BengaluruLifestyle

ಸುಧಾಮೂರ್ತಿ, ಮಗಳು ಅಕ್ಷತಾ ಮೂರ್ತಿ ಬೀದಿಯಲ್ಲಿ ಪುಸ್ತಕ ಖರೀದಿ; ಸರಳತೆಗೆ ಜನ ಮೆಚ್ಚುಗೆ

ಬೆಂಗಳೂರು; ಇನ್ಫೋಸಿಸ್‌ ನಾರಾಯಣ ಮೂರ್ತಿ ಹಾಗೂ ಅವರ ಮಗಳು, ಇಂಗ್ಲೆಂಡ್‌ ಪ್ರಥಮ ಮಹಿಳೆ ಅಕ್ಷತಾ ಮೂರ್ತಿಯವರು ಇತ್ತೀಚೆಗೆ ಬೆಂಗಳೂರಿನ ಸಣ್ಣ ಐಸ್‌ಕ್ರೀಮ್‌ ಪಾರ್ಲರ್‌ಗೆ ಹೋಗಿ ಐಸ್‌ ಕ್ರೀಂ ಸವಿದಿದ್ದರು. ಇದೀಗ ಇಡೀ ಫ್ಯಾಮಿಲಿ ಪುಸ್ತಕ ಪರಿಷೆಯಲ್ಲಿ ಕಾಣಿಸಿಕೊಂಡಿದೆ. ಎಲ್ಲರೂ ಸರಳವಾಗಿ ಸಾಮಾನ್ಯ ಜನರಂತೆ ಪುಸ್ತಕ ಖರೀದಿ ಮಾಡಿದ್ದಾರೆ. ನಾರಾಯಣಮೂರ್ತಿ ಕುಟುಂಬದ ಸರಳತೆ ಕಂಡು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; ಯೂಟ್ಯೂಬ್‌ ನೋಡಿ ಶೂ ಲಾಂಡ್ರಿ ಇಟ್ಟಳು; ಲಕ್ಷ ಲಕ್ಷ ಸಂಪಾದಿಸುತ್ತಿರುವ ಯುವತಿ!

ರಸ್ತೆಯಲ್ಲಿ ಪುಸ್ತಕ ಹುಡುಕಾಡಿದ ಅಕ್ಷತಾ  ಮೂರ್ತಿ;

ರಸ್ತೆಯಲ್ಲಿ ಪುಸ್ತಕ ಹುಡುಕಾಡಿದ ಅಕ್ಷತಾ  ಮೂರ್ತಿ; ಇಂಗ್ಲೆಂಡ್‌ ಪ್ರಧಾನಿ ರಿಶಿ ಸುನಕ್‌ ಪತ್ನಿಯಾಗಿರುವ ಅಕ್ಷತಾ ಮೂರ್ತಿ, ತವರಿಗೆ ಬಂದಿದ್ದಾರೆ.. ಅವರ ಇಬ್ಬರು ಹೆಣ್ಣು ಮಕ್ಕಳು ಕೂಡಾ ಬೆಂಗಳೂರಿಗೆ ಆಗಮಿಸಿದ್ದಾರೆ. ಇವರು ಬೆಂಗಳೂರಿನ ರಾಘವೇಂದ್ರ ಮಠದ ರಸ್ತೆಯಲ್ಲಿ ಜನ ಸಾಮಾನ್ಯರಂತೆ ಓಡಾಡಿದ್ದಾರೆ.. ಪುಸ್ತಕಗಳನ್ನು ಹುಡುಕಾಡಿ ಖರೀದಿ ಮಾಡಿದ್ದಾರೆ. ಸುಧಾಮೂರ್ತಿ, ನಾರಾಯಣಮೂರ್ತಿ, ಅಕ್ಷತಾ ಮೂರ್ತಿ ಹಾಗೂ ಅವರ ಇಬ್ಬರು ಮಕ್ಕಳಾದ ಅನುಷ್ಕಾ ಹಾಗೂ ಕೃಷ್ಣಾ ಕೂಡಾ ಇದ್ದರು.. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದ್ದು ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.. ಕಳೆದ ವಾರ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಜೀವನ ಚರಿತ್ರೆ ಬಿಡುಗಡೆಗಾಗಿ ಅಕ್ಷತಾ ಮೂರ್ತಿ ಮತ್ತು ಮಕ್ಕಳು ಬೆಂಗಳೂರಿಗೆ ಬಂದಿದ್ದರು. ಇದೇ ವೇಳೆ ಈ ವಿಡಿಯೋ ಚಿತ್ರೀಕರಣವಾಗಿರಬಹುದು ಎಂದು ತಿಳಿದುಬಂದಿದೆ.

ಇದನ್ನೂ ಓದಿ; ಇಂದು ರಾಜ್ಯಸಭಾ ಚುನಾವಣೆ; ಮೂರೂ ಪಕ್ಷಗಳಿಗೆ ʻಅಡ್ಡʼ ಆತಂಕ!

ಸರಳ ಉಡುಗೆಯಲ್ಲಿ ಪುಸ್ತಕ ಖರೀದಿಗೆ ಬಂದಿದ್ದ ಕುಟುಂಬ;

ಸರಳ ಉಡುಗೆಯಲ್ಲಿ ಪುಸ್ತಕ ಖರೀದಿಗೆ ಬಂದಿದ್ದ ಕುಟುಂಬ; ಯಾವುದೇ ಆಡಂಬರವಿಲ್ಲದೆ ಇಡೀ ಕುಟುಂಬ ಸರಳ ಉಡುಗೆಯಲ್ಲಿ ಬಂದಿತ್ತು.. ಸಾಮಾನ್ಯರಂತೆ ಪುಸ್ತಕಗಳನ್ನು ಹುಡುಕುತ್ತಿರುವುದನ್ನು ನೋಡಿದ ಎಕ್ಸ್‌ ಬಳಕೆದಾರ ಎಂ.ಆರ್‌.ಗುರುಪ್ರಸಾದ್‌ ಎಂಬುವವರು ಅದನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಫೆಬ್ರವರಿ 10 ರಂದು, ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರ  An Uncommon Love: The Early Life of Sudha and Narayana Murthy ಬಿಡುಗಡೆ ಸಮಾರಂಭದಲ್ಲಿ ನಾರಾಯಣ ಮೂರ್ತಿ ಕುಟುಂಬ ಭಾಗವಹಿಸಿತ್ತು. ಈ ವೇಳೆಐ ವಿಡಿಯೋ ತೆಗೆಯಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ; ಪೀನಟ್‌ ಬಟರ್‌ ಆರೋಗ್ಯಕ್ಕೆ ಒಳ್ಳೆಯದಾ..? ಅದರಲ್ಲಿ ಏನೆಲ್ಲಾ ಪೋಷಕಾಂಶಗಳಿವೆ..?

 

Share Post