DistrictsPolitics

ಶಿಗ್ಗಾಂವಿಯಲ್ಲಿ ಸಿಎಂ ನಾಮಪತ್ರ; ರೋಡ್‌ ಶೋನಲ್ಲಿ ನಟ ಸುದೀಪ್‌ ಭಾಗಿ

ಹಾವೇರಿ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಶಿಗ್ಗಾಂವಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇದಕ್ಕಾಗಿ ಬೃಹತ್‌ ರೋಡ್‌ ಶೋ ಆಯೋಜಿಸಲಾಗಿದ್ದು, ಶಿಗ್ಗಾಂವಿ ಕೇಸರಿಮಯವಾಗಿದೆ. ರೋಡ್‌ ಶೋ ನಲ್ಲಿ ನಟ ಸುದೀಪ್‌ ಭಾಗವಹಿಸುತ್ತಿರುವುದರಿಂದ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ. ರೋಡ್‌ ಶೋನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡಾ ಪಾಲ್ಗೊಳ್ಳಲಿದ್ದಾರೆ.

ಎರಡು ಕಿಲೋ ಮೀಟರ್‌ವರೆಗೂ ಬೃಹತ್‌ ರೋಡ್‌ ಶೋ ನಡೆಸಲಾಗುತ್ತದೆ. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಜನಜ ಸೇರಿದ್ದು, ಸುದೀಪ್‌ಗಾಗಿ ಜನ ಕಾಯುತ್ತಿದ್ದಾರೆ.

 

 

Share Post