EconomyLifestyle

ಯೂಟ್ಯೂಬ್‌ ನೋಡಿ ಶೂ ಲಾಂಡ್ರಿ ಇಟ್ಟಳು; ಲಕ್ಷ ಲಕ್ಷ ಸಂಪಾದಿಸುತ್ತಿರುವ ಯುವತಿ!

ಕೊಚ್ಚಿ; ಚಪ್ಪಲಿ ಹಾಗೂ ಶೂ ಮನುಷ್ಯನ ಜೊತೆ ತಳಕು ಹಾಕಿಕೊಂಡಿವೆ. ಅವಿಲ್ಲದೆ ಮನುಷ್ಯ ಹೊರಗೆ ಕಾಲಿಡಲಾರ. ಆದ್ರೆ ಚಪ್ಪಲಿ, ಶೂಗಳನ್ನು ಮನೆಯ ಹೊರಗೇ ಬಿಡುತ್ತೇವೆ. ಚಪ್ಪಲಿ, ಶೂ ಸ್ವಚ್ಛ ಮಾಡುವವರನ್ನೂ ಸಮಾಜ ಬೇರೆ ರೀತಿಯಲ್ಲೇ ನೋಡುತ್ತೆ. ಆದ್ರೆ ಅದೂ ಒಂದು ಕೆಲಸ.. ಮೋಸ, ಸುಲಿಗೆ ಮಾಡದ ಕೆಲಸ ಯಾವುದೂ ಕೀಳಲ್ಲ ಅನ್ನೋದು ಮನುಷ್ಯ ಅರ್ಥ ಮಾಡಿಕೊಳ್ಳಬೇಕು.. ಹೀಗೆ ಯಾವ ಕೆಲಸವೂ ಕೀಳಲ್ಲ ಎಂದು ಅರ್ಥ ಮಾಡಿಕೊಂಡು ಶೂ ಲಾಂಡ್ರಿ ಶುರು ಮಾಡಿದ ಕೊಚ್ಚಿಯ ಯುವತಿಯೊಬ್ಬರು ಲಕ್ಷ ಲಕ್ಷ ದುಡಿಯುತ್ತಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಇದನ್ನೂ ಓದಿ; ಇಂದು ರಾಜ್ಯಸಭಾ ಚುನಾವಣೆ; ಮೂರೂ ಪಕ್ಷಗಳಿಗೆ ʻಅಡ್ಡʼ ಆತಂಕ!

ಶೂ ಲಾಂಡ್ರಿ ಮಾಡಿ ಕೃಷ್ಣಾ ಸಕ್ಸಸ್‌;

ಶೂ ಲಾಂಡ್ರಿ ಮಾಡಿ ಕೃಷ್ಣಾ ಸಕ್ಸಸ್‌; ಕೇರಳದ ಫೋರ್ಟ್‌ ಕೊಚ್ಚಿ ನಿವಾಸಿಯಾಗಿರುವ 25 ವರ್ಷ ಕೃಷ್ಣಾ ಎಂಬಾಕೆ, ಇಂಟೀರಿಯರ್‌ ಡಿಸೈನಿಂಗ್‌ ನಲ್ಲಿ ಪದವಿ ಪಡೆದಿದ್ದಾರೆ. ಇದರ ಜೊತೆಗೆ ಸಿನಿಮಾಟೋಗ್ರಫಿ, ಫೋಟೋಗ್ರಫಿಯನ್ನೂ ಪ್ರಯತ್ನಿಸಿದ್ದಾಳೆ. ಆದ್ರೆ ಯಾವುದರಲ್ಲೂ ಸಕ್ಸಸ್‌ ಕಂಡಿಲ್ಲ. ಹೀಗಾಗಿ, ಅವರು ಆಯ್ಕೆ ಮಾಡಿಕೊಂಡಿದ್ದು ಶೂ ಲಾಂಡ್ರಿ ಕೆಲಸ.. ಸ್ಮೇಹಿತರೊಬ್ಬರು ಶೂ ಲಾಂಡ್ರಿ ಮಾಡಿದರೆ ವರ್ಕೌಟ್‌ ಆಗುತ್ತೆ ಎಂದು ಐಡಿಯಾ ಕೊಟ್ಟಿದ್ದಾರೆ.. ದುಡಿಯಲು ಒಂದು ಕೆಲಸ ಬೇಕು ಎಂಬಂತಿದ್ದ ಕೃಷ್ಣ, ಶೂ ಲಾಂಡ್ರಿ ಐಡಿಯಾವನ್ನು ಕುತೂಹಲದಿಂದಲೇ ಸ್ವೀಕಾರ ಮಾಡಿದಾರೆ. ಹಿಧ ದಿ ಶೋ ಶೈನಿ ಹೆಸರಿನ ಕಂಪನಿ ಸ್ಥಾಪಿಸಿ, ಶೂ ಲಾಂಡ್ರಿ ಬ್ಯುಸಿನೆಸ್‌ ನಲ್ಲಿ ಯಶಸ್ವಿಯಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಇದನ್ನೂ ಓದಿ; ಲೇಖಕಿ ನಿತಾಶಾ ಕೌಲ್‌ರನ್ನು ಬೆಂಗಳೂರು ವಿಮಾನ ನಿಲ್ದಾಣದ ವಾಪಸ್‌ ಕಳುಹಿಸಿದ್ದೇಕೆ..?

ಯೂಟ್ಯೂಬ್‌ ನೋಡಿ ಶೂ ಕ್ಲೀನಿಂಗ್‌ ಕಲಿತ ಕೃಷ್ಣಾ;

ಯೂಟ್ಯೂಬ್‌ ನೋಡಿ ಶೂ ಕ್ಲೀನಿಂಗ್‌ ಕಲಿತ ಕೃಷ್ಣಾ; ಕೃಷ್ಣಾ ಅವರಿಗೆ ಶೂ ಕ್ಲೀನಿಂಗ್‌ ಬಗ್ಗೆ ಬೇಸಿಕ್‌ ನಾಲೆಡ್ಜ್‌ ಕೂಡಾ ಇರಲಿಲ್ಲ.. ಆದರೂ ಅವರು ಶೂ ಲಾಂಡ್ರಿ ಬ್ಯುಸಿನೆಸ್‌ ಶುರು ಮಾಡಲು ಬಯಸಿದರು.. ಯೂಟ್ಯೂಬ್‌ ನೋಡಿ ಶೂ ಹಾಗೂ ಚಪ್ಪಲಿಗಳನ್ನು ಸ್ವಚ್ಛ ಮಾಡುವುದನ್ನು ಕಲಿತರು.. ಮನೆಯಲ್ಲೇ ಇರುವ ಹಲವು ಚಪ್ಪಲಿ ಹಾಗೂ ಶೂಗಳನ್ನು ಕ್ಲೀನ್‌ ಮಾಡಿ ಎಕ್ಸ್‌ಪರ್ಟ್‌ ಆದರು. ಅನಂತರ ಶೂ ಲಾಂಡ್ರಿ ಶುರು ಮಾಡಿದ್ದಾರೆ.. ಕೆಸರು, ಕೊಳಕಿನಿಂದ ಕೂಡಿದ ಶೂಗಳನ್ನು ಒಂದು ಕಲೆಯೂ ಇಲ್ಲದಂತೆ ನೀಟಾಗಿ ಸ್ವಚ್ಛ ಮಾಡಿಕೊಡೋದು ಇವರ ಕೆಲಸ. ಆ ಕೆಲಸವನ್ನು ಕೃಷ್ಣಾ ಅವರು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಾರೆ. ಹೀಗಾಗಿ ಕೊಚ್ಚಿಯಲ್ಲಿ ಈ ಶೂ ಲಾಂಡ್ರಿ ತುಂಬಾನೇ ಫೇಮಸ್‌ ಆಗಿದೆ.

ಇದನ್ನೂ ಓದಿ; ನಿಂಬೆ ರಸ ಸೇವನೆ ಒಳ್ಳೆಯದೇ..?; ಬೇಸಿಗೆಯಲ್ಲಿ ಹೆಚ್ಚು ನಿಂಬೆ ಸೇವಿಸೀರಿ ಹುಷಾರ್‌!

ತಿಂಗಳಿಗೆ 1.20 ಲಕ್ಷ ರೂಪಾಯಿ ದುಡಿಮೆ;

ತಿಂಗಳಿಗೆ 1.20 ಲಕ್ಷ ರೂಪಾಯಿ ದುಡಿಮೆ; ಕೃಷ್ಣಾ ಅವರು ಕೊಚ್ಚಿಯಲ್ಲಿ ಈಗ ತುಂಬಾನೇ ಫೇಮಸ್‌ ಆಗಿದ್ದಾರೆ.. ಶೂ ಲಾಂಡ್ರಿ ಎಂದರೆ  ಮೂಗು ಮುರಿಯುತ್ತಿದ್ದರೂ, ಕೃಷ್ಣಾ ಅವರ ಸಕ್ಸಸ್‌ ನೋಡಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ.  ಬ್ಯಾಂಕ್‌ನಿಂದ 2 ಲಕ್ಷ ಸಾಲ ಪಡೆದು ಈ ಕೆಲಸ ಶುರು ಮಾಡಿದ್ದು, ಎರಡೇ ತಿಂಗಳಲ್ಲಿ ಆ ಹಣವನ್ನು ದುಡಿಯುವಲ್ಲಿ ಕೃಷ್ಣಾ ಯಶಸ್ವಿಯಾಗಿದ್ದಾರೆ.. ಇವರ ಈ ಕಾರ್ಯ ಇತರರಿಗೂ ಮಾದರಿಯಾಗಿದೆ.. ಶೂ ಕ್ಲೀನಿಂಗ್‌ ಬ್ಯುಸಿನೆಸ್‌ ಅನ್ನೂ ಒಂದು ಉದ್ಯಮವಾಗಿ ಬೆಳಸಬಹುದು ಅನ್ನೋದನ್ನು ಕೃಷ್ಣಾ ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.

ಫ್ರಾಂಚೈಸಿ ಕೇಳುತ್ತಿರುವ ಜನ;

ಫ್ರಾಂಚೈಸಿ ಕೇಳುತ್ತಿರುವ ಜನ; ಕೃಷ್ಣಾ ಅವರು ಶೂ ಕ್ಲೀನಿಂಗ್‌ ಬ್ಯಸಿನೆಸ್‌ ಶುರು ಮಾಡಿದಾಗ ಕೆಲವರು ಲೇವಡಿ ಮಾಡಿದ್ದರು. ಆ ಕೆಲಸ ಮಾಡ್ತೀರಾ ಎಂದು ಮೂದಲಿಸಿದ್ದರು.. ಆದ್ರೆ ಎಲ್ಲರಿಗೂ ಕೃಷ್ಣಾ ಅವರ ಸಕ್ಸಸ್‌ ಉತ್ತರ ಕೊಟ್ಟಿದೆ.. ಅಂದು ಮೂದಲಿಸಿದವರೇ ಕೃಷ್ಣಾ ಅವರ ಬಳಿ ಬಂದು ನಮಗೂ ಫ್ರಾಂಚೈಸಿ ಕೊಡ್ತೀರಾ ಎಂದು ಕೇಳಲು ಶುರು ಮಾಡಿದ್ದಾರೆ.  ಇದೀಗ ಥಿರುವಳ್ಳ, ವೈಪಿನ್​ ಮತ್ತು ಇತರೆ ಜಿಲ್ಲೆಗಳಲ್ಲಿ ಶಾಖೆಗಳನ್ನು ತೆರೆಯಲು ಕೃಷ್ಣಾ ಅವರು ಪ್ಲ್ಯಾನ್​ ಮಾಡಿದ್ದಾರೆ. ನ್ಯೂಜಿಲೆಂಡ್​ ಮತ್ತು ಯುಎಇನಲ್ಲೂ ಫ್ರಾಂಚೈಸಿ ಕೊಡಲು ಮುಂದಾಗಿದ್ದಾರೆ.

ಇದನ್ನೂ ಓದಿ; Breathing Exercises; ಉಸಿರಾಟ ವ್ಯಾಯಾಮದ 7 ಪ್ರಯೋಜನಗಳೇನು..?

ನಟ, ನಟಿಯರೇ ಇವರಿಗೆ ಹೆಚ್ಚಿನ ಗ್ರಾಹಕರು;

ನಟ, ನಟಿಯರೇ ಇವರಿಗೆ ಹೆಚ್ಚಿನ ಗ್ರಾಹಕರು; ಕೃಷ್ಣಾ ಅವರ ಅಂಗಡಿಗೆ ದೊಡ್ಡ ದೊಡ್ಡ ಸೆಲಬ್ರಿಟಿಗಳೇ ಗ್ರಾಹಕರು.. ಸಿನಿಮಾ ನಟ, ನಟಿಯರು ಹೆಚ್ಚಾಗಿ ಇವರ ಅಂಗಡಿಗೆ ಶೂಗಳನ್ನು ಕಳುಹಿಸುತ್ತಾರೆ. ನಟಿಯರಾದ ನಜ್ರಿಯಾ ಮತ್ತು ಮರೀನಾ ಮೈಕೆಲ್‌ ಮುಂತಾದವರು ಕೃಷ್ಣ ಅವರ ಶೂ ಲಾಂಡ್ರಿಲ್ಲಿ ಸಾಮಾನ್ಯ ಗ್ರಾಹಕರಾಗಿದ್ದಾರೆ. ಶೂಗಳಲ್ಲದೆ ಈಗ, ಕ್ರಾಕ್ಸ್​, ಲೂಫರ್ಸ್​, ಸ್ಲೈಡ್ಸ್​, ಐಷಾರಾಮಿ ಬ್ಯಾಗ್ಸ್​ ಮತ್ತು ಸೂಟ್‌ಕೇಸ್‌ಗಳನ್ನು ಸಹ ಸ್ವಚ್ಛಗೊಳಿಸಲಾಗುತ್ತಿದೆ.

Share Post