Politics

ಸಂಸದೆ ಸುಮಲತಾ ಬೆಂಬಲ ಯಾರಿಗೆ..?; ನಾಳೆ ಮತದಾನ ಇರುವಾಗ ಅವರು ಹೇಳಿದ್ದೇನು..?

ಬೆಂಗಳೂರು; ಮಂಡ್ಯ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದೆ ಸುಮಲತಾ ಅಂಬರೀಶ್‌ ಅವರು ಬಿಜೆಪಿ ಟಿಕೆಟ್‌ ಬಯಸಿದ್ದರು.. ಆದ್ರೆ, ಬಿಜೆಪಿ ಹೈಕಮಾಂಡ್‌ ಆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರಿಂದ ಕುಮಾರಸ್ವಾಮಿಯವರು ಅಭ್ಯರ್ಥಿಯಾಗಿದ್ದಾರೆ.. ಈ ನಡುವೆ ಬಿಜೆಪಿ ಸೇರಿದ್ದ ಸುಮಲತಾ ಅವರು, ಮಂಡ್ಯದಲ್ಲಿ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತಾರೆ ಎಂದು ಹೇಳಲಾಗಿತ್ತು.. ಆದ್ರೆ ಅವರು ಪ್ರಚಾರ ಮಾಡಿಲ್ಲ.. ದೇವೇಗೌಡರು ಕೂಡಾ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.. ಇನ್ನು ನಾಳೆಯೇ ಮತದಾನ.. ಸುಮಲತಾ ಬೆಂಬಲ ಯಾರಿಗೆ ಎನ್ನುವ ಕುತೂಹಲ ಇದೆ.. ಹೀಗಿರುವಾಗಲೇ ಅವರು ಮಾಡಿರುವ ಟ್ವೀಟ್‌ ಒಂದು ಭಾರಿ ಕುತೂಹಲಕ್ಕೆ ಕಾರಣವಾಗಿದೆ..

ಸುಮಲತಾ ಅವರ ಟ್ವೀಟ್‌ನಲ್ಲಿ ಏನಿದೆ..?

ʻಏನು ಹೇಳಬೇಕೆನ್ನುವುದು ಜ್ಞಾನ. ಹೇಗೆ ಹೇಳಬೇಕೆನ್ನುವುದು ವ್ಯಕ್ತಿತ್ವ. ಎಷ್ಟು ಹೇಳಬೇಕೆನ್ನುವುದು ಕೌಶಲ್ಯ. ಹೇಳಬೇಕೋ ಬೇಡವೋ ಎನ್ನುವುದು ವಿವೇಕʼ

ಹೀಗಂತ ಅವರು ಟ್ವೀಟ್‌ ಮಾಡಿದ್ದಾರೆ.. ಇದರ ಅರ್ಥ ಏನು ಅನ್ನೋದು ಅರ್ಥವಾಗದೇ ಅವರ ಅಭಿಮಾನಿಗಳು ಕೂಡಾ ಗೊಂದಲದಲ್ಲಿದ್ದಾರೆ.. ಸುಮಲತಾ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸುತ್ತಿದ್ದಾರೆ ಎನ್ನೋದು ಕೂಡಾ ಅರ್ಥವಾಗುತ್ತಿಲ್ಲ.. ಒಂದು ನಟ ದರ್ಶನ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಪರ ಪ್ರಚಾರ ಮಾಡಿದ್ದಾರೆ.. ಆದ್ರೆ ಸುಮಲತಾ ಅವರು ಕ್ಷೇತ್ರಕ್ಕೆ ಬಂದಿಲ್ಲ.. ಹೀಗಾಗಿ ಸುಮಲತಾ ಅವರ ಈ ಟ್ವೀಟ್‌ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ..

 

Share Post