Shami; ಶಮಿ ಹಿಮ್ಮಡಿ ಆಪರೇಷನ್ ಸಕ್ಸಸ್; ಚೇತರಿಸಿಕೊಳ್ತಿರುವ ಟೀಂ ಇಂಡಿಯಾ ಆಟಗಾರ
ಟೀಂ ಇಂಡಿಯಾದ ಖ್ಯಾತ ವೇಗದ ಬೌಲರ್ ಮೊಹಮ್ಮದ್ ಶಮಿ ಗಾಯದ ಕಾರಣ ODI ವಿಶ್ವಕಪ್ 2023 ಫೈನಲ್ ನಂತರ ಮೈದಾನದಿಂದ ಹೊರಗುಳಿದಿದ್ದರು. 2023ರ ಏಕದಿನ ವಿಶ್ವಕಪ್ ವೇಳೆ ಶಮಿ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಆದರೆ, ಆದರೂ ಆಟ ಮುಂದುವರೆಸಿದ್ದರು. ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ತಂಡದ ಗೆಲುವಿಗಾಗಿ ಹೋರಾಡಿದ್ದರು. ಇದೀಗ ಅವರು, ಹಿಮ್ಮಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ; ಸುಧಾಮೂರ್ತಿ, ಮಗಳು ಅಕ್ಷತಾ ಮೂರ್ತಿ ಬೀದಿಯಲ್ಲಿ ಪುಸ್ತಕ ಖರೀದಿ; ಸರಳತೆಗೆ ಜನ ಮೆಚ್ಚುಗೆ
ಹಿಮ್ಮಡಿ ಶಸ್ತ್ರಚಿಕಿತ್ಸೆ ಯಶಸ್ವಿ;
ಹಿಮ್ಮಡಿ ಶಸ್ತ್ರಚಿಕಿತ್ಸೆ ಯಶಸ್ವಿ; ಪಂದ್ಯಾವಳಿಯ ನಂತರ, ಮೊಹಮ್ಮದ್ ಶಮಿ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಗಾಯದ ನಡುವೆಯೂ ಆಟ ಮುಂದುವರಿಸಿದ್ದರಿಂದ ಸಮಸ್ಯೆ ಜಾಸ್ತಿಯಾಗಿರುವ ಬಗ್ಗೆ ವೈದ್ಯರು ಹೇಳಿದ್ದರು. ಮೊದಮೊದಲು ಔಷಧ, ಚುಚ್ಚುಮದ್ದಿನ ಮೂಲಕ ಗಾಯ ವಾಸಿಯಾಗುತ್ತದೆ ಎಂದು ಭಾವಿಸಲಾಗಿತ್ತು. ಆದ್ರೆ ಗಾಯ ಹೆಚ್ಚಿದ್ದರಿಂದ ಔಷಧಿ, ಚುಚ್ಚುಮದ್ದಿಗೆ ಅದು ವಾಸಿಯಾಗಲಿಲ್ಲ. ಹೀಗಾಗಿ ಇತ್ತೀಚೆಗಷ್ಟೇ ಈ ಸ್ಟಾರ್ ವೇಗಿ ಶಮಿ ಹಿಮ್ಮಡಿಗೆ ಆಪರೇಷನ್ ಮಾಡಿಸಿಕೊಂಡಿದ್ದರು. ತಾನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು.
ಇದನ್ನೂ ಓದಿ; ಯೂಟ್ಯೂಬ್ ನೋಡಿ ಶೂ ಲಾಂಡ್ರಿ ಇಟ್ಟಳು; ಲಕ್ಷ ಲಕ್ಷ ಸಂಪಾದಿಸುತ್ತಿರುವ ಯುವತಿ!
ಫೋಟೋ ಹಂಚಿಕೊಂಡಿರುವ ಶಮಿ;
ಫೋಟೋ ಹಂಚಿಕೊಂಡಿರುವ ಶಮಿ; “ಹಿಮ್ಮಡಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಆದರೆ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನನ್ನ ಕಾಲಿನ ಮೇಲೆ ನಡೆಯಲು ಎದುರು ನೋಡುತ್ತಿದ್ದೇನೆ” ಎಂದು ಶಮಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯ ಬೆಡ್‌ನಲ್ಲಿರುವ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.
ಗಾಯದ ಕಾರಣ, ಶಮಿ ODI ವಿಶ್ವಕಪ್ 2023 ರ ಫೈನಲ್, ದಕ್ಷಿಣ ಆಫ್ರಿಕಾ ಪ್ರವಾಸ, ಅಫ್ಘಾನಿಸ್ತಾನ ವಿರುದ್ಧದ ಸರಣಿ ಮತ್ತು ಪ್ರಸ್ತುತ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ನಂತರ ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯನ್ನು ಸಹ ಕಳೆದುಕೊಂಡಿದ್ದಾರೆ. ಶಮಿ ಚೇತರಿಸಿಕೊಳ್ಳಲು ಕೆಲವು ವಾರಗಳು ಬೇಕಾಗಬಹುದು ಎಂದು ತೋರುತ್ತದೆ. ಅವರು ನಾಲ್ಕು ವಾರಗಳಲ್ಲಿ ಪ್ರಾರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2024 ಅನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಐಪಿಎಲ್ ಬಳಿಕ ಅವರು ಟಿ20 ವಿಶ್ವಕಪ್‌ಗೆ ಲಭ್ಯರಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ; ಲೇಖಕಿ ನಿತಾಶಾ ಕೌಲ್‌ರನ್ನು ಬೆಂಗಳೂರು ವಿಮಾನ ನಿಲ್ದಾಣದ ವಾಪಸ್ ಕಳುಹಿಸಿದ್ದೇಕೆ..?