InternationalNational

ಲೇಖಕಿ ನಿತಾಶಾ ಕೌಲ್‌ರನ್ನು ಬೆಂಗಳೂರು ವಿಮಾನ ನಿಲ್ದಾಣದ ವಾಪಸ್‌ ಕಳುಹಿಸಿದ್ದೇಕೆ..?

ಬೆಂಗಳೂರು; ಬಿಜೆಪಿ ವಿರೋಧಿ ಲೇಖಕಿ ಎಂದೇ ಗುರುತಿಸಿಕೊಂಡಿರುವ ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಲೇಖಕಿ ಪ್ರೊ.ನಿತಾಶಾ ಕೌಲ್‌ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಪಸ್‌ ಕಳುಹಿಸಲಾಗಿದೆಯಂತೆ. ಹಾಗಂತ ಕೇಳಕಿ ನಿತಾಶಾ ಕೌಲ್‌ ಅವರೇ ಆರೋಪ ಮಾಡಿದ್ದಾರೆ. ಯಾವುದೇ ಕಾರಣ ನೀಡದೇ ನನ್ನನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ವಾಪಸ್‌ ಕಳುಸಿದ್ದಾರೆ ಎಂದು ಆರೋಪಿಸಿ ಅವರು X ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಇದನ್ನೂ ಓದಿ; ನಿಂಬೆ ರಸ ಸೇವನೆ ಒಳ್ಳೆಯದೇ..?; ಬೇಸಿಗೆಯಲ್ಲಿ ಹೆಚ್ಚು ನಿಂಬೆ ಸೇವಿಸೀರಿ ಹುಷಾರ್‌!

ಲೇಖಕಿ ನಿತಾಶಾ ಕೌಲ್‌ ಯಾಕೆ ಇಲ್ಲಿಗೆ ಬಂದಿದ್ದರು..?;

ಲೇಖಕಿ ನಿತಾಶಾ ಕೌಲ್‌ ಯಾಕೆ ಇಲ್ಲಿಗೆ ಬಂದಿದ್ದರು..?; ಕರ್ನಾಟಕ ಸರ್ಕಾರ ಇದೇ ಫೆಬ್ರವರಿ 24 ಮತ್ತು 25ರಂದು ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮ್ಮೇಳನ 2024’ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ಸರ್ಕಾರವೇ ನಿತಾಶಾ ಕೌಲ್‌ ಅವರಿಗೆ ಆಹ್ವಾನ ನೀಡಿತ್ತು. ಅದರಂತೆ ಅವರು ಬೆಂಗಳೂರಿಗೆ ಆಗಮಿಸಿದ್ದು, ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ಗಡಿಪಾರು ಮಾಡಿದ್ದಾರಂತೆ. ಹೀಗಂತ ನಿತಾಶಾ ಕೌಲ್‌ ಆರೋಪ ಮಾಡಿದ್ದು, ರಾಜ್ಯ ಸರ್ಕಾರ ಕಳುಹಿಸಿರುವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮತ್ತು ಇತರೆ ಪತ್ರಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ; Breathing Exercises; ಉಸಿರಾಟ ವ್ಯಾಯಾಮದ 7 ಪ್ರಯೋಜನಗಳೇನು..?

ಯಾರು ಈ ಪ್ರೊ.ನಿತಾಶಾ ಕೌಲ್‌..?;

ಯಾರು ಈ ಪ್ರೊ.ನಿತಾಶಾ ಕೌಲ್‌..?; ಇವರು ಉತ್ತರ ಪ್ರದೇಶದ ಗೋರಖ್‌ಪುರದವರಾಗಿದ್ದು, ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ ನಲ್ಲಿ ಬಿಎ ಪದವಿ ಪಡೆದಿದ್ದಾರೆ. 1997ರಲ್ಲಿ ನಿತಾಶಾ ಲಂಡನ್‌ಗೆ ಹೋಗಿದ್ದು,  2003ರಲ್ಲಿ ಬ್ರಿಟನ್‌ನ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದೀಗ ಅವರು ವೆಸ್ಟ್‌ಮಿನಿಸ್ಟರ್ ವಿವಿಯ ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಪ್ರಾಧ್ಯಾಪಕರಾಗಿದ್ದು, ಕಾದಂಬರಿ, ಲೇಖನಗಳನ್ನು ಬರೆಯುತ್ತಿರುತ್ತಾರೆ.

ನಿತಾಶಾ ಕೌಲ್‌ ಅವರು ಕಾಶ್ಮೀರಲ್ಲಿ ಆರ್ಟಿಕಲ್‌ 370 ತೆಗೆದುಹಾಕಿದಾಗ ಅವರು ನೀಡಿದ್ದ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ವಿಶ್ವಸಂಸ್ಥೆಯ ಸಮಿತಿ ಮುಂದೆ ಅವರು ಹೇಳಿಕೆ ನೀಡಿ ಭಾರತೀಯರ ಆಕ್ರೋಶಕ್ಕೆ ಕಾರಣರಾಗಿದ್ದರು. ಹೀಗಾಗಿ ಇವರನ್ನು ಬಿಜೆಪಿ ವಿರೋಧಿ ಲೇಖಕಿ ಎಂದೇ ಕರೆಯಲಾಗುತ್ತದೆ.

ಇದನ್ನೂ ಓದಿ; ಪೀನಟ್‌ ಬಟರ್‌ ಆರೋಗ್ಯಕ್ಕೆ ಒಳ್ಳೆಯದಾ..? ಅದರಲ್ಲಿ ಏನೆಲ್ಲಾ ಪೋಷಕಾಂಶಗಳಿವೆ..?

ಆಕ್ರೋಶ ವ್ಯಕ್ತಪಡಿಸಿತ್ತು ಬಿಜೆಪಿ;

ಆಕ್ರೋಶ ವ್ಯಕ್ತಪಡಿಸಿತ್ತು ಬಿಜೆಪಿ; ನಿತಾಶಾ ಕೌಲ್‌ ಅವರನ್ನು ರಾಜ್ಯ ಸರ್ಕಾರದ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿರುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಪಡಿಸಿತ್ತು. ನಿಖಿತಾ ಕೌಲ್‌ ಅವರ ಲೇಖನಗಳನ್ನು ಪೋಸ್ಟ್‌ ಮಾಡಿದ್ದ ಬಿಜೆಪಿ, ಕರ್ನಾಟಕ ಸರ್ಕಾರ ಇಂತಹವರನ್ನು ಆಹ್ವಾನಿಸಿದೆ ಎಂದು ಟೀಕೆ ಮಾಡಿತ್ತು.

ಇದನ್ನೂ ಓದಿ; Plov; ಇದು ಲೈಂಗಿಕ ಶಕ್ತಿ ಹೆಚ್ಚಿಸಲೆಂದೇ ಇರುವ ವಿಶೇಷ ಅಡುಗೆ!

 

Share Post