ಇಂದು ಎಲ್ಲೆಲ್ಲಿ ಮತದಾನ..?; ಪ್ರಮುಖ ಅಭ್ಯರ್ಥಿಗಳು ಯಾರು..?
ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ.. ಈಗಾಗಲೇ ಮತದಾನ ಶುರುವಾಗಿದೆ.. ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.. ರಾಜ್ಯದ 14 ಲೋಕಸಭಾ ಕ್ಷೇತ್ರಗಳು ಸೇರಿ 13 ರಾಜ್ಯಗಳ 88 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ..
ಇದನ್ನೂ ಓದಿ; ವೋಟರ್ ಐಡಿ ಇಲ್ಲದಿದ್ದರೂ ಮತ ಹಾಕಬಹುದು; ಹೇಗೆ ಗೊತ್ತಾ..?
ದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಇದು ಎರಡನೇ ಹಂತದ ಮತದಾನವಾಗಿದೆ.. ಕರ್ನಾಟಕಕ್ಕೆ ಸೀಮಿತವಾಗಿ ಮಾತನಾಡುವುದಾದರೆ ರಾಜ್ಯದಲ್ಲಿ ಮೊಲದ ಹಂತದ ಮತದಾನ ನಡೆಯುತ್ತಿದೆ.. ಒಟ್ಟು 28 ಕ್ಷೇತ್ರಗಳ ಪೈಕಿ, ಇಂದು 14 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ..
ಇದನ್ನೂ ಓದಿ; ಸಂಸದೆ ಸುಮಲತಾ ಬೆಂಬಲ ಯಾರಿಗೆ..?; ನಾಳೆ ಮತದಾನ ಇರುವಾಗ ಅವರು ಹೇಳಿದ್ದೇನು..?
14 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ವಿವರ;
================================
ಬೆಂಗಳೂರು ಕೇಂದ್ರ; ಪಿ.ಸಿ.ಮೋಹನ್ ಅಭ್ಯರ್ಥಿ-ಬಿಜೆಪಿ, ಮನ್ಸೂರ್ ಅಲಿಖಾನ್-ಕಾಂಗ್ರೆಸ್
ಬೆಂಗಳೂರು ದಕ್ಷಿಣ; ತೇಜಸ್ವಿ ಸೂರ್ಯ-ಬಿಜೆಪಿ, ಸೌಮ್ಯಾ ರೆಡ್ಡಿ-ಕಾಂಗ್ರೆಸ್
ಬೆಂಗಳೂರು ಉತ್ತರ; ಶೋಭಾ ಕರಂದ್ಲಾಜೆ-ಬಿಜೆಪಿ, ರಾಜೀವ್ ಗೌಡ-ಕಾಂಗ್ರೆಸ್
ಬೆಂಗಳೂರು ಗ್ರಾಮಾಂತರ; ಡಾ.ಸಿ.ಎನ್.ಮಂಜುನಾಥ್-ಬಿಜೆಪಿ, ಡಿ.ಕೆ.ಸುರೇಶ್-ಕಾಂಗ್ರೆಸ್
ಕೋಲಾರ; ಮಲ್ಲೇಶ್ ಬಾಬು-ಜೆಡಿಎಸ್, ಕೆ.ವಿ.ಗೌತಮ್-ಕಾಂಗ್ರೆಸ್
ತುಮಕೂರು; ವಿ.ಸೋಮಣ್ಣ-ಬಿಜೆಪಿ, ಮುದ್ದಹನುಮೇಗೌಡ-ಕಾಂಗ್ರೆಸ್
ಮೈಸೂರು-ಕೊಡಗು; ಯದುವೀರ್ ಒಡೆಯರ್-ಬಿಜೆಪಿ, ಲಕ್ಷ್ಮಣ್-ಕಾಂಗ್ರೆಸ್
ಚಾಮರಾಜನಗರ; ಬಾಲರಾಜ್-ಬಿಜೆಪಿ, ಸುನಿಲ್ ಬೋಸ್-ಕಾಂಗ್ರೆಸ್
ದಕ್ಷಿಣ ಕನ್ನಡ; ಕ್ಯಾ.ಬ್ರಿಜೇಶ್ ಚೌಟ-ಬಿಜೆಪಿ, ಪದ್ಮರಾಜ್-ಕಾಂಗ್ರೆಸ್
ಚಿಕ್ಕಮಗಳೂರು-ಉಡುಪಿ; ಕೋಟ ಶ್ರೀನಿವಾಸ್ ಪೂಜಾರಿ-ಬಿಜೆಪಿ, ಜಯಪ್ರಕಾಶ್ ಹೆಗ್ಡೆ-ಕಾಂಗ್ರೆಸ್
ಹಾಸನ; ಪ್ರಜ್ವಲ್ ರೇವಣ್ಣ-ಜೆಡಿಎಸ್, ಶ್ರೇಯಸ್-ಕಾಂಗ್ರೆಸ್
ಮಂಡ್ಯ; ಹೆಚ್.ಡಿ.ಕುಮಾರಸ್ವಾಮಿ-ಜೆಡಿಎಸ್, ಸ್ಟಾರ್ ಚಂದ್ರು (ವೆಂಕಟರಮಣೇಗೌಡ)-ಕಾಂಗ್ರೆಸ್
ಚಿಕ್ಕಬಳ್ಳಾಪುರ; ಡಾ.ಕೆ.ಸುಧಾಕರ್-ಬಿಜೆಪಿ, ರಕ್ಷಾ ರಾಮಯ್ಯ-ಕಾಂಗ್ರೆಸ್
ಚಿತ್ರದುರ್ಗ; ಗೋವಿಂದ ಕಾರಜೋಳ-ಬಿಜೆಪಿ, ಬಿ.ಎನ್.ಚಂದ್ರಪ್ಪ-ಕಾಂಗ್ರೆಸ್
ಇದನ್ನೂ ಓದಿ; ಗನ್ ತೋರಿಸಿ ಬ್ಯಾಂಕ್ ಮ್ಯಾನೇಜರ್ ಕಿಡ್ನ್ಯಾಪ್; ಪೊಲೀಸರ ಫಿಲ್ಮಿ ಸ್ಟೈಲ್ ಕಾರ್ಯಾಚರಣೆ..!
ಯಾವ ರಾಜ್ಯದಲ್ಲಿ ಎಷ್ಟು ಕ್ಷೇತ್ರಗಳಿಗೆ ಮತದಾನ..?
================================
ಕೇರಳದ 20 ಲೋಕಸಭಾ ಕ್ಷೇತ್ರಗಳು
ರಾಜಸ್ಥಾನದ 13 ಲೋಕಸಭಾ ಕ್ಷೇತ್ರಗಳು
ಉತ್ತರ ಪ್ರದೇಶದ 9 ಲೋಕಸಭಾ ಕ್ಷೇತ್ರಗಳು
ಮಹಾರಾಷ್ಟ್ರದ 9 ಲೋಕಸಭಾ ಕ್ಷೇತ್ರಗಳು
ಮಧ್ಯಪ್ರದೇಶದ 7 ಲೋಕಸಭಾ ಕ್ಷೇತ್ರಗಳು
ಬಿಹಾರ ಹಾಗೂ ಅಸ್ಸಾಂನ ತಲಾ 5 ಲೋಕಸಭಾ ಕ್ಷೇತ್ರಗಳು
ಛತ್ತಿಸ್‌ಗಢ, ಪಶ್ಚಿಮ ಬಂಗಾಳದ ತಲಾ 3 ಲೋಕಸಭಾ ಕ್ಷೇತ್ರಗಳು
ತ್ರಿಪುರ, ಜಮ್ಮು-ಕಾಶ್ಮೀರ, ಮಣಿಪುರದ ತಲಾ 1 ಲೋಕಸಭಾ ಕ್ಷೇತ್ರ
ಇದನ್ನೂ ಓದಿ; ಬೇಸಿಗೆಯಲ್ಲಿ ತಲೆನೋವು ಹೆಚ್ಚಾಗ್ತಿದೆಯೇ..?; ಈ ಆಹಾರ ಸೇವಿಸಿ ನೋಡಿ..
ಪ್ರಮುಖ ಅಭ್ಯರ್ಥಿಗಳು ಯಾರು ಯಾರು..?
==========================
ಯದುವೀರ್, ಹೆಚ್.ಡಿ.ಕುಮಾರಸ್ವಾಮಿ, ಡಾ.ಸಿ.ಎನ್.ಮಂಜುನಾಥ್, ರಾಹುಲ್ ಗಾಂಧಿ, ಶಶಿ ತರೂರ್, ಹೇಮಾ ಮಾಲೀನಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೇರಿ ಹಲವರು ಪ್ರಮುಖರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ..
ಇದನ್ನೂ ಓದಿ; ಸಾಯೋ ಸ್ಥಿತಿಯಲ್ಲಿದ್ದ ಮಹಿಳೆಗೆ ಹಂದಿ ಕಿಡ್ನಿ ಕಸಿ; ಬದುಕುಳಿದ ಗಟ್ಟಿಗಿತ್ತಿ!
ರಾಜ್ಯದಲ್ಲಿ ಎಷ್ಟು ಮತದಾರರಿದ್ದಾರೆ..?
========================
14 ಕ್ಷೇತ್ರಗಳಲ್ಲಿ 2ಕೋಟಿ 88 ಲಕ್ಷದ 19 ಸಾವಿರದ 342 ಮತದಾರರು
1ಕೋಟಿ 44 ಲಕ್ಷದ 17ಸಾವಿರದ 530 ಪುರುಷ ಮತದಾರರು
1ಕೋಟಿ 43ಲಕ್ಷದ 87ಸಾವಿರದ 585 ಮಹಿಳಾ ಮತದಾರರು
ಇದನ್ನೂ ಓದಿ; ಈ ನಾಲ್ಕು ಪಾನೀಯಗಳು ದೇಹ ಶುದ್ಧಿಗೆ ಬ್ರಹ್ಮಾಸ್ತ್ರಗಳು!