BengaluruCrime

ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರಿಗೆ ಬಾಂಬ್‌ ಬೆದರಿಕೆ; ಇ-ಮೇಲ್‌ ರವಾನೆ

ಬೆಂಗಳೂರು; ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಕಳೆದ ಶುಕ್ರವಾರ ಬಾಂಬ್‌ ಸ್ಫೋಟ ಸಂಭವಿಸಿತ್ತು. ಇದಾದ ಮಾರನೆಯ ದಿನ ಅಂದ್ರೆ ಶನಿವಾರ ರಾಜ್ಯ ಸರ್ಕಾರಕ್ಕೆ ಬೆದರಿಕೆ ಇ-ಮೇಲ್‌ ಬಂದಿದೆ. ಶಾಹಿದ್ ಖಾನ್ ಹೆಸರಲ್ಲಿ ಈ ಇ-ಮೇಲ್‌ ಬಂದಿದ್ದು, ಬಾಂಬ್‌ ಬ್ಲಾಸ್ಟ್‌ ಮಾಡೋದಾಗಿ ಬೆದರಿಕೆ ಹಾಕಲಾಗಿದೆ.

ಇದನ್ನೂ ಓದಿ; ಮಕ್ಕಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಾದ; ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಲು ಸಲಹೆ

2.5 ಮಿಲಿಯನ್‌ ಡಾಲರ್‌ಗಾಗಿ ಬೇಡಿಕೆ;

2.5 ಮಿಲಿಯನ್‌ ಡಾಲರ್‌ಗಾಗಿ ಬೇಡಿಕೆ; ಸಿಎಂ, ಗೃಹ ಮಂತ್ರಿ, ಡಿಸಿಎಂ, ಮತ್ತು ಬೆಂಗಳೂರು ನಗರ ಪೊಲೀಸ್ ಕಮಿಷನರ್​ಗೆ ಈ ಬಾಂಬ್‌ ಬೆದರಿಕೆ ಈ-ಮೇಲ್‌ ಕಳುಹಿಸಿಲಾಗಿದೆ. 10786progon@gmail.com ಎಂಬ ಇ-ಮೇಲ್‌ ಐಡಿ ಮೂಲಕ ಬೆದರಿಕೆ ಮೇಲ್‌ ಕಳುಹಿಸಲಾಗಿದ್ದು, 2.5 ಮಿಲಿಯನ್‌ ಡಾಲರ್‌ ಕೊಡಬೇಕು. ಇಲ್ಲದಿದ್ದರೆ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಸರಣಿ ಸ್ಫೋಟ ನಡೆಸೋದಾಗಿ ಬೆದರಿಕೆ ಹಾಕಲಾಗಿದೆ.  ಎಂಬ ಹೆಸರಿನಿಂದ ಈ ಇ-ಮೇಲ್‌ ಬಂದಿದೆ.

ಪೊಲೀಸರಿಂದ ಸುಮೋಟೋ ಕೇಸ್‌ ದಾಖಲು;

ಪೊಲೀಸರಿಂದ ಸುಮೋಟೋ ಕೇಸ್‌ ದಾಖಲು; ಮಾರ್ಚ್‌ 1 ರ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿತ್ತು. ಮಾರ್ಚ್‌ 2ರಂದು ಮಧ್ಯಾಹ್ನ 2.48ಕ್ಕೆ ಸರಿಯಾಗಿ ಸರ್ಕಾರಕ್ಕೆ ಬೆದರಿಕೆ ಇ-ಮೇಲ್‌ ಕಳುಹಿಸಲಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಮಾಡಿದ್ದು ಹಾಗೂ ಇ-ಮೇಲ್‌ ಕಳುಹಿಸಿದ್ದು ಇಬ್ಬರೂ ಒಂದೇನಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಮಾರ್ಚ್‌ 4ರಂದು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಸುಮೋಟೋ ಕೇಸ್‌ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ; ಅಕ್ರಮ ಹಣ ವರ್ಗಾವಣೆ ಪ್ರಕರಣ; ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ʻಸುಪ್ರೀಂʼನಿಂದ ಬಿಗ್‌ ರಿಲೀಫ್‌!

ಬಸ್‌, ರೈಲು, ದೇವಸ್ಥಾನಗಳಲ್ಲಿ ಸ್ಫೋಟ ಬೆದರಿಕೆ;

ಬಸ್‌, ರೈಲು, ದೇವಸ್ಥಾನಗಳಲ್ಲಿ ಸ್ಫೋಟ ಬೆದರಿಕೆ; ಇ-ಮೇಲ್‌ನಲ್ಲಿ ಹಣಕ್ಕಾಗಿ ಬೇಡಿಕೆ ಇಡಲಾಗಿದೆ. 2.5 ಮಿಲಿಯನ್‌ ಡಾಲರ್‌ ನೀಡಬೇಕು. ಇಲ್ಲದಿದ್ದರೆ ಬೆಂಗಳೂರು ನಗರದ ಹಲವೆಡೆ ಸ್ಫೋಟಿಸುವುದಾಗಿ ಹೇಳಿದ್ದಾರೆ. ಬಸ್, ರೈಲು, ದೇವಸ್ಥಾನ, ಹೋಟೆಲ್‌ಗಳಲ್ಲಿ ಬಾಂಬ್‌ ಸ್ಫೋಟಿಸುತ್ತೇವೆ. ಸಾರ್ವಜನಿಕ ಸ್ಥಳಗಳು ಹಾಗೂ ಅಂಬಾರಿ ಉತ್ಸವ ಬಸ್‌ಗಳಲ್ಲಿ ಬಾಂಬ್‌ ಇಟ್ಟು ಸ್ಫೋಟಿಸುತ್ತೇವೆ ಎಂದೂ ಬೆದರಿಕೆ ಹಾಕಲಾಗಿದೆ.

ಇದನ್ನೂ ಓದಿ; ಕತ್ತಿಹಿಡಿದು ಮಾಜಿ ಮೇಯರ್‌ ಪುತ್ರನ ಗೂಂಡಾ ವರ್ತನೆ; ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

ರಾಮೇಶ್ವರಂ ಕೆಫೆ ಕೇಸ್‌ ಇನ್ನೂ ನಿಗೂಢ;

ರಾಮೇಶ್ವರಂ ಕೆಫೆ ಕೇಸ್‌ ಇನ್ನೂ ನಿಗೂಢ; ಮಾರ್ಚ್​ 1ರಂದು ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಆದ್ರೆ ಐದು ದಿನ ಕಳೆದರೂ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಉಗ್ರನ ಸಣ್ಣ ಸುಳಿವೂ ಸಿಗುತ್ತಿಲ್ಲ. ಸಿಸಿಟಿವಿ ದೃಶ್ಯಗಳು ಸಿಗುತ್ತಿವೆಯೇ ಹೊರತು, ಬಾಂಬರ್ ಎಲ್ಲಿದ್ದಾನೆ ಎನ್ನುವುದು ಪೊಲೀಸರಿಗೆ ಇನ್ನೂ ಸುಳಿವು ಸಿಕ್ಕಿಲ್ಲ. ಒಂದು ಕಡೆ ಎಫ್‌ಎಸ್‌ಎಲ್ ತಂಡ, ಮತ್ತೊಂದೆಡೆ ಸಿಸಿಬಿ ಪೊಲೀಸರು, ಇನ್ನೊಂದೆಡೆ NIA ಅಧಿಕಾರಿಗಳೂ ಫೀಲ್ಡ್‌ಗಳಿದು ಶಂಕಿತ ಉಗ್ರನ ಬೆನ್ನತ್ತಿದ್ದಾರೆ. ಇದರ ಮಧ್ಯೆ ಮತ್ತೊಂದು ಬಾಂಬ್ ಬೆದರಿಕೆ ಇಮೇಲ್ ಬಂದಿದೆ.

ಕೆಲ ತಿಂಗಳ ಹಿಂದೆ ಬೆಂಗಳೂರಿನ ಹಲವು ಶಾಲೆಗಳಿಗೆ ಇಮೇಲ್ ಬೆದರಿಕೆಗಳು ಬಂದಿದ್ದವು. ಆದ್ರೆ, ಅವುಗಳ ಪೈಕಿ ಕೆಲವು ಹುಸಿ ಬಾಂಬ್​ ಬೆದರಿಕೆ ಎನ್ನುವುದು ದೃಢ ಪಟ್ಟಿದೆ. ಆದ್ರೆ, ಇದೀಗ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ರೀತಿಯಲ್ಲೇ ಬಸ್, ರೈಲ್ವೇ ಸ್ಟೇಷನ್​ಗಳಲ್ಲಿ ಸ್ಪೋಟಿಸುವುದಾಗಿ ಬೆದರಿಕೆ ಇಮೇಲ್ ಬಂದಿದೆ.

Share Post