HealthLifestyle

ಬೆಚ್ಚಿಗಿನ ನೀರಿನಲ್ಲಿ ತುಪ್ಪ ಬೆರೆಸಿ ಕುಡಿದರೆ ರೋಗಗಳು ಮಾಯ!

ಬೆಂಗಳೂರು; ತುಪ್ಪದ ರುಚಿಗೆ ಮಾರು ಹೋದವರೇ ಇಲ್ಲ.. ತುಪ್ಪ ಬರೀ ಆಹಾರಕ್ಕಷ್ಟೇ ಬಳಸೋದಿಲ್ಲ.. ಇದರಲ್ಲಿ ಎಷ್ಟೋ ಔಷಧೀಯ ಗುಣಗಳಿವೆ.. ಹೀಗಾಗಿ ಆಯುರ್ವೇದದಲ್ಲಿ ತುಪ್ಪದ ಬಳಕೆ ಹೆಚ್ಚು.. ಅದೂ ಕೂಡಾ ದೇಸಿ ಹಸುವಿನ ತುಪ್ಪ ಸೇವನೆ ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.. ನಾವು ನಿತ್ಯ ಕೊಂಚ ತುಪ್ಪ ಸೇವಿಸುತ್ತಾ ಬಂದರೆ ಬಹುತೇಕ ಕಾಯುಲೆಗಳು ನಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ.. ಆರೋಗ್ಯ ಸಮಸ್ಯೆಗಳೇನಾದರೂ ಇದ್ದರೆ ನಮ್ಮ ಬಳಿಗೂ ಅವು ಬರುವುದಿಲ್ಲ.. ಚರ್ಮ ಕಾಂತಿಯುತವಾಗುತ್ತದೆ.. ಹೀಗಾಗಿ ಕೆಲವು ಮಹಿಳೆಯರು ಮುಖಕ್ಕೆ ತುಪ್ಪವನ್ನು ಹಚ್ಚುತ್ತಾರೆ ಕೂಡಾ.. ಇನ್ನು ತುಪ್ಪದ ಸೇವನೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ಹಲವರಿಗೆ ಹಲವು ಅನುಮಾನಗಳಿವೆ.. ಈ ಬಗ್ಗೆ ತಿಳಿಸಿಕೊಡುವ ಪ್ರಯತ್ನವೇ ಇದು..

ಇದನ್ನೂ ಓದಿ; ಪ್ರಾಣಭಿಕ್ಷೆಗಾಗಿ ಅಂಗಲಾಚಿದ ರೇಣುಕಾಸ್ವಾಮಿ!; ಹೃದಯವಿದ್ರಾವಕ ಫೋಟೋ ವೈರಲ್‌!

ಉಗುರು ಬೆಚ್ಚಗಿನ ನೀರಿನಲ್ಲಿನ ತುಪ್ಪ ಬೆರೆಸಿ ಕುಡಿದರೆ ತುಂಬಾನೇ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.. ದಿನವೂ ಈ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.. ಹಾಗೆ ಮಾಡುವುದರಿಂದ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಎರಡೂ ವೃದ್ಧಿಯಾಗುತ್ತವೆ.. ಅದ್ರಲ್ಲೂ ಕೂಡಾ ದೇಸಿ ಹಸುವಿನ ತುಪ್ಪ ಉಪಯೋಗಿಸುವುದು ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ..

ಇದನ್ನೂ ಓದಿ; ದೇಗುಲದ ಕಟ್ಟೆ ಮೇಲೆ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ!

ದೇಸಿ ಹಸುವಿನ ತುಪ್ಪದಲ್ಲಿ ವಿಟಮಿನ್ ಎ, ಡಿ ಮತ್ತು ಇ ಇರುತ್ತವೆ.. ಹೀಗಾಗಿ ತುಪ್ಪ ತಿನ್ನುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಅನೇಕ ಸೋಂಕುಗಳು ಬರದಂತೆ ತಡೆಯುತ್ತದೆ.. ಹಸುವಿನ ತುಪ್ಪದಲ್ಲಿರುವ ಪೋಷಕಾಂಶಗಳು ಚರ್ಮದ ಆರೋಗ್ಯವನ್ನು ಕೂಡಾ ಹೆಚ್ಚಿಸುತ್ತವೆ.. ಚರ್ಮವನ್ನು ಮೃದುವಾಗಿ ಮಾಡುವುದರ ಜೊತೆಗೆ, ಹೊಳೆಯುವಂತೆ ಮಾಡುತ್ತದೆ.. ವಯಸ್ಸಾಗುತ್ತಿದ್ದರೂ ಹಾಗೆ ಕಾಣುವುದಿಲ್ಲ.. ತುಪ್ಪ ಸೇವನೆಯಿಂದ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.. ಮೆದುಳು ಚುರುಕಾಗಿ, ನಮ್ಮ ಕೆಲಸ ಕಾರ್ಯಗಳು ಕೂಡಾ ಸರಾಗವಾಗಿ ನಡೆಯುತ್ತವೆ.. ನಮ್ಮಲ್ಲಿ ಹುಮ್ಮಸ್ಸು ಹೆಚ್ಚಾಗುತ್ತದೆ..
ಹಸುವಿನ ತುಪ್ಪದಲ್ಲಿ ಬ್ಯುಟರಿಕ್ ಆಮ್ಲವಿದೆ. ಇದು ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ಅನಗತ್ಯ ಕೊಬ್ಬನ್ನು ಕರಗಿಸಲು ಸಹ ಸಹಾಯ ಮಾಡುತ್ತದೆ. ಜೊತೆಗೆ ನಮ್ಮ ಕರುಳನ್ನು ತುಪ್ಪವು ಆರೋಗ್ಯವಾಗಿರಿಸುತ್ತದೆ..

ಇದನ್ನೂ ಓದಿ; ಮ್ಯೂಸಿಯಂನಲ್ಲಿ 15 ಕೋಟಿ ಮೌಲ್ಯದ ಚಿನ್ನ ಕದ್ದ; ಮುಂದೆ ಆಗಿದ್ದೇನು..?

 

Share Post