DistrictsPolitics

ಬಿಜೆಪಿಯ ಯಾವ ಶಾಸಕರೂ ಕಾಂಗ್ರೆಸ್‌ಗೆ ಹೋಗೋದಿಲ್ಲ; ಕೋಟಾ ಶ್ರೀನಿವಾಸ ಪೂಜಾರಿ

ಶಿವಮೊಗ್ಗ; ಆಪರೇಷನ್‌ ಹಸ್ತ ನಡೆಯುತ್ತಿದೆ ಅನ್ನೋದು ಸುಳ್ಳು. ಬಿಜೆಪಿಯ ಯಾವ ಶಾಸಕರೂ ಕೂಡಾ ಕಾಂಗ್ರೆಸ್‌ ಪಕ್ಷಕ್ಕೆ ಹೋಗೋದಿಲ್ಲ ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಕಾಂಗ್ರೆಸ್‌ನಲ್ಲಿರುವ ಶಾಸಕರಿಗೇ ಅಲ್ಲಿ ಅನುಕೂಲ ಆಗ್ತಾ ಇಲ್ಲ. 30ಕ್ಕೂ ಹೆಚ್ಚು ಶಾಸಕರು ಸಿಎಂಗೆ ಪತ್ರ ಬರೆದಿದ್ದಾರೆ. ಅಂತಾಹದ್ದರಲ್ಲಿ ನಮ್ಮ ಶಾಸಕರು ಅಲ್ಲಿಗೆ ಯಾಕೆ ಹೋಗ್ತಾರೆ ಎಂದು ಕೋಟಾ ಪೂಜಾರಿ ಪ್ರಶ್ನೆ ಮಾಡಿದ್ದಾರೆ. ಸಚಿವರು ನಮ್ಮ ಮಾತು ಕೇಳ್ತಿಲ್ಲ ಅಂತ ಆಡಳಿತ ಪಕ್ಷದ ಶಾಸಕರೇ ಸಿಎಂಗೆ ಪತ್ರ ಬರೆದಿದ್ದಾರೆ. ಹಾಗಿದ್ದ ಮೇಲೆ ಸರ್ಕಾರದಲ್ಲಿ ಭಿನ್ನಮತ ಇದೆ ಎಂದರ್ಥ. ಹೀಗಾಗಿಯೇ ಸರ್ಕಾರಕ್ಕೆ ಸ್ಥಿರತೆ ಇಲ್ಲ. ಆರು ತಿಂಗಳಲ್ಲಿ ಸರ್ಕಾರ ಪತನವಾಗುತ್ತೆ ಅಂತ ಯತ್ನಾಳ್‌ ಹೇಳಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪೂಜಾರಿ ಉತ್ತರಿಸಿದರು.

Share Post