Politics

ಮಹಿಳೆ ವಿರುದ್ಧ ಸೋತಿದ್ದ ಶ್ರೀಕಂಠದತ್ತ ಒಡೆಯರ್‌; ಮೈಸೂರು ಗೆಲ್ತಾರಾ ಲಕ್ಷ್ಮಣ್..?

ಮೈಸೂರು; ‘ನಾನು ಹುಟ್ಟುತ್ತಾ ಒಕ್ಕಲಿಗ, ಬೆಳೆಯುತ್ತಾ ವಿಶ್ವ ಮಾನವ’ ಇದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣ್‌ ಅವರ ಡೈಲಾಗ್‌.. ಅವರು ಎಲ್ಲೇ ಹೋದರೂ ಈ ಡೈಲಾಗ್‌ ಹೊಡೆಯುತ್ತಿದ್ದಾರೆ.. ಇದರ ಉದ್ದೇಶ ಲಕ್ಷ್ಮಣ್‌ ಒಕ್ಕಲಿಗ ಅನ್ನೋದನ್ನು ಜನರಿಗೆ ಮನದಟ್ಟು ಮಾಡೋದು, ಒಕ್ಕಲಿಗನಾಗಿದ್ದರೂ ಜಾತಿವಾದಿಯಲ್ಲ ಎಂದು ತೋರಿಸಿಕೊಳ್ಳೋದು.. ಇದು ಲಕ್ಷ್ಮಣ್‌ಗೆ ಅನಿವಾರ್ಯ..

ಇದನ್ನೂ ಓದಿ; ದೇವೇಗೌಡರು, ಕುಮಾರಸ್ವಾಮಿ ಸೋತಿದ್ದ ಕ್ಷೇತ್ರದಲ್ಲಿ ಡಾ.ಮಂಜುನಾಥ್‌ ಗೆಲ್ತಾರಾ..

ಪದೇ ಪದೇ ಒಕ್ಕಲಿಗ ಡೈಲಾಗ್‌ ಯಾಕೆ..?;

ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮನ್‌ ಅವರು ನಾನು ಜಾತ್ಯತೀತ ವ್ಯಕ್ತಿ ಎಂದು ಹೇಳುತ್ತಲೇ, ನಾನು ಒಕ್ಕಲಿಗ ಅನ್ನೋದನ್ನೂ ಜನಕ್ಕೆ ಮನವರಿಕೆ ಮಾಡಿಕೊಡುತ್ತಿದ್ದಾರೆ.. ಯಾಕಂದ್ರೆ ಈ ಬಾರಿ ಅವರು ಜಾತಿ  ಟ್ರಂಪ್‌ ಕಾರ್ಡ್‌ ಬಳಕೆ ಮಾಡಬೇಕಾದ ಅನಿವಾರ್ಯತೆ  ಅವರಿಗಿದೆ.. ಆದ್ರೆ  ಬಹುತೇಕರಿಗೆ ಅವರು ಒಕ್ಕಲಿಗರು ಅನ್ನೋದು ಗೊತ್ತಿರಲಿಲ್ಲ.. ಹೀಗಾಗಿಯೇ ಅವರು ನಾನು ಹುಟ್ಟುತ್ತಾ ಒಕ್ಕಲಿಗ, ಬೆಳೆಯುತ್ತಾ ವಿಶ್ವಮಾನವ ಎಂದು ಹೇಳುತ್ತಾ ಒಕ್ಕಲಿಗರು ಹಾಗೂ ಇತರೆ ಜಾತಿಗಳ ಮತದಾರರನ್ನೂ ಸೆಳೆಯುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.. ಇದು ಎಷ್ಟರ ಮಟ್ಟಿಗೆ ವರ್ಕೌಟ್‌ ಆಗುತ್ತೋ ಗೊತ್ತಿಲ್ಲ..

ಇದನ್ನೂ ಓದಿ; ಅಮಿತ್‌ ಶಾ ಬಂದು ಹೋದ ಮೇಲೆ ರಾಜ್ಯದಲ್ಲಿ ಬದಲಾದ ರಾಜಕೀಯ ಚಿತ್ರಣ!

ಮೂರೂವರೆ ಲಕ್ಷ ಒಕ್ಕಲಿಗ ಮತಗಳ ಮೇಲೆ ಕಣ್ಣು!;

ಲಕ್ಷ್ಮಣ್‌ ನಾನು ವಿಶ್ವಮಾನವ ಎನ್ನುತ್ತಲೇ ತಾನು ಒಬ್ಬ ಒಕ್ಕಲಿಗ ಅಂತ ಹೇಳುತ್ತಿರುವುದಕ್ಕೆ ಕಾರಣ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಹೆಚ್ಚಿರುವುದು.. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 21 ಲಕ್ಷದ 19 ಸಾವಿರದ 410 ಮತಗಳಿವೆ.. ಇದರಲ್ಲಿ ಒಕ್ಕಲಿಗರ ಮತಗಳು 3 ಲಕ್ಷದ 26 ಸಾವಿರ ಮತಗಳಿವೆ.. ಅದೇ ಯದುವೀರ್‌ ಅವರ ಅರಸು ಮತಗಳ ಸಂಖ್ಯೆ ಕೇವಲ 6 ಸಾವಿರ 139 ಮತಗಳು ಮಾತ್ರ. ಇನ್ನು ಇಲ್ಲಿ ಮುಸ್ಲಿಂ ಮತಗಳು  3 ಲಕ್ಷದಷ್ಟಿದ್ದರೆ, ಎಸ್ಸಿ, ಎಸ್ಟಿ ಮತಗಳು ಕೂಡಾ 3 ಲಕ್ಷದಷ್ಟಿವೆ… ಕುರುಬರ ಮತಗಳು ಕೂಡಾ 1 ಲಕ್ಷದ 65 ಸಾವಿರಷ್ಟಿವೆ.. ಹೀಗೆ ಜಾತಿ ಸಮೀಕರಣದ ಮೇಲೆ ಕಾಂಗ್ರೆಸ್‌ ನಾಯಕರು ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.. ಈ ಜಾತಿ ಸಮೀಕರಣ ವರ್ಕೌಟ್‌ ಆದರೆ, ಅಚ್ಚರಿ ಫಲಿತಾಂಶವೆಂಬಂತೆ ಲಕ್ಷ್ಮಣ್‌ ಗೆದ್ದುಬಿಡಬಹುದು..

ಇದನ್ನೂ ಓದಿ; Breaking; ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಬೆಂಬಲಿಸಲು ಸುಮಲತಾ ನಿರ್ಧಾರ

ಒಕ್ಕಲಿಗ, ಕುರುಬ, ಮುಸ್ಲಿಂ, ದಲಿತ ಮತಗಳ ಮೇಲೆ ಕಣ್ಣು..!;

ಕಾಂಗ್ರೆಸ್‌ ನಾಯಕರು ಒಕ್ಕಲಿಗ, ಕುರುಬ, ಮುಸ್ಲಿಂ ಹಾಗೂ ದಲಿತ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.. ಈ ಸಮುದಾಯದವರಿಗೆ ಉಚಿತ  ಯೋಜನೆಗಳು ಹೆಚ್ಚು ತಲುಪುತ್ತಿವೆ.. ಈ ಸಮುದಾಯಗಳ ಜನ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದರೆ ಲಕ್ಷ್ಮಣ್‌ ಗೆಲುವಿಗೆ ಕಾರಣವಾಗುತ್ತದೆ.. ಈ ಕಾರಣದಿಂದಾಗಿಯೇ ಸಿಎಂ ಸಿದ್ದರಾಮಯ್ಯ, ದಲಿತ ಹಾಗೂ ಮುಸ್ಲಿಂ ಸಮುದಾಯ ನಾಯಕರನ್ನು ಸೆಳೆಯುವಲ್ಲಿ ನಿರತರಾಗಿದ್ದಾರೆ.. ಇನ್ನೊಂದೆಡೆ ಕುರುಬ ಮತಗಳನ್ನು ಸೆಳೆಯುವುದಕ್ಕಾಗಿ ಲಕ್ಷ್ಮಣ್‌ ಗೆದ್ದರೆ  ನಾನೇ ಗೆದ್ದಂತೆ ಎಂದು ಹೇಳುತ್ತಿದ್ದಾರೆ..

ಇದನ್ನೂ ಓದಿ; ಅತಿಯಾದ ಆತ್ಮವಿಶ್ವಾಸ ಬಿಜೆಪಿಗೆ ಮುಳುವಾಗುತ್ತಾ..?; ಪ್ರಶಾಂತ್‌ ಕಿಶೋರ್‌ ಬಿಜೆಪಿಗೆ 370 ಸೀಟು ಬರಲ್ಲ ಎಂದಿದ್ದೇಕೆ..?

ಮಹಿಳೆ ವಿರುದ್ಧ ಸೋಲನುಭವಿಸಿದ್ದ ಶ್ರೀಕಂಠದತ್ತ ಒಡೆಯರ್‌;

ಮೈಸೂರು ಸಂಸ್ಥಾನದ ಈ ಹಿಂದಿನ ರಾಜ ಶ್ರೀಕಂಠದತ್ತ ನರಸಿಂಗರಾಜ ಒಡೆಯರ್‌ ಅವರು ಕೂಡಾ ಐದು ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು.. ಇದರಲ್ಲಿ ಅವರು ನಾಲ್ಕು ಬಾರಿ ಗೆದ್ದು ಲೋಕಸಭೆ ಪ್ರವೇಶ ಮಾಡಿದ್ದರು.. ಆದ್ರೆ ಒಂದು ಬಾರಿ ಮಹಿಳೆ ವಿರುದ್ಧ ಸೋಲನುಭವಿಸಿದ್ದರು.. 1984, 89, 96 ಮತ್ತು 99ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಲೋಕಸಭೆಗೆ ಆಯ್ಕೆಯಾಗಿದ್ದರು.. ಆದ್ರೆ, 1991ರಲ್ಲಿ ಅವರ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು.. ಈ ವೇಳೆ ಅವರು ಮಾಜಿ ಸಿಎಂ ದೇವರಾಜ ಅರಸ್‌ ಅವರ ಪುತ್ರಿ ಚಂದ್ರಪ್ರಭಾ ಅರಸ್‌ ವಿರುದ್ಧ ಸೋಲನುಭವಿಸಿದ್ದರು.. ಇದಾದ ಮೇಲೆ ಶ್ರೀಕಂಠದತ್ತ ಒಡೆಯರ್‌ ರಾಜಕೀಯದಿಂದ ದೂರವೇ ಉಳಿದುಬಿಟ್ಟರು.. ಇದೀಗ ಅವರ ದತ್ತುಪುತ್ರ  ಯದುವೀರ್‌ ಅವರು ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ.. ಇವರ ವಿರುದ್ಧ ಒಬ್ಬ ಸಾಮಾನ್ಯ ಕಾರ್ಯಕರ್ತ ಲಕ್ಷ್ಮಣ್‌ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ.. ಮೇಲ್ನೋಟಕ್ಕೆ ಯದುವೀರ್‌ಗೆ ಉತ್ತಮ ವಾತಾವರಣವಿದ್ದಂತೆ ಕಾಣುತ್ತಿದೆ.. ಆದ್ರೆ ಕೊನೇ ಗಳಿಗೆ ರಾಜಕೀಯ ಲೆಕ್ಕಾಚಾರಗಳು ಹೇಗಿರುತ್ತವೋ ಗೊತ್ತಾಗುವುದಿಲ್ಲ..

ಇದನ್ನೂ ಓದಿ; ಕೆಂಪು ಮೊಟ್ಟೆ ಒಳ್ಳೆಯದಾ..?, ಬಿಳಿ ಮೊಟ್ಟೆ ಒಳ್ಳೆಯದಾ..?; ತಜ್ಞರು ಏನು ಹೇಳುತ್ತಾರೆ..?

ಎಲ್ಲಾ ವರ್ಗದವರೂ ಇಲ್ಲಿ ಗೆದ್ದಿದ್ದಾರೆ..!;

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತದಾರರು ಯಾವತ್ತಿಗೂ ಒಂದೇ ಜಾತಿ ಮಣೆ ಹಾಕಿಲ್ಲ.. ಒಕ್ಕಲಿಗರು, ಲಿಂಗಾಯತರು, ಅರಸು, ಕುರುಬರು ಹೀಗೆ ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ದಾರೆ.. ಇನ್ನು ಇಲ್ಲಿ ನಡೆದ 17 ಚುನಾವಣೆಗಳಲ್ಲಿ ಕಾಂಗ್ರೆಸ್‌ 12 ಬಾರಿ ಗೆಲುವು ಸಾಧಿಸಿದ್ದರೆ, ಬಿಜೆಪಿ 4 ಬಾರಿ ಹಾಗೂ ಕಿಸಾನ್‌ ಮಜ್ದಧೂರ್‌ ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿ ಒಂದು ಬಾರಿ ಜಯ ಗಳಿಸಿದೆ…

ಇದನ್ನೂ ಓದಿ; ಚನ್ನಪಟ್ಟಣದಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ

8 ವಿಧಾನಸಭಾ ಕ್ಷೇತ್ರಗಳಲ್ಲಿ 5 ರಲ್ಲಿ ಕಾಂಗ್ರೆಸ್‌;

ಇನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ.. ಈ ಕ್ಷೇತ್ರಗಳಲ್ಲಿ 5 ಜನ ಕಾಂಗ್ರೆಸ್‌ ಶಾಸಕರಿದ್ದರೆ, ಇಬ್ಬರು ಜೆಡಿಎಸ್‌, ಒಬ್ಬರು ಬಿಜೆಪಿ ಶಾಸಕರಿದ್ದಾರೆ.. ಚಾಮುಂಡೇಶ್ವರಿ ಹಾಗೂ ಹುಣಸೂರಿನಲ್ಲಿ ಜೆಡಿಎಸ್‌ ಶಾಸಕರಿದ್ದಾರೆ.. ಚಾಮರಾಜ, ನರಸಿಂಹರಾಜ, ಪಿಯಾಪಟ್ಟಣ, ಮಡಿಕೇರಿ ಹಾಗೂ ವಿರಾಜಪೇಟೆಯಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ.. ಕೃಷ್ಣರಾಜ ಕ್ಷೇತ್ರವೊಂದರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ..

 

Share Post