HealthLifestyle

ಕೋತಿಗಳಂತೆ ನಡೆಯುತ್ತಾರೆ ಈ ಜನ; ಪ್ರಪಂಚದಲ್ಲೇ ವಿಚಿತ್ರ ಕುಟುಂಬವಿದು!

ಮಂಗನಿಂದ ಮಾನವ ಎಂಬ ಮಾತಿದೆ.. ಅಂದ್ರೆ ಮನುಷ್ಯನ ಮೂಲ ಮಂಗ ಅನ್ನೋದು.. ಮಂಗನಿಂದ ಮನುಷ್ಯನಾಗಿ ಬದಲಾದ ಎಂದು ಡಾರ್ವಿನ್‌ ಸಿದ್ಧಾಂತ ಹೇಳುತ್ತದೆ.. ಶತಮಾನಗಳ ಹಿಂದೆ ಮನುಷ್ಯ ಮಂಗನಂತೆ ಇದ್ದ.. ಬದಲಾಗುತ್ತಾ ಮಾನವ ದೇಹದ ರಚನೆ, ಜೀವನಶೈಲಿ, ಆಹಾರ ಸೇರಿ ಇತರೆ ಅಭ್ಯಾಸಗಳು ಎಲ್ಲವೂ ಬದಲಾಗುತ್ತಾ ಬಂದಿವೆ.. ಆದ್ರೆ ವಿಚಿತ್ರ ಅಂದ್ರೆ, ಇಲ್ಲೊಂದು ಕುಟುಂಬ ಈಗಲೂ ಮಂಗಗಳಂತೆ ಬದುಕುತ್ತಿದೆ.. ನಡೆಯಲು ಎರಡು ಕಾಲು, ಎರಡು ಕೈಗಳನ್ನು ಬಳಸುತ್ತಿದೆ.

ಇದನ್ನೂ ಓದಿ; ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಿದ ಯದುವೀರ್‌; ಅವರ ಆಸ್ತಿ ಎಷ್ಟಿದೆ ಗೊತ್ತಾ..?

ಇಡೀ ಕುಟುಂಬ ಮಂಗಗಳ ರೀತಿ ವರ್ತನೆ;

ಹೌದು, ಟರ್ಕಿಯಲ್ಲಿ ಕುಟುಂಬವೊಂದಿದೆ.. ಈ ಕುಟುಂಬದ ಸದಸ್ಯರು ಈಗಲೂ ಎರಡು ಕಾಲು, ಎರಡು ಕೈಗಳ ಮೂಲಕ ನಡೆಯುತ್ತಾರೆ.. ಅಂದರೆ ಮಂಗಗಳ ರೀತಿಯಲ್ಲೇ ವರ್ತನೆ ಮಾಡುತ್ತಾರೆ.. ಬೆನ್ನು ಬಾಗಿಸಿ ನೆಲಕ್ಕೆ ಕೈಗಳನ್ನು ಕೋತಿಗಳಂತೆ ಇವರು ನಡೆಯುತ್ತಾರೆ.. ಇವರು ಯಾಕೆ ಹೀಗೆ ಮಾಡುತ್ತಾರೆ ಅನ್ನೋದೇ ಗೊತ್ತಿಲ್ಲ.. ಇದೊಂದು ರೀತಿಯಲ್ಲಿ ವಿಚಿತ್ರ ವರ್ತನೆಯೇ ಆಗಿದೆ.. ಆದ್ರೆ ಇವರು ಹೀಗೆ ವರ್ತಿಸುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲಾಗದೇ ವಿಜ್ಞಾನಿಗಳು ಕೂಡಾ ತಲೆ ಕೆಡಿಸಿಕೊಂಡಿದ್ದಾರೆ..

ಇದನ್ನೂ ಓದಿ; ಅಲ್ಲಿ ಆಪರೇಷನ್‌ ಹಸ್ತ.. ಇಲ್ಲಿ ಆಪರೇಷನ್‌ ಜೆಡಿಎಸ್‌; ಯಾರು ಯಾವ ಪಕ್ಷಕ್ಕೆ ಹೋದರು..?

ಉಲಾನ್ ಕುಟುಂಬದ ಬಗ್ಗೆ ಸಾಕ್ಷ್ಯಚಿತ್ರ;

ಮನುಷ್ಯ ಮೊದಲು ನಾಲ್ಕು ಕಾಲುಗಳ ಮೇಲೆ ನಡೆಯುತ್ತಿದ್ದ ಅನ್ನೋದನ್ನು ನಾವು ಇತಿಹಾಸದಿಂದ ತಿಳಿಯುತ್ತೇವೆ.. ಮನುಷ್ಯನ ಮೂಲ ಕೋತಿ.. ಮೊದಲು ಮನುಷ್ಯ ಕೂಡಾ ಕೋತಿಯಂತೆ ಇದ್ದ.. ಕೋತಿಯಂತೆ ವರ್ತನೆ ಮಾಡುತ್ತಿದ್ದ ಅನ್ನೋದು ನಮಗೆ ಗೊತ್ತಿದೆ.. ಆದ್ರೆ, ಸಾವಿರಾರು ವರ್ಷಗಳ ಹಿಂದೆಯೇ ಮನುಷ್ಯ ಬದಲಾಗಿ ಎರಡು ಕಾಲಿನ ಮೇಲೆ ನಡೆಯೋದು, ಎಲ್ಲಾ ರೀತಿಯಲ್ಲಿ ಬದಲಾವಣೆ ಹೊಂದಿದ್ದಾನೆ.. ಕಾಲಕಾಲಕ್ಕೆ ಮನುಷ್ಯ ಅಪ್‌ಡೇಟ್‌ ಆಗುತ್ತಾ ಬರುತ್ತಿದ್ದಾರೆ.. ಆದ್ರೆ ಇಂತಹ ಸಂದರ್ಭದಲ್ಲೂ 2 ಕೈ ಮತ್ತು 2 ಕಾಲುಗಳೊಂದಿಗೆ ನಡೆಯುವ ಟರ್ಕಿಯ ಉಲಾಸ್ ಕುಟುಂಬ ಎಲ್ಲರ ಅಚ್ಚರಿಗೆ ಕಾರಣವಾಗಿದೆ.. ಈ ಹಿನ್ನೆಲೆಯಲ್ಲಿ ಈ ಕುಟುಂಬದ ಬಗ್ಗೆ “ದಿ ಫ್ಯಾಮಿಲಿ ದಟ್ ವಾಕ್ಸ್ ಆನ್ ಆಲ್ ಫೋರ್ಸಸ್” ಎಂಬ ಈ ಸಾಕ್ಷ್ಯಚಿತ್ರ ತಯಾರಿಸಲಾಗಿದೆ.. ಇದರಲ್ಲಿ ಉಲಾನ್ ಕುಟುಂಬದ ಜೀವನಶೈಲಿಯನ್ನು ದಾಖಲಿಸಲಾಗಿದೆ..

ಇದನ್ನೂ ಓದಿ; ನೀರಲ್ಲಿ ಬಿದ್ದ ಮೊಬೈಲ್‌ನ್ನು ಅಕ್ಕಿಯಲ್ಲಿ ಮುಚ್ಚಿಟ್ಟರೆ ನಿಜವಾಗಲೂ ಸರಿಹೋಗುತ್ತಾ..?

6 ಮಕ್ಕಳಿಗೆ ಹುಟ್ಟಿನಿಂದಲೇ ಇದೇ ಅಭ್ಯಾಸ;

ಟರ್ಕಿಯ ಉಲಾನ್ ಕುಟುಂಬದಲ್ಲಿ 18 ಮಕ್ಕಳಿದ್ದಾರೆ.. ಇದರಲ್ಲಿ 6 ಮಕ್ಕಳಿಗೆ ಹುಟ್ಟಿನಿಂದಲೇ ಈ ಅಭ್ಯಾಸ ಬಂದಿದೆಯಂತೆ.. ಉಳಿದವರು ಬೆಳೆಯುತ್ತಾ ಬೆಳೆಯುತ್ತಾ ನಾಲ್ಕು ಕಾಲಿನ ಮೇಲೆ ನಡೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ.. ಮನುಷ್ಯ ಎರಡು ಕಾಲಿನ ಮೇಲೆ ನಡೆಯಲು ಹಾಗೂ ನಿಲ್ಲಲು ಸಾಕಷ್ಟು ಸಮರ್ಥನಿದ್ದಾರೆ… ಹೀಗಿದ್ದರೂ ಕೂಡಾ ಈ ಕುಟುಂಬದವರು ನಡೆಯಲು ಕೈಗಳನ್ನೂ ಬಳಸುತ್ತಿರುವುದು ಅಚ್ಚರಿ ಮೂಡಿಸಿದೆ ಅಂತಾರೆ  ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ವಿಕಸನೀಯ ಮನಶ್ಶಾಸ್ತ್ರಜ್ಞ ಪ್ರೊಫೆಸರ್ ನಿಕೋಲಸ್ ಹಂಫ್ರೆ..

ಇದನ್ನೂ ಓದಿ; ಕಣ್ಣು ಮಂಜಾಗುತ್ತಿದೆಯಾ..?; ಹಾಗಾದರೆ ಈ ಟ್ರಿಕ್ಸ್‌ ಬಳಸಿ, ಕಣ್ಣುಗಳನ್ನು ಕಾಪಾಡಿ!

ನೇರವಾಗಿ ನಿಲ್ಲುವುದಕ್ಕೆ ಇವರಿಗೆ ಆಗುವುದೇ ಇಲ್ಲ;

ಈ ಉಲಾನ್‌ ಕುಟುಂಬದವರಿಗೆ ನೇರವಾಗಿ ನಿಲ್ಲುವುದಕ್ಕೆ ಆಗುವುದಿಲ್ಲ.. ಅವರು ನೆಲದ ಮೇಲೆ ನಡೆಯುವುದಕ್ಕೆ ಕೈ ಹಾಗೂ ಕಾಲುಗಳೆರಡನ್ನೂ ಬಳಸುತ್ತಾರೆ.. ಹೀಗೆ ನಡೆಯುವ ಇವರ ಮೆದುಳಲ್ಲಿ ಸೆರೆಬೆಲಮ್‌ ಅತ್ಯಂತ ಚಿಕ್ಕದಾಗಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ.. ಈ ಗಾತ್ರದ ಸೆರೆಬೆಲ್ಲಮ್ ಹೊಂದಿರುವ ಎಲ್ಲಾ ಜನರು ಒಂದೇ ರೀತಿಯ ನಡವಳಿಕೆಯನ್ನು ಹೊಂದಿರುವುದಿಲ್ಲ.. ಆದ್ರೆ ಈ ಕುಟುಂಬದವರು ಒಂದೇ ರೀತಿ ನಡೆಯುತ್ತಾರೆ ಇದು ನಮಗೆ ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ತಜ್ಞರು..

ಅಲ್ಲದೆ, ಲಿವರ್‌ಪೂಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ, ಚತುರ್ಭುಜಗಳಾಗಿ ನಡೆಯುವ ಜನರು ಸಾಮಾನ್ಯ ಮನುಷ್ಯರಿಗಿಂತ ಕೋತಿಗಳಿಗೆ ಹೋಲುವ ಅಸ್ಥಿಪಂಜರದ ಗುಣಲಕ್ಷಣಗಳನ್ನು ಹೊಂದಿದ್ದಾರೆಂದು ಹೇಳಲಾಗುತ್ತದೆ.

ಇದನ್ನೂ ಓದಿ; ಈ ತರಕಾರಿ ನೀರು ಕುಡಿದರೆ ಸ್ಲಿಮ್ ಆಗಬಹುದು!

 

Share Post