LifestyleNational

ಮದುವೆ ನಂತರದ ಪ್ರವಾಸಕ್ಕೆ ಹನಿಮೂನ್‌ ಎನುತ್ತಾರೆ ಏಕೆ..?

ಬೆಂಗಳೂರು; ಮದುವೆಯಾದ ನಂತರ ನೂತನ ದಂಪತಿ ಪ್ರವಾಸ ಹೋಗುತ್ತಾರೆ.. ಅದಕ್ಕೆ ಹನಿಮೂನ್‌ ಎಂದು ಕರೆಯುತ್ತಾರೆ.. ಸುಂದರ ನೈಸರ್ಗಿಕ ತಾಣಗಳಿಗೆ ಭೇಟಿ ನೀಡುವ ನವದಂಪತಿ ಅಲ್ಲಿ ಇಬ್ಬರೂ ಏಕಾಂತದಲ್ಲಿ ಕಾಲ ಕಳೆಯುತ್ತಾರೆ.. ಎಂಜಾಯ್‌ ಮಾಡಿಕೊಂಡು ಬರುತ್ತಾರೆ.. ಇದಕ್ಕೇ ಹನಿಮೂನ್‌ ಎಂದು ಕರೆಯುತ್ತಾರೆ.. ಹಾಗಾದರೆ ಈ ಪ್ರವಾಸಕ್ಕೆ ಹನಿಮೂನ್‌ ಎಂದು ಹೆಸರು ಬಂದಿದ್ದು ಹೇಗೆ ಅನ್ನೋದೇ ಕುತೂಹಲದ ಸಂಗತಿ.. ಈ ವಿಚಾರದ ಬಗ್ಗೆ ತಿಳಿಯೋಣ ಬನ್ನಿ.. 

ಹೊಸದಾಗಿ ಮದುವೆಯಾದವರು ಹನಿಮೂನ್‌ಗೆ ಹೋಗುವ ಸಂಪ್ರದಾಯ ಯಾವಾಗ ಶುರುವಾಯಿತು..? ಇದಕ್ಕೆ ಉತ್ತರ ಕಂಡುಕೊಳ್ಳೋಣ ಬನ್ನಿ. ಅದು 1800ರ ಸಮಯ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೊಂಚ ಕೊಂಚವೇ ಬೆಳವಣಿಗೆ ಕಾಣುತ್ತಿದ್ದ ಸಮಯವದು. ಈ ವೇಳೆಯಲ್ಲಿ ಶ್ರೀಮಂತರ ಕುಟುಂಬಗಳಲ್ಲಿ ನಡೆಯುವ ಮದುವೆ ಸಮಾರಂಭಗಳ ನವದಂಪತಿಗಳು ಕೈಗೊಳ್ಳುವ ಪ್ರವಾಸಗಳು ಪ್ರಾಮುಖ್ಯತೆ ಪಡೆದುಕೊಂಡಿದ್ದವು ಎಂದು ಇತಿಹಾಸಕಾರರು ಹೇಳುತ್ತಾರೆ.
ಎಮಿಲಿ ಬ್ರಾಂಡ್‌ 18ನೇ ಶತಮಾನದ ಇತಿಹಾಸವನ್ನು ಅಧ್ಯಯನ ಮಾಡಿ ವರದಿಯೊಂದನ್ನು ಸಿದ್ಧಪಡಿಸಿದರು. ಹೊಸದಾಗಿ ಮದುವೆಯಾದ ದಂಪತಿಗಳು ತಮಗಾಗಿ ಕೊಂಚ ಏಕಾಂತ ಸಮಯವನ್ನು ಬಯಸುವುದು ಸಾಮಾನ್ಯದ ಸಂಗತಿ. ವಿವಾಹ ಕಾರ್ಯಕ್ರಮಗಳು ಮುಗಿದ ಕೂಡಲೇ ನೂತನ ದಂಪತಿಗಳು ಸಣ್ಣ ಸಣ್ಣ ಟ್ರಿಪ್‌ಗಳಿಗೆ ಹೋಗುವ ಅಭ್ಯಾಸ ತುಂಬಾ ಹಿಂದಿನಿಂದಲೂ ಇದೆ. ಆಧುನಿಕ ಯುಗ ಪ್ರಾರಂಭದಲ್ಲಿ ಶ್ರೀಮಂತ ಕುಟುಂಬಗಳಿಗೆ ಸೇರಿದ ಕೆಲ ನವ ದಂಪತಿಗಳು ಸ್ನೇಹಿತರು, ಸಂಬಂಧಿಕರನ್ನು ಭೇಟಿಯಾಗುವುದಕ್ಕಾಗಿ ಪ್ರವಾಸ ಕೈಗೊಳ್ಳುತ್ತಿದ್ದರು. ಇನ್ನೂ ಕೆಲವು ಜೋಡಿಗಳು ಎಲ್ಲರಿಂದ ದೂರವಾಗಿದ್ದು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕೆ ಆ ಸಮಯವನ್ನು ಉಪಯೋಗಿಸುತ್ತಿದ್ದರು.

ಇದನ್ನೂ ಓದಿ; ಪ್ರಾಣಭಿಕ್ಷೆಗಾಗಿ ಅಂಗಲಾಚಿದ ರೇಣುಕಾಸ್ವಾಮಿ!; ಹೃದಯವಿದ್ರಾವಕ ಫೋಟೋ ವೈರಲ್‌!

8ನೇ ಹೆನ್ರಿ ಎಂಬಾತ ಮದುವೆಯಾದ ಕೂಡಲೇ ಪತ್ನಿ ಆನ್‌ ಬೋಲಿನ್‌ ಜೊತೆ ಸೇರಿ ಗ್ಲೌಸೆಸ್ಟರ್‌ಷೈರ್‌ನಲ್ಲಿರುವ ಥೋರ್ನ್‌ಬರೀ ಕೋಟೆಯಲ್ಲಿ ವಾರಕ್ಕೂ ಹೆಚ್ಚು ದಿನ ಕಳೆದರು. ಎರಡನೇ ಚಾರ್ಲೆಸ್‌ ನವವಧುವಿನ ಜೊತೆ ಕಾಲಕಳೆಯುವುದಕ್ಕೆ ಹ್ಯಾಂಪ್ಟನ್‌ಕೋರ್ಟ್‌ ಪ್ಯಾಲೇಸ್‌ಗೆ ಭೇಟಿ ನೀಡಿದ್ದರು. ದಂಪತಿಗಳು ಏಕಾಂತವನ್ನು ಬಯಸುವುದಕ್ಕೆ ತುಂಬಾನೇ ಕಾರಣಗಳಿವೆ. ಒಬ್ಬ ಮಿಲಿಟರಿ ಅಧಿಕಾರಿ ಆತನ ಪತ್ನಿಯೊಂದಿಗೆ ಸೇರಿ ಮದುವೆಯಾದ ಕೂಡಲೇ ಫಸ್ಟ್‌ನೈಟ್‌ಗಾಗಿ ನಾರ್ವಿಚ್‌ಗೆ ಹೋಗಿದ್ದರೆಂದು ೧೮ನೇ ಶತಮಾನಕ್ಕೆ ಸೇರಿದ ವಾರ್ತಾ ಪತ್ರಿಕೆಯೊಂದು ವಿವರವಾದ ವರದಿಯೊಂದನ್ನು ಪ್ರಕಟಿಸಿತ್ತು.
19ನೇ ಶತಮಾನದಲ್ಲಿ ರೈಲು ಪ್ರಯಾಣ ಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿತ್ತು. ಅದರಿಂದಾಗಿ ಕಾರ್ಮಿಕ ವರ್ಗದ ನವದಂಪತಿಗಳು ಕೂಡಾ ಸಮುದ್ರ ತೀರಗಳಿಗೆ, ನಗರಗಳಿಗೆ ಪ್ರವಾಸ ಕೈಗೊಳ್ಳುವ, ಕೆಲಕಾಲ ಏಕಾಂತ ಜೀವನ ನಡೆಸಿಬರುವ ಸಂಪ್ರದಾಯ ಶುರುವಾಯ್ತು. ಶ್ರೀಮಂತ ಕುಟುಂಬಗಳಲ್ಲಿ ನವ ವಧುವರರು, ಬ್ರೈಡಲ್‌ ಟೂರ್‌ಗಾಗಿ ಬೇರೆ ಬೇರೆ ದೇಶ, ಖಂಡಗಳಿಗೆ ಕೂಡಾ ಹೋಗುವುದು ಶುರುವಾಯಿತು. ಹೀಗೆ ಹನಿಮೂನ್‌ ಹೋಗುವ ಸಮಯವನ್ನು ʻಒಂದು ತಿಂಗಳ ಕಾಲ ಬಲವಂತವಾಗಿ ಎಲ್ಲರಿಂದ ದೂರ ಮಾಡಿ, ಜೋಡಿಯನ್ನು ಒಂಟಿಯನ್ನಾಗಿ ಮಾಡುವುದುʼ ಎಂದು ವಿಕ್ಟೋರಿಯನ್‌ ವಿಮರ್ಶಕರು ಹೇಳುತ್ತಾರೆ. ಮೊದಲು ಬೇಸಿಗೆಯಲ್ಲಿ ವಿವಾಹ ನಡೆದರೆ ಕನಿಷ್ಠ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಲು ನವದಂಪತಿಗಳು ಹೋಗುತ್ತಿದ್ದರು. ಚಳಿಗಾಲದಲ್ಲಿ ಮದುವೆಯಾದರೆ ಮನೆಗೇ ಸೀಮಿತವಾಗುತ್ತಿದ್ದರು.

ಇದನ್ನೂ ಓದಿ; ಬೆಚ್ಚಿಗಿನ ನೀರಿನಲ್ಲಿ ತುಪ್ಪ ಬೆರೆಸಿ ಕುಡಿದರೆ ರೋಗಗಳು ಮಾಯ!

ಮದುವೆ ಹೊಸದರಲ್ಲಿ ಮಾಡುವ ಪ್ರವಾಸಕ್ಕೆ ಹನಿಮೂನ್‌ ಹೆಸರು ಯಾಕೆ..?
1800ನೇ ಇಸ್ವಿಯ ಆರಂಭದಲ್ಲೇ ಶ್ರೀಮಂತ ಕುಟುಂಬಗಳ ನವವಧು ವರರ ಪ್ರವಾಸಗಳು ಶುರುವಾಗಿದ್ದವು. ಆದರೆ, 1800ನೇ ಇಸ್ವಿಯ ಅಂತ್ಯದವರೆಗೂ ಹನಿಮೂನ್‌ ಎಂಬ ಪದ ಬಳಕೆಗೆ ಬಂದಿರಲಿಲ್ಲ. ಅಂದಿನ ಕಾಲದಲ್ಲಿ ಹೀಗೆ ಪ್ರವಾಸ ಹೋಗುವ ಕಾಲವನ್ನು ಮದುವೆಯಾದ ಮೊದಲ ತಿಂಗಳು ಎಂದಷ್ಟೇ ಕರೆಯುತ್ತಿದ್ದರು. ಆದಾಗ್ಯೂ, ೧೫೫೨ರ ಕಾಲದ ಒಂದು ಪುಸ್ತಕದಲ್ಲಿ ಹನಿಮೂನ್‌ ಎಂಬ ಪದಕ್ಕಿರುವ ಅರ್ಥವನ್ನು ನೀಡಿದೆ. ಹೀಗಾಗಿ ೧೫೫೦ರ ಸಮಯದಲ್ಲೇ ಹನಿಮೂನ್‌ ಸಂಪ್ರದಾಯ ಇತ್ತು ಎಂಬುದನ್ನು ಇಲ್ಲಿ ನಾವು ಮನಗಾಣಬೇಕಾಗುತ್ತದೆ.
ಇನ್ನು ೧೮ನೇ ಶತಮಾನದ ಮಧ್ಯದಲ್ಲಿ ಸ್ಯಾಮ್ಯುಯಲ್‌ ಜಾನ್‌ಸನ್‌ ಬರೆದ ಡಿಕ್ಷನರಿಯಲ್ಲಿ ಹನಿಮೂನ್‌ ಎಂಬ ಪದಕ್ಕೆ ಅರ್ಥವಾಗಿ ʻವಿವಾಹ ನಡೆದ ಮೊದಲ ತಿಂಗಳು ಮೃದುತ್ವ ಮತ್ತು ಸಂತೋಷವನ್ನು ಹೊರತುಪಡಿಸಿ ಏನೂ ಇಲ್ಲ. ಆದರೆ, ಚಂದ್ರನು ಕ್ಷೀಣಿಸಿದಾಗ ಅವರಿಬ್ಬರ ನಡುವಿನ ವಾತ್ಸಲ್ಯವೂ ಕಡಿಮೆಯಾಗುತ್ತದೆʼ ಎಂಬರ್ಥದಲ್ಲಿ ಈ ಹೆಸರು ಇಟ್ಟಿರಬಹುದುʼ ಎಂದು ಹೇಳಲಾಗಿದೆ. ವಿಕ್ಟೋರಿಯನ್‌ ನವವಧು ವರರು ಜೇನುತುಪ್ಪದೊಂದಿಗೆ ತಯಾರು ಮಾಡಿದ ಮತ್ತು ಬರುವ ಪದಾರ್ಥವನ್ನು ಮೊದಲ 30 ದಿನಗಳು ಸೇವಿಸುತ್ತಿದ್ದರು, ಈ ಆಚಾರವನ್ನೇ ಹನಿಮೂನ್‌ ಎಂದು ಕರೆದಿರಬಹುದು ಎಂಬ ಅಭಿಪ್ರಾಯವೂ ಇದೆ. 19ನೇ ಶತಮಾನದ ಅಂತ್ಯದಲ್ಲಿ ವಿವಾಹ ಯಾತ್ರೆಗಳಿಗೆ ಹನಿಮೂನ್‌ ಎಂಬ ಪದವನ್ನು ಬಳಸುವುದು ವಿಪರೀತವಾಗಿ ಜಾಸ್ತಿಯಾಗುತ್ತಾ ಬಂತು.

ಇದನ್ನೂ ಓದಿ; ವರ್ಷದ 11 ತಿಂಗಳು ಮುಳುಗಿರೋ ಊರಲ್ಲಿ 1 ತಿಂಗಳು ಜನಜಾತ್ರೆ!

ಆದರೆ ನವ ವಧುವರರು ಸಮಾಜಕ್ಕೆ ದೂರ ಹೋಗಿ ಸಮಯ ಕಳೆಯುವ ಅವಶ್ಯಕತೆ ಇಲ್ಲ ಎಂದು ೧೮೮೧ರಲ್ಲಿ ಒಂದು ಫ್ಯಾಷನ್‌ ಮ್ಯಾಗಜಿನ್‌ ತನ್ನ ಅಭಿಪ್ರಾಯವನ್ನು ಪ್ರಕಟಿಸಿತ್ತು. ಆದರೆ ಅಷ್ಟೊತ್ತಿಗಾಗಲೇ ಕಡಿಮೆ ಸಮಯದ ಹನಿಮೂನ್‌ ಪ್ರವಾಸಗಳು ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದ್ದವು. ಕೆಲವು ವಧುವರರು ಕೇವಲ ೩ ದಿನಗಳ ಹನಿಮೂನ್‌ನಿಂದಲೇ ಸಂತೃಪ್ತಿ ಹೊಂದುತ್ತಿದ್ದಾರೆ ಎಂದೂ ಆ ಪತ್ರಿಕೆ ಪ್ರಕಟಿಸಿತ್ತು. ಒಂದು ತಿಂಗಳ ಕಾಲ ಹನಿಮೂನ್‌ ಗೆ ಹೋಗವುದು ಹಳೇ ಫ್ಯಾಷನ್‌ ಎಂದು ಆ ಪತ್ರಿಕೆ ಅಭಿಪ್ರಾಯಪಟ್ಟಿತ್ತು. ಈಗ ನಾವು ವೇಗದ ಜೀವನಕ್ಕೆ ಹೊಂದಿಕೊಂಡಿದ್ದೇನೆ. ಹೀಗಾಗಿ ಸಾಂಪ್ರದಾಯಿಕ ವಿವಾಹಗಳೂ ಕಡಿಮೆಯಾಗುತ್ತಿವೆ. ಮದುವೆಯ ನಂತರದ ರಜಾ ದಿನಗಳು ಕೂಡಾ ದುಬಾರಿ ಎನಿಸುತ್ತಿವೆ. ಹೀಗಾಗಿ, ಮಿನಿ ಹನಿಮೂನ್‌ಗಳು ಹೆಚ್ಚಾಗುತ್ತಿವೆ. ಕೆಲಸದ ಒತ್ತಡದ ನಡುವೆ ಮದುವೆಯ ಬಂಧನಕ್ಕೊಳಪಡುವ ಜೋಡಿಗಳು, ಏಕಾಂತವನ್ನು ಕಳೆಯುವುದಕ್ಕೆ ಈಗ ಬೇರೆ ಬೇರೆ ದಾರಿಗಳನ್ನು ಹುಡುಕುತ್ತಿದ್ದಾರೆ.

ಇದನ್ನೂ ಓದಿ; ಕುಡುಮಾ ಎಂಬ ಊರಿಗೆ ಧರ್ಮಸ್ಥಳ ಎಂದು ಹೆಸರು ಬಂದಿದ್ದು ಹೇಗೆ..?

 

Share Post