PoliticsUncategorized

ಇದಪ್ಪಾ ಗೆಲುವು ಅಂದ್ರೆ..!; ಸ್ಪರ್ಧಿಸಿದ ಎಲ್ಲಾ 21 ಕ್ಷೇತ್ರಗಳಲ್ಲೂ ಜನಸೇನಾ ಪಾರ್ಟಿ ಗೆಲುವು!

ಅಮರಾವತಿ; ಸತತ 14 ವರ್ಷಗಳ ಪವನ್‌ ಕಲ್ಯಾಣ್‌ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.. ಸತತವಾಗಿ ಪ್ರಯತ್ನ ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ಆಂಧ್ರಪ್ರದೇಶದ ಜನಸೇನಾ ಪಾರ್ಟಿ ಪವನ್‌ ಕಲ್ಯಾನ್‌ ಉತ್ತಮ ಉದಾಹರಣೆ.. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧೆ ಮಾಡಿದ್ದ ಪವನ್‌ ಕಲ್ಯಾಣ್‌ ಎರಡೂ ಕಡೆಯೂ ಹೀನಾಯವಾಗಿ ಸೋತಿದ್ದರು.. ಆದ್ರೂ ದೃತಿಗೆಡದ ಪವನ್‌ ಕಲ್ಯಾಣ್‌ ಮತ್ತೊಂದು ವಿಧಾನಸಭಾ ಚುನಾವಣೆವರೆಗೂ ಕಾದರು.. ಈ ಬಾರಿ ಅವರ ಪಾರ್ಟಿ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ 21 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು.. ಸ್ಪರ್ಧೆ ಮಾಡಿದ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದೆ.. ಗೆಲುವು ಅಂದ್ರೆ ಇದಪ್ಪಾ ಅನ್ನೋ ರೀತಿಯ ಗೆಲುವದು..

ಪವನ್‌ ಕಲ್ಯಾಣ್‌ ಸಿನಿಮಾ ಸ್ಟಾರ್‌ ಆಗಿದ್ದರಿಂದ ಅವರು ಹೋದೆಲ್ಲೆಲ್ಲಾ ಲಕ್ಷ ಲಕ್ಷ ಜನ ಸೇರುತ್ತಿದ್ದರು.. ಆದ್ರೆ ಮತ ಮಾತ್ರ ಹಾಕುತ್ತಿರಲಿಲ್ಲ.. ಹೀಗಾಗಿ ಆಂಧ್ರದ ಜನ ಪವನ್‌ ಕಲ್ಯಾಣ್‌ ಅವರನ್ನು ಗೇಲಿ ಮಾಡುತ್ತಿದ್ದರು.. ಪಾವುಲ ಕಲ್ಯಾಣ್‌ (ನಾಲ್ಕಾಣೆ ಕಲ್ಯಾಣ್‌ ಎಂದು ಲೇವಡಿ ಮಾಡುತ್ತಿದ್ದರು.. ಅವರೆಲ್ಲರಿಗೂ ಪವನ್‌ ಕಲ್ಯಾಣ್‌ ಉತ್ತರ ಕೊಟ್ಟಿದ್ದಾರೆ.. ಟಿಡಿಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ತನ್ನ ಪಾಲಿಗೆ 21 ಕ್ಷೇತ್ರಗಳಲ್ಲೂ ಗೆದ್ದಿದ್ದಾರೆ.. ಇನ್ನು ಪಿಠಾಪುರಂನಿಂದ ಗೆದ್ದಿದ್ದ ಪವನ್‌ ಕಲ್ಯಾಣ್‌ ಭಾರೀ ಬಹುಮತದೊಂದಿಗೆ ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದಾರೆ..

ಹಾಲಿ ಸಿಎಂ ಜಗನ್‌ ಮೋಹನ್‌ ರೆಡ್ಡಿ ಪವನ್‌ ಕಲ್ಯಾಣ್‌ ಅವರನ್ನು ದತ್ತುಪುತ್ರ, ಮೂರು ಮದುವೆಯಾಗಿದ್ದಾನೆ ಎಂದೆಲ್ಲಾ ಹೀಯಾಳಿಸುತ್ತಿದ್ದರು.. ಆದ್ರೆ ಇದಕ್ಕೆ ಪವನ್‌ ಕಲ್ಯಾಣ್‌ ಚುನಾವಣೆ ಮೂಲಕ ಉತ್ತರ ಕೊಟ್ಟಿದ್ದಾರೆ.. ಇದರ ಜೊತೆಗೆ ಟಿಡಿಪಿ ಪಾರ್ಟಿ ಕೂಡಾ 135ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದೆ.. ಇದರಿಂದಾಗಿ ಆಂಧ್ರಪ್ರದೇಶದಲ್ಲಿ ಟಿಡಿಪಿ ಹಾಗೂ ಜನಸೇನಾ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತಿದೆ.. ಕಳೆದ ಬಾರಿ 154 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಪಾರ್ಟಿ ಕೇವಲ 10 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ..

Share Post