Politics

ಅಮಿತ್‌ ಶಾ ಬಂದು ಹೋದ ಮೇಲೆ ರಾಜ್ಯದಲ್ಲಿ ಬದಲಾದ ರಾಜಕೀಯ ಚಿತ್ರಣ!

ಬೆಂಗಳೂರು; ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಎಲ್ಲವನ್ನೂ ಗೆಲ್ಲಬೇಕೆಂಬ ಉತ್ಸಾಹದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳಿವೆ.. ಆದ್ರೆ ಈ ಉತ್ಸಾಹ ತಣ್ಣೀರೆರಚುತ್ತಿದ್ದದ್ದು, ಭಿನ್ನಮತ.. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರಲ್ಲಿ ಅಸಮಾಧಾನ ಏರ್ಪಟ್ಟಿತ್ತು.. ಆದ್ರೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಂದು ಹೋದ ಮೇಲೆ ರಾಜ್ಯದ ರಾಜಕೀಯ ಚಿತ್ರಣ ಬದಲಾಗಿದೆ..

ಇದನ್ನೂ ಓದಿ; Breaking; ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಬೆಂಬಲಿಸಲು ಸುಮಲತಾ ನಿರ್ಧಾರ

ಕೊನೆಗೂ ಸುಧಾಕರ್‌-ಎಸ್‌.ಆರ್‌.ವಿಶ್ವನಾಥ್‌ ಭೇಟಿ;

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಶಾಸಕ ಎಸ್‌.ಆರ್‌.ವಿಶ್ವನಾಥ್‌ ತಮ್ಮ ಪುತ್ರನಿಕೆ ಟಿಕೆಟ್‌ ಬಯಸಿದ್ದರು.. ಆದ್ರೆ ಬಿಜೆಪಿ ಹೈಕಮಾಂಡ್‌ ಮಾಜಿ ಸಚಿವ ಡಾ.ಕೆ.ಸುಧಾಕರ್‌ಗೆ ಟಿಕೆಟ್‌ ನೀಡಿತ್ತು. ಇದರಿಂದಾಗಿ ಎಸ್‌.ಆರ್‌.ವಿಶ್ವನಾಥ್‌ ಅವರು ಮುನಿಸಿಕೊಂಡಿದ್ದಾರೆ.. ಕೆಲ ದಿನಗಳ ಹಿಂದೆ ಡಾ.ಕೆ.ಸುಧಾಕರ್‌ ಅವರು ವಿಶ್ವನಾಥ್‌ ಅವರ ಮನೆಗೆ ಬಂದಿದ್ದರು.. ಆದ್ರೆ ವಿಶ್ವನಾಥ್‌ ಅವರು ಮನೆಯಲ್ಲೇ ಇದ್ದರೂ ಇಲ್ಲ ಎಂದು ಹೊರಗಿನಿಂದಲೇ ವಾಪಸ್‌ ಕಳುಹಿಸಲಾಗಿತ್ತು.. ಇದಾದ ಮೇಲೆ ನಿನ್ನೆ ಅಮಿತ್‌ ಶಾ ಅವರು ರಾಜ್ಯಕ್ಕೆ ಆಗಮಿಸಿದ್ದರು.. ಈ ವೇಳೆ ಅಮಿತ್‌ ಶಾ ಅವರು ಅಸಮಾಧಾನ ಹೊಂದಿದ್ದ ನಾಯಕರನ್ನು ಕರೆಸಿ ಮಾತನಾಡಿದ್ದಾರೆ.. ಇದಾದ ಮೇಲೆ ಎಸ್‌.ಆರ್.ವಿಶ್ವನಾಥ್‌ ಅವರ ಮುನಿಸು ಶಮನವಾಗಿದೆ.. ಈ ಬೆನ್ನಲ್ಲೇ ವಿಶ್ವನಾಥ್‌ ಮನೆಗೆ ಆಗಮಿಸಿದ್ದ ಸುಧಾಕರ್‌ ಅವರು, ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ..

ಇದನ್ನೂ ಓದಿ; ಅತಿಯಾದ ಆತ್ಮವಿಶ್ವಾಸ ಬಿಜೆಪಿಗೆ ಮುಳುವಾಗುತ್ತಾ..?; ಪ್ರಶಾಂತ್‌ ಕಿಶೋರ್‌ ಬಿಜೆಪಿಗೆ 370 ಸೀಟು ಬರಲ್ಲ ಎಂದಿದ್ದೇಕೆ..?

ಈ ಬಗ್ಗೆ ಸುಧಾಕರ್‌ ಹೇಳಿರುವುದೇನು..?

ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರನ್ನು ಭೇಟಿಯಾಗಿದ್ದರ ಬಗ್ಗೆ ಸುಧಾಕರ್‌ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.. ಅದರಲ್ಲೇನಿದೆ..? ಯಥಾವತ್‌ ಮಾಹಿತಿ ಇಲ್ಲಿದೆ..

ʻಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಟಿ.ಟಿ.ಡಿ ಆಡಳಿತ ಮಂಡಳಿ ಸದಸ್ಯರಾದ ಶ್ರೀ SR Vishwanath ಅವರ ಮನೆಗೆ ಇಂದು ಭೇಟಿ ನೀಡಿ ಲೋಕಸಭಾ ಚುನಾವಣೆ ಕುರಿತಂತೆ ಸಮಾಲೋಚನೆ ನಡೆಸಿ ಸಹಕಾರ ಕೋರಲಾಯಿತು.
ಈ ಸಂದರ್ಭದಲ್ಲಿ ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಚುನಾವಣಾ ಉಸ್ತುವಾರಿಗಳಾದ ಶ್ರೀ @AgrawalRMD, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ S Muniraju , ಮಾಜಿ ಸಚಿವ ಶ್ರೀ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮುಖಂಡರು ಹಾಗೂ ಕಾರ್ಯಕರ್ತರು ಉಪ್ಥಿತರಿದ್ದರು.ʼ

ಇದನ್ನೂ ಓದಿ; Episode-1; ರಾಜಕಾರಣಿಗಳ ಗುಣವನ್ನು ಜನ ಸಾಮಾನ್ಯರು ಅಳವಡಿಸಿಕೊಂಡರೆ ಏನಾಗುತ್ತೆ..?

ಹೀಗಂತ ಸುಧಾಕರ್‌ ಅವರು ಬರೆದುಕೊಂಡಿದ್ದಾರೆ.. ಇದರಿಂದಾಗಿ ವಿಶ್ವನಾಥ್‌ ಅವರ ಮುನಿಸಿ ತಣ್ಣಗಾದಂತೆ ಆಗಿದೆ.. ಯಲಹಂಕ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ಭಾಗದಲ್ಲಿ ವಿಶ್ವನಾಥ್‌ ಅವರ ಪ್ರಾಬಲ್ಯವಿದೆ.. ಅವರ ಬೆಂಬಲಿಗರು ತುಂಬಾ ಜನ ಇದ್ದಾರೆ.. ಈ ಹಿನ್ನೆಲೆಯಲ್ಲಿ ವಿಶ್ವನಾಥ್‌ ಅವರು ಸುಧಾಕರ್‌ ಅವರ ಬೆಂಬಲಕ್ಕೆ ಮನಸ್ಪೂರ್ತಿಯಾಗಿ ನಿಂತರೆ ಸುಧಾಕರ್‌ ಗೆಲುವಿಗೆ ಆಸರೆಯಾಗುತ್ತದೆ.. ಸದ್ಯಕ್ಕೆ ವಿಶ್ವನಾಥ್‌ ಅವರು ಮುನಿಸು ಮರೆತಂತೆ ನಡೆದುಕೊಳ್ಳುತ್ತಿದ್ದಾರೆ.. ಪಕ್ಷದ ಗೆಲುವಿಗಾಗಿ ಅವರು ಶ್ರಮಿಸಿದರೆ ಸುಧಾಕರ್‌ಗೆ ದೊಡ್ಡ ಬಲವಂತೂ ಸಿಕ್ಕಂತಾಗುತ್ತದೆ..

ಇದನ್ನೂ ಓದಿ; ಕೆಂಪು ಮೊಟ್ಟೆ ಒಳ್ಳೆಯದಾ..?, ಬಿಳಿ ಮೊಟ್ಟೆ ಒಳ್ಳೆಯದಾ..?; ತಜ್ಞರು ಏನು ಹೇಳುತ್ತಾರೆ..?

ಹಲವು ಕ್ಷೇತ್ರಗಳ ಅಸಮಾಧಾನ ಶಮನ ಮಾಡಿದ ಅಮಿತ್‌ ಶಾ;

ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೂಡಾ ಇದೇ ರೀತಿಯ ಸಮಸ್ಯೆ ಇತ್ತು.. ಇದನ್ನು ಅಮಿತ್‌ ಶಾ ಅವರು ಶಮನ ಮಾಡಿದ್ದಾರೆ.. ಅಸಮಾಧಾನಗೊಂಡಿರುವ ನಾಯಕರ ಜೊತೆ ಮಾತನಾಡಿ ಸಮಾಧಾನ ಮಾಡಿದ್ದಾರೆ.. ಜೊತೆಗೆ ಬಿಜೆಪಿ ನಾಯಕರಿಗೆ ಹಲವು ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ.. ಬಂಡಾಯ ಇದ್ದಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಹಲವು ಸ್ಥಾನಗಳನ್ನು ಕಳೆದುಕೊಳ್ಳುವ ಭೀತಿ ಇತ್ತು.. ಆದ್ರೆ ಅಮಿತ್‌ ಶಾ ಬಂದ ಮೇಲೆ ರಾಜ್ಯ ಬಿಜೆಪಿ ಹೊಸ ಚೈತನ್ಯ ಮೂಡಿದೆ.. ಅಭ್ಯರ್ಥಿಗಳು ಕೂಡಾ ಹೊಸ ಉತ್ಸಾಹದಲ್ಲಿ ಕೆಲಸ ಮಾಡಲು ಶುರು ಮಾಡಿದ್ದಾರೆ..

ಇದನ್ನೂ ಓದಿ; ಚನ್ನಪಟ್ಟಣದಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ

Share Post