ಕುಡುಮಾ ಎಂಬ ಊರಿಗೆ ಧರ್ಮಸ್ಥಳ ಎಂದು ಹೆಸರು ಬಂದಿದ್ದು ಹೇಗೆ..?
ಧರ್ಮಸ್ಥಳ; ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಧರ್ಮಸ್ಥಳ ಕೂಡಾ ಒಂದು.. ಇದಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ.. ಕರ್ನಾಟಕ ಹಾಗೂ ದೇಶದ ನಾನಾ ಭಾಗಗಳಲ್ಲಿ ಮಂಜುನಾಥನ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ.. ಇಲ್ಲಿ ಅನ್ನ ಪ್ರಸಾದ ವಿಶೇಷವಾಗಿ ಜನಪ್ರಿಯತೆ ಗಳಿಸಿದೆ.. ಉಚಿತ ಅನ್ನದಾನಕ್ಕೆ ಈ ಕ್ಷೇತ್ರ ಪ್ರಸಿದ್ಧಿ ಪಡೆದಿದ್ದು, ಎಷ್ಟು ಭಕ್ತರು ಬಂದರೂ ಯಾವಾಗಲೂ ಇಲ್ಲಿ ಅನ್ನದಾನ ನಡೆಯುತ್ತಿರುತ್ತದೆ..
ಇದನ್ನೂ ಓದಿ; ಬೆಚ್ಚಿಗಿನ ನೀರಿನಲ್ಲಿ ತುಪ್ಪ ಬೆರೆಸಿ ಕುಡಿದರೆ ರೋಗಗಳು ಮಾಯ!
ಅಂದಹಾಗೆ, ಶ್ರೀ ಮಂಜುನಾಥ ದೇಗುಲಕ್ಕೆ ಬರೋಬ್ಬರಿ 800 ವರ್ಷಗಳ ಇತಿಹಾಸ ಇದೆ. ಮಂಜುನಾಥನ ಧಾರ್ಮಿಕ ಕ್ಷೇತ್ರವಾದ ಈ ದೇಗುಲದ ಆಡಳಿತದ ನಡೆಸುತ್ತಿರುವವರು ಜೈನರು ಅನ್ನೋದು ಇಲ್ಲಿನ ವಿಶೇಷ ಸಂಗತಿ. ಕೇರಳ ಮಾದರಿಯ ವಾಸ್ತುಶಿಲ್ಪ ಶ್ರೀ ಮಂಜುನಾಥ ದೇವಾಲಯಕ್ಕಿದೆ.. ನಿತ್ಯವೂ ಒಂದಿಲ್ಲೊಂದು ವಿಶೇಷ ಪೂಜಾ ಕೈಂಕರ್ಯಗಳು ಇಲ್ಲಿ ನಡೆಯುತ್ತಿರುತ್ತವೆ.. ಲಕ್ಷ ದೀಪೋತ್ಸವ, ಸಾಮೂಹಿಕ ವಿವಾಹದಂತಹ ಕಾರ್ಯಕ್ರಮಗಳು ಇಲ್ಲಿನ ವಿಶೇಷ..
ಧರ್ಮಸ್ಥಳಕ್ಕೆ ಈ ಹೆಸರು ಬರೋದಕ್ಕೆ ಕಾರಣ ಏನು..? ಇದಕ್ಕೆ ಮೊದಲು ಯಾವ ಹೆಸರಿತ್ತು ಅನ್ನೋದನ್ನು ನಾವು ಮೊದಲು ತಿಳಿಯೋಣ.. ಇದನ್ನು ಈ ಹಿಂದೆ ಕುಡುಮಾ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿತ್ತು. ಬಿರ್ಮಣ್ಣ ಪೆರ್ಗಡೆ ಮತ್ತು ಅವರ ಪತ್ನಿ ಅಮ್ಮ ಬಲ್ಲಲ್ತಿ ಅವರು ಇಲ್ಲಿನ ನೆಲ್ಲಾಡಿ ಬೀಡು ಎಂಬಲ್ಲಿ ವಾಸಿಸುತ್ತಿದ್ದರು. ದಾನ ಧರ್ಮಕ್ಕೆ ಹೆಸರಾಗಿದ್ದ ಇವರಿಗೆ ಒಮ್ಮೆ ಧರ್ಮ ದೈವಗಳು ಕಾಣಿಸಿಕೊಂಡು ನೆಲ್ಲಾಡಿ ಬೀಡುವಿನಲ್ಲಿ ಧರ್ಮ ದೈವಗಳನ್ನು ಸ್ಥಾಪಿಸುವಂತೆ ಸೂಚನೆ ನೀಡಿದರು. ಅಲ್ಲದೇ ಧರ್ಮವನ್ನು ಹರಡಲು ತಮ್ಮ ಜೀವನವನ್ನು ಅರ್ಪಿಸುವಂತೆ ತಿಳಿಸಿದರು.
ಇದನ್ನೂ ಓದಿ; ಪ್ರಾಣಭಿಕ್ಷೆಗಾಗಿ ಅಂಗಲಾಚಿದ ರೇಣುಕಾಸ್ವಾಮಿ!; ಹೃದಯವಿದ್ರಾವಕ ಫೋಟೋ ವೈರಲ್!
ಅದರಂತೆ ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇಗುಲದಿಂದ ಲಿಂಗ ತರುವಂತೆ ಅಣ್ಣಪ್ಪ ಸ್ವಾಮಿಯನ್ನು ಕಳುಹಿಸಲಾಯಿತು. ಅಣ್ಣಪ್ಪ ತಂದ ವಿಗ್ರಹವನ್ನು ಧರ್ಮಸ್ಥಳದಲ್ಲಿ ಇಟ್ಟು ದೇಗುಲ ನಿರ್ಮಾಣ ಮಾಡಲಾಯಿತು. 16 ನೇ ಶತಮಾನದಲ್ಲಿ ಶ್ರೀ ದೇವರಾಜ ಹೆಗ್ಗಡೆ ಅವರು ಶ್ರೀ ವಾದಿರಾಜ ಸ್ವಾಮಿಯನ್ನು ಇಲ್ಲಿಗೆ ಬರಲು ಆಹ್ವಾನ ಮಾಡಿದರು. ಆದರೆ ವಾಡಿರಾಜ ಸ್ವಾಮಿಜಿ ಆಹಾರ ಸ್ವೀಕರಿಸಲು ನಿರಾಕರಿಸಿದರು ಏಕೆಂದರೆ ಶ್ರೀ ಮಂಜುನಾಥ ದೇವರ ವಿಗ್ರಹವನ್ನು ವೈದಿಕ ವಿಧಿಗಳ ಪ್ರಕಾರ ಪವಿತ್ರ ಮಾಡಿಲ್ಲ ಎಂದು.
ಇದನ್ನೂ ಓದಿ; ದೇಗುಲದ ಕಟ್ಟೆ ಮೇಲೆ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ!
ಬಳಿಕ ಹೆಗ್ಗಡೆಯವರ ಮನವಿ ಮೇರೆಗೆ ವಾದಿರಾಜ ಸ್ವಾಮಿಗಳು ಇಲ್ಲಿ ಶಿವಲಿಂಗವನ್ನು ಪವಿತ್ರಗೊಳಿಸಿದರು. ಅಲ್ಲದೆ, ಈ ಸ್ಥಳಕ್ಕೆ ಧರ್ಮಸ್ಥಳ ಎಂದು ಹೆಸರು ಇಟ್ಟು ಇಲ್ಲಿ ಧಾನ ಧರ್ಮವನ್ನೇ ಆರಾಧಿಸಬೆಕು ಎಂದು ತಿಳಿಸಿದರು. ಅಂದಿನಿಂದ ಈ ಸ್ಥಳ ಧರ್ಮಸ್ಥಳ ಆಯಿತು. ಈ ದೇಗುಲ ನಿರ್ವಹಣೆ ಮಾಡುತ್ತಿದ್ದ ಪೆರ್ಗಡೆ ಕುಟುಂಬ ಈ ಕ್ಷೇತ್ರ ನಿರ್ವಹಣೆ ಮಾಡುತ್ತಿದೆ. ಈ ಕುಟುಂಬದ ಹಿರಿಯ ಸದಸ್ಯ ಧರ್ಮಾಧಿಕಾರಿಯ ಸ್ಥಾನವಹಿಸಿಕೊಂಡು ಹೆಗ್ಗಡೆ ಎಂಬ ಬಿರುದು ಪಡೆಯುತ್ತಾರೆ. ಈ ದೇಗುಲವನ್ನು ಪೆರ್ಗಡೆ ಕುಟುಂಬ 20 ತಲೆಮಾರುಗಳಿಂದ ಈ ದೇಗುಲವನ್ನು ನಿರ್ವಹಣೆ ಮಾಡುತ್ತಿದ್ದು, ದಾನ, ಧರ್ಮದ ಕಾರ್ಯದಲ್ಲಿ ನಿರತರಾಗಿದ್ದಾರೆ.