HealthInternational

ಸಾಯೋ ಸ್ಥಿತಿಯಲ್ಲಿದ್ದ ಮಹಿಳೆಗೆ ಹಂದಿ ಕಿಡ್ನಿ ಕಸಿ; ಬದುಕುಳಿದ ಗಟ್ಟಿಗಿತ್ತಿ!

ಮನುಷ್ಯನಿಗೆ ಹಂದಿ ಕಿಡ್ನಿ ಕಸಿ ಮಾಡಬಹುದು ಅನ್ನೋದನ್ನ ಈ ಹಿಂದೆಯೇ ವೈದ್ಯರು ತೋರಿಸಿಕೊಟ್ಟಿದ್ದಾರೆ.. ಇದೀಗ ಮಹಿಳೆಯೊಬ್ಬರು ಸಾಯೋಸ್ಥಿತಿಯಲ್ಲಿದ್ದರು.. ಕೊನೇ ಪ್ರಯತ್ನ ಎಂಬಂತೆ ವೈದ್ಯರು ಆಕೆಗೆ ಹಂದಿ ಕಿಡ್ನಿ ಕಸಿ ಮಾಡಿದ್ದಾರೆ.. ಇದು ಯಶಸ್ವಿಯಾಗಿದ್ದು, ಮಹಿಳೆ ಸಾವಿನ ಕದ ತಟ್ಟಿ ಬದುಕಿಬಂದಿದ್ದಾರೆ..

ಅಮೆರಿಕದ ನ್ಯೂಜರ್ಸಿಯ ‘NYU ಲ್ಯಾಂಗೋನ್ ಹೆಲ್ತ್​​’ನಲ್ಲಿ ಮೆಕಾನಿಕಲ್ ಹಾರ್ಟ್​ ಪಂಪ್  ಮತ್ತು ಹಂದಿಯ ಕಿಡ್ನಿಯನ್ನು ಒಟ್ಟಿಗೆ ಕಸಿ ಮಾಡಿ ಮಹಿಳೆಯ ಪ್ರಾಣ ಉಳಿಸಲಾಗಿದೆ.. ಮೆಜಾನಿಕಲ್‌ ಹಾರ್ಟ್‌ ಪಂಪ್‌ ಹಾಗೂ ಹಂದಿ ಕಿಡ್ನಿ ಅಳವಡಿಸಿರುವುದು ಇದೇ ಮೊದಲ ಎಂದು ತಿಳಿದುಬಂದಿದೆ..  ನ್ಯೂಜೆರ್ಸಿಯ 54 ವರ್ಷದ ಲಿಸಾ ಪಿಸಾನೋ ಎಂಬ ಮಹಿಳೆಯೇ ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆಯಾಗಿದ್ದಾರೆ..

ಹೃದಯದ ಸಮಸ್ಯೆ ಮತ್ತು ಮೂತ್ರಪಿಂಡದ ಕಾಯಿಲೆ ಎರಡರಿಂದಲೂ ಮಹಿಳೆ ತೀವ್ರವಾಗಿ ಬಳಲುತ್ತಿದ್ದರು.. ಡಯಾಲಿಸಿಸ್‌ ಕೂಡಾ ಮಾಡಿಸುತ್ತಿದ್ದರು.. ಲೀಸಾ ಅವರಿಗೆ ಏಪ್ರಿಲ್‌ 4ರಂದು ಹೃದಯದ ಪಂಪ್‌ ಅಳವಡಿಸಲಾಗಿದ್ದು, ಏಪ್ರಿಲ್‌ 12ಕ್ಕೆ ಹಂದಿಯ ಥೈಮಸ್‌ ಗ್ರಂಥಿಯೊಂದಿಗೆ ಜೀನ್‌ ಎಡಿಟ್‌ ಮಾಡಿ ಮೂತ್ರಪಿಂಡ ಅಳವಡಿಕೆ ಮಾಡಲಾಗಿದೆ..

 

Share Post