Politics

Breaking; ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಬೆಂಬಲಿಸಲು ಸುಮಲತಾ ನಿರ್ಧಾರ

ಮಂಡ್ಯ; ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಆದ್ರೆ ಮಂಡ್ಯದಿಂದ ನಾನು ನಿರ್ಗಮನವಾಗುತ್ತಿಲ್ಲ.ನಾನು ಬಿಜೆಪಿ ಜೊತೆ ಇರುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅವರು ಹೇಳಿದ್ದಾರೆ.

ನಾನು ತುಂಬಾ ಯೋಚನೆ ಮಾಡಿದ್ದೇನೆ. ಆಪ್ತರ ಜೊತೆಯಲ್ಲಿ, ವರಿಷ್ಠರ ಜೊತೆಯಲ್ಲಿ ಸುದೀರ್ಘ ಚರ್ಚೆ ಮಾಡಿದ್ದೇನೆ.. ಅಳೆದೂತೂಗಿ ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಬದಲಾದ ಪರಿಸ್ಥಿತಿ, ಬದಲಾದ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.. ಪಕ್ಷೇತರವಾಗಿ ಸ್ಪರ್ಧೆ ಮಾಡಿದರೆ ದ್ವೇಷ ಸಾಧಿಸೋದಕ್ಕೆ ಮಾಡಬೇಕಾಗುತ್ತದೆ.. ಹೀಗಾಗಿ ನಾನು ಪ್ರಬುದ್ಧತೆಯಿಂದ ನಾನು ಹೆಜ್ಜೆ ಇಡುತ್ತಿದ್ದೇನೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.

ನಾನು ಕೊನೆಯ ಘಳಿಗೆಯವರೆಗೂ ಪ್ರಯತ್ನ ಮಾಡುತ್ತಲೇ ಬಂದೆ.. ಮಂಡ್ಯದಲ್ಲೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕೆಂದು ಕೊನೆಯ ವರೆಗೂ ಹೋರಾಟ ಮಾಡಿದೆ.. ಆದ್ರೆ, ನನಗೆ ಬೆಂಗಳೂರು ಉತ್ತರ, ಮೈಸೂರು, ಚಿಕ್ಕಬಳ್ಳಾಪುರ ಅಫರ್‌ ಬಂದಿತ್ತು.. ಆದ್ರೆ ನಾನು ಯಾವುದನ್ನೂ ಒಪ್ಪಲಿಲ್ಲ.. ಸ್ಪರ್ಧೆ ಮಾಡಿದರೆ ಮಂಡ್ಯ ಮಾತ್ರ ಎಂದು ಹೇಳಿದ್ದೆ ಎಂದು ಸುಮಲತಾ ಹೇಳಿದ್ದಾರೆ.. ಈಗ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ.. ಇದರಿಂದ ನಮಗೆ ಸಲಾಲು ಎದುರಾಗಿದೆ ಎಂದು ಸುಮಲತಾ ಹೇಳಿದ್ದಾರೆ..

ಮಂಡ್ಯದಿಂದ ಈ ಬಾರಿ ಲೋಕಸಭೆಗೆ ಬಿಜೆಪಿ ಟಿಕೆಟ್‌ ಎಂದು ಭಾವಿಸಿದ್ದ ಸಂಸದೆ ಸುಮಲತಾ ಅವರಿಗೆ ನಿರಾಸೆಯಾಗಿದೆ.. ಹೀಗಾಗಿ ಅವರು ತನ್ನ ನಿರ್ಧಾರ ಪ್ರಕಟಿಸಲು ಮಂಡ್ಯದಲ್ಲಿ ಬೆಂಬಲಿಗರ ಸಭೆ ನಡೆಸುತ್ತಿದ್ದಾರೆ.. ಕೆಲವೇ ಕ್ಷಣಗಳನ್ನು ಅವರು ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.

ಮಂಡ್ಯ ನಗರದಲ್ಲಿ ಸಂಸದೆ ಸುಮಲತಾ ಅಂಬರೀಶ್‌ ಬೆಂಬಲಿಗರ ಸಭೆ ನಡೆಸುತ್ತಿದ್ದಾರೆ. ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಭಾರಿ ಬಹುಮತದಿಂದ ಗೆಲುವು ಸಾಧಿಸಿದ್ದರು.. ಹೀಗಾಗಿ ಅವರು ಕಳೆದ ವರ್ಷದಲ್ಲಿ ಏನೇನು ಕೆಲಸ ಮಾಡಿದ್ದಾರೆ ಎಂಬ ಕುರಿತ ವಿಡಿಯೋವನ್ನು ಸಭೆಯಲ್ಲಿ ರಿಲೀಸ್‌ ಮಾಡಲಾಯಿತು.

ಸಭೆಯಲ್ಲಿ ಮಾತನಾಡಿದ ನಟ ದರ್ಶನ್‌ ಅವರು ನನಗೆ ಸುಮಲತಾ ಅವರು ಅಮ್ಮ ಇದ್ದ ಹಾಗೆ.. ಅವರು ಯಾವಾಗಲೂ ನನಗೆ ಅಮ್ಮನೇ ಆಗಿರುತ್ತಾರೆ.. ಆದ್ರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದು ತುಂಬಾನೇ ಕಷ್ಟವಾಗುತ್ತದೆ.. ಆದರೂ ಕೂಡಾ ಅಮ್ಮ ಯಾವುದೇ ತೀರ್ಮಾನ ಕೈಗೊಂಡರೂ ನಾವು ಅವರ ಹಿಂದೆ ಇರುತ್ತೇವೆ ಎಂದು ಹೇಳಿದ್ದಾರೆ..

ಸಂಸದೆ ಸುಮಲತಾ ಅಂಬರೀಶ್‌ ಅವರು ಮಾತನಾಡುತ್ತಾ, ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರೂ, 7 ಲಕ್ಷ ಮತಗಳು ಬಂದಿದ್ದರು.. ಮಂಡ್ಯದ ಜನರೆಲ್ಲರೂ ನನಗೆ ಸಪೋರ್ಟ್‌ ಮಾಡಿದರು.. ಹೀಗಾಗಿ ಒಂದೂ ಕಾಲು ಲಕ್ಷ ಮತಗಳಿಂದ ನಾನು ಗೆದ್ದಿದ್ದೆ. ನಿಮ್ಮ ಸೇವೆ ಮಾಡೋದಕ್ಕೆ ನನಗೆ ಅವಕಾಶ ಸಿಕ್ಕಿತ್ತು.. ನಾನು ಸಾಧ್ಯವಾದಷ್ಟು ಸಾಕಷ್ಟು ಸವಾಲುಗಳೊಂದಿಗೆ ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ. ನನಗೆ ರಾಜಕೀಯ ಬೇಕಾಗಿರಲಿಲ್ಲ. ಆದ್ರೆ ಅಂಬರೀಶ್‌ ಅಭಿಮಾನಿಗಳಿಗಾಗಿ ನಾನು ರಾಜಕೀಯಕ್ಕೆ ಬಂದೆ ಎಂದು ಸುಮಲತಾ ಅಂಬರೀಶ್‌ ಹೇಳಿದ್ದಾರೆ..

ಪಕ್ಷೇತರ ಸಂಸದೆಯಾದ ನಾನು ಕೆಲಸ ಮಾಡುವುದಕ್ಕೆ ದೊಡ್ಡ ಸವಾಲಿತ್ತು.. ಆದರೂ ಕೂಡಾ ನಾನು ಸಾಕಷ್ಟು ಕೆಲಸಗಳನ್ನು ಮಾಡಲು ಶ್ರಮ ಪಟ್ಟಿದ್ದೇನೆ.. ಸಾಮಾನ್ಯ ಜನರ ಪರವಾಗಿ ಕೆಲಸ ಮಾಡಿದ್ದೇನೆ.. ಆದ್ರೆ ನಾನು ಮಾಡಿರುವ ಸಾಧನೆಗಳನ್ನು ಎಂದಿಗೂ ನಾನು ಪ್ರಚಾರ ಮಾಡಿಕೊಳ್ಳಲಿಲ್ಲ.. ಅಂಬರೀಶ್‌ ಅವರು ಯಾವತ್ತೂ ಪ್ರಚಾರ ಪಡೆದುಕೊಳ್ಳಬಾರದು.. ಸಾಧನೆಗಳೇ ಮಾತನಾಡಬೇಕು.. ನಾವು ಮಾತಾಡಬಾರದು ಎಂದು ಹೇಳುತ್ತಿದ್ದರು.. ನಾನು ಅದನ್ನೇ ನಂಬಿಕೊಂಡು ಬಂದಿದ್ದೆ.. ಆದ್ರೆ ನಾನು ಏನು ಮಾಡಿದ್ದೇನೆ ಎಂಬುದನ್ನು ವಿಡಿಯೋ ಮೂಲಕ ಇವತ್ತು ತಿಳಿಸಿದ್ದೇನೆ. ಕೆಆರ್‌ಎಸ್‌ ಡ್ಯಾಮ್‌ ಸಂರಕ್ಷಣೆಗೆ ನಾನು ಹೋರಾಟ ಮಾಡಿದ್ದೇನೆ ಎಂದು ಸುಮಲತಾ ಅವರು ಹೇಳಿದ್ದಾರೆ.. ಅಕ್ರಮ ಗಣಿಗಾರಿಕೆ ವಿರುದ್ಧ ನಾನು ಹೋರಾಟ ಮಾಡಿದ್ದೇನೆ ಎಂದು ಸುಮಲತಾ ಅವರು ಹೇಳಿದ್ದಾರೆ..

 

 

Share Post