಿಂಗ್ ಶುಲ್ಕ (Loan Processing Fee), ಡಾಕ್ಯುಮೆಂಟೇಶನ್ ಶುಲ್ಕ (Documentation Fee) ಮುಂತಾದ ಶುಲ್ಕಗಳನ್ನು ಪ್ರತ್ಯೇಕವಾಗಿ ಹಾಕಬೇಡಿ. ಅದರ ಬದಲಾಗಿ ಡ್ಡಿದರಕ್ಕೇ ಸೇರಿಸಿದರೆ ಗ್ರಾಹಕರಿಗೆ ವಾಸ್ತವ ಬಡ್ಡಿದರ ಎಷ್ಟು ತಿಳಿಯುತ್ತದೆ. ಆಗ ಸಾಲ ಪಡೆಯಬೇಕೆ, ಬೇಡವೇ ಎಂಬುದನ್ನು ಗ್ರಾಹಕರು ನಿರ್ಧಾರ ಮಾಡುತ್ತಾರೆ. ಇಲ್ಲದೇ ಹೋದರೆ ಅವರಿಗೆ ಶುಲ್ಕಗಳ ಬಗ್ಗೆ ಮಾಹಿತಿ ಸಿಗೋದಿಲ್ಲ. ಇದರಿಂದ ಗ್ರಾಹಕರು ಮೋಸಹೋದಂತೆ ಆಗುತ್ತದೆ. ಅವರಿಗೆ ತಿಳಿಯದೇ ಯಾವುದೇ ಶುಲ್ಕಗಳನ್ನು ವಿಧಿಸಬಾರದು. ಜೊತೆಗೆ ಗ್ರಾಹಕನಿಗೆ ಸ್ಪಷ್ಟತೆ ಇರಬೇಕು. ಹೀಗಾಗಿ ಬಡ್ಡಿಯ ಜೊತೆಗೇ ಎಲ್ಲಾ ಶುಲ್ಕಗಳನ್ನು ಸೇರಿಸಿದರೆ, ಬಡ್ಡಿದರ ಸರಿಯಾಗಿ ಗ್ರಾಹಕರಿಗೆ ಗೊತ್ತಾಗುತ್ತದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಇದನ್ನೂ ಓದಿ;Money Mindset; ನಾವೇ ಸೃಷ್ಟಿಸಿದ ಹಣ ಪಳಗಿಸೋದು ಹೇಗೆ..?

0.50 ರಿಂದ 2.50ವರೆಗೂ ಶುಲ್ಕುಗಳು!

0.50 ರಿಂದ 2.50ವರೆಗೂ ಶುಲ್ಕುಗಳು!; ಬ್ಯಾಂಕ್‌ಗಳು ಸಾಲ ಕೊಟ್ಟಾಗ ಹಲವು ಶುಲ್ಕಗಳನ್ನು ವಿಧಿಸುತ್ತದೆ. 0.50 ರಿಂದ 2.50ವರೆಗೂ ಪ್ರೊಸೆಸಿಂಗ್‌ ಫೀಸ್‌ ವಿಧಿಸುತ್ತದೆ. ಗ್ರಾಹಕರು ಹೇಗಿದ್ದಾರೆ. ಅವರ ಸಿಬಿಲ್‌ ಸ್ಕೋರ್‌ ಏನಿದೆ..? ಗ್ರಾಹಕರು ಈ ಬಗ್ಗೆ ಪ್ರಶ್ನೆ ಮಾಡುತ್ತಾನಾ ಇಲ್ಲವಾ ಎಂದು ನೋಡಿಕೊಂಡು ಒಂದೊಂದು ಬ್ಯಾಂಕ್‌ ಒಂದೊಂದು ರೀತಿ ಶುಲ್ಕಗಳನ್ನು ವಿಧಿಸುತ್ತದೆ. ಗ್ರಾಹಕರು ಬುದ್ಧಿವಂತರಾಗಿದ್ದರೆ ಮ್ಯಾನೇಜರ್‌ ಬಳಿ ಕೂತು ಮಾತನಾಡಿದರೆ, ಈ ಶುಲ್ಕಗಳಲ್ಲಿ ರಿಯಾಯಿತಿ ಕೂಡಾ ಸಿಗುತ್ತದೆ. ಆದರೂ ಕೂಡಾ ಎಷ್ಟೋ ಜನಕ್ಕೆ ಇದರಲ್ಲಿ ಕ್ಲಾರಿಟಿ ಇಲ್ಲ. ಹೀಗಾಗಿ ಆರ್‌ಬಿಐ ಹೇಳಿದಂತೆ ಬ್ಯಾಂಕ್‌ಗಳು ನಡೆದುಕೊಂಡರೆ ಗ್ರಾಹಕರಿಗೆ ಅನುಕೂಲವಾಗುತ್ತದೆ.

ಎಂಪಿಸಿ ಸಭೆಯ ಹೈಲೈಟ್ಸ್ ಏನೇನು..?

ಎಂಪಿಸಿ ಸಭೆಯ ಹೈಲೈಟ್ಸ್ ಏನೇನು..?; ರಿಸರ್ವ್ ಬ್ಯಾಂಕ್​ನ ಮಾನಿಟರಿ ಪಾಲಿಸಿ ಕಮಿಟಿ ಸಭೆ ಬಳಿಕ ಇಂದು ಆರ್‌ಬಿಐ ಗವರ್ನರ್‌ ಸುದ್ದಿಗೋಷ್ಠಿ ನಡೆಸಿದರು. ರೆಪೋ ಸೇರಿದಂತೆ ಪ್ರಮುಖ ದರಗಳು ಯಥಾಸ್ಥಿತಿಯಲ್ಲಿರುತ್ತವೆ. ಒಂದು ವರ್ಷದಿಂದಲೂ ರೆಪೋ ದರ ಶೇ. 6.5ರಲ್ಲೇ ಇದೆ. ರಿವರ್ಸ್ ರೆಪೋ, ಎಂಎಸ್​ಎಫ್, ಎಸ್​ಡಿಎಫ್​ಆರ್ ನಲ್ಲೂ ಕೂಡಾ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಅವರು ಹೇಳಿದರು.

Share Post