ಬೇಸಿಗೆಯಲ್ಲಿ ತಲೆನೋವು ಹೆಚ್ಚಾಗ್ತಿದೆಯೇ..?; ಈ ಆಹಾರ ಸೇವಿಸಿ ನೋಡಿ..
ಬಿಸಿಲ ಧಗೆ ಹೆಚ್ಚಾಗುತ್ತಿದೆ.. ಬೆಳಗ್ಗೆ 10 ಗಂಟೆಯ ನಂತರ ಹೊರಗೆ ಕಾಲಿಡೋದಕ್ಕೂ ಆಗುತ್ತಿಲ್ಲ.. ಇದರಿಂದಾಗಿ ಆರೋಗ್ಯ ಸಮಸೆಯಗಳು ಕೂಡಾ ಹೆಚ್ಚಾಗುತ್ತಿವೆ.. ಇನ್ನು ತೀವ್ರ ಬಿಸಿಲಿನಿಂದಾಗಿ ಬಹುತೇಕ ಜನಕ್ಕೆ ತಲೆನೋವು ಜಾಸ್ತಿ ಕಾಣಿಸಿಕೊಳ್ಳುತ್ತಿದೆ.. ಸೂರ್ಯನ ತೀವ್ರ ಬಳಕಿಗೆ ಮೈ ಒಡ್ಡುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತಿದೆ.. ಇದು ತಲೆನೋವಿಗೆ ಕಾರಣವಾಗುತ್ತಿದೆ.. ಆದ್ರೆ ಬೇಸಿಗೆಯಲ್ಲಿ ತಲೆನೋವಿನ ಸಮಸ್ಯೆಯನ್ನು ಕೆಲವು ಆಹಾರ ಕ್ರಮಗಳಿಂದ ಹೋಗಲಾಡಿಸಬಹುದು..
1. ಒಣ ಹಣ್ಣುಗಳು (Dry Fruits) ನೈಸರ್ಗಿಕ ನೋವು ನಿವಾರಕಗಳಾಗಿವೆ.. ಅದ್ರಲ್ಲೂ ಗೋಡಂಬಿ, ಪಿಸ್ತಾ ಮತ್ತು ಬಾದಾಮಿಯನ್ನು ಸೇವಿಸಿದ್ರೆ ನೋವಿಗೆ ಪೂರ್ಣವಿರಾಮ ಹಾಕಬಹುದು.. ಪ್ರತಿದಿನ ಡ್ರೈ ಫ್ರೂಟ್ಸ್ ಸೇವಿಸಿದ್ರೆ ತಲೆನೋವು ನಿವಾರಣೆಯಾಗುತ್ತದೆ ಎನ್ನುತ್ತಾರೆ ತಜ್ಞರು.
2. ಶುಂಠಿ ಕೂಡಾ ತಲೆನೋವನ್ನು ನಿವಾರಣೆ ಮಾಡುತ್ತದೆ.. ಇದಕ್ಕಾಗಿ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಶುಂಠಿ ರಸವನ್ನು ಹಾಕಿ ಕುಡಿಯಬಹುದು.. ಹೀಗೆ ಮಾಡುವುದರಿಂದ ತಲೆನೋವು ಕಡಿಮೆಯಾಗುತ್ತದೆ..
3. ಬೇಸಿಗೆಯಲ್ಲಿ ಮಸಾಲೆಯುಕ್ತ ಆಹಾರವನ್ನು ಆದಷ್ಟು ಕಡಿಮೆ ಮಾಡಿ ಎನ್ನುತ್ತಾರೆ ತಜ್ಞರು. ಇದರಿಂದ ನಿರ್ಜಲೀಕರಣ ಸಮಸ್ಯೆ ಹೆಚ್ಚಾಗಬಹುದು ಎಂದು ತಜ್ಞರು ಹೇಳಿದ್ದಾರೆ.. ಬೇಸಿಗೆಯಲ್ಲಿ ತಲೆನೋವಿಗೆ ಪ್ರಮುಖ ಕಾರಣಗಳಲ್ಲಿ ನಿರ್ಜಲೀಕರಣವೂ ಒಂದು. ಅದಕ್ಕಾಗಿಯೇ ನೀವು ನಿಯಮಿತವಾಗಿ ನೀರನ್ನು ಕುಡಿಯಬೇಕು. ನೀರು ಮಾತ್ರವಲ್ಲದೆ ಮಜ್ಜಿಗೆ, ನಿಂಬೆರಸ ಕುಡಿಯಲು ಅಭ್ಯಾಸ ಮಾಡಿಕೊಳ್ಳಬೇಕು ಎನ್ನುತ್ತಾರೆ.
4. ಬೇಸಿಗೆಯಲ್ಲಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಬಾಳೆಹಣ್ಣು ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಬೆಳಗ್ಗೆ ತಲೆನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.
5. ಬಿಸಿಲಿಗೆ ಹೋಗುವಾಗ ಕಡ್ಡಾಯವಾಗಿ ಕ್ಯಾಪ್ ಧರಿಸಬೇಕು.. ಮಧ್ಯಾಹ್ನ ಹೊರಗೆ ಹೋಗದಿರುವುದು ಉತ್ತಮ.. ಅಲ್ಲದೆ, ಹೊರಗೆ ಹೋಗುವಾಗ ನೀವು ಖಂಡಿತವಾಗಿಯೂ ನೀರನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಕು.
6. ಬೇಸಿಗೆಯಲ್ಲಿ ತಲೆನೋವಿಗೆ ನಿದ್ರಾಹೀನತೆಯೂ ಕಾರಣ ಎನ್ನಲಾಗಿದೆ. ಆದ್ದರಿಂದ ನೀವು ಉತ್ತಮವಾಗಿ ನಿದ್ರೆ ಮಾಡುವುದು ಒಳ್ಳೆಯದು.. ಕನಿಷ್ಠ 8 ಗಂಟೆಗಳ ನಿದ್ದೆ ಮಾಡಲು ತಜ್ಞರು ಸಲಹೆ ನೀಡುತ್ತಾರೆ..