Sports

ಆರ್‌ಸಿಬಿಯಲ್ಲಿ ಕನ್ನಡಿಗ ಆಟಗಾರರಿಗೆ ಬೆಲೆಯೇ ಇಲ್ಲವೇ..?; ವಿಜಯ್‌ಗೆ ಅವಕಾಶ ಸಿಗದಿದ್ದು ಯಾಕೆ..?

ಐಪಿಎಲ್‌ನಲ್ಲಿ ಬೆಂಗಳೂರಿನ ತಂಡ ಆರ್‌ಸಿಬಿ ಇದೆ.. ಕನ್ನಡಿಗರು ಈ ತಂಡದ ಬಗ್ಗೆ ಈಗಲೂ ವಿಶೇಷ ಪ್ರೀತಿ ಇರಿಸಿಕೊಂಡಿದ್ದಾರೆ.. ಹಲವಾರು ಬಾರಿ ಸೋತರೂ ಕೂಡಾ ಈಗಲೂ ಕೂಡಾ ಕನ್ನಡಿಗ ಅಭಿಮಾನಿಗಳು ಈ ಬಾರಿ ಕಪ್‌ ನಮ್ದೆ ಎಂದು ಹೇಳುತ್ತಿದ್ದಾರೆ.. ಆದ್ರೆ ದುರದೃಷ್ಟ ಏನು ಅಂದ್ರೆ, ಕರ್ನಾಟಕದ ಟೀಮ್‌ನಲ್ಲಿ ಕನ್ನಡಿಗ ಆಟಗಾರರಿಗೇ ಅವಕಾಶ ಇಲ್ಲ.. ಇದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದೆ..

ಇದನ್ನೂ ಓದಿ;ಮೈಸೂರು ಕಾಂಗ್ರೆಸ್‌ ಅಭ್ಯರ್ಥಿ ಒಕ್ಕಲಿಗರಲ್ಲವೇ..?; ಪ್ರತಾಪ ಸಿಂಹ ಹೇಳೋದೇನು..?

ಹೋಮ್‌ ಟೌನ್‌ನಲ್ಲೇ ಸೋಲು..!;

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಲಕ್ನೋ ತಂಡ ಎದುರು ಸೋತಿದೆ.. ಹೋಮ್‌ ಗ್ರೌಂಡ್‌ನಲ್ಲಿ ಕನ್ನಡಿಗರಿಗೆ ಅವಕಾಶ ಕೊಟ್ಟಿದ್ದರೆ ಗೆಲ್ಲುವ ಅವಕಾಶ ಇತ್ತು. ಆದರೂ ಹಲವು ಎಡವಟ್ಟುಗಳು ಮಾಡಿಕೊಂಡಿದ್ದರಿಂದ ಆರ್‌ಸಿಬಿ ತಂಡ ಮತ್ತೆ ಮುಗ್ಗರಿಸಿದೆ.. ಇದರಿಂದಾಗಿ ಆರ್‌ಸಿಬಿ ಅಭಿಮಾನಿಗಳ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..

ಇದನ್ನೂ ಓದಿ; ಬರ್ತ್‌ ಡೇ ದಿನವೇ ಭೀಕರ ಅಪಘಾತ; ದೇವಸ್ಥಾನದ ಬಳಿಯೇ ತಾಯಿ, ಮಗು ದಾರುಣ ಸಾವು!

ಪ್ಲೇ ಆಫ್‌ಗೆ ಹೋಗಲು ಆರ್‌ಸಿಬಿಗೆ ಅವಕಾಶವಿದೆಯಾ..?;

ಮೊದಲ ಪಂದ್ಯದಲ್ಲೇ ಆರ್‌ಸಿಬಿ ಸೋತಿತ್ತು.. ಎಮ್‌ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆರ್‌ಸಿಬಿ ಮುಗ್ಗರಿಸಿತ್ತು.. ಅನಂತರ ನಡೆದ ಪಂದ್ಯದಲ್ಲಿ ಪಂಜಾಬ್‌ ಸೂಪರ್‌ ಕಿಂಗ್ಸ್‌ ವಿರುದ್ಧ ಗೆದ್ದು ಭರವಸೆ ಮೂಡಿಸಿತ್ತು.. ಆದ್ರೆ ಆ ಭರವಸೆ ಹೆಚ್ಚು ಕಾಲ ಉಳಿಯಲಿಲ್ಲ.. ಯಾಕಂದ್ರೆ ಕೆಕೆಆರ್‌ ವಿರುದ್ಧ ಪಂದ್ಯದಲ್ಲಿ ಮತ್ತೆ ಆರ್‌ಸಿಬಿ ಆಟಗಾರರು ಸೋತುಸುಣ್ಣವಾದರು. ನಂತರ ನಿನ್ನೆ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಪಂದ್ಯವಿತ್ತು.. ಅದೂ ಕೂಡಾ ಬೆಂಗಳೂರಿನಲ್ಲಿಯೇ ಇತ್ತು.. ಆದ್ರೆ ಹಲವು ಎಡವಟ್ಟುಗಳನ್ನು ಮಾಡಿಕೊಂಡರು.. ತಾವೇ ಮಾಡಿದ ತಪ್ಪುಗಳಿಂದ ಆರ್‌ಸಿಬಿ ಆಟಗಾರರು ಸೋಲನುಭವಿಸಿದರು.. ಹೀಗಾಗಿ ಆರ್‌ಸಿಬಿ ತಂಡ ಪ್ಲೇ ಆಫ್‌ ಗೂ ಹೋಗುತ್ತೋ ಇಲ್ಲವೋ ಎಂಬ ಭಯ ಶುರುವಾಗಿದೆ..

ಇದನ್ನೂ ಓದಿ; Crime; ಹೈಕೋರ್ಟ್‌ನಲ್ಲೇ ಕತ್ತು ಕುಯ್ದುಕೊಂಡ ವ್ಯಕ್ತಿ; ಮುಂದೇನಾಯ್ತು..?

ತಂಡದಲ್ಲಿ ಕನ್ನಡಿಗರಿಗೇ ಬೆಲೆ ಇಲ್ಲವಾ..?

ಕೆಕೆಆರ್‌ ವಿರುದ್ಧ ಆರ್‌ಸಿಬಿ ಸೋತಿತ್ತು.. ಬೌಲರ್‌ಗಳೆಲ್ಲಾ ಹೆಚ್ಚು ರನ್‌ ಬಿಟ್ಟುಕೊಟ್ಟರು.. ಆದ್ರೆ ಈ ಪಂದ್ಯದಲ್ಲಿ ಕನ್ನಡಿಗ ವಿಜಯ್‌ ಕುಮಾರ್‌ ವೈಶಾಕ್‌ ಅವರು 4 ಓವರ್‌ ಎಸೆದು 1 ವಿಕೆಟ್‌ ಪಡೆದು ಕೇವಲ 23 ರನ್‌ ಅಷ್ಟೇ ಕೊಟ್ಟರು.. ಅಂದು ಎಲ್ಲಾ ಬೌಲರ್‌ಗಳೂ 40 ರನ್‌ ಮೇಲೆ ಹೊಡೆಸಿಕೊಂಡಿದ್ದರು.. ಅವರ ನಡುವೆ ವಿಜಯ್‌ಕುಮಾರ್‌ ವೈಶಾಕ್‌ ಅವರು ಉತ್ತಮ ಪ್ರದರ್ಶನ ನೀಡಿದ್ದರು.. ಹೀಗಾಘಿ ಬೆಂಗಳೂರಿನ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಬಹುದಿತ್ತು.. ಯಾಕಂದ್ರೆ ಬೆಂಗಳೂರಿನಲ್ಲಿ ಪಂದ್ಯ ನಡೆಯುತ್ತಿದ್ದರಿಂದ ವಿಜಯ್‌ ಕುಮಾರ್‌ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿತ್ತು.. ಆದ್ರೆ ಅವಕಾಶ ನೀಡಿಲ್ಲ.. ಇದು ಆರ್‌ಸಿಬಿ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ.. ಚೆನ್ನಾಗಿ ಆಡುತ್ತಿದ್ದ ಕನ್ನಡಿಗನನ್ನು ಬೆಂಚ್​​ ಕಾಯಿಸಿದ್ದು ಎಷ್ಟು ಸರಿ? ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ..

ಇದನ್ನೂ ಓದಿ; ಸಚಿವ ಸುಧಾಕರ್‌, ಕೃಷ್ಣಬೈರೇಗೌಡ ಇದಾರೆ ಅಂತ ಮೆರೆದರೆ ಅಷ್ಟೇ; ಡಿಕೆಶಿ ಹೇಳಿದ್ದು ಯಾರಿಗೆ..?

Share Post