BengaluruCinemaLifestyleNational

ತೆಲುಗಿನ ಏಳು ಹೀರೋಗಳ ಬಳಿ ಇವೆ ಸ್ವಂತ ವಿಮಾನಗಳು; ಯಾರ್ಯಾರು ಅವರು..?

ಹೈದರಾಬಾದ್‌; ಭಾರಿ ಬಜೆಟ್‌ ಸಿನಿಮಾಗಳಲ್ಲಿ ನಿರ್ಮಿಸುವ ಚಿತ್ರರಂಗಗಳಲ್ಲಿ ತೆಲುಗು ಚಿತ್ರರಂಗ ಕೂಡಾ ಒಂದು. ತೆಲುಗು ನಟರು ಭಾರಿ ಮೊತ್ತದ ಸಂಭಾವನೆ ಕೂಡಾ ಪಡೆಯುತ್ತಾರೆ. ಅವರಲ್ಲಿ ಕೆಲವರು ವೈಭವದ ಜೀವನ ನಡೆಸುತ್ತಿದ್ದಾರೆ. ಹಲವಾರು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ತೆಲುಗಿನ ಏಳು ನಟರು ಸ್ವಂತ ವಿಮಾನಗಳನ್ನು ಹೊಂದಿದ್ದಾರೆ. ಕುಟುಂಬ ಸಮೇತ ಎಲ್ಲಾದರೂ ಹೋಗಬೇಕು ಎಂದರೆ ಅವರು ಇದೇ ವಿಮಾನಗಳ ಮೂಲಕ ಪ್ರಯಾಣ ಮಾಡುತ್ತಾರೆ.

ಯಾರ ಬಳಿ ಸ್ವಂತ ವಿಮಾನಗಳಿಗೆ ನೋಡೋಣ ಬನ್ನಿ…
ಮೆಗಾಸ್ಟಾರ್‌ ಚಿರಂಜೀವಿ
ಮೆಗಾಸ್ಟಾರ್​ ಎಂದೇ ಖ್ಯಾತಿ ಗಳಿಸಿರುವ ಖ್ಯಾತ ನಟ ಚಿರಂಜೀವಿ, 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಪ್ರಜಾರಾಜ್ಯಂ ಎಂಬ ರಾಜಕೀಯ ಪಾರ್ಟಿ ಕೂಡಾ ಕಟ್ಟಿದ್ದರು. ಕೇಂದ್ರದಲ್ಲಿ ಸಚಿವರೂ ಆಗಿದ್ದವರು. ಸದ್ಯ ಚಿರಂಜೀವಿ ಚಿತ್ರರಂಗದಲ್ಲೇ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಇವರ ಬಳಿ ಸ್ವಂತ ವಿಮಾನವಿದೆ. ಇವರ ಸಿನಿಮಾ ಪ್ರಚಾರಕ್ಕೆ ಹಾಗೂ ಕುಟುಂಬದ ಪ್ರವಾಸಕ್ಕೆ ಇದೇ ವಿಮಾನವನ್ನು ಬಳಸುತ್ತಾರೆ.

ಪವನ್​ ಕಲ್ಯಾಣ್​
ಚಿರಂಜೀವಿ ಅವರ ಕಿರಿಯ ಸಹೋದರ ಪವನ್​ ಕಲ್ಯಾಣ್ ಕೂಡಾ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಜೊತೆಗೆ ಇವರು ರಾಜಕಾರಣಿಯಾಗಿಯೂ ಮುಂದುವರೆದಿದ್ದಾರೆ. ಜನಸೇನಾ ಎಂಬ ಪಾರ್ಟಿ ಕಟ್ಟಿದ್ದಾರೆ. ಇವರೂ ಕೂಡಾ ಖಾಸಗಿ ವಿಮಾನ ಹೊಂದಿದ್ದು, ರಾಜಕೀಯ ಚಟುವಟಿಕೆಗಳಿಗೆ ಹಾಗೂ ಇತರೆ ಪ್ರವಾಸಗಳಿಗೆ ಸ್ವಂತ ವಿಮಾನವನ್ನು ಬಳಸಿಕೊಳ್ಳಲಿದ್ದಾರೆ.

ರಾಮ್​ ಚರಣ್​ ತೇಜ್‌
ರಾಮ್​ ಚರಣ್ ತೇಜ್‌ ಕೂಡಾ ಚಿತ್ರರಂಗದಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ. ಆರ್‌ಆರ್‌ಆರ್‌ ಚಿತ್ರದಲ್ಲಿ ನಟಿಸಿರುವ ರಾಮ್‌ ಚರಣ್‌ ತೇಜ್‌ ಅವರು ಮೆಗಾಸ್ಟಾರ್‌ ಚಿರಂಜೀವಿ ಅವರ ಏಕೈಕ ಪುತ್ರ. ಇವರೂ ಕೂಡಾ ಒಂದು ಖಾಸಗಿ ಜೆಟ್‌ ಹೊಂದಿದ್ದಾರೆ. ಪತ್ನಿ ಉಪಾಸನಾ ಕೊನಿಡೆಲಾ ಜತೆ ಅವರು ಸಾಕಷ್ಟು ಬಾರಿ ಈ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ.

ಮಹೇಶ್​ ಬಾಬು
ಸೂಪರ್‌ ಸ್ಟಾರ್‌ ಕೃಷ್ಣ ಅವರ ಪುತ್ರ ಮಹೇಶ್​ ಬಾಬು ಅವರಿಗೂ ಟಾಲಿವುಡ್‌ನಲ್ಲಿ ದೊಡ್ಡ ಹೆಸರಿದೆ. ಇವರು ಯಾವಾಗಲೂ ಸಿನಿಮಾದಲ್ಲಿ ಬ್ಯುಸಿ ಇದ್ದರೂ, ಬಿಡುವಿನ ವೇಳೆಯಲ್ಲಿ ಕುಟುಂಬದ ಜೊತೆ ಹೆಚ್ಚು ಕಾಲ ಕಳೆಯೋಕೆ ಇಷ್ಟಪಡುತ್ತಾರೆ. ಇವರೂ ಕೂಡಾ ಸ್ವಂತ ವಿಮಾನ ಹೊಂದಿದ್ದು, ವಿದೇಶ ಪ್ರಯಾಣಗಳಿಗೆ ಇದೇ ವಿಮಾನ ಬಳಕೆ ಮಾಡುತ್ತಾರೆ.

ಅಕ್ಕಿನೇನಿ ನಾಗಾರ್ಜುನ
ಅಕ್ಕಿನೇನಿ ನಾಗಾರ್ಜುನ ಕೂಡಾ ಟಾಲಿವುಡ್​ನ ದೊಡ್ಡ ಸ್ಟಾರ್ ನಟರಲ್ಲಿ ಒಬ್ಬರು​. ನಾಗೇಶ್ವರರಾವ್‌ ಅವರ ಪುತ್ರ. ಇವರೂ ಕೂಡಾ ಸ್ವಂತ ವಿಮಾನ ಹೊಂದಿದ್ದು, ಇವರು ಯಾವಾಗಲೂ ಪ್ರವಾಸಕ್ಕೆ ಇದೇ ವಿಮಾನ ಬಳಕೆ ಮಾಡುತ್ತಾರೆ.

ಅಲ್ಲು ಅರ್ಜುನ್​
ಸ್ಟೈಲಿಶ್​ ಸ್ಟಾರ್ ಎಂದೇ ಖ್ಯಾತರಾಗಿರುವ​ ಅಲ್ಲು ಅರ್ಜುನ್​ ಕೂಡಾ ಒಂದು ಪ್ರೈವೇಟ್​ ಜೆಟ್​ ಹೊಂದಿದ್ದಾರೆ. ಅಲ್ಲು ಸ್ನೇಹಾ ರೆಡ್ಡಿಯವರನ್ನು ಮದುವೆ ಆದ ನಂತರದಲ್ಲಿ ಪ್ರೈವೇಟ್​ ಜೆಟ್​ಅನ್ನು ಅಲ್ಲು ಖರೀದಿ ಮಾಡಿದ್ದಾರೆ. ‘ರೇಸ್​ ಗುರ್ರಮ್​’‌, ಪುಷ್ಪ ಸಿನಿಮಾ ಪ್ರಮೋಷನ್‌ಗೆ ಇದೇ ವಿಮಾನವನ್ನು ಅವರು ಬಳಸಿದ್ದರು.

ಜ್ಯೂ.ಎನ್​ಟಿಆರ್
ಜ್ಯೂ.ಎನ್​ಟಿಆರ್​ ಬಳಿ ಬರೋಬ್ಬರಿ 80 ಕೋಟಿ ರೂಪಾಯಿ ಬೆಲೆಬಾಳುವ ವಿಮಾನ ಇದೆ. ಹೈದರಾಬಾದ್​ನ ಶಮ್ಶಾಬಾದ್​ ವಿಮಾನ ನಿಲ್ದಾಣದಲ್ಲಿ ಪಾರ್ಕ್​ ಮಾಡಲಾಗಿದ್ದು, ಎಲ್ಲೇ ಹೋಗಬೇಕೆಂದರೂ ಅವರು ಇದನ್ನೇ ಬಳಸುತ್ತಾರೆ.

Share Post