Politics

Rahul Gandhi; ತೆಲಂಗಾಣದ ಖಮ್ಮಂನಿಂದ ರಾಹುಲ್‌ ಗಾಂಧಿ ಸ್ಫರ್ಧೆ ಬಹುತೇಕ ಫಿಕ್ಸ್‌!

ಹೈದರಾಬಾದ್‌; ಉತ್ತರ ಪ್ರದೇಶದ ರಾಯ್‌ಬರೇಲಿ ಹಾಗೂ ಅಮೇಥಿಯಿಂದ ಸ್ಪರ್ಧೆ ಮಾಡುತ್ತಿದ್ದ ನೆಹರೂ ಕುಟುಂಬದ ಸದಸ್ಯರು ಈಗ ದಕ್ಷಿಣ ಭಾರತವನ್ನು ನೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಕಳೆದ ಲೋಕಸಭಾ ಚುನಾವಣೆ ವೇಳೆ ಕೇರಳದಿಂದ ಸ್ಪರ್ಧೆ ಮಾಡಿ ಲೋಕಸಭೆ ಪ್ರವೇಶ ಮಾಡಿದ್ದರು. ಇದೀಗ ಮತ್ತೆ ಅವರು ಸೇಫೇಸ್ಟ್‌ ಕ್ಷೇತ್ರವೊಂದನ್ನು ಹುಡುಕುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ ಸೇಫ್‌ ಕ್ಷೇತ್ರ ಅನ್ನೋದು ಕರ್ನಾಟಕದಲ್ಲಿ ಒಂದೂ ಸಿಗೋದಿಲ್ಲ. ಯಾವುದೇ ಕ್ಷೇತ್ರ ಆದರೂ ಹರಸಾಹಸಪಟ್ಟೇ ಗೆಲ್ಲಬೇಕು.. ಹೀಗಾಗಿ ತೆಲಂಗಾಣದಲ್ಲಿ ಸ್ಪರ್ಧೆ ಮಾಡಿದರೆ ಸೇಫ್‌ ಅನ್ನೋ ಲೆಕ್ಕಾಚಾರ ಇದೆ. ಹೀಗಾಗಿ ಈ ಬಾರಿ ರಾಹುಲ್‌ ಗಾಂಧಿ ತೆಲಂಗಾಣದಲ್ಲಿ ಸ್ಪರ್ಧೆ ಮಾಡೋದು ಬಹುತೇ ಪಕ್ಕಾ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ರವಾನೆ

ಖಮ್ಮಂನಿಂದ ರಾಹುಲ್‌ ಗಾಂಧಿ ಸ್ಪರ್ಧೆ ಮಾಡ್ತಾರಾ..?;

ಖಮ್ಮಂನಿಂದ ರಾಹುಲ್‌ ಗಾಂಧಿ ಸ್ಪರ್ಧೆ ಮಾಡ್ತಾರಾ..?; ತೆಲಂಗಾಣದಲ್ಲಿ ಖಮ್ಮಂ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಪಾಲಿಗೆ ಅತ್ಯಂತ ಸೇಫ್‌ ಕ್ಷೇತ್ರ.. ಯಾಕಂದ್ರೆ ಇಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಇದೆ.. ಈ ಕಾರಣಕ್ಕಾಗಿ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿಯವರು ರಾಹುಲ್‌ ಗಾಂಧಿಯವರು ಖಮ್ಮಂ ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸಬೇಕೆಂದು ಬಯಸುತ್ತಿದ್ದಾರೆ. ಹೈಕಮಾಂಡ್‌ ಮುಂದೆ ಅವರು ಈ ಬೇಡಿಕೆ ಕೂಡಾ ಇಟ್ಟಿದ್ದಾರೆ.

ಇದನ್ನೂ ಓದಿ; ಮಕ್ಕಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಾದ; ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಲು ಸಲಹೆ

ತೆಲಂಗಾಣ ರಾಜ್ಯ ರಚನೆ ಮಾಡಿದ್ದ ಕಾಂಗ್ರೆಸ್‌ ಸರ್ಕಾರ;

ತೆಲಂಗಾಣ ರಾಜ್ಯ ರಚನೆ ಮಾಡಿದ್ದ ಕಾಂಗ್ರೆಸ್‌ ಸರ್ಕಾರ; ಆಂಧ್ರಪ್ರದೇಶ ವಿಭಜನೆ ಮಾಡಿ ತೆಲಂಗಾಣ ರಾಜ್ಯ ರಚನೆಗೆ ಹಲವು ದಶಕಗಳ ಹೋರಾಟ ನಡೆದಿತ್ತು.. ಆದ್ರೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ವೇಳೆ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಾಡಲಾಗಿತ್ತು.. ಸೋನಿಯಾಗಾಂಧಿಯವರ ನಿರ್ಧಾರದಿಂದಾಗಿ ತೆಲಂಗಾಣ ರಾಜ್ಯವಾಗಿತ್ತು.. ಹೀಗಾಗಿ ಸೋನಿಯಾಗಾಂಧಿಯವರು ತೆಲಂಗಾಣದಲ್ಲಿ ಸ್ಪರ್ಧೆ ಮಾಡಬೇಕು. ಅವರನ್ನು ಭಾರಿ ಬಹುಮತದೊಂದಿಗೆ ಗೆಲ್ಲಿಸಬೇಕೆಂದು ತೆಲಂಗಾಣದ ಕಾಂಗ್ರೆಸ್‌ ನಾಯಕರು ಬಯಸಿದ್ದರು. ಆದ್ರೆ, ಅನಾರೋಗ್ಯದ ಕಾರಣದಿಂದಾಗಿ ಸೋನಿಯಾಗಾಂಧಿಯವರು ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಹೀಗಾಗಿ, ರಾಹುಲ್‌ ಗಾಂಧಿಯವರು ತೆಲಂಗಾಣದಲ್ಲಿ ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬರಲಿದೆ. ಜೊತೆಗೆ ಖಮ್ಮಂ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಸುಲಭ ವಾತಾವರಣ ಇರುವುದರಿಂದ ಖಮ್ಮಂನಲ್ಲಿ ರಾಹುಲ್‌ ಗಾಂಧಿ ಸ್ಪರ್ಧೆ ಮಾಡಬೇಕೆಂದು ತೆಲಂಗಾಣ ಕಾಂಗ್ರೆಸ್‌ ನಾಯಕರು ಬಯಸುತ್ತಿದ್ದಾರೆ.

ಇದನ್ನೂ ಓದಿ; ಕತ್ತಿಹಿಡಿದು ಮಾಜಿ ಮೇಯರ್‌ ಪುತ್ರನ ಗೂಂಡಾ ವರ್ತನೆ; ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

64 ವಿಧಾನಸಭಾ ಸ್ಥಾನಗಲ್ಲಿ ಗೆದ್ದಿರುವ ಕಾಂಗ್ರೆಸ್‌;

64 ವಿಧಾನಸಭಾ ಸ್ಥಾನಗಲ್ಲಿ ಗೆದ್ದಿರುವ ಕಾಂಗ್ರೆಸ್‌; ತೆಲಂಗಾಣ ವಿಧಾನಸಭೆಯ 119 ಕ್ಷೇತ್ರಗಳ ಪೈಕಿ 64 ಸ್ಥಾನಗಳಲ್ಲಿ ಗೆದ್ದು ಕಾಂಗ್ರೆಸ್‌ ಅಧಿಕಾರ ಹಿಡಿದೆ. ರೇವಂತ್‌ ರೆಡ್ಡಿ ಸಿಎಂ ಆಗಿದ್ದಾರೆ… ಕರ್ನಾಟಕದಂತೆ ತೆಲಂಗಾಣದಲ್ಲೂ ಹಲವು ಗ್ಯಾರೆಂಟಿಗಳನ್ನು ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಒಂದಷ್ಟು ಲೋಕಸಭಾ ಸ್ಥಾನಗಳನ್ನು ಗಳಿಸಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ. ಹೀಗಿರುವಾಗ ಬೆಹರೂ ಕುಟುಂಬದ ಕುಡಿಯೊಬ್ಬರು ಇಲ್ಲಿ ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬರಬಹುದು ಎಂಬಾ ಲೆಕ್ಕಾಚಾರ ಇದೆ.

ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ತೆಲಂಗಾಣದಿಂದ ರಾಹುಲ್ ಗಾಂಧಿಯಾದರೂ ಸ್ಪರ್ಧಿಸಬೇಕು ಎಂದು ಟಿಪಿಸಿಸಿ ಬಯಸಿದೆ. ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿರುವ ಖಮ್ಮಂನಿಂದ ರಾಹುಲ್ ಅವರನ್ನು ಕಣಕ್ಕಿಳಿಸಿದರೆ ಒಳ್ಳೆಯದು ಎಂದು ಸಿಎಂ ರೇವಂತ್‌ ರೆಡ್ಡಿ ಹೇಳುತ್ತಿದ್ದಾರೆ.

ಇದನ್ನೂ ಓದಿ; ಭಾರತ ದೇಶವಲ್ಲ, ಮೂರ್ಖರಿಗೆ ಮಾತ್ರ ಜೈ ಶ್ರೀರಾಮ್‌ ಘೋಷಣೆ; ವಿವಾದ ಸೃಷ್ಟಿಸಿದ ಎ.ರಾಜಾ

2019ರಲ್ಲಿ ಅಮೇಥಿಯಲ್ಲಿ ಸೋಲು, ವಯನಾಡಿನಲ್ಲಿ ಗೆಲುವು;

2019ರಲ್ಲಿ ಅಮೇಥಿಯಲ್ಲಿ ಸೋಲು, ವಯನಾಡಿನಲ್ಲಿ ಗೆಲುವು; 2019 ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸೋಲನುಭವಿಸಿದ್ದರು. ಅಮೇಥಿ ಜೊತೆಗೆ ಕೇರಳದ ವಯನಾಡಿನಲ್ಲೂ ಸ್ಪರ್ಧಿಸಿದ್ದ ರಾಹುಲ್ ವಯನಾಡಿನಲ್ಲಿ ಗೆದ್ದಿದ್ದರು. ಆದರೆ ಈ ಬಾರಿ ವಯನಾಡಿನಲ್ಲಿ  ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷ ಸಿಪಿಐ ಈಗಾಗಲೇ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರ ಪತ್ನಿ ಅನಿ ರಾಜಾ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಹೀಗಾಗಿ ರಾಹುಲ್ ಗಾಂಧಿ ಈ ಬಾರಿ ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಬಿಜೆಪಿ ಪ್ರಬಲವಾಗಿರುವ ಉತ್ತರ ಭಾರತದಲ್ಲಿ ರಾಹುಲ್ ಸ್ಪರ್ಧಿಸಬೇಕು ಎಂದು ಇಂಡಿಯಾ ಮೈತ್ರಿಕೂಟದಲ್ಲಿರುವ ಮಿತ್ರಪಕ್ಷಗಳು ಸೂಚಿಸುತ್ತಿವೆ. ಆದರೆ, ಕಳೆದ ಚುನಾವಣೆಯಲ್ಲಿ ಅಮೇಥಿಯಲ್ಲಿ ಸೋಲಿನ ಕಹಿ ಅನುಭವಗಳಿಂದಾಗಿ ದಕ್ಷಿಣ ಭಾರತದಲ್ಲಿ ಸುರಕ್ಷಿತ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ನಾಯಕತ್ವ ಮುಂದಾಗಿದೆ. ರಾಹುಲ್ ಸ್ಪರ್ಧಿಸಲು ಖಮ್ಮಂ ಸೂಕ್ತ ಕ್ಷೇತ್ರ ಎಂದು ಟಿಪಿಸಿಸಿ ಕಾಂಗ್ರೆಸ್ ನಾಯಕತ್ವಕ್ಕೆ ಹೇಳಿದೆ. ಆದರೆ ಇಲ್ಲಿಯವರೆಗೆ ರಾಹುಲ್ ಎಲ್ಲಿ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಪಕ್ಷದ ಹೈಕಮಾಂಡ್ ಯಾವುದೇ ಘೋಷಣೆ ಮಾಡಿಲ್ಲ.

ಇದನ್ನೂ ಓದಿ; ಬೇಸಿಗೆಯಲ್ಲಿ ನಿಮ್ಮ ಚರ್ಮ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ..?

ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಕಸರತ್ತು;

ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಕಸರತ್ತು; ರಾಹುಲ್‌ ಗಾಂಧಿಯವರು ತೆಲಂಗಾಣದಲ್ಲಿ ಸ್ಪರ್ಧೆ ಮಾಡೋದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ಬಿಜೆಪಿ ನಾಯಕರು ರಾಹುಲ್‌ ಗಾಂಧಿ ವಿರುದ್ಧ ಪ್ರಬಲ ನಾಯಕನನ್ನು ಕಣಕ್ಕಿಳಿಸಲು ಕಸರತ್ತು ಶುರು ಮಾಡಿದ್ದಾರೆ. ಸ್ಮೃತಿ ಇರಾನಿಯಂತಹ ಪ್ರಬಲರನ್ನು ಖಮ್ಮಂನಲ್ಲೂ ಅಖಾಡಕ್ಕಿಳಿಸಿ ರಾಹುಲ ಗಾಂಧಿಯನ್ನು ಸೋಲಿಸಬೇಕೆಂಬ ಇರಾದೆಯಲ್ಲಿ ಬಿಜೆಪಿ ನಾಯಕರಿದ್ದಾರೆ. ಅಂತಹ ನಾಯಕನಿಗಾಗಿ ಬಿಜೆಪಿ ನಾಯಕರು ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ರಾಹುಲ್‌ ಗಾಂಧಿ ಸ್ಪರ್ಧೆ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; ಬೇಸಿಗೆಯಲ್ಲಿ ಇರುವೆಗಳ ಸಮಸ್ಯೆ; ನಿವಾರಣೆ ತುಂಬಾ ಸುಲಭ!

Share Post