HealthLifestyle

ಇದು ಬಡವರ ಸಂಜೀವಿನಿ; ತಪ್ಪದೇ ತಂದು ಕುಡಿಯಿರಿ..!

ಮನುಷ್ಯ ಸಂಪಾದನೆಯ ಹಿಂದೆ ಬಿದ್ದಿದ್ದಾನೆ.. ನಾವು ಹೇಳುತ್ತಿರುವುದು ಹಣದ ಸಂಪಾದನೆ ಬಗ್ಗೆ.. ಹೀಗಾಗಿಯೇ ಆತ ಆರೋಗ್ಯ ಸಂಪಾದನೆಯನ್ನೇ ಮರೆತುಬಿಟ್ಟಿದ್ದಾರೆ.. ಆರೋಗ್ಯ ಸಂಪಾದನೆ ಕೂಡಾ ಒಂದು ಸಂಪತ್ತು ಎಂದು ತಿಳಿಯುವ ವೇಳೆಗೆ ಆತ ಹಣ, ಆಸ್ತಿ ಬಿಟ್ಟು ಬೇರೆಲ್ಲವನ್ನೂ ಕಳೆದುಕೊಂಡಿರುತ್ತಾರೆ.. ಅನುಭವಿಸಲು ಎಲ್ಲಾ ಇರುತ್ತದಾದರೂ, ಅನಾರೋಗ್ಯದ ಕಾರಣದಿಂದ ಏನನ್ನೂ ಅನುಭವಿಸಲಾರದು ಸ್ಥಿತಿಗೆ ಮನುಷ್ಯ ತಲುಪುತ್ತಾನೆ..

ಇದನ್ನೂ ಓದಿ; ಈ ಲಕ್ಷಣಗಳಿದ್ದರೆ ನಿಮ್ಮ ಕಿಡ್ನಿಯಲ್ಲಿ ಸ್ಟೋನ್‌ ಇರಬಹುದು!

ದೇಹದಲ್ಲಿನ ವಿಷ ಡಿಟಾಕ್ಸ್‌ ಮಾಡಿ;

ಒತ್ತಡದ ಜೀವನದಲ್ಲಿ ಮನುಷ್ಯ ತನ್ನ ಆರೋಗ್ಯವನ್ನೇ ಮರೆತಿದ್ದಾನೆ.. ಅರ್ಜೆಂಟ್‌ ಅಂತ ಹೇಳಿ ಅನಾರೋಗ್ಯಕರ ಆಹಾರಗಳನ್ನೆಲ್ಲಾ ತಿನ್ನುತ್ತಿದ್ದಾನೆ.. ಹೀಗಾಗಿ ದೇಹದಲ್ಲಿ ಮಲಿನಗಳು ಹೆಚ್ಚಾಗಿ ಸಂಗ್ರಹವಾಗುತ್ತಿವೆ.. ಇದರಿಂದ ಹಲವಾರು ಕಾಯಿಲೆಗಳು ಬರುತ್ತಿವೆ.. ಹೀಗಾಗಿ, ದೇಹದಲ್ಲಿನ ಮಲಿನಗಳನ್ನು ತೆಗೆದುಹಾಕುವ ಕೆಲಸ ಮಾಡಬೇಕಾಗುತ್ತದೆ.. ಹಾಗೆ ದೇಹದಲ್ಲಿನ ವಿಷ ಡಿಟಾಕ್ಸ್‌ ಮಾಡೋದಕ್ಕೆ ನಮಗೆ ಬೇಕಾಗಿರೋದು ಬಾರ್ಲಿ ನೀರು..  ಬಾರ್ಲಿಯಿಂದ ಮಾಡಿದ ನೀರು ಆರೋಗ್ಯ ವರ್ಧಕ.. ನಮ್ಮ ದೇಹದಲ್ಲಿ ಮಲಿನಗಳನ್ನೆಲ್ಲಾ ತೆಗೆದುಹಾಕುತ್ತದೆ.. ಇದು ಅತ್ಯಂತ ಆರೋಗ್ಯಕರವಾಗಿದ್ದು, ದೇಹದ ಉಷ್ಣವನ್ನು ತೆಗೆದುಹಾಕುವ ತಾಕತ್ತು ಅದಕ್ಕಿದೆ..

ಇದನ್ನೂ ಓದಿ; ಬೆವರು ದುರ್ವಾಸನೆಯಿಂದ ರೋಸಿಹೋಗಿದ್ದೀರಾ..?; ಹಾಗಾದ್ರೆ ಈ ಟಿಪ್ಸ್‌ ಫಾಲೋ ಮಾಡಿ..

ಬಾರ್ಲಿ ನೀರು ತಯಾರಿಸುವುದು ಹೇಗೆ..?;

ಭಾರತದಲ್ಲಿ ಬಾರ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ.. ಅದರಲ್ಲೂ ಸಿರಿಧಾನ್ಯಗಳ ಬಳಕೆ ಹೆಚ್ಚಾದ ಮೇಲೆ ಬಾರ್ಲಿಯನ್ನು ಸೇವಿಸುವವರೆ ಸಂಖ್ಯೆ ಹೆಚ್ಚುತ್ತಿದೆ.. ಅದಂಹಾಗೆ ಬಾರ್ಲಿ ನೀರನ್ನು ಹೇಗೆ ತಯಾರಿಸಬೇಕು.. ಅದನ್ನು ಯಾವಾಗ ಕುಡಿಯಬೇಕು ಎಂಬುದನ್ನು ನಾವು ಇಲ್ಲಿ ತಿಳಿಯೋಣ.. ಈ ಬಾರ್ಲಿ ಧಾನ್ಯವನ್ನು ಉಪಯೋಗಿಸಿಕೊಂಡು, ಡಿಟಾಕ್ಸ್ ನೀರನ್ನು ತಯಾರಿಸುವ ವಿಧಾನವು ಸಾಕಷ್ಟು ಆಧುನಿಕವಾಗಿದೆ. ಆದರೆ ಇದು ತುಂಬಾನೇ ಉಪಯುಕ್ತವಾಗಿದೆ. ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಚಮಚ ಬಾರ್ಲಿಯನ್ನು ನೆನೆಸಿಡಬೇಕು. ರಾತ್ರಿಯಿಡೀ ಈ ಬಾರ್ಲಿ ನೀರಿನಲ್ಲಿ ನೆನೆಯಬೇಕು.. ಬೆಳಗ್ಗೆ ಆ ನೀರನ್ನು ಚೆನ್ನಾಗಿ 30 ನಿಮಿಷದ ಕಾಲ ಕುದಿಸಬೇಕು.. ಅನಂತರ ಒಲೆಯಿಂದ ಕೆಳಗಿಳಿಸಿ ಆರಿಸಬೇಕು.. ಆರಿದ ನಂತರ ಅದನ್ನು ದಿನವೂ ಕುಡಿಯುತ್ತಾ ಬರಬೇಕು.. ಇದರಿಂದಾಗಿ ದೇಹದಲ್ಲಿನ ಮಲಿನಗಳೆಲ್ಲವೂ ಹೊರಹೋಗುತ್ತವೆ..

ಇದನ್ನೂ ಓದಿ; ಬೇಸಿಗೆಯಲ್ಲಿ ಸನ್ ಟ್ಯಾನ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಆಂಟಿಆಕ್ಸಿಡೆಂಟ್ಸ್‌ ಹೊಂದಿರುವ ಬಾರ್ಲಿ ನೀರು;

ಬಾರ್ಲಿ ನೀರು ಕುಡಿಯುವುದು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.. ಇದರಲ್ಲಿ ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಯಥೇಚ್ಛವಾಗಿವೆ.. ಹೀಗಾಗಿ ನಮ್ಮ ದೇಹಕ್ಕೆ ಇದು ಆರೋಗ್ಯದ ರಕ್ಷಣೆ ನೀಡುತ್ತದೆ..  ಗ್ಯಾಸ್-ಹಾರ್ಟ್ ಬರ್ನ್ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಈ ಬಾರ್ಲಿ ನೀರನ್ನು ಕುಡಿಯುತ್ತಾ ಬರಬೇಕು. ಇದಲ್ಲಿ ಫೈಬರ್‌ ಸಮೃದ್ಧವಾಗಿರುವುದರಿಂದ ಗ್ಯಾಸ್‌ ಟ್ರಬಲ್‌ ಪ್ರಾಬ್ಲಂ ನಿವಾರಿಸುತ್ತದೆ. ಇದು ಉತ್ತಮ ಜೀರ್ಣಕಾರಿಯಾಗಿದೆ.. ಇದರಿಂದಾಗಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.

ಬೇಸಿಗೆಯಲ್ಲಿ ಇದನ್ನು ಕುಡಿಯಲೇಬೇಕು;

ಬೇಸಿಗೆಯಲ್ಲಿ ನಿರ್ಜಲೀಕರಣದ ಅಪಾಯ ಹೆಚ್ಚು. ಈ ಸಮಯದಲ್ಲಿ ಬಾರ್ಲಿ ನೀರನ್ನು ಕುಡಿಯುವುದರಿಂದ, ನೀವು ಈ ಸಮಸ್ಯೆಯನ್ನು ತಪ್ಪಿಸಬಹುದು. ಇದಲ್ಲದೆ, ಈ ಡಿಟಾಕ್ಸ್ ಪಾನೀಯವು ಬಿಸಿ ವಾತಾವರಣದಲ್ಲಿಯೂ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.  ಬಾರ್ಲಿ ನೀರು ಕುಡಿಯುವುದರಿಂದ ದೇಹದಿಂದ ಎಲ್ಲಾ ಮಾಲಿನ್ಯಕಾರಕಗಳನ್ನು ಹೊರಹೋಗುತ್ತವೆ. ಮೂತ್ರಪಿಂಡಗಳಲ್ಲಿ ಕೂಡಾ ಯಾವುದೇ ಮಾಲಿನ್ಯಕಾರಕ ಸಂಗ್ರಹವಾಗುವುದಿಲ್ಲ.  ಇದು ಮೂತ್ರಪಿಂಡದ ಕಲ್ಲುಗಳು ಮತ್ತು ಸೋಂಕಿನ ಅಪಾಯವನ್ನು ಕೂಡಾ ಕಡಿಮೆ ಮಾಡುತ್ತದೆ. ಬಾರ್ಲಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹವನ್ನು ವಿವಿಧ ರೋಗಗಳಿಂದ ಸಂರಕ್ಷಣೆ ಮಾಡುತ್ತದೆ.

ಇದನ್ನೂ ಓದಿ; ರಾತ್ರಿಯಿಡೀ ನೆನೆಸಿಟ್ಟ ಒಣದ್ರಾಕ್ಷಿ ತಿಂದರೆ ಅನಾರೋಗ್ಯಕ್ಕೆ ಚೆಕ್‌!

ತೂಕ ಇಳಿಸಿಕೊಳ್ಳಲು ಕೂಡಾ ಇದು ಸಹಾಯಕಾರಿ;

ಜಿಮ್‌ಗೆ ಹೋಗುವವರು ಹಾಗೂ ತೂಕ ಇಳಿಸಿಕೊಳ್ಳಲು ಬಯಸುವವರು ಬಾರ್ಲಿ ನೀರನ್ನು ನಿಯಮಿತವಾಗಿ ಸೇವನೆ ಮಾಡಬಹುದು.. ಇದು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಹೀರಿಕೊಂಡು ದೇಹದ ಆರೋಗ್ಯವನ್ನು ಕಾಪಾಡುತ್ತದೆ.. ಇದರಿಂದಾಗಿ ದೇಹದ ತೂಕ ಕಡಿಮೆ  ಮಾಡಲು ಸಹಾಯ ಮಾಡುತ್ತದೆ.. ಬಿಪಿ ಇರುವವರಿಗೆ ಕೂಡಾ ಇದು ಸಾಕಷ್ಟು ಸಹಾಯ ಮಾಡುತ್ತದೆ.. ಬಾರ್ಲಿ ನೀರು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.  ಉಪ್ಪಿನ ಪ್ರಮಾಣ ಕಡಿಮೆ ಮಾಡಿ, ಇದು ಮೂತ್ರಪಿಂಡದ ಆರೋಗ್ಯವನ್ನೂ ಸುಧಾರಿಸುತ್ತದೆ.

ಇದನ್ನೂ ಓದಿ; ಮುಖ ಸುಕ್ಕುಗಟ್ಟದಂತೆ ಯಾವಾಗಲೂ ಯಂಗ್‌ ಆಗಿ ಕಾಣುಲು ಹೀಗೆ ಮಾಡಿ!

ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣ;

ಬಾರ್ಲಿಯು ಫೈಬರ್ ಅನ್ನು ಹೊಂದಿದೆ.. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಅಂದರೆ ಮಧುಮೇಹದಿಂದ ಬಳಲುತ್ತಿರುವವರು ಬಾರ್ಲಿ ನೀರನ್ನು ಸೇವಿಸಬಹುದು. ಇದಲ್ಲದೆ, ಬಾರ್ಲಿಯ ಗ್ಲೈಸೆಮಿಕ್ ಸೂಚ್ಯಂಕ ಕೂಡ ಕಡಿಮೆ ಇದೆ. ಆದ್ದರಿಂದ ಇದು ಮಧುಮೇಹ ರೋಗಿಗಳಿಗೆ ಉಪಯುಕ್ತವಾಗಿದೆ. ಇದಲ್ಲದೆ, ಬಾರ್ಲಿ ನೀರು ಮೂತ್ರದ ಸಮಸ್ಯೆಗಳನ್ನು ಕೂಡಾ ನಿವಾರಣೆ ಮಾಡುತ್ತದೆ. ಅದಕ್ಕಾಗಿಯೇ ಬಾರ್ಲಿ ನೀರನ್ನು ಕುಡಿಯಲು ವೈದ್ಯಕೀಯ ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ; ಡಸ್ಟ್‌ ಅಲರ್ಜಿಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ..?; ಹಾಗಾದರೆ ಇದನ್ನು ಓದಿ..

Share Post