LifestyleNational

ವರ್ಷದ 11 ತಿಂಗಳು ಮುಳುಗಿರೋ ಊರಲ್ಲಿ 1 ತಿಂಗಳು ಜನಜಾತ್ರೆ!

ಗೋವಾ; ಇಲ್ಲೊಂದು ಗ್ರಾಮ ಇದೆ.. ಈ ಗ್ರಾಮ ವರ್ಷದಲ್ಲಿ 11 ತಿಂಗಳು ಮುಳುಗಿರುತ್ತೆ.. ಆಗ ಯಾರೂ ಕೂಡಾ ಅಲ್ಲಿಗೆ ಹೋಗೋದಕ್ಕೆ ಆಗೋದಿಲ್ಲ.. ಆದ್ರೆ ವರ್ಷದಲ್ಲಿ ಒಂದು ತಿಂಗಳು ಮಾತ್ರ ಈ ಗ್ರಾಮ ಎಲ್ಲರಿಗೂ ಕಾಣಸಿಗುತ್ತದೆ.. ಈ ಸಂದರ್ಭ ಆ ಊರಿನ ಜನಕ್ಕೆ ಹಬ್ಬದ ವಾತಾವರಣ.. ಎಲ್ಲಿಯೇ ಇದ್ದರೂ ಈ ಸಮಯದಲ್ಲಿ ಅಲ್ಲಿಗೆ ಬಂದು ಜನ ಹಬ್ಬ ಆಚರಣೆ ಮಾಡುತ್ತಾರೆ.. ಆ ಒಂದು ತಿಂಗಳಲ್ಲಿ ಈ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಗ್ರಾಮಸ್ಥರೆಲ್ಲಾ ಸೇರಿ ಜಾತ್ರೆ ಮಾಡುತ್ತಾರೆ. ಗ್ರಾಮ ದೇವತೆಗೆ ಪೂಜೆ ಮಾಡಿ ಸಂಭ್ರಮಪಡುತ್ತಾರೆ.

ಇದನ್ನೂ ಓದಿ; ಕುಡುಮಾ ಎಂಬ ಊರಿಗೆ ಧರ್ಮಸ್ಥಳ ಎಂದು ಹೆಸರು ಬಂದಿದ್ದು ಹೇಗೆ..?

ಹಾಗಾದರೆ ಗ್ರಾಮ ನೀರಿನಲ್ಲಿ ಮುಳುಗಿದಾಗ ಗ್ರಾಮಸ್ಥರು ಎಲ್ಲಿ ಹೋಗುತ್ತಾರೆ ಎಂಬ ಪ್ರಶ್ನೆ ನಿಮ್ಮದಾಗಬಹುದು. ನಿಜ ಹೇಳಬೇಕೆಂದರೆ ಈ ಗ್ರಾಮದಲ್ಲಿ ಈಗ ಯಾರೂ ವಾಸವಿಲ್ಲ. ಎಲ್ಲರೂ ಅಕ್ಕಪಕ್ಕದ ಗ್ರಾಮಗಳಲ್ಲಿ ನೆಲೆಸಿದ್ದಾರೆ. ಕೆಲವರು ಪಟ್ಟಣಕ್ಕೆ ಹೋಗಿ ವಾಸವಾಗಿದ್ದಾರೆ. ಇವರೆಲ್ಲಾ ವರ್ಷದಲ್ಲಿ ಒಂದು ಹೊರಬರುವ ತಮ್ಮ ಗ್ರಾಮಕ್ಕೆ ಬರುತ್ತಾರೆ. ಟೆಂಟ್‌ ಹಾಕಿಕೊಂಡು ಹಬ್ಬ ಆಚರಣೆ ಮಾಡುತ್ತಾರೆ. ಈ ಗ್ರಾಮ ಬೇಸಿಗೆ ಕಾಲದಲ್ಲಿ ಮಾತ್ರ ಕಾಣಿಸುತ್ತದೆ.. ಅಂದರೆ ಡ್ಯಾಮ್‌ ನೀರು ಖಾಲಿಯಾದಾಗ ಇಲ್ಲಿ ಊರು ಹೊರಗೆ ಕಾಣಿಸುತ್ತದೆ.. ಅಲ್ಲಿ ದೇವಸ್ಥಾನವೊಂದಿದ್ದು, ಅಲ್ಲಿ ಆ ತಿಂಗಳ ಪೂರ್ತಿ ಜಾತ್ರೆ ನಡೆಯುತ್ತದೆ..

ಇದನ್ನೂ ಓದಿ; ಬೆಚ್ಚಿಗಿನ ನೀರಿನಲ್ಲಿ ತುಪ್ಪ ಬೆರೆಸಿ ಕುಡಿದರೆ ರೋಗಗಳು ಮಾಯ!

ಅಂದಹಾಗೆ, ಈ ಗ್ರಾಮದ ಹೆಸರು ಕುರ್ದಿ. ಪಶ್ಚಿಮಶ್ರೇಣಿಗಳಲ್ಲಿನ ಬೆಟ್ಟಗಳ ಮಧ್ಯದಲ್ಲಿ ಸಲೌಲಿ ನದಿ ಪಾತ್ರ ಪ್ರದೇಶದಲ್ಲಿ ಈ ಗ್ರಾಮವಿದೆ. ಗೋವಾದಲ್ಲಿನ ಪ್ರಧಾನ ನದಿಗಳಲ್ಲಿ ಸಲೌಲಿ ಕೂಡಾ ಒಂಧು. ೧೯೮೬ರಲ್ಲಿ ಈ ನದಿಗೆ ಅಣೆಕಟ್ಟೆ ನಿರ್ಮಿಸಿದ್ದರಿಂದ ಈ ಗ್ರಾಮ ನೀರಿನಲ್ಲಿ ಮುಳುಗಿಹೋಗಿದೆ. ನೂರಾರು ಎಕರೆಗಳ ಕೃಷಿ ಭೂಮಿ, ತೋಟಗಳು ಕೂಡಾ ಅಣೆಕಟ್ಟೆಯ ನೀರಿನಲ್ಲಿ ಮಾಯವಾಗಿವೆ. ಆದರೆ, ಬೇಸಿಗೆಯಲ್ಲಿ ಈ ಜಲಾಶಯದಲ್ಲಿನ ನೀರಿನ ಮಟ್ಟ ಬಹುತೇಕ ಕಡಿಮೆಯಾಗುತ್ತದೆ. ಇದರಿಂದಾಗಿ ಪ್ರತಿ ವರ್ಷ ಮೇ ತಿಂಗಳಲ್ಲಿ ಈ ಕುರ್ದಿ ಗ್ರಾಮದ ಶಿಥಿಲವಾದ ಮನೆಗಳು ಹೊರಗೆ ಕಾಣುತ್ತವೆ. ಶಿಥಿಲಗೊಂಡ ಮಣ್ಣಿನ ಗೋಡೆಗಳು, ದೇಗುಲಗಳು, ಮಸೀದಿ, ಚರ್ಚ್‌ ಕೂಡಾ ನೀರಿನಿಂದ ಹೊರಬರುತ್ತದೆ.

ಇದನ್ನೂ ಓದಿ; ಪ್ರಾಣಭಿಕ್ಷೆಗಾಗಿ ಅಂಗಲಾಚಿದ ರೇಣುಕಾಸ್ವಾಮಿ!; ಹೃದಯವಿದ್ರಾವಕ ಫೋಟೋ ವೈರಲ್‌!

೧೯೬೧ರಲ್ಲಿ ಪೋರ್ಚುಗೀಸರಿಂದ ಗೋವಾಗೆ ವಿಮುಕ್ತ ಸಿಕ್ಕ ನಂತರ ಆ ರಾಜ್ಯದಲ್ಲಿ ನಿರ್ಮಿಸಿದ ಮೊದಲ ನೀರಾವರಿ ಪ್ರಾಜೆಕ್ಟ್‌ ಇದು. ಪ್ರಸ್ತುತ ದಕ್ಷಿಣ ಗೋವಾ ಪ್ರಾಂತ್ಯದಲ್ಲಿ ಕುಡಿಯುವ ನೀರು, ಕೈಗಾರಿಕೆಗಳು ಹಾಗೂ ನೀರಾವರಿಗೆ ಇದೇ ಶಲಾಶಯದ ನೀರನ್ನು ಬಳಸಲಾಗುತ್ತಿದೆ. ಪೋರ್ಚುಗೀಸ್‌ ಆಡಳಿತ ಮುಗಿದ ನಂಥರ ಎರಡು ಮೂರು ದಶಕಗಳಲ್ಲಿ ಗೋವಾದಲ್ಲಿ ಅಭಿವೃದ್ಧಿ ಕೆಲಸಗಳು ವೇಗವಾಗಿ ನಡೆದವು. ದಕ್ಷಿಣ ಗೋವಾ ಪ್ರಾಂತ್ಯವನ್ನು ಹಚ್ಚಹಸಿರುವ ಮಾಡುವುದಕ್ಕೆ ಸಲೌಲಿ ನದಿಗೆ ಅಣೆಕಟ್ಟು ನಿರ್ಮಿಸಬೇಕೆಂದು ಗೋವಾದ ಮೊದಲ ಮುಖ್ಯಮಂತ್ರಿ ದಯಾನಂದ್‌ ಬಂದೋಡ್ಕರ್‌ ನಿರ್ಧಾರ ಮಾಡುತ್ತಾರೆ. ಮುಳುಗಡೆಯಾಗುವ ಗ್ರಾಮಗಳ ಜನರೊಂದಿಗೆ ಮಾತನಾಡಿ ಅವರನ್ನು ಒಪ್ಪಿಸುತ್ತಾರೆ. ಅವರಿಗೆ ಬೇರೆ ವ್ಯವಸ್ಥೆ ಮಾಡಿ, ಭೂ ಸ್ವಾಧೀನ ಪ್ರಕ್ರಿಯೆ ನಡೆಸುತ್ತಾರೆ.
ಅಣೆಕಟ್ಟೆ ನಿರ್ಮಾಣಕ್ಕಾಗಿ ಈ ಗ್ರಾಮಸ್ಥರು ಮಾಡುವ ತ್ಯಾಗದಿಂದ ನೂರಾರು ಗ್ರಾಮಗಳಿಗೆ ಕುಡಿಯುವ ನೀರು, ಲಕ್ಷಾಂತರ ಎಕರೆಗಳಿಗೆ ನೀರಾವರಿ ವ್ಯವಸ್ಥೆಯಾಗುತ್ತದೆ ಎಂದು ಮುಖ್ಯಮಂತ್ರಿ ಇಲ್ಲಿನ ಜನಕ್ಕೆ ಹೇಳುತ್ತಾರೆ. ಇದಕ್ಕೆ ಬೆಲೆ ಕೊಟ್ಟ ಕುರ್ದಿ ಗ್ರಾಮಸ್ಥರು ತಮ್ಮ ಗ್ರಾಮವನ್ನು ಖಾಲಿ ಮಾಡಿ, ಅಕ್ಕಪಕ್ಕದ ಗ್ರಾಮಗಳಿಗೆ ತೆರಳುತ್ತಾರೆ. ಅಣೆಕಟ್ಟೆಯ ನೀರಿನಲ್ಲಿ ಮುಳುಗಿದ ಕುರ್ದಿ ಗ್ರಾಮದಲ್ಲಿ ೬೦೦ಕ್ಕೂ ಹೆಚ್ಚು ಕುಟುಂಬಗಳಿದ್ದವು. ಅವರೆಲ್ಲಾ ಬೇರೆಕಡೆಗೆ ಹೋಗಿ ನೆಲೆಸುತ್ತಾರೆ. ಮನೆ, ಜಮೀನು ಕಳೆದುಕೊಂಡವರಿಗೆ ಸರ್ಕಾರ ಪರಿಹಾರವಾಗಿ ಬೇರೆ ಕಡೆ ಭೂಮಿ, ಮನೆಗಳನ್ನು ನೀಡುತ್ತದೆ.

ಇದನ್ನೂ ಓದಿ; ಮ್ಯೂಸಿಯಂನಲ್ಲಿ 15 ಕೋಟಿ ಮೌಲ್ಯದ ಚಿನ್ನ ಕದ್ದ; ಮುಂದೆ ಆಗಿದ್ದೇನು..?

ಈ ಜಲಾಶಯದಲ್ಲಿ ನೀರಿನ ಮಟ್ಟ ಬೇಸಿಗೆ ಕಾಲದಲ್ಲಿ ಪಾತಾಳಕ್ಕೆ ಇಳಿದುಬಿಡುತ್ತದೆ. ಆಗ ಕುರ್ದಿ ಗ್ರಾಮ ಪೂರ್ತಿ ಹೊರಗೆಬರುತ್ತದೆ. ಅದೂ ಮೇ ತಿಂಗಳಲ್ಲಿ ಇದು ಕಾಣಿಸುವುದರಿಂದ ಈ ವೇಳೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಕೂಡಾ ಇರುತ್ತದೆ. ಹೀಗಾಗಿ ಈ ಗ್ರಾಮದ ಜನರು ತಮ್ಮ ಮನೆಗಳು ಹಾಗೂ ಊರನ್ನು ನೋಡಲು ಈ ಸ್ಥಳಕ್ಕೆ ಬರುತ್ತಾರೆ.
ಅಂದಹಾಗೆ, ಇಲ್ಲಿ ಒಂದು ದೇವಸ್ಥಾನ ಹಾಗೂ ಚರ್ಚ್‌ ಇದೆ.. ಗ್ರಾಮದಲ್ಲಿನ ಮನೆಗಳೆಲ್ಲಾ ಶಿಥಿಲವಾದರೂ, ದೇವಸ್ಥಾನ ಹಾಗೂ ಚರ್ಚ್‌ ಮಾತ್ರ ಕೊಂಚ ಗಟ್ಟಿಯಾಗಿಯೇ ಇವೆ. ಹೀಗಾಗಿ, ಬೇರೆ ಬೇರೆ ಕಡೆ ನೆಲೆಸಿರುವ ಕುರ್ದಿ ಗ್ರಾಮದ ಜನರೆಲ್ಲಾ ಮೇ ತಿಂಗಳಲ್ಲಿ ಇಲ್ಲಿ ಬಂದು ಹಬ್ಬದ ಆಚರಣೆ ಮಾಡುತ್ತಾರೆ. ದೇವಸ್ಥಾನದಲ್ಲಿ ಪೂಜೆ, ಚರ್ಚ್‌ನಲ್ಲಿ ಪ್ರಾರ್ಥನೆಗಳು ನಡೆಯುತ್ತವೆ. ಗ್ರಾಮದ ತುಂಬಾ ಪೆಂಡಾಲ್‌ಗಳನ್ನು ಹಾಕಿ ವಿಜೃಂಬಣೆಯಲ್ಲಿ ಹಬ್ಬ ಆಚರಿಸುತ್ತಾರೆ. ಸಾಂಸ್ಕೃತಿಕ ನೃತ್ಯಗಳು, ಕಾರ್ಯಕ್ರಗಳು ನಡೆಯುತ್ತವೆ.
ಅಂದಹಾಗೆ, ಈ ಗ್ರಾಮ ಖಾಲಿ ಮಾಡಿ ದಶಕಗಳು ಕಳೆದರೂ ಇಲ್ಲಿನ ಜನ ತಮ್ಮ ಗ್ರಾಮವನ್ನು ಮರೆತಿಲ್ಲ. ಬದಲಾಗಿ, ಪ್ರತಿ ವರ್ಷವೂ ತಪ್ಪದೇ ಇಲ್ಲಿಗೆ ಬರುತ್ತಾರೆ. ತಮ್ಮ ಮಕ್ಕಳನ್ನು ಕರೆತಂದು ತಮ್ಮ ಹುಟ್ಟಿದ ಊರನ್ನು ತೋರಿಸುತ್ತಾರೆ. ತಾವು ವಾಸವಾಗಿದ್ದ ಜಾಗ, ಶಿಥಿಲಗೊಂಡಿರುವ ಮನೆಗಳನ್ನು ತೋರಿಸುತ್ತಾರೆ. ವ್ಯವಸಾಯ ಮಾಡುತ್ತಿದ್ದ ಜಮೀನಿನ ಪರಿಚಯವನ್ನೂ ಮಕ್ಕಳಿಗೆ ಮಾಡಿಕೊಡುತ್ತಾರೆ.

ಇದನ್ನೂ ಓದಿ; ಚಾರ್ಜ್‌ಶೀಟ್‌ನಲ್ಲಿ ದರ್ಶನ್‌ ಪಾತ್ರದ ಬಗ್ಗೆ ಏನೆಲ್ಲಾ ಹೇಳಲಾಗಿದೆ..?

Share Post