ಸಚಿವ ಸುಧಾಕರ್, ಕೃಷ್ಣಬೈರೇಗೌಡ ಇದಾರೆ ಅಂತ ಮೆರೆದರೆ ಅಷ್ಟೇ; ಡಿಕೆಶಿ ಹೇಳಿದ್ದು ಯಾರಿಗೆ..?
ಬೆಂಗಳೂರು; ಸಚಿವರಾದ ಡಾ.ಎಂ.ಸಿ.ಸುಧಾಕರ್ ಹಾಗೂ ಕೃಷ್ಣ ಬೈರೇಗೌಡ ಇದಾರೆ ಎಂದು ಮರೆದರೆ ಅಷ್ಟೇ.. ಯಾರೂ ಇಲ್ಲಿ ಸುಮ್ನೆ ಕೂತ್ಕೊಂಡು ಇರೋದಿಲ್ಲ ಅಂತ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ… ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಶಿಡ್ಲಘಟ್ಟದ ಪುಟ್ಟ ಆಂಜನಪ್ಪ ಹಾಗೂ ಚಿಕ್ಕಬಳ್ಳಾಪುರ ಮಾಜಿ ಶಾಸಕ ಬಚ್ಚೇಗೌಡ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಈ ರೀತಿಯಾಗಿ ಗುಡುಗಿದ್ದಾರೆ..
ಇದನ್ನೂ ಓದಿ; ಮಹಿಳೆ ವಿರುದ್ಧ ಸೋತಿದ್ದ ಶ್ರೀಕಂಠದತ್ತ ಒಡೆಯರ್; ಮೈಸೂರು ಗೆಲ್ತಾರಾ ಲಕ್ಷ್ಮಣ್..?
ಪುಟ್ಟ ಆಂಜನಪ್ಪಗೆ ಎಚ್ಚರಿಕೆ ಕೊಟ್ಟ ಡಿಕೆಶಿ;
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧನಸಭಾ ಚುನಾವಣೆಯಲ್ಲಿ ರಾಜೀವ್ ಗೌಡರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು.. ಆದ್ರೆ, ಟಿಕೆಟ್ ಆಕಾಂಕ್ಷಿಯಾಗಿದ್ದ ಪುಟ್ಟ ಆಂಜನಪ್ಪ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.. ಇದರಿಂದಾಗಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಲು ಕಾರಣವಾಯ್ತು.. ಇದೀಗ ಪುಟ್ಟ ಆಂಜನಪ್ಪ ಕಾಂಗ್ರೆಸ್‌ಗೆ ವಾಪಸ್ಸಾಗಿದ್ದಾರೆ.. ಪುಟ್ಟ ಆಂಜನಪ್ಪ ಅವರು ವಿಧಾನಸಭಾ ಚುನಾವಣೆ ಸಮಯದಲ್ಲಿ ನನಗೆ ಎಂ.ಸಿ.ಸುಧಾಕರ್ ಹಾಗೂ ಕೃಷ್ಣ ಬೈರೇಗೌಡರ ಬೆಂಬಲ ಇದೆ ಎಂದು ಹೇಳುತ್ತಿದ್ದರು.. ಇದನ್ನೇ ನೆನಪಿನಲ್ಲಿಟ್ಟುಕೊಂಡಿದ್ದ ಡಿ.ಕೆ.ಶಿವಕುಮಾರ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪುಟ್ಟ ಆಂಜನಪ್ಪಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ; ದೇವೇಗೌಡರು, ಕುಮಾರಸ್ವಾಮಿ ಸೋತಿದ್ದ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಗೆಲ್ತಾರಾ..?
ಸುಧಾಕರ್ ಇದಾರೆ ಕೃಷ್ಣಬೈರೆಗೌಡ್ರು ಇದಾರೆ ಅಂತ ಮೆರೆದರೆ ಇಲ್ಲಿ ಯಾರು ಕುತ್ಕೊಂಡು ಇರಲ್ಲ ನಾವು ಇಲ್ಲಿ,
ಹಳಬರನ್ನ ಮೂಲೆಗುಂಪು ಮಾಡ್ತೀನಿ. ಇನ್ನ ನಾನೆ ರಾಜ ಅಂತ ಮೆರೆದರೆ ನಮಗೆ ನೀವು ಬೇಕಿಲ್ಲ, ಎಲ್ಲರನ್ನ ಜೊತೆಗೆ ಇಟ್ಕೊಂಡು ಹೋದ್ರೆ ಮತ್ತು ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ರೆ ಮಾತ್ರ ನಿಮಗೆ ಗೌರವ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ;ಅಮಿತ್ ಶಾ ಬಂದು ಹೋದ ಮೇಲೆ ರಾಜ್ಯದಲ್ಲಿ ಬದಲಾದ ರಾಜಕೀಯ ಚಿತ್ರಣ!
ವೇದಿಕೆಯಲ್ಲಿ ಎಂ.ಸಿ.ಸುಧಾಕರ್ ಕೂಡಾ ಇದ್ದರು;
ಎಂ.ಸಿ.ಸುಧಾಕರ್ ಇದ್ದಾರೆ ಎಂದು ಮೆರೆದರೆ ನಾವು ಸುಮ್ಮನೆ ಕೂರೋದಿಲ್ಲ ಎಂದು ಹೇಳಿದಾಗ ಸಚಿವ ಎಂ.ಸಿ.ಸುಧಾಕರ್ ಕೂಡಾ ವೇದಿಕೆಯಲ್ಲೇ ಇದ್ದರು.. ಒಂದು ರೀತಿಯಲ್ಲಿ ಈ ಹೇಳಿಕೆ ಎಲ್ಲರಿಗೂ ಎಚ್ಚರಿಕೆ ನೀಡಿದಂತಿತ್ತು.. ಅಂದಹಾಗೆ, ಬಂಡಾಯ ಅಭ್ಯರ್ಥಿಯಾಗಿ ನಿಂತು ಸೋತಿದ್ದ ಪುಟ್ಟ ಆಂಜನಪ್ಪ ಅವರು ಪಕ್ಷಕ್ಕೆ ವಾಪಸ್ಸಾಗುವ ಬಗ್ಗೆ ಡಿ.ಕೆ.ಶಿವಕುಮಾರ್ ಬಳಿ ಮಾತೇ ಆಡಿಲ್ಲ ಎಂದು ಹೇಳಲಾಗುತ್ತಿದೆ.. ಅವರು ನೇರವಾಗಿ ಹೈಕಮಾಂಡ್ ನಾಯಕರನ್ನು ಮಾತನಾಡಿ ಅಲ್ಲಿಂದ ನಿರ್ದೇಶನ ಕೊಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.. ಈ ಹಿಂದೆ ಎಂ.ಸಿ.ಸುಧಾಕರ್ ಅವರು ಕೂಡಾ ನೇರವಾಗಿ ದೆಹಲಿಗೆ ಹೋಗಿ ಅಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದನ್ನು ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ; Breaking; ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಬೆಂಬಲಿಸಲು ಸುಮಲತಾ ನಿರ್ಧಾರ
ಡಿ.ಕೆ.ಶಿವಕುಮಾರ್ ಬೆಂಬಲಿಗ ರಾಜೀವ್ ಗೌಡ;
ರಾಜೀವ್ ಗೌಡ ಅವರು ಈ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದಿದ್ದರು.. ಇವರು ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರಾಗಿದ್ದಾರೆ.. ಹೀಗಾಗಿ ಅವರಿಗೆ ಈ ಬಾರಿ ಟಿಕೆಟ್ ಸಿಕ್ಕಿತ್ತು.. ಇದೀಗ ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜೀವ್ ಗೌಡ ಪತ್ನಿಯೇ ಇದ್ದಾರೆ.. ಸದ್ಯ ಈ ಕ್ಷೇತ್ರದಲ್ಲಿ ರಾಜೀವ್ ಗೌಡ ಮುಂದಾಳತ್ವದಲ್ಲೇ ಕಾಂಗ್ರೆಸ್ ನಡೆಯುತ್ತಿದೆ.. ಹೀಗಾಗಿ ಈಗ ಪುಟ್ಟ ಆಂಜನಪ್ಪ ಅವರು ಕೂಡಾ ಪಕ್ಷ ಸೇರ್ಪಡೆಯಾಗಿದ್ದಾರೆ.. ಅವರ ಮುಂದ ನಡೆ ಹೇಗಿರುತ್ತೆ ಅನ್ನೋ ಬಗ್ಗೆ ಕುತೂಹಲ ಅಂತೂ ಇದ್ದೇ ಇದೆ..