Sports

Ind vs Sa ODI : ಟಾಸ್‌ ಗೆದ್ದು ದ.ಆಫ್ರಿಕಾ ಬೌಲಿಂಗ್‌ ಆಯ್ಕೆ

ಬೊಲಾಂಡ್‌ ಪಾರ್ಕ್‌ : ಭಾರತ ಮತ್ತ ದ.ಆಫ್ರಿಕಾ ನಡುವಿನ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯ ಶುರುವಾಗಿದೆ. ಟಾಸ್ ಗೆದ್ದ ದ. ಆಫ್ರಿಕಾ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದೆ.

ಮೊದಲ ಬಾರಿಗೆ ಸರಣಿಯ ಪೂರ್ಣ ಪ್ರಮಾಣದ ನಾಯಕನಾಗಿ ಕಣಕ್ಕಿಳಿದಿರುವ ಕೆ ಎಲ್‌ ರಾಹುಲ್‌ ಅವರಿಗೆ ಇದು ಅತ್ಯಂತ ಮಹತ್ವದ ಸರಣಿ ಆಗಲಿದೆ. ಇಲ್ಲಿ ಸರಣಿ ಗೆಲುವು ಸಾಧಿಸಿದರೆ ಮುಂದಿನ ದಿನಗಳಲ್ಲಿ ಅವರಿಗೆ ನಾಯಕ ಪಟ್ಟ ದೊರೆಯುವ ಸಾಧ್ಯತೆ ಹೆಚ್ಚುತ್ತದೆ.

ರೋಹಿತ್‌ ಶರ್ಮ ಅವರ ಅನುಪಸ್ಥಿತಿಯಲ್ಲಿ ಈ ಪಂದ್ಯ ನಡೆಯುತ್ತಿದೆ. ನಾಯಕ ಸ್ಥಾನದಿಂದ ಇಳಿದ ನಂತರ ವಿರಾಟ್‌ ಅವರು ಮೊದಲ ಸರಣಿ ಆಡುತ್ತಿದ್ದಾರೆ.

ಇನ್ನು ವಿರಾಟ್‌ ಅವರ ಬಗ್ಗೆ ಮಾತನಾಡಿದ ರಾಹುಲ್‌, ನಮ್ಮಲ್ಲಿ ಬಹುತೇಕರು ವಿರಾಟ್‌ ಅವರ ಕ್ಯಾಪ್ಟೆನ್ಸಿಯಲ್ಲಿ ಡೆಬ್ಯೂ ಮಾಡಿದವರಾಗಿದ್ದೇವೆ. ಅವರ ನಿರ್ಧಾರ ನಿಜಕ್ಕೂ ಬೇಸರ ತಂದಿದೆ. ಆದರೆ ಅವರು ನಮ್ಮೊಟ್ಟಿಗೆ ಇನ್ನು ಆಡುತ್ತಿರುವುದು ನಮಗೆ ಖುಷಿಯ ವಿಚಾರ ಎಂದು ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ವೆಂಕಟೇಶ್‌ ಅಯ್ಯರ್‌ ಅವರಿಗೆ ಆಡುವ ಹನ್ನೊಂದರ ಪಟ್ಟಿಯಲ್ಲಿ ಸ್ಥಾನ ದೊರೆತಿದೆ. ಇದರ ಸದುಪಯೋಗ ಪಡೆಯುವರೋ ಇಲ್ಲವೋ ಎಂದು ಕಾದು ನೋಡಬೇಕಿದೆ.

ಇತ್ತೀಚಿನ ಸ್ಕೋರ್‌ ಅಪ್ಡೇಟ್‌ : 27ರನ್‌ ಗಳಿಸಿ ಒಂದು ವಿಕೆಟ್‌ ಕಳೆದುಕೊಂಡಿದೆ ದ.ಆಫ್ರಿಕಾ .

Share Post