National

ಅಮರನಾಥ ಯಾತ್ರೆ ಪುನಾರಂಭ; ಗುಹೆಯತ್ತ ಸಾವಿರಾರು ಭಕ್ತರು ಹೆಜ್ಜೆ

ನವದೆಹಲಿ; ಭಾರಿ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಈಗ ಪುನಾರಂಭಗೊಂಡಿದೆ. ಇಂದು ಮುಂಜಾನೆಯಿಂದ ಅಮರನಾಥ ಯಾತ್ರೆ ಮುಂದುವರೆಸಲು ಭಕ್ತರಿಗೆ ಅವಕಾಶ ನೀಡಲಾಗಿದೆ.

ಇಂದು ಮುಂಜಾನೆ 5 ಗಂಟೆಗೆ ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಯಾತ್ರಾರ್ಥಿಗಳು ಹೊರಟಿದ್ದಾರೆ. ಬಾಲ್ಟಾಲ್ ಮತ್ತು ನುನ್ವಾನ್ ನಿಂದ ಹೆಲಿಕಾಪ್ಟರ್ ಹಾರಾಟ ಆರಂಭವಾಗಿದೆ. ಜಮ್ಮು ಮಾರ್ಗವಾಗಿ ಬರುವ ಯಾತ್ರಾರ್ಥಿಗಳಿಗೆ ಬೇಸ್ ಕ್ಯಾಂಪ್‍ಗೆ ತೆರಳಲು ಅನುಮತಿ ನೀಡಲಾಗಿದೆ. ಪೆಹಲ್ಗಾಮ್ ಬೇಸ್ ಮಾರ್ಗವಾಗಿ ತೆರಳಲು ಅವಕಾಶ ನೀಡಲಾಗಿದೆ.

ಭಾರಿ ಮಳೆಯಿಂದಾಗಿ ಶುಕ್ರವಾರದಿಂದ ತಾತ್ಕಾಲಿಕವಾಗಿ ಅಮರನಾಥ ಯಾತ್ರೆ ಬಂದ್ ಮಾಡಲಾಗಿತ್ತು. ಇದೀಗ ಹವಾಮಾನ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಯಾತ್ರೆ ಮತ್ತೆ ಆರಂಭಿಸಲಾಗಿದೆ. ಇತ್ತ ಶುಕ್ರವಾರ ನಾಪತ್ತೆಯಾದ 40 ಮಂದಿ ಬದುಕಿರುವುದು ಅನುಮಾನ ಎನ್ನಲಾಗಿದೆ. ಮೂರು ದಿನದ ಕಾರ್ಯಾಚರಣೆ ನಡೆಸಿದರೂ ಯಾತ್ರಾರ್ಥಿಗಳು ಪತ್ತೆಯಾಗಿಲ್ಲ.

Share Post