Politics

Rajyasabha Election; ಕಾಂಗ್ರೆಸ್‌ ಪರವಾಗಿ ಅಡ್ಡ ಮತದಾನ ಮಾಡಿದ ಎಸ್‌.ಟಿ.ಸೋಮಶೇಖರ್‌

ಬೆಂಗಳೂರು; ವಿಧಾನಸಭೆಯಿಂದ ಆಯ್ಕೆಯಾಗುವ ರಾಜ್ಯದ 4 ರಾಜ್ಯಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಇದರಲ್ಲಿ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಕಾಂಗ್ರೆಸ್‌ ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ. ಈ ಬಗ್ಗೆ ಬಿಜೆಪಿ ಚುನಾವಣಾ ಏಜೆಂಟ್‌ ಸುನೀಲ್‌ ಕುಮಾರ್‌ ಅವರೇ ಮಾಹಿತಿ ಕೊಟ್ಟಿದ್ದಾರೆ.

ಇದನ್ನೂ ಓದಿ; Shami; ಶಮಿ ಹಿಮ್ಮಡಿ ಆಪರೇಷನ್‌ ಸಕ್ಸಸ್‌; ಚೇತರಿಸಿಕೊಳ್ತಿರುವ ಟೀಂ ಇಂಡಿಯಾ ಆಟಗಾರ

ವಿಪ್‌ ಲೆಕ್ಕಿಸದೇ ಕಾಂಗ್ರೆಸ್‌ಗೆ ಮತ;

ವಿಪ್‌ ಲೆಕ್ಕಿಸದೇ ಕಾಂಗ್ರೆಸ್‌ಗೆ ಮತ; ಅಡ್ಡ ಮತದಾನ ಮಾಡುವ ಭೀತಿಯಿಂದ ಎಲ್ಲಾ ಪಕ್ಷಗಳೂ ತಮ್ಮ ಶಾಸಕರಿಗೆ ವಿಪ್‌ ಜಾರಿ ಮಾಡಿವೆ. ತಮ್ಮ ಅಭ್ಯರ್ಥಿಗಳಿಗೇ ಮತ ಹಾಕಬೇಕು ಎಂದು ಹೇಳಿವೆ. ಹೀಗಿದ್ದರೂ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಕಾಂಗ್ರೆಸ್‌ ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ.. ಹಲವು ತಿಂಗಳುಗಳಿಂದ ಎಸ್‌.ಟಿ.ಸೋಮಶೇಖರ್‌ ಅವರು ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಸೇರುವ ಸಿದ್ಧತೆಯಲ್ಲಿದ್ದಾರೆ. ಮೊನ್ನೆ ನಡೆದ ವಿಧಾನಪರಿಷತ್‌ ಉಪಚುನಾವಣೆಯಲ್ಲೂ ಸೋಮಶೇಖರ್‌ ಕಾಂಗ್ರೆಸ್‌ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೀಗ ರಾಜ್ಯಸಭಾ ಚುನಾವಣೆಯಲ್ಲಿ ಮತ ಹಾಕಿದ ಮೇಲೆ ಅದನ್ನು ಪಕ್ಷದ ಚುನಾವಣಾ ಏಜೆಂಟ್‌ಗೆ ತೋರಿಸಿ, ಬೂತ್‌ಗೆ ಹಾಕಬೇಕು.. ಹೀಗಾಗಿ ಅವರು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿರುವುದು ಗೊತ್ತಾಗಿದೆ.

ಇದನ್ನೂ ಓದಿ; ಸುಧಾಮೂರ್ತಿ, ಮಗಳು ಅಕ್ಷತಾ ಮೂರ್ತಿ ಬೀದಿಯಲ್ಲಿ ಪುಸ್ತಕ ಖರೀದಿ; ಸರಳತೆಗೆ ಜನ ಮೆಚ್ಚುಗೆ

ಅಭಿವೃದ್ದಿಗೆ ನನ್ನ ಮತ ಎಂದಿದ್ದ ಎಸ್‌.ಟಿ.ಸೋಮಶೇಖರ್‌;

ಅಭಿವೃದ್ದಿಗೆ ನನ್ನ ಮತ ಎಂದಿದ್ದ ಎಸ್‌.ಟಿ.ಸೋಮಶೇಖರ್‌; ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಮತದಾನಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ್ದರು.. ಈ ವೇಳೆ ಅವರು ಅಭಿವೃದ್ಧಿಗೆ ನನ್ನ ಮತ ಎಂದು ಹೇಳಿದ್ದರು. ಅನುದಾನ ನೀಡುವಂತಹವರಿಗೆ ನಾನು ಆತ್ಮಸಾಕ್ಷಿಯಿಂದ ಮತ ಹಾಕುತ್ತೇನೆ. ಕಳೆದ ಬಾರಿ ನಿರ್ಮಲಾ ಸೀತಾರಾಮನ್‌ ಅವರಿಗೆ ಮತ ಹಾಕಿದ್ದೆ. ಆದರೆ ಅವರು ನನಗೆ ಅಪಾಯಿಂಟ್‌ಮೆಂಟ್‌ ಕೊಡಲೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಮೇಲೆ ಅವರು ಮತದಾನ ಮಾಡಿದ್ದು, ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ.

ಇದನ್ನೂ ಓದಿ; ಯೂಟ್ಯೂಬ್‌ ನೋಡಿ ಶೂ ಲಾಂಡ್ರಿ ಇಟ್ಟಳು; ಲಕ್ಷ ಲಕ್ಷ ಸಂಪಾದಿಸುತ್ತಿರುವ ಯುವತಿ!

ಸೋಮಶೇಖರ್‌ ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ;

ಸೋಮಶೇಖರ್‌ ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ; ಎಸ್‌.ಟಿ.ಸೋಮಶೇಖರ್‌ ಹೇಳಿಕೆ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿಯವರು ಹೇಳಿಕೆ ಕೊಟ್ಟಿದ್ದರು.. ಸೋಮಶೇಖರ್‌ ಅವರು ಕ್ಷೇತ್ರದ ಅಭಿವೃದ್ಧಿ ಬಿಟ್ಟು ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ.. ಅವರು ಮಂತ್ರಿಯಾಗಿದ್ದರು. ಆಗ ಕ್ಷೇತ್ರದ ಅಭಿವೃದ್ಧಿ ಮಾಡದೇ ತಮ್ಮ ಅಭಿವೃದ್ಧಿ ಮಾಡಿಕೊಂಡಿರಬೇಕು ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ; ಲೇಖಕಿ ನಿತಾಶಾ ಕೌಲ್‌ರನ್ನು ಬೆಂಗಳೂರು ವಿಮಾನ ನಿಲ್ದಾಣದ ವಾಪಸ್‌ ಕಳುಹಿಸಿದ್ದೇಕೆ..?

 

Share Post