CrimeNational

ಮ್ಯೂಸಿಯಂನಲ್ಲಿ 15 ಕೋಟಿ ಮೌಲ್ಯದ ಚಿನ್ನ ಕದ್ದ; ಮುಂದೆ ಆಗಿದ್ದೇನು..?

ಭೋಪಾಲ್‌; ಸಿನಿಮಾ ಸ್ಟೈಲ್‌ನಲ್ಲಿ ಮ್ಯೂಸಿಯಂಗೆ ನುಗ್ಗಿದ ಕಳ್ಳನೊಬ್ಬ ಅದರಲ್ಲಿದ್ದ ಬೆಳಬಾಳುವ ಚಿನ್ನದ ವಸ್ತುಗಳನ್ನು ಕದ್ದಿದ್ದ.. ಅದರ ಬೆಲೆ ಬರೋಬ್ಬರಿ 15 ಕೋಟಿ ರೂಪಾಯಿ.. ಎಲ್ಲವನ್ನೂ ಮೂಟೆ ಕಟ್ಟಿದ್ದ ಕಳ್ಳ ಅಲ್ಲಿಂದ ಹೊರಬಿದ್ದಿದ್ದರೆ ಸಿಗೋದು ಕಷ್ಟ ಇತ್ತೇನೋ.. ಆದ್ರೆ ಎಸ್ಕೇಪ್‌ ಆಗುವಾಗ 20 ಅಡಿ ಎತ್ತರದಿಂದ ಬಿದ್ದು ಕಾಲು ಮುರಿದುಕೊಂಡು ಅಲ್ಲೇ ಬಿದ್ದು ಒದ್ದಾಡಿ ಸಿಕ್ಕಿಬಿದ್ದಿದ್ದಾನೆ..

ಇದನ್ನೂ ಓದಿ; ಚಾರ್ಜ್‌ಶೀಟ್‌ನಲ್ಲಿ ದರ್ಶನ್‌ ಪಾತ್ರದ ಬಗ್ಗೆ ಏನೆಲ್ಲಾ ಹೇಳಲಾಗಿದೆ..?

ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಮ್ಯೂಸಿಯಂನಲ್ಲಿ ಈ ಘಟನೆ ನಡೆದಿದೆ.. ವಿನೋದ್‌ ಯಾದವ್‌ ಎಂಬು ವ್ಯಕ್ತಿ ಎಲ್ಲರಂತೆ ಮ್ಯೂಸಿಯಂಗೆ ಟಿಕೆಟ್‌ ಖರೀದಿ ಮಾಡಿ ಎಂಟ್ರಿ ಕೊಟ್ಟಿದ್ದಾನೆ.. ಸಂಜೆ ಬಾಗಿಲು ಹಾಕು ಸಮಯಕ್ಕೆ ಮ್ಯೂಸಿಯಂ ಮೆಟ್ಟಿಲ ಕೆಳಗೆ ಬಚ್ಚಿಟ್ಟುಕೊಂಡು ಅಲ್ಲೇ ಉಳಿದುಬಿಟ್ಟಿದ್ದಾನೆ.. ಮಾರನೇ ದಿನ ಮ್ಯೂಸಿಯಂಗೆ ರಜೆ ಇದ್ದಿದ್ದರಿಂದ ಸಾವಧಾನವಾಗಿ ಆತನ ಮ್ಯೂಸಿಯಂನಲ್ಲಿದ್ದ ಪುರಾತನ ಚಿನ್ನದ ವಸ್ತುಗಳನ್ನು ಕದಿಯಲು ಪ್ರಾರಂಭ ಮಾಡಿದ್ದಾನೆ.. ಮೊಘಲರು ಹಾಗೂ ಗುಪ್ತರ ಕಾಲದ ನಾಣ್ಯಗಳು, ಕಲಾಕೃತಿಗಳು ಮುಂತಾದುವನ್ನು ಕದ್ದ ಆತ ಅಲ್ಲಿಂದ ಎಸ್ಕೇಪ್‌ ಆಗಲು ಹೋಗಿದ್ದಾನೆ.. ಮ್ಯೂಸಿಯಂ 25 ಅಡಿ ಎತ್ತರದ ಗೋಡೆ ಜಂಪ್‌ ಮಾಡೋದಕ್ಕೆ ಹೋದ ಆರೋಪಿ ಅಲ್ಲೇ ಕೆಳಗೆ ಬಿದ್ದಿದ್ದಾನೆ.. ಇದ್ರಿಂದ ಕಾಲು ಮುರಿದುಕೊಂಡು ಎದ್ದೇಳಲಾರದೆ ಆತ ಅಲ್ಲೇ ಬಿದ್ದಿದ್ದಾನೆ.. ಮಾರನೇ ದಿನ ಅಧಿಕಾರಿಗಳು ಬಂದು ನೋಡಿದಾಗ ಕಳ್ಳ ಮ್ಯೂಸಿಯಂ ಆವರಣದಲ್ಲೇ ಬಿದ್ದಿರುವುದು ಪತ್ತೆಯಾಗಿದೆ..

ಇದನ್ನೂ ಓದಿ; ಸಿದ್ದರಾಮಯ್ಯ ರಾಜೀನಾಮೆ ನೀಡೋ ಪರಿಸ್ಥಿತಿ ಗ್ಯಾರೆಂಟಿ; ಯಡಿಯೂರಪ್ಪ

ಆರೋಪಿಯಿಂದ ಸುಮಾರು 100 ಚಿನ್ನ, 75 ಬೆಳ್ಳಿ ನಾಣ್ಯಗಳು, 40 ತಾಮ್ರದ ನಾಣ್ಯಗಳು ಸೇರಿ ಒಟ್ಟು 15 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.. ತೀವ್ರವಾಗಿ ಗಾಯಗೊಂಡಿರುವುದರಿಂದ ಆರೋಪಿಯನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ..

Share Post