Politics

ವೋಟರ್‌ ಐಡಿ ಇಲ್ಲದಿದ್ದರೂ ಮತ ಹಾಕಬಹುದು; ಹೇಗೆ ಗೊತ್ತಾ..?

ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನ ಶುರುವಾಗಿದೆ.. ಇಂದು ರಾಜ್ಯದಲ್ಲಿ ಒಟ್ಟು 14 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.. ಇಂದು ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದೆ.. ಮತದಾನ ಮಾಡಲು ವೋಟರ್‌ ಐಡಿ ಬೇಕು ನಿಜ.. ಆದ್ರೆ ವೋಟರ್‌ ಐಡಿ ಇಲ್ಲದಿದ್ದರೂ ಮತ ಚಲಾವಣೆ ಮಾಡಬಹುದು.. ನಿಮ್ಮ ಹೆಸರು ವೋಟರ್‌ ಲಿಸ್ಟ್‌ ನಲ್ಲಿದ್ದು, ಅದಕ್ಕೆ ಪೂರಕವಾದ ಬೇರೆ ದಾಖಲೆ ಒದಗಿಸಿದರೆ ನೀವು ಖಂಡಿತವಾಗಿಯೂ ಮತ ಚಲಾವಣೆ ಮಾಡಬಹುದು..

ವೋಟರ್‌ ಐಡಿ ಇಲ್ಲದಿದ್ದರೆ ಯಾವ ದಾಖಲೆ ಬೇಕು..?

=================================

ಆಧಾರ್ ಕಾರ್ಡ್

ಪ್ಯಾನ್ ಕಾರ್ಡ್

ಬ್ಯಾಂಕ್ ಪಾಸ್​ಬುಕ್​ (ಫೋಟೋ ಇರಬೇಕು)

ಅಂಚೆ ಕಚೇರಿ ನೀಡಿದ ಭಾವಚಿತ್ರ ಇರುವ ಪಾಸ್ ಬುಕ್

ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್‌

ಡ್ರೈವಿಂಗ್ ಲೈಸೆನ್ಸ್‌

ಪಾಸ್‌ಪೋರ್ಟ್‌

ಮತದಾನಕ್ಕೆ ಏನೆಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ..?

=============================

ಪ್ರತಿ ಕ್ಷೇತ್ರದಲ್ಲಿ ಮಹಿಳೆಯರಿಗಾಗಿ 5 ಸಖಿ ಪಿಂಕ್‌ ಬೂತ್‌ಗಳು

ದಿವ್ಯಾಂಗರಿಗೆ ವೀಲ್‌ ಚೇರ್‌ ವ್ಯವಸ್ಥೆ

ವಿವಿಧ ಥೀಮ್‌ಗಳಡಿ ಮತಗಟ್ಟೆಗಳ ನಿರ್ಮಾಣ

ನೀರು, ನೆರಳು, ಪಾರ್ಕಿಂಗ್‌ ಸೇರಿ ಮೂಲ ಸೌಕರ್ಯ ವ್ಯವಸ್ಥೆ

ಎಲ್ಲಾ ಮತಗಟ್ಟೆಗಳಲ್ಲೂ ಬಿಗಿ ಪೊಲೀಸ್‌ ಬಂದೋಬಸ್ತ್‌

 

Share Post