CrimeNational

ಗನ್‌ ತೋರಿಸಿ ಬ್ಯಾಂಕ್‌ ಮ್ಯಾನೇಜರ್‌ ಕಿಡ್ನ್ಯಾಪ್‌; ಪೊಲೀಸರ ಫಿಲ್ಮಿ ಸ್ಟೈಲ್‌ ಕಾರ್ಯಾಚರಣೆ..!

ನವದೆಹಲಿ; ಕಿರಾತಕನೊಬ್ಬ ದರೋಡೆ ಮಾಡುವ ಸಲುವಾಗಿ ಬ್ಯಾಂಕ್‌ ಮ್ಯಾನೇಜರ್‌ ಒಬ್ಬನನ್ನು ಕಿಡ್ನ್ಯಾಪ್‌ ಮಾಡಿದ್ದ ಘಟನೆ ನಡೆದಿದೆ.. ಫರೀದಾಬಾದ್‌ನಲ್ಲಿ ಆಗಂತುಕನೊಬ್ಬ ಬ್ಯಾಂಕ್‌ ಮ್ಯಾನೇಜರ್‌ ತಲೆಗೆ ಗನ್‌ ಇಟ್ಟು ಅಪಹರಣ ಮಾಡಿದ್ದ.. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದು, ಬ್ಯಾಂಕ್‌ ಮ್ಯಾನೇಜರ್‌ರನ್ನು ರಕ್ಷಣೆ ಮಾಡಲಾಗಿದೆ..

ಬ್ಯಾಂಕ್‌ ಮ್ಯಾನೇಜರ್‌ ರನ್ನು ಕಿಡ್ನ್ಯಾಪ್‌ ಮಾಡಿದ್ದ ಆರೋಪಿ, ಸುಮಾರು 800 ಕಿಲೋ ಮೀಟರ್‌ ವರೆಗೆ ಸುತ್ತಾಡಿಸಿದ್ದರು.. ಆದ್ರೆ ಪೊಲೀಸರು ಫಿಲ್ಮಿ ಸ್ಟೈಲ್‌ನಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.. ಫರೀಧಾಬಾದ್‌ನಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಆಗಿರುವ ಸತೀಶ್‌ ಅವರ ಮನೆಯನ್ನು ದಂಪತಿಯೊಬ್ಬರಿಗೆ ಬಾಡಿಗೆಗೆ ನೀಡಿದ್ದರು.. ಬಾಡಿಗೆಗಿದ್ದ ಭೂಪೇಂದ್ರ ಎಂಬಾತ, ಬ್ಯಾಂಕ್‌ ಮ್ಯಾನೇಜರ್‌ ಬಳಿ ಸಾಕಷ್ಟು ಹಣ ಇರುವುದನ್ನು ತಿಳಿದು ಕಿಡ್ನ್ಯಾಪ್‌ ಪ್ಲ್ಯಾನ್‌ ಮಾಡಿದ್ದ..

ಏಪ್ರಿಲ್ 20ರಂದು ಬ್ಯಾಂಕ್ ಮ್ಯಾನೇಜರ್‌ಗೆ ಗನ್ ತೋರಿಸಿ ಅಪಹರಣ ಮಾಡಲಾಗಿತ್ತು..ಫರಿದಾಬಾದ್‌ನಿಂದ ಹಿಮಾಚಲ ಪ್ರದೇಶದ ಬಿಲಾಸ್ಪುರ್ ಗೆ ಹೋಗಿದ್ದರು.. ಅನಂತರ ಉತ್ತರಪ್ರದೇಶದ ಮಥುರಾಗೆ ಕರೆದುಕೊಂಡು ಹೋಗಲಾಗಿತ್ತು.. ಕೊನೆಗೂ ಪೊಲೀಸರು ಕಿಡ್ನ್ಯಾಪರ್‌ನನ್ನು ಬಂಧಿಸಿದ್ದಾರೆ..

ಅಪಹರಣಕಾರರು 50 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದರು. ಕೊನೆಗೆ 5 ಲಕ್ಷ ರೂಪಾಯಿ ಕೊಡಿ ಎಂದು ಕೇಳಿದ್ದರು.. ಪೊಲೀಸರು 6 ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸಿದ್ದರು..

Share Post