6 Habits of Successful People; ಯಶಸ್ವಿ ವ್ಯಕ್ತಿಗಳ ಆರು ಅಭ್ಯಾಸಗಳು; ಇವೇ ಯಶಸ್ಸಿನ ಸೂತ್ರಗಳು!
ಬೆಂಗಳೂರು; ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ವಿಯಾಗಬೇಕು, ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂದು ಆಸೆಪಡುತ್ತಾರೆ.. ಅದಕ್ಕಾಗಿ ಶತಪ್ರಯತ್ನಗಳನ್ನೂ ಮಾಡುತ್ತಿರುತ್ತಾರೆ.. ಆದ್ರೆ ಯಶಸ್ಸು ಕೆಲವರಿಗೆ ಮಾತ್ರ ಸಿಗುತ್ತದೆ.. ಬಹುತೇಕರು ಎಷ್ಟೇ ಪ್ರಯತ್ನಪಟ್ಟರೂ ಯಶಸ್ವಿಯಾಗುವುದಿಲ್ಲ.. ಎಲ್ಲದರಲ್ಲೂ ನಿರಾಸೆಯೇ ಅನುಭವಿಸುತ್ತಿರುತ್ತಾರೆ.. ಹಾಗಾದರೆ ಸೋತವರು ಮಾಡುತ್ತಿರುವ ತಪ್ಪುಗಳೇನು..?, ಯಶಸ್ವಿಯಾಗಿರುವವರು ಮಾಡುವ ಸರಿ ಏನು..? ನೋಡೋಣ ಬನ್ನಿ..
ಇದನ್ನೂ ಓದಿ; Meat Rice; ಇದು ಬರೀ ಅಕ್ಕಿ ಅಲ್ಲ.. ಮಾಂಸದ ಅಕ್ಕಿ..!
ಗುರಿ ಒಂದಿದ್ದರೆ ಸಾಲದು, ತಲುಪೋ ದಾರಿ ಗೊತ್ತಿರಬೇಕು!;
ಗುರಿ ಒಂದಿದ್ದರೆ ಸಾಲದು, ತಲುಪೋ ದಾರಿ ಗೊತ್ತಿರಬೇಕು!; ಎಲ್ಲರಿಗೂ ಗುರಿ ಇರುತ್ತದೆ.. ಆದ್ರೆ ಆ ಗುರಿ ತಲುಪೋ ವಿಧಾನ ಗೊತ್ತಿರುವುದಿಲ್ಲ.. ಈಗ, ನಾವು ಯಾವುದೋ ಒಂದು ಗೊತ್ತಿಲ್ಲದ ಸ್ಥಳಕ್ಕೆ ಹೋಗಬೇಕೆಂದಿದ್ದೇವೆ.. ಆ ಸ್ಥಳ ತಲುಪೋದಕ್ಕೆ ಸಾಕಷ್ಟು ಸುಲಭ ವಿಧಾನಗಳಿವೆ.. ಈಗ ತಂತ್ರಜ್ಞಾನ ಮುಂದುವರೆದಿರುವುದರಿಂದ ನಾವು ತಲುಪಬೇಕಾದ ಸ್ಥಳದ ಗೂಗಲ್ ಲೊಕೇಷನ್ ತರಿಸಿಕೊಂಡರೆ ಸುಲಭವಾಗಿ ಅಲ್ಲಿಗೇ ಹೋಗಬಹುದು. ಇಲ್ಲವೇ ಆ ಏರಿಯಾಗೆ ಹೋಗಿ, ಅಡ್ರೆಸ್ ಹಿಡಿದು ಸ್ಥಳೀಯರನ್ನು ಕೇಳಿದರೆ ಮಾರ್ಗ ತೋರಿಸುತ್ತಾರೆ. ಇಲ್ಲವೇ ನಾವು ಇರುವ ಸ್ಥಳವನ್ನು ಹೇಳಿ, ಅವರನ್ನೇ ಕರೆಸಿಕೊಂಡು ತಲುಪಬೇಕಾದಲ್ಲಿಗೆ ಹೋದರೆ ಆಗುತ್ತದೆ.. ಹೀಗೆ ಗುರಿ ತಲುಪೋದಕ್ಕೆ ಹಲವಾರು ಸುಲಭ ದಾರಿಗಳಿರುತ್ತವೆ.. ಆದ್ರೆ ಹೆಚ್ಚಿನ ಜನರು ಇಟ್ಟುಕೊಂಡಿರುತ್ತಾರೆ… ಆದ್ರೆ ಅದನ್ನು ತಲುಪೋದಕ್ಕೆ ದಾರಿಗಳನ್ನು ಕಂಡುಕೊಳ್ಳುವುದಿಲ್ಲ.. ಬದಲಾಗಿ ಸಿಕ್ಕ ಸಿಕ್ಕ ದಾರಿಯಲ್ಲೆಲ್ಲಾ ಓಡಾಡೋದಕ್ಕೆ ಶುರು ಮಾಡುತ್ತಾರೆ.. ನೀವು ಹೋಗಬೇಕಾದ ಜಾಗ ಉತ್ತರದಲ್ಲಿದ್ದು, ನೀವು ದಕ್ಷಿಣದಲ್ಲಿ ಹುಡುಕಾಡಿದರೆ ಅದು ಯಾವತ್ತಿಗೂ ಸಿಗೋದಿಲ್ಲ.. ಅದೇ ರೀತಿ ಗೆಲುವು ಕೂಡಾ..
ಇದನ್ನೂ ಓದಿ; NASA; ಭೂಮಿಯಂತಹ ಮತ್ತೊಂದು ಗ್ರಹ ಪತ್ತೆ ಮಾಡಿದ ನಾಸಾ; ಸೂಪರ್ ಅರ್ಥ್ ಎಷ್ಟು ದೂರ?
ನೀವು ಯಶಸ್ವಿ ಜನರ ಆರು ಅಭ್ಯಾಸಗಳನ್ನು ತಿಳಿಯಿರಿ;
ನೀವು ಯಶಸ್ವಿ ಜನರ ಆರು ಅಭ್ಯಾಸಗಳನ್ನು ತಿಳಿಯಿರಿ; ನಾವು ಸಾಧಿಸಲು ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ. ಗುರಿ ಮತ್ತು ಯೋಜನೆಗಳನ್ನು ಹೊಂದಲು ಸಾಕಾಗುವುದಿಲ್ಲ, ಅವುಗಳನ್ನು ಸರಿಯಾಗಿ ಕಾರ್ಯಗತಗೊಳಿಸಿದರೆ ಮಾತ್ರ, ಬಯಸಿದ್ದನ್ನು ಸಾಧಿಸಬಹುದು. ಜೀವನದಲ್ಲಿ ಕೆಲವು ಯಶಸ್ವಿ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ 6 ಅಭ್ಯಾಸಗಳ ಬಗ್ಗೆ ತಿಳಿಯೋಣ.
ಜೀವನದಲ್ಲಿ ಯಶಸ್ವಿಯಾಗಲು ಕೆಲವು ಉತ್ತಮ ಅಭ್ಯಾಸಗಳನ್ನು ಹೊಂದಿರಬೇಕು. ಉತ್ತಮ ಅಭ್ಯಾಸಗಳೊಂದಿಗೆ ಜೀವನದಲ್ಲಿ ಯಶಸ್ವಿಯಾಗುವವರಿಗೆ ಕೆಲವು ಸಾಮಾನ್ಯ ವಿಷಯಗಳಿವೆ. ಅವುಗಳಲ್ಲಿ ಮೊದಲನೆಯದು ಯೋಜನೆ. ನೀವು ಜೀವನದಲ್ಲಿ ಏನನ್ನು ಸಾಧಿಸಲು ಬಯಸುತ್ತೀರೋ, ನಿಮಗೆ ಖಂಡಿತವಾಗಿಯೂ ಯೋಜನೆ ಬೇಕು. ಅದಕ್ಕೆ ಆದ್ಯತೆ ನೀಡಬೇಕು. ಎರಡನೆಯದು ವಿಶ್ರಾಂತಿ. ಕೆಲವರು ಗುರಿಗಳನ್ನು ಹೊಂದಿಸುತ್ತಾರೆ. ಆದರೆ ಅವುಗಳಿಂದ ಉಂಟಾಗುವ ಒತ್ತಡದಿಂದ ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಿಕೊಳ್ಳುತ್ತಾರೆ. ಹೀಗಾಗಿ ಎಷ್ಟೇ ಕೆಲಸದ ಒತ್ತಡವಿದ್ದರೂ ಕಾಲಕಾಲಕ್ಕೆ ವಿರಾಮವನ್ನು ತೆಗೆದುಕೊಳ್ಳಬೇಕು. ಆಗ ನಿಮ್ಮ ಉತ್ಸಾಹ ಡಬಲ್ ಆಗುತ್ತದೆ. ಇದರಿಂದ ಮಾತ್ರ ಗುರಿಯನ್ನು ಮುಟ್ಟೋದಕ್ಕೆ ಸಾಧ್ಯವಾಗುತ್ತದೆ. ಮೂರನೆಯದು ಯೋಜನೆಗಳನ್ನು ಕಾರ್ಯಗತಗೊಳಿಸುವುದು. ಕೇವಲ ಗುರಿ ಮತ್ತು ಯೋಜನೆಗಳನ್ನು ಹೊಂದಿದ್ದರೆ ಸಾಕಾಗುವುದಿಲ್ಲ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅಂದರೆ ನಾವು ಹಾಕಿಕೊಂಡಿರುವ ಯೋಜನೆಯ ಆಧಾರದ ಮೇಲೆ ಕೆಲಸ ಮಾಡಬೇಕಾಗುತ್ತದೆ.
ಇದನ್ನೂ ಓದಿ; Qatar; ಮರಣದಂಡನೆಯನ್ನು ಎದುರಿಸಿದ 8 ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳ ಬಿಡುಗಡೆ
ಯೋಜನೆ, ವಿಶ್ರಾಂತಿ ಅಷ್ಟೇ ಸಾಕಾ..?
ಯೋಜನೆ, ವಿಶ್ರಾಂತಿ ಅಷ್ಟೇ ಸಾಕಾ..?; ನಾಲ್ಕನೆಯದು ವೈಯಕ್ತಿಕ ಆರೈಕೆ. ನಾವು ಎಷ್ಟೇ ಗುರಿಗಳನ್ನು ಹಾಕಿಕೊಂಡರೂ ಅವುಗಳನ್ನು ಸಾಧಿಸಲು ವೈಯಕ್ತಿಕ ಗಮನ ಅಗತ್ಯ. ಆರೋಗ್ಯ ಮತ್ತು ವ್ಯಾಯಾಮಕ್ಕೆ ಗಮನ ಕೊಡುವುದರಿಂದ ಸ್ವಯಂ ಕಾಳಜಿಗೆ ಪ್ರಾಮುಖ್ಯತೆ ನೀಡಬಹುದು. ಐದನೆಯದು ಧನಾತ್ಮಕ ವರ್ತನೆ .. ಕೆಲವರಿಗೆ ಕಡಿಮೆ ಧನಾತ್ಮಕ ವರ್ತನೆ ಇರುತ್ತದೆ. ಅವರು ತಮ್ಮ ಗುರಿಗಳನ್ನು ನಂಬುವುದಿಲ್ಲ. ಇಲ್ಲವಾದರೆ ಅಂದುಕೊಂಡಿದ್ದನ್ನು ಸಾಧಿಸುವೆ ಎಂಬ ನಂಬಿಕೆಯೊಂದಿಗೆ ಮುನ್ನಡೆದರೆ ನಿಮ್ಮ ಗುರಿ ಸಾಧನೆಗೆ ತುಂಬಾ ಸಹಕಾರಿಯಾಗುತ್ತದೆ. ಆರನೆಯದು ನೆಟ್‌ವರ್ಕಿಂಗ್.. ಇದು ಯಶಸ್ಸನ್ನು ಸಾಧಿಸಲು ಬಹಳಷ್ಟು ಸಹಾಯ ಮಾಡುತ್ತದೆ. ನಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ನಾವು ಹೊಸ ವಿಷಯಗಳನ್ನು ಕಲಿಯಬಹುದು. ಕೆಲವರ ಆಲೋಚನೆಗಳು ನಮ್ಮ ಯಶಸ್ಸಿಗೆ ಬಹಳಷ್ಟು ಕೊಡುಗೆ ನೀಡುತ್ತವೆ. ಈ ಆರು ಅಭ್ಯಾಸಗಳು ಅತ್ಯಂತ ಯಶಸ್ವಿ ಜನರಲ್ಲಿ ಕಂಡುಬರುತ್ತವೆ.