InternationalLifestyle

ಶ್ರೀಮಂತ ಪುರುಷರನ್ನು ಬುಟ್ಟಿಗೆ ಹಾಕಿಕೊಳ್ಳೋದು ಹೇಗೆ ಅಂತ ಹೇಳಿಕೊಡ್ತಾಳಂತೆ ಈಕೆ!

ಬೀಜಿಂಗ್‌; ಶ್ರೀಮಂತರ ಪುರುಷರನ್ನು ಬುಟ್ಟಿಗೆ ಹಾಕಿಕೊಂಡರೆ ಜೀವನ ಸುಖಕರವಾಗಿರುತ್ತೆ ಅಂತ ತುಂಬಾ ಜನ ಯುವತಿಯರು ಬಯಸುತ್ತಿರುತ್ತಾರೆ.. ಆದ್ರೆ ಕೆಲವರಿಗೆ ಮಾತ್ರ ಆ ಕಲೆ ದಕ್ಕುತ್ತೆ.. ಕೆಲವರಿಗೆ ಶ್ರೀಮಂತರ ಸ್ನೇಹ ಮಾಡಬೇಕೆಂಬ ಆಸೆ ಇದ್ದರೂ, ಅವರನ್ನು ಪರಿಚಯ ಮಾಡಿಕೊಂಡು ಅವರೊಂದಿಗೆ ಸಲುಗೆ ಬೆಳೆಸೋದು ಹೇಗೆ ಅನ್ನೋದು ಗೊತ್ತಿರೋದಿಲ್ಲ.. ಹೀಗಾಗಿ ಇಂತಹವರಿಗಾಗಿ ಇಲ್ಲೊಬ್ಬ ಮಹಿಳೆ ಟ್ರೈನಿಂಗ್‌ ಕೊಡ್ತಾಳಂತೆ.. ಶ್ರೀಮಂತ ಪುರುಷರನ್ನು ಪ್ರೀತಿಯಲ್ಲಿ ಬೀಳಿಸೋದು ಹೇಗೆ..? ಅವರು ನಿಮ್ಮ ಹಿಂದೆ ಸುತ್ತುವಂತೆ ಮಾಡೋದು ಹೇಗೆ..? ಎಂಬುದರ ಬಗ್ಗೆ ಈ ಮಹಿಳೆ ಯುವತಿಯರಿಗೆ ತರಬೇತಿ ಕೊಡ್ತಾಳಂತೆ..!

ಇದನ್ನೂ ಓದಿ; ಬಸವನಬಾಗೇವಾಡಿಯಲ್ಲಿ ರಣಭೀಕರ ಅಪಘಾತ; ಮೂವರ ದುರ್ಮರಣ!

ಅಚ್ಚರಿಯಾದರೂ ಇದು ನಿಜ.. ಚೀನಾದ ಲಿಚುವಾಂಕೂ ಎಂಬ ಯುವತಿ ಈ ಕಾರಣದಿಂದಾಗಿಯೇ ದೊಡ್ಡ ಹೆಸರು ಮಾಡಿದ್ದಾಳೆ.. ಈಕೆಯ ಕೆಲಸವೇ ಶ್ರೀಮಂತ ಪುರುಷರನ್ನು ಬುಟ್ಟಿಗೆ ಹಾಕಿಕೊಳ್ಳುವುದರ ಬಗ್ಗೆ, ಆತನಿಂದ ದುಬಾರಿ ಗಿಫ್ಟ್‌ಗಳನ್ನು ಪಡೆಯುವುದರ ಬಗ್ಗೆ ತರಬೇತಿ ನೀಡುವುದು.. ಇದಕ್ಕಾಗಿ ಲಿಚಚುವಾಂಕೂ, ಪ್ರತಿ ಯುವತಿಯಿಂದ 1.15 ಲಕ್ಷದವರೆಗೂ ಫೀಸ್‌ ಪಡೆಯುತ್ತಾಳಂತೆ..!. ಇಷ್ಟು ದುಬಾರಿಯಾದರೂ ಈಕೆ ಅತ್ಯಂತ ಬೇಡಿಕೆಯ ಮಹಿಳೆಯಾಗಿದ್ದಾಳೆ.. ಈಕೆಯಿಂದ ತರಬೇತಿ ಪಡೆಯಲು ಹುಡುಗಿಯರು ಕ್ಯೂ ನಿಲ್ಲುತ್ತಾರಂತೆ..!

ಇದನ್ನೂ ಓದಿ; ಇಬ್ಬರನ್ನು ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿ ತಂದು ಬಿಸಾಡಿದ್ದ!

ಕೆಲವರು ಈ ಮಹಿಳೆ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಇದು ಮಹಿಳೆಯರನ್ನು ಲೈಂಗಿಕ ವಸ್ತುಗಳನ್ನಾಗಿ ಮಾಡುವ ಕೆಲಸ ಎಂದು ಆರೋಪ ಮಾಡುತ್ತಿದ್ದಾರೆ.. ಇದರ ನಡುವೆಯೂ ಈ ಚೀನಾದಲ್ಲಿ ಸಾಕಷ್ಟು ಹೆಸರು ಗಳಿಸುತ್ತಿದ್ದಾಳೆ..

Share Post